Amruthadhaare: ಶಕುಂತಲಾ ದೇವಿ ಪ್ಲಾನ್ ಸಕ್ಸಸ್; ಹೆಣ್ಣು ಕೇಳಲು ಹೋದ ಶಕುಂತಲಾ ದೇವಿ
ಮನೆಯಲ್ಲಿ ಆಗುತ್ತಿರುವ ಬೆಳವಣಿಗೆಯನ್ನು ನೋಡಿದ ಪಾರ್ಥ ಭಯಗೊಂಡಿದ್ದಾನೆ. ಎಲ್ಲಿ ನಾನು ಅಪ್ಪಿಯನ್ನು ಕಳೆದುಕೊಳ್ಳುತ್ತಾನೆ ಎಂಬ ಸಂಕಟ ಆಗುತ್ತಿದೆ. ಅಪ್ಪಿ ಹಾಗೂ ಪಾರ್ಥ ಇಬ್ಬರೂ ಒಬ್ಬರನ್ನು ಒಬ್ಬರು ಬಹಳ ಪ್ರೀತಿ ಮಾಡುತ್ತಿದ್ದಾರೆ. ಆದರೆ, ಆ ಪ್ರೀತಿಗೆ ಇದೀಗ ಶಕುಂತಲಾ ದೇವಿ ಅಡ್ಡಗಾಲಾಗಿ ನಿಂತಿರುತ್ತಾಳೆ. ಒಂದು ಕಡೆ ಭೂಮಿಕಾ ಜೊತೆ ಮಾತು ತೆಗೆದುಕೊಂಡಿದ್ದಾರೆ. ನೀನು ಪಾರ್ಥ ಹಾಗೂ ಅಪ್ಪಿ ಮದುವೆ ನಡೆಯದೆ ಇರುವ ಹಾಗೆ ನೋಡಿಕೊಳ್ಳಬೇಕು. ಅವರಿಬ್ಬರ ಮದುವೆ ನಡೆದರೆ ನಾನು ಬದುಕುವುದಿಲ್ಲ ಎಂದು ಬೆದರಿಕೆ ಹಾಕುತ್ತಾಳೆ.
ಈ ಸಂದರ್ಭದಲ್ಲಿ ಭೂಮಿಕಾಗೆ ಏನು ಮಾಡಬೇಕು ಎಂದು ತಿಳಿಯದೆ ಕಂಗಾಲಾಗಿ ಹೋಗಿದ್ದಾಳೆ. ಇನ್ನೊಂದು ಕಡೆ ಭೂಮಿಕಾಗೆ ಆಕೆಯ ತಂದೆ ಕೂಡ "ಯಾವುದೇ ಕಾರಣಕ್ಕೂ ಅಪ್ಪಿ ಹಾಗೂ ಪಾರ್ಥ ಮದುವೆ ನಡೆಯಬಾರದು" ಎಂದು ಭೂಮಿಕಾ ಮುಂದೆ ಹೇಳಿರುತ್ತಾರೆ. ಭೂಮಿಕಾ ತಂದೆಯ ಮಾತಿಗೆ ಏನು ಹೇಳದೆ ಸುಮ್ಮನೆ ಇರುತ್ತಾಳೆ. ಪಾರ್ಥ, ಭೂಮಿಕಾಳನ್ನು ಪ್ರಶ್ನೆ ಮಾಡಿದಾಗ "ಪಾರ್ಥ ನಿಮ್ಮಿಬ್ಬರ ಮದುವೆ ನಡೆಯಲು ಸಾಧ್ಯವೇ ಇಲ್ಲ" ಎಂದು ಹೇಳಿ ಅಲ್ಲಿಂದ ಹೋದಾಗ, ಪಾರ್ಥಗೆ ದಿಕ್ಕೇ ತೋಚದಂತಾಗಿದೆ.

ಕೊನೆಗೆ ತನ್ನ ತಾಯಿ ಬಳಿಗೆ ಬಂದು ಬಿಗಿದಪ್ಪಿ ಜೋರಾಗಿ ಪಾರ್ಥ ಅಳುತ್ತಾನೆ. ಪಾರ್ಥ ಅಳುತ್ತಿರುವುದನ್ನು ನೋಡಿ ಶಕುಂತಲಾ ದೇವಿ ನನಗೆ ಇದುವೇ ಬೇಕಾಗಿದ್ದು. ಪಾರ್ಥ ನನ್ನ ಬಳಿಗೆ ಬರಬೇಕು ಎನ್ನುವ ಕಾರಣಕ್ಕೆ ನಾನು ಇಷ್ಟೆಲ್ಲ ಮಾಡಬೇಕಾಯಿತು. ಇದೀಗ ಭೂಮಿಕಾ ಬಗ್ಗೆ ಪಾರ್ಥಗೆ ಅಷ್ಟು ಒಳ್ಳೆಯ ಅಭಿಪ್ರಾಯ ಬಾರದ ಹಾಗೆ ನೋಡಿಕೊಳ್ಳಬೇಕು ಎನ್ನುವುದು ಆಕೆಯ ಉದ್ದೇಶ. ಈ ಇನ್ನೂ ಪಾರ್ಥನನ್ನು ಸಮಾಧಾನ ಮಾಡುವ ಹಾಗೆ ಮಾಡಿ ನಾಟಕವಾಡುತ್ತಾರೆ. ಪಾರ್ಥ ಅಮ್ಮನ ಬಳಿ "ನನಗೆ ಈ ಮದುವೆ ಇಷ್ಟ ಇಲ್ಲ. ನಾನು ಅಪ್ಪಿಯನ್ನು ಪ್ರೀತಿ ಮಾಡುತ್ತಿದ್ದೇನೆ" ಎಂದು ಹೇಳಿದಾಗ ಶಕುಂತಲಾ ದೇವಿ ಏನು ಗೊತ್ತಿಲ್ಲದ ಹಾಗೆ ನಾಟಕ ಮಾಡುತ್ತಾರೆ.
ಪಾರ್ಥ ಬಳಿ ಶಕುಂತಲಾ ದೇವಿ ನಟನೆ
ಶಕುಂತಲಾ ದೇವಿ, ಪಾರ್ಥ ಬಳಿ "ಸರಿ ಪಾರ್ಥ ನಾನು ನಿನ್ನ ಹಾಗೂ ಅಪ್ಪಿ ಮದುವೆ ಬಗ್ಗೆ ಮಾತುಕತೆ ನಡೆಸುತ್ತೇನೆ" ಎಂದು ಹೇಳುತ್ತಾರೆ. ಆ ಬಳಿಕ ಶಕುಂತಲಾ ದೇವಿ, ಪಾರ್ಥ ಬಳಿ "ಈ ವಿಚಾರ ಯಾರಿಗೆಲ್ಲ ತಿಳಿದಿದೆ" ಎಂದಾಗ ಪಾರ್ಥ "ಅಮ್ಮ ಅತ್ತಿಗೆಗೆ ಹಾಗೂ ಅಪ್ಪಿಯ ತಂದೆಗೆ ಈ ವಿಚಾರ ತಿಳಿದಿದೆ. ಅಪ್ಪಿಯ ತಂದೆ ಒಂದು ಟಾಸ್ಕ್ ಕೂಡ ನೀಡಿದ್ದಾರೆ" ಎಂದು ಹೇಳುತ್ತಾನೆ.
ಪಾರ್ಥ ಮಾತು ಕೇಳಿ ನಕ್ಕ ಶಕುಂತಲಾ ದೇವಿ
ಎಲ್ಲಾ ಸುಸೂತ್ರವಾಗಿ ನಡೆಯುತ್ತಿದೆ ಎಂದ ಕೂಡಲೇ ಹೀಗೆಲ್ಲ ಆಗುತ್ತಿದೆ ಎಂದು ಹೇಳಿದಾಗ, ಶಕುಂತಲಾ ದೇವಿ ಪಾರ್ಥನನ್ನು ಸಮಾಧಾನ ಮಾಡುತ್ತಾರೆ. ಮರುದಿನ ಬಹಳ ಮುಗುಳು ನಗೆಯಿಂದ ಮಂದಾಕಿನಿಯ ಮನೆಗೆ ಹೋಗಲು ರೆಡಿ ಆಗುತ್ತಾಳೆ. ಆಗ ಲಕ್ಷ್ಮೀಕಾಂತ "ಎಲ್ಲಿಗೆ ಹೊರಟಿದ್ದೀಯಾ ಅಕ್ಕ" ಎಂದು ಕೇಳಿದಾಗ, ಶಕುಂತಲಾ ದೇವಿ ಮೆತ್ತಗೆ "ಬೀಗರ ಮನೆಗೆ ಹೋಗಿ ಬರುತ್ತೇನೆ" ಎಂದು ಹೇಳುತ್ತಾಳೆ. ಆಗ ಆಕೆಯ ತಮ್ಮ "ಏನಕ್ಕ ನಿನ್ನೆಯಷ್ಟೇ ಅವರು ಬಂದಿದ್ದಾರೆ. ಈಗಲೇ ಹೋಗುತ್ತಿಯಾ" ಎಂದು ಹೇಳಿದಾಗ ಶಕುಂತಲಾ ದೇವಿ ಮಂದಾಕಿನಿ ಮನೆಗೆ ಹೋಗುವ ವಿಚಾರ ಹೇಳುತ್ತಾಳೆ.

ಅಕ್ಕನ ಮಾತು ಕೇಳಿ ಲಕ್ಷ್ಮೀಕಾಂತನಿಗೆ ಶಾಕ್
ಇದನ್ನು ಕೇಳಿದ ಲಕ್ಷ್ಮೀ ಕಾಂತನಿಗೆ ಶಾಕ್ ಆಗುತ್ತದೆ. ಕೊನೆಗೆ ಅಕ್ಕನ ಉಪಾಯ ಕಂಡು ಕ್ಲೀನ್ ಬೋಲ್ಡ್ ಆಗಿದ್ದಾನೆ. ಪಾರ್ಥ, ಗೌತಮ್ ಜೊತೆ ನಿಜ ವಿಚಾರ ಹೇಳಬೇಕು ಎಂದಾಗಲೆಲ್ಲ ಏನಾದರೂ ಒಂದು ಕಾರಣದಿಂದಾಗಿ ಹಾಳಾಗುತ್ತಲೆ ಇದೆ. ಆದರೆ, ಈಗಲಾದರೂ ಪಾರ್ಥ ಅಣ್ಣನ ಬಳಿ ನಿಜ ವಿಚಾರ ಹೇಳುತ್ತನೋ ಎನ್ನುವುದನ್ನು ಮುಂದಿನ ಸಂಚಿಕೆಗಳಲ್ಲಿ ತಿಳಿಯಲಿದೆ.


Click it and Unblock the Notifications











