Amruthadhaare ; ಗೌತಮ್ ಫಾರಿನ್ ಟ್ರಿಪ್ ಹೋದ ಬೆನ್ನಲ್ಲೇ ಭೂಮಿಕಾನ ಕೊಲ್ಲಲು ಶಕುಂತಲಾ ಪ್ಲಾನ್
ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವ್‌ಗೆ ಭೂಮಿಕಾ ಕಪಾಳಮೋಕ್ಷ ಮಾಡಿದ ನಂತರ ಮಲ್ಲಿಯ ಮದುವೆ ಮಾತುಕಥೆ ನಡೆದಿದೆ. ಅಕ್ಕೋರೆ ಎನ್ನುತ್ತಾ ಅವಳ ಹಿಂದೆ ಅಲೆದಾಡುವುದು ಕಡಿಮೆ ಮಾಡು ಆಗಲಾದರೂ ಸ್ವಲ್ಪ ಉದ್ಧಾರ ಆಗ್ತೀಯಾ ಎಂದು ಮಲ್ಲಿಗೆ ಜೈದೇವ್ ಹೇಳಿದ್ದು ರಾಜಕಾರಣಿಗಳ ಪರ ಕ್ಯಾಂಪೇನ್ ಮಾಡುವವರು ಬೀದಿಯಲ್ಲಿ ಇರ್ತಾರೆ, ಗೆದ್ದವರು ಅಸೆಂಬ್ಲಿಯಲ್ಲಿ ಇರ್ತಾರೆ, ನಿನ್ನ ಮುಂದೆ ಬಿಟ್ಟು ಅವಳು ಅವಳ ಬೆಳೆ ಬೇಯಿಸಿಕೊಳ್ಳುತ್ತಿದ್ದಾಳೆ ಎಂದು ಹೇಳುತ್ತಾನೆ.
ನಿನಗೆ ನನ್ನ ಬಿಟ್ಟರೆ ಬೇರೆ ಗತಿ ಇಲ್ಲ ನಿನಗೆ ಯಾವ ಗಂಡು ಕೂಡ ಮದುವೆಯಾಗಲು ಸಿಗುವುದಿಲ್ಲ ಎನ್ನುತ್ತಾನೆ. ಜೈದೇವ್‌ನ ಮಾತಿಗೆ ಭೂಮಿಕಾ ಸವಾಲು ಹಾಕಿದ್ದು ಅವಳೇನು ಕಳೆದುಕೊಂಡಿದ್ದಾಳೋ ಅದರ ಹತ್ತರಷ್ಟು ಹೆಚ್ಚು ಕೊಡುವ ಹುಡಗನನ್ನು ಹುಡುಕಿ ಮದುವೆ ಮಾಡುವುದಾಗಿ ಸವಾಲು ಹಾಕುತ್ತಾಳೆ. ಹಾಗೇನಾದರೂ ಆದರೆ ನನ್ನನ್ನು ಮದುವೆಗೆ ಕರೆಯುವುದನ್ನು ಮರಿಬೇಡಿ ಫ್ಯಾಮಿಲಿ ಸಮೇತ ಬಂದು ಆ ನತದೃಷ್ಟ ಹುಡುಗನನ್ನು ನೋಡಿಕೊಂಡು ಹೋಗ್ತೀನಿ ಎಂದು ಜೈದೇವ್ ಹೇಳಿ ಅಲ್ಲಿಂದ ಹೊರಡುತ್ತಾನೆ.

ಮಗು ನನ್ನದಲ್ಲ ಎಂದ ಗೌತಮ್
ಭಾಗ್ಯ ತಿರುಗಿ ಬಿದ್ದಿರುವ ವಿಚಾರ ಜೀರ್ಣಿಸಿಕೊಳ್ಳಲಾಗದೇ ಶಕುಂತಲಾ ಚಡಪಡಿಸುತ್ತಿದ್ದಾಳೆ. ನನ್ನ ಕಂಡರೆ ಭಯ ಪಡುತ್ತಿದ್ದಳು ಅಂತಹದ್ದರಲ್ಲಿ ನನ್ನ ಕೈ ಹಿಡಿದ್ಲಾ ಎಂದು ಯೋಚನೆ ಮಾಡುತ್ತಿರುತ್ತಾಳೆ.
ಇದೇ ಸಮಯದಲ್ಲಿ ಗೌತಮ್ ಬಂದಿದ್ದು ಏನಾಯ್ತು ಯಾಕಿಷ್ಟು ಡಲ್ ಆಗಿದೀಯಾ ಎಂದು ಕೇಳುತ್ತಾಳೆ. ಆಗ ಗೌತಮ್ ಅನಾಥಾಶ್ರಮದ ವಿಚಾರವನ್ನು ಹೇಳಿದ್ದು ಆ ಮಗು ನನ್ನದಲ್ಲ ಎನ್ನುತ್ತಾನೆ.
ಸತ್ಯ ಹೇಳಲು ಹೋಗುವ ಗೌತಮ್‌ನ ತಡೆದ ಶಕುಂತಲಾ
ಆ ಮಗು ನಂದೇ ಎಲ್ಲ ವಿಚಾರ ಭೂಮಿಕಾಗೆ ಹೇಳಬೇಕು ಅಂತ ಏನೇನೋ ಅಂದುಕೊಂಡಿದ್ದೇ ಆದರೆ ಈಗ ಹೀಗಾಗೋಯ್ತು ಎಂದು ಬೇಸರ ಮಾಡಿಕೊಳ್ಳುವ ಗೌತಮ್ ನಾನು ಭೂಮಿಕಾಗೆ ಸತ್ಯ ಹೇಳಬೇಕಿತ್ತು ಮುಚ್ಚಿಡಬಾರದಿತ್ತು ಹೇಳಿ ಬಿಡ್ತೀನಿ ಎನ್ನುತ್ತಾನೆ.
ಭೂಮಿಕಾನ ಕೊಲ್ಲಲು ಪ್ಲಾನ್
ಶಕುಂತಲಾ ಈ ವಿಚಾರ ಭೂಮಿಕಾಗೆ ಗೊತ್ತಾದರೆ ನನ್ನ ಪ್ಲ್ಯಾನ್ ಹಾಳಾಗುತ್ತೆ ಅವಳೇ ಕಳೆದುಹೋದ ಮಗುನ ಹುಡುಕೋಕೆ ಮುಂದಾಗುತ್ತಾಳೆ ಎಂದುಕೊಳ್ಳುವ ಶಕುಂತಲಾ ಈಗ ಬೇಡ ನೀನು ಫಾರಿನ್ ಟ್ರಿಪ್ ಮುಗಿಸಿಕೊಂಡು ಬಂದ ಮೇಲೆ ಹೇಳೋಣ ಎನ್ನುತ್ತಾಳೆ. ಇವನು ಫಾರಿನ್‌ದಿಂದ ಬರುವಷ್ಟರಲ್ಲಿ ಭೂಮಿಕಾಗೆ ಒಂದು ಗತಿ ಕಾಣಿಸಬೇಕು ಇಂಥಾ ಚಾನ್ಸ್ ಮತ್ತೆ ಸಿಗಲ್ಲ ಎಂದುಕೊಳ್ಳುತ್ತಾಳೆ.

ಹೆಣ್ಣು ನೋಡುವ ಶಾಸ್ತ್ರ ಮಾಡಲು ಮುಂದಾದ ಭೂಮಿಕಾ
ಜೈದೇವ್ ಮನೆಯಿಂದ ಹೊರ ಬಂದ ಭೂಮಿಕಾ, ಇವತ್ತೇ ನಿನ್ನ ಹೆಣ್ಣು ನೋಡುವ ಶಾಸ್ತ್ರ ಮಾಡ್ತೀನಿ ಎಂದು ಹೇಳಿ ಫೋನ್ ಮಾಡಿ ಲೊಕೇಷನ್ ಕಳಿಸಿ ಬರುವಂತೆ ಹೇಳುತ್ತಾಳೆ. ಇವರ ಕಣ್ಮುಂದೆಯೇ ಇವರ ಮನೆಯಲ್ಲಿಯೇ ಹೆಣ್ಣು ನೋಡುವ ಶಾಸ್ತ್ರ ಮಾಡೋಣ ಎನ್ನುವ ಭೂಮಿಕಾ ಎಲ್ಲಿ ಅವಮಾನ ಆಗುತ್ತೋ ಅಲ್ಲಿಯೇ ಸನ್ಮಾನ ಆಗಬೇಕು ಆಗಲೇ ಲೆಕ್ಕಾ ಚುಕ್ತಾ ಆಗುವುದು ಎಂದು ಹೇಳಿ ಕರೆದುಕೊಂಡು ಹೋಗುತ್ತಾಳೆ.
ದಿಯಾ ಮನೆಗೆ ಗಂಡಿನ ಕಡೆಯವರು ಬಂದಿದ್ದು, ಭೂಮಿಕಾ ಅವರನ್ನು ಸ್ವಾಗತಿಸಿ ನೀವು ಹತ್ತಿರದಲ್ಲಿ ಇದೀರಾ ಎಂದು ಹೇಳೀದ್ರಲ್ಲ ಅದಕ್ಕೆ ಕರೆದೆ ಇದು ನಮ್ಮ ಮನೆ ತರನೇ ಎನ್ನುತ್ತಾಳೆ. ಇವಳು ಮಲ್ಲಿ ನೀವು ನೋಡೋಕೆ ಬಂದಿರುವ ಹುಡುಗಿ ಎಂದು ಪರಿಚಯ ಮಾಡಿಸುವ ಭೂಮಿಕಾ ಇವಳು ದಿಯಾ ಅಂತ ಮಲ್ಲಿ ಮಾಜಿ ಗಂಡನ ಹೆಂಡತಿ ಎಂದು ಹೇಳುತ್ತಾಳೆ.
ಜೈದೇವ್‌ಗೆ ಫೋನ್ ಮಾಡುವ ದಿಯಾ
ಜೈದೇವ್‌ಗೆ ದಿಯಾ ಫೋನ್ ಮಾಡಿದ್ದು ಮನೆಯಲ್ಲಿ ಹೆಣ್ಣು ನೋಡುವ ಶಾಸ್ತ್ರ ನಡೆಯುತ್ತಿರುವ ವಿಚಾರ ಹೇಳುತ್ತಾಳೆ. ದಿಯಾ ಮಾತು ಕೇಳಿ ಜೈದೇವ್ ಶಾಕ್ ಆಗಿದ್ದು ಮೊದಲು ಮನೆಗೆ ಬರುವಂತೆ ಹೇಳುತ್ತಾಳೆ. ದಿಯಾ ಮಾತು ಕೇಳಿ ಜೈದೇವ್ ಮನೆಗೆ ಬಂದಿದ್ದು ಇವರು ಜೈದೇವ್ ನಮ್ಮ ಮಲ್ಲಿ ಮಾಜಿ ಗಂಡ ಎಂದು ಪರಿಚಯ ಮಾಡಿಸುವ ಭೂಮಿಕಾ ಕೂರುವಂತೆ ಹೇಳುತ್ತಾಳೆ. ಇವರ ಒಪ್ಪಿಗೆಯ ಮೇರೆಗೆ ಈ ಮದುವೆ ನಡೆಯುತ್ತಿರುವುದು ಎಂದೆಲ್ಲಾ ಮಾತನಾಡಿ ಜೈದೇವ್ ಹೊಟ್ಟೆಯನ್ನು ಉರಿಸುತ್ತಾಳೆ. ಮಲ್ಲಿಯನ್ನು ಹುಡುಗನ ಕಡೆಯವರು ಒಪ್ಪಿಕೊಂಡಿದ್ದು ಮನೆಯಿಂದ ಹೊರಡುತ್ತಾರೆ.
ಹುಡುಗನ ಕಡೆಯವರು ಹೋದ ಬೆನ್ನಲ್ಲೇ ಭೂಮಿಕಾ ಮತ್ತು ಮಲ್ಲಿ ಕೂಡ ಹೊರಟಿದ್ದು, ಮದುವೆ ತಯಾರಿಗಳು ತುಂಬಾ ಇದೆ ಬಾ ಹೋಗೋಣ ಎಂದು ಮಲ್ಲಿಯನ್ನು ಕರೆದುಕೊಂಡು ಹೋಗಿದ್ದಾಳೆ. ಆ ನಂತರ ನೋಡಲು ಬಂದಿರುವ ಹುಡುಗ ಮತ್ತು ಅವರ ತಂದೆ ತಾಯಿಗೆ ಭೂಮಿಕಾ ಹಿಂದೊಮ್ಮೆ ಸಹಾಯ ಮಾಡಿದ ವಿಚಾರ ಗೊತ್ತಾಗಿದ್ದು ಋಣ ಸಂದಾಯಕ್ಕೆ ಅವರು ಬಂದಿದ್ದಾಗಿ ಗೊತ್ತಾಗಿದೆ. ಆ ನಂತರ ಮಲ್ಲಿ ಅಕ್ಕೋರೇ ಈ ನಾಟಕನೇ ಅವರು ನಿಜಾ ಅಂದುಕೊಂಡಿದ್ದಾರೆ ಎನ್ನುತ್ತಾಳೆ. ಇದಕ್ಕೆ ಮಲ್ಲಿ ಈ ನಾಟಕ ಯಾಕೆ ನಿಜಾ ಆಗಬಾರದು ಎಂದು ಭೂಮಿಕಾ ಕೇಳಿದ್ದು ಮಲ್ಲಿ ನಾನು ಮದುವೆಯಾಗುವ ಮನಸ್ಥಿತಿಯಲ್ಲಿ ಇಲ್ಲ ಎಂದು ಹೇಳುತ್ತಾಳೆ.


Click it and Unblock the Notifications











