Amruthadhaare ; ಫಾರಿನ್‌ ಟ್ರಿಪ್‌ಗೆ ಹೊರಟ ಗೌತಮ್, ಮುಂದೇನು ಮಾಡ್ತಾಳೆ ಮೂಲೆಗುಂಪಾಗಿರುವ ಶಕುಂತಲಾ ?

ಅಮೃತಧಾರೆ ಧಾರಾವಾಹಿಯಲ್ಲಿ ಕನಕಾಭಿಷೇಕ ನಡೆಯುತ್ತಿದೆ. ಅಜ್ಜಿ ಕನಾಕಾಭಿಷೇಕದ ಮಹತ್ವ ಮತ್ತು ಇತಿಹಾಸವನ್ನು ಹೇಳಿದ್ದು ಮನೆ ಮಂದಿಯೆಲ್ಲಾ ಖುಷಿ ಖುಷಿಯಾಗಿ ಕಾಲ ಕಳೆಯುತ್ತಿದ್ದಾರೆ. ಆದರೆ ಇದನ್ನು ಕಂಡ ಮಲ್ಲಿಗೆ ಬೇಸರವಾಗಿದೆ. ಹೀಗಾಗಿಯೇ ಮಲ್ಲಿ ಅಲ್ಲಿಂದ ಹೊರ ಬಂದಿದ್ದಾಳೆ. ಇದನ್ನು ಗಮನಿಸುವ ಸುಧಾ ಮತ್ತು ಸೃಜನ್ ಕೂಡ ಮಲ್ಲಿ ಹಿಂದೆ ಬಂದಿದ್ದು ಯಾಕೆ ಹಾಗೇ ಬಂದೆ ಎಂದು ಸುಧಾ ಕೇಳಿದ್ದಾಳೆ.

ಆಗ ಭಾವುಕಗೊಳ್ಳುವ ಮಲ್ಲಿ ಅಕ್ಕಾ ಇದೆಲ್ಲಾ ನನ್ನ ಮಗು ಹುಟ್ಟುವ ಸಮಯದಲ್ಲಿಯೇ ಆಗಬೇಕಿತ್ತು. ಆದರೆ ನನ್ನ ಮಗು ಹುಟ್ಟುವ ಮುಂಚೆಯೇ ಹೋಗಿ ಬಿಡ್ತು, ಈ ಪ್ರಪಂಚವನ್ನೇ ನೋಡಲಿಲ್ಲ.. ಇದಕ್ಕೆಲ್ಲಾ ಕಾರಣ ಜೈದೇವ್ ಅವರು ಎಂದು ಹೇಳುತ್ತಾಳೆ.

amruthadhaare-serial-august-22-episode-written-update

ನನ್ನ ಮಗು ನೆನಪು ಮಾಡಿಕೊಂಡಾಗೆಲ್ಲಾ ಪ್ರಾಣ ಹೋದಂತೆ ಆಗುತ್ತೆ ಅದರಲ್ಲಿಯೂ ಇಂತಹ ಸಂದರ್ಭದಲ್ಲಿ ನನ್ನ ಮಗು ಇರಬೇಕಿತ್ತು ಎಂದು ಅನ್ಸುತ್ತೆ ಎಂದು ಹೇಳುತ್ತಾಳೆ. ಸುಧಾ ಮತ್ತು ಸೃಜನ್ ಮಲ್ಲಿಗೆ ಸಮಾಧಾನ ಮಾಡಿದ್ದು ಹಳೆಯದನ್ನೆಲ್ಲಾ ಮರೆತು ಹೊಸ ಜೀವನ ಶುರು ಮಾಡುವ ಸಲಹೆಯನ್ನು ಕೊಡುತ್ತಾರೆ. ಮತ್ತೊಂದು ಮದುವೆಯಾಗುವಂತೆ ಹೇಳುತ್ತಾರೆ.

ಭೂಮಿಕಾ ಮನೆಗೆ ಬಂದ ಕಾವೇರಿ

ಮತ್ತೊಂದು ಕಡೆ ಅಮೃತಧಾರೆ ಧಾರಾವಾಹಿಯಲ್ಲಿ ಹೊಸ ಪಾತ್ರದ ಪ್ರವೇಶವಾಗಿದೆ. ಕಾವೇರಿ ಎಂಬ ಹೆಸರಿನ ಈ ಪಾತ್ರವನ್ನು ''ಬ್ರಹ್ಮಗಂಟು'' ಧಾರಾವಾಹಿ ಖ್ಯಾತಿಯ ಗೀತಾ ಭಾರತಿ ಭಟ್‌ ಮಾಡುತ್ತಿದ್ದು ಭೂಮಿಕಾ ಮನೆಗೆ ಕಾವೇರಿ ಬಂದಿದ್ದಾಳೆ.

ಆದರೆ ಮನೆಯೊಳಗೆ ಬಿಡಲು ಸೆಕ್ಯೂರಿಟಿ ಗಾರ್ಡ್ ಹಿಂದೇಟು ಹಾಕುತ್ತಾನೆ. ಮನೆಯಲ್ಲಿ ಪಂಕ್ಷನ್ ನಡೆಯುತ್ತಿದೆ ಹಾಗೆಲ್ಲ ಈಗ ಭೇಟಿಯಾಗಲು ಸಾಧ್ಯ ಇಲ್ಲ ಎನ್ನುತ್ತಾನೆ. ಆದರೆ ಕಾವೇರಿ ಪಂಕ್ಷನ್ ಮುಗಿಯೋವರೆಗೆ ನಾನು ಇಲ್ಲೇ ಕಾಯ್ತೀನಿ ಎಂದು ಹಠ ಹಿಡಿದಿದ್ದು ಸೆಕ್ಯೂರಿಟಿ ಗಾರ್ಡ್ ಆ ನಂತರ ಒಳಗೆ ಬರುವಂತೆ ಹೇಳುತ್ತಾನೆ.

ಒಳಗೆ ಬರುವ ಕಾವೇರಿ ತುಂಬಾ ದೊಡ್ಡ ಮನೆ ಒಳಗಡೆ ದೊಡ್ಡ ದೊಡ್ಡವರೆಲ್ಲಾ ಇರ್ತಾರೆ ಒಳಗಡೆ ಹೋಗಲು ಮುಜುಗರ ಆಗುತ್ತೆ ಅವರನ್ನೇ ಇಲ್ಲಿ ಬರುವಂತೆ ಹೇಳ್ತೀರಾ ಎಂದು ಕೇಳುತ್ತಾಳೆ. ಸೆಕ್ಯೂರಿಟಿ ಗಾರ್ಡ್ ಭೂಮಿಕಾಗೆ ಈ ವಿಷಯ ಹೇಳಿದ್ದು ಭೂಮಿಕಾ ಖುಷಿಯಿಂದ ಬಂದು ಕಾವೇರಿಯನ್ನು ಬರ ಮಾಡಿಕೊಂಡಿದ್ದಾಳೆ. ಮನೆಯೊಳಗೆ ಹೋಗೋಣ ಬಾ ಎನ್ನುತ್ತಾಳೆ. ಇದಕ್ಕೆ ಕಾವೇರಿ ಹಿಂದೇಟು ಹಾಕಿದ್ದು ಅಲ್ಲಿಯೇ ಗಾರ್ಡ್‌ನ್‌ನಲ್ಲಿ ಕುಳಿತು ಇಬ್ಬರು ಕಷ್ಟ ಸುಖ ಹಂಚಿಕೊಳ್ಳುತ್ತಾರೆ.

ಫಾರಿನ್ ಟ್ರಿಪ್‌ಗೆ ಹೊರಟ ಗೌತಮ್

ಇಂದು (ಆಗಸ್ಟ್ 23) ಬಿಡುಗಡೆಯಾದ ಪ್ರೋಮೊದಲ್ಲಿ ಮನೆಯಲ್ಲಿ ಮೂಲೆಗುಂಪಾಗಿರುವ ಶಕುಂತಲಾ, ತನ್ನ ಕೋಣೆಯಲ್ಲಿ ಒಬ್ಬಳೇ ನಿಂತಿದ್ದಾಳೆ. ಇದೇ ಸಮಯದಲ್ಲಿ ಸ್ವೀಟ್ಸ್ ತಗೊಂಡು ಬರುವ ಭೂಮಿಕಾ, ಶಕುಂತಲಾಗೆ ಸ್ವೀಟ್ ಕೊಟ್ಟಿದ್ದು ಶಕುಂತಲಾ ಮುಖ ತಿರುಗಿಸಿಕೊಂಡು ನಿಲ್ಲುತ್ತಾಳೆ. ಕರ್ಮ ತಿರುಗಿಕೊಂಡು ನಮಗೆ ಬಂದು ಹೊಡೆಯುತ್ತೆ ಎಂದು ಭೂಮಿಕಾ ಹೇಳಿದ್ದು ಶಕುಂತಲಾ ಕೊತ ಕೊತ ಕುದಿಯುತ್ತಿದ್ದಾಳೆ. ಮತ್ತೊಂದು ಕಡೆ ಗೌತಮ್ ಫಾರಿನ್ ಟ್ರಿಪ್‌ಗೆ ಹೊರಟಿದ್ದು ಭೂಮಿಕಾ ಹೋಗಲೇಬೇಕಾ ಎಂದು ಕೇಳುತ್ತಾಳೆ. ಆಗ ಗೌತಮ್ ತುಂಬಾ ಮುಖ್ಯವಾದ ಮೀಟಿಂಗ್ ಎಂದು ಹೇಳಿದ್ದು ಭೂಮಿಕಾ ಸುಂಕ ಕೇಳಿದ್ದಾಳೆ. ಮುದ್ದಿನ ಪತ್ನಿಗೆ ಮುತ್ತಿನ ಸುಂಕ ಕೊಟ್ಟು ಗೌತಮ್ ಹೊರಡುತ್ತಾನೆ.

ಮುಂದೇನು ಮಾಡ್ತಾಳೆ ಶಕುಂತಲಾ ?

ಸದ್ಯ ಗೌತಮ್ ಪಾತ್ರ ಮತ್ತೆ ಮರಳಿ ಬರುವುದು ಯಾವಾಗ ಎನ್ನುವುದು ಗೊತ್ತಿಲ್ಲವಾದರೂ, ಶಕುಂತಲಾ ಸದ್ಯ ಭೂಮಿಕಾ ಪ್ರಾಣಕ್ಕೆ ಕುತ್ತು ತರುವ ಸಾಧ್ಯತೆ ಇದೆ. ಯಾಕೆಂದರೆ ಈ ಹಿಂದೆ ಫಾರಿನ್ ಟ್ರಿಪ್‌ನಿಂದ ಬಂದ ನಂತರ ಭೂಮಿಕಾಗೆ ಗೌತಮ್‌ ಮಗು ವಿಚಾರ ಹೇಳುವುದಾಗಿ ಹೇಳಿದ್ದಾನೆ. ಹಾಗೇನಾದರೂ ಆದರೆ ಆ ಮಗುನ ಭೂಮಿಕಾನೇ ಹುಡುಕುತ್ತಾಳೆ ಎಂದುಕೊಂಡಿರುವ ಶಕುಂತಲಾ, ಗೌತಮ್ ಬರುವಷ್ಟರಲ್ಲಿ ಇವಳಿಗೊಂದು ಗತಿ ಕಾಣಿಸಬೇಕೆಂದುಕೊಂಡಿರುತ್ತಾಳೆ. ಮುಂದೆ ಶಕುಂತಲಾ ಏನ್ಮಾಡ್ತಾಳೆ, ಭೂಮಿಕಾ ತಿರುಗೇಟು ಹೇಗಿರುತ್ತೆ ಎನ್ನುವುದನ್ನು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X