Amruthadhaare ಗೆಳತಿಯ ಮನೆಯಲ್ಲೇ ಇದ್ದಾಳೆ ಗೌತಮ್-ಭೂಮಿಕಾ ಮಗಳು ? ಮನೆಗೆ ಬಂದ ಹೊಸ ಅತಿಥಿ

ಅಮೃತಧಾರೆ ಧಾರಾವಾಹಿಯಲ್ಲಿ ಆ ಮಗು ನನ್ನದಲ್ಲ ಎಂದು ಶಕುಂತಲಾಗೆ ಗೌತಮ್ ಹೇಳಿದ್ದಾನೆ. ಇನ್ನೇನೂ ಈ ಸತ್ಯ ಮುಚ್ಚಿಡುವುದು ಬೇಡ ಎಲ್ಲವನ್ನು ಭೂಮಿಕಾಗೆ ಹೇಳುವುದಾಗಿ ಗೌತಮ್ ಹೇಳಿದಾಗ ಶಕುಂತಲಾ ತಡೆದಿದ್ದು ಫಾರಿನ್ ಟ್ರಿಪ್ ನೀನು ಮುಗಿಸಿಕೊಂಡು ಬಾ ಆಮೇಲೆ ಹೇಳೋಣ ಎನ್ನುತ್ತಾಳೆ. ಇದಕ್ಕೆ ಗೌತಮ್ ಕೂಡ ಸರಿ ಎಂದು ಹೇಳಿದ್ದು ಸದ್ಯ ಆ ಮಗು ಗೌತಮ್‌ದಲ್ಲ ಎಂದು ಜೈದೇವ್‌ಗೆ ಹೇಳಬೇಕು ಎಂದುಕೊಂಡು ಫೋನ್‌ ಮಾಡಲು ಮುಂದಾಗುತ್ತಾಳೆ.

ಇದೇ ಸಮಯದಲ್ಲಿ ಭೂಮಿಕಾ ಬಂದಿದ್ದು ಜೈದೇವ್ ಮನೆಗೆ ಹೋಗಿ ಬಂದ ವಿಚಾರ ಹೇಳುತ್ತಾಳೆ. ಭೂಮಿಕಾ ಮಾತು ಕೇಳಿ ಶಕುಂತಲಾ ಶಾಕ್ ಆಗಿದ್ದು, ಜೈದೇವ್ ಮನೆಗೆ ಬಂದು ಮಗು ಕದಿಯುವ ಪ್ರಯತ್ನ ಮಾಡಿದ್ದು ನಿಮಗೆ ಗೊತ್ತಿತ್ತು ಅಲ್ವಾ ಎಂದು ಭೂಮಿಕಾ ಕೇಳುತ್ತಾಳೆ. ನನ್ನ ಕಂಡರೆ ಆಗಲ್ಲ ಎಂದು ಸುಮ್ಮನೆ ಏನೇನೋ ಮಾತನಾಡಬೇಡ ಎಂದು ಶಕುಂತಲಾ ಹೇಳಿದ್ದು ಭೂಮಿಕಾ ನೋಡೋಕೆ ಆಗ್ತಿಲ್ಲ ನಿಮ್ಮ ನಾಟಕ ಕೇಳೋಕೆ ಆಗ್ತಿಲ್ಲ ನಿಮ್ಮ ಸುಳ್ಳು ಎಂದು ಹೇಳುತ್ತಾಳೆ. ನೀವೇನೇ ಮಾಡಿದರೂ ನನ್ನ ಮಗುನ ಏನು ಮಾಡೋಕಾಗಲ್ಲ ಎಂದು ಹೇಳಿ ಹೊರಡುತ್ತಾಳೆ.

amruthadhaare-serial-august-21-episode-written-update

ಕಣ್ಣೀರು ಹಾಕುವ ಗೌತಮ್

ಮನೆಯಲ್ಲಿ ಕನಕಾಭಿಷೇಕದ ತಯಾರಿ ನಡೆಯುತ್ತಿದೆ. ಆದರೆ ಗೌತಮ್ ಮಾತ್ರ ರೂಮ್‌ನಲ್ಲಿ ಕಾಣೆಯಾದ ಮಗುವನ್ನು ನೆನೆದು ಕೊರಗುತ್ತಿದ್ದಾನೆ. ಕಣ್ಣೀರು ಹಾಕುತ್ತಿದ್ದಾನೆ. ಆಗ ಆನಂದ್ ಬಂದಿದ್ದು ಅವಳು ಇದ್ದಿದ್ದರೆ ನಾನೆ ರೆಡಿ ಮಾಡಿಸುತ್ತಿದ್ದೆ, ಅವಳದು ಫೋಟೊಶೂಟ್ ಆಗ್ತಿತ್ತು ಎಂದು ಹೇಳುತ್ತಾನೆ. ಆಗ ಆನಂದ್ ಗೌತಮ್‌ಗೆ ಸಮಾಧಾನ ಮಾಡುತ್ತಾನೆ. ಆ ನಂತರ ಕನಕಾಭಿಷೇಕ್ ಪೂಜೆ ನಡೆದಿದ್ದು ಎಲ್ಲರೂ ಅಜ್ಜಿಯ ಆಶೀರ್ವಾದ ಪಡೆಯುತ್ತಾರೆ.

ಧಾರಾವಾಹಿಯಲ್ಲಿ ಹೊಸ ಅತಿಥಿ

ಸದ್ಯ ಭೂಮಿಕಾ ಮನೆಯಲ್ಲಿ ಕನಕಾಭಿಷೇಕದ ಸಂಭ್ರಮದ ನಡುವೆ, ಧಾರಾವಾಹಿಯಲ್ಲಿ ''ಬ್ರಹ್ಮಗಂಟು'' ಧಾರಾವಾಹಿ ಖ್ಯಾತಿಯ ಗೀತಾ ಭಾರತಿ ಭಟ್‌ ಅವರ ಪ್ರವೇಶವಾಗಿದೆ. ಸೆಕ್ಯೂರಿಟಿ ಗಾರ್ಡ್‌ ಬಳಿ ಭೂಮಿಕಾ ಅವರನ್ನೇ ಇಲ್ಲಿ ಬರುವಂತೆ ಹೇಳಿ ಎಂದು ಹೇಳುವ ಕಾವೇರಿಯನ್ನು ಭೂಮಿಕಾ ಖುಷಿಯಿಂದ ಬರ ಮಾಡಿಕೊಂಡಿದ್ದಾಳೆ.


ಕೆಲಸ ಕೇಳುವ ಕಾವೇರಿ

ನನ್ನ ಜೀವನ ಕಷ್ಟ ಆಗಿದೆ. ಚಿಕ್ಕಮಗಳೂರಿನ ನಿಮ್ಮ ಕಾಫಿ ಎಸ್ಟೇಟ್‌ನಲ್ಲಿ ನನಗೆ ಕೆಲಸ ಕೊಡಿಸಿ, ತುಂಬ ಉಪಕಾರ ಆಗುತ್ತದೆ. ಅಲ್ಲೇ ಸೆಟಲ್‌ ಆಗ್ತೀನಿ ಎಂದು ಭೂಮಿಕಾ ಬಳಿ ಕಾವೇರಿ ಹೇಳಿದ್ದು ಭೂಮಿಕಾ ಕೂಡ ಸರಿ ಎಂದು ಹೇಳುತ್ತಾಳೆ.

ಇದೇ ಸಮಯದಲ್ಲಿ ಸರಿ ನಾನು ಮನೆಗೆ ಹೋಗಬೇಕೆಂದು ಹೊರಡಲು ಮುಂದಾಗುವ ಕಾವೇರಿ ಮಗುನ ಪಕ್ಕದ ಮನೆಯಲ್ಲಿ ಬಿಟ್ಟು ಬಂದಿದ್ದೇನೆ ಎಂದು ಹೇಳುತ್ತಾಳೆ. ಕಾವೇರಿ ಮಾತು ಕೇಳಿ ಆಶ್ಚರ್ಯಗೊಳ್ಳುವ ಭೂಮಿಕಾ ನಿನಗೆ ಮಗು ಆಯ್ತಾ ಎಂದು ಕೇಳುತ್ತಾಳೆ. ಆಗ ಕಾವೇರಿ ನಾನು ಹೆತ್ತ ಮಗು ಅಲ್ಲ ದತ್ತು ಪಡೆದಿರುವುದು ಎಂದು ಹೇಳುತ್ತಾಳೆ. ಮೇಲ್ನೋಟಕ್ಕೆ ಕಾವೇರಿಯ ಪಾತ್ರ ಅತಿಥಿ ಪಾತ್ರ ಎಂದು ಅನಿಸಿದರೂ ಕೂಡ ಸದ್ಯ ಈ ಪಾತ್ರದಿಂದ ಧಾರಾವಾಹಿಗೆ ರೋಚಕ ಟ್ವಿಸ್ಟ್ ಸಿಗುವ ಸಾಧ್ಯತೆ ಇದೆ.

amruthadhaare-serial-august-21-episode-written-update


ಕಾವೇರಿ ಬಳಿ ಇದೆಯಾ ಗೌತಮ್ ಭೂಮಿಕಾ ಮಗು ?

ಇಂದು { ಆಗಸ್ಟ್ 22 } ಬಿಡುಗಡೆಯಾದ ಪ್ರೋಮೋವನ್ನು ನೋಡಿ ಅನೇಕರು ಕಾವೇರಿ ಬಳಿ ಇರುವ ಮಗು ಗೌತಮ್ ಮತ್ತು ಭೂಮಿಕಾ ಅವರದ್ದೇ ಎಂದು ಊಹೆಯನ್ನು ಮಾಡುತ್ತಿದ್ದಾರೆ.

ಆ ಮಗು ಭೂಮಿಕಾ ಮತ್ತು ಗೌತಮ್​ ಅವರದ್ದೇ ಅದರಲ್ಲಿ ಯಾವ ಅನುಮಾನ ಬೇಡ ಎನ್ನುತ್ತಿರುವ ಹಲವರು ಮುಂದೆ ಆ ಮಗುವನ್ನು ನೋಡಿಕೊಳ್ಳೋರು ಯಾರು ಇಲ್ಲ ಎಂದು ಹೇಳಿ ಕಾವೇರಿ ಆ ಮಗುವನ್ನು ಭೂಮಿಕಾ ಮನೆಯಲ್ಲಿಯೇ ಬಿಟ್ಟು ಹೋಗುತ್ತಾಳೆ ಎಂದು ಭವಿಷ್ಯವನ್ನು ಕೂಡ ಹಲವರು ಹೇಳುತ್ತಿದ್ದಾರೆ. ಮುಂದೇನಾಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X