Amruthadhaare:ಆನಂದ್‌ಗೆ ಡಿಕ್ಕಿ ಹೊಡೆದ ಲಾರಿ; ಜೈ ದೇವ್ ಕುತಂತ್ರಕ್ಕೆ ಬಲಿಯಾದ್ನಾ ಆನಂದ್?
ಜೈ ದೇವ್ ಬಗ್ಗೆ ನಿಜ ತಿಳಿದುಕೊಂಡ ಆನಂದ್‌ಗೆ ಇದೀಗ ಬಹಳ ದೊಡ್ಡ ಸಂಕಷ್ಟ ಎದುರಾಗಿದೆ. ಜೈದೇವ್ ಬಗ್ಗೆ ಗೌತಮ್ ಬಳಿ ಆನಂದ್ ನಿಜ ವಿಚಾರವನ್ನು ಹೇಳಬೇಕು ಎಂದು ಅಂದುಕೊಂಡಿರುವುದಿಲ್ಲ. ಜೈದೇವ್‌ಗೆ ಆತನ ತಪ್ಪನ್ನು ಮನವರಿಕೆ ಮಾಡುವಲ್ಲಿ ಆನಂದ್ ವಿಫಲವಾಗುತ್ತಾನೆ. ಆನಂದ್ ಎದುರಿಗೆ ಮಾತ್ರ ಜೈ ದೇವ್ ತಾನು ಮಾಡಿದ್ದು ತಪ್ಪು ಎಂದು ಸುಮ್ಮನೆ ಕೈ ಕಟ್ಟಿ ಕುಳಿತುಕೊಳ್ಳುತ್ತಾನೆ. ಆದರೆ, ಆತನ ಮನಸ್ಸಿನಲ್ಲಿ ಆನಂದ್ ಬಗ್ಗೆ ಕೆಟ್ಟ ಯೋಚನೆಗಳು ಬರುತ್ತಲೇ ಇರುತ್ತವೆ.
ಗೌತಮ್ ತನ್ನ ತಮ್ಮನ ಅದೆಷ್ಟು ನಂಬುತ್ತಾನೆ. ಆದರೆ, ಈತ ನಂಬಿಕೆಗೆ ದ್ರೋಹ ಮಾಡುತ್ತಿದ್ದಾನೆ. ಈ ವಿಚಾರ ನನ್ನ ಗೆಳೆಯನಿಗೆ ಗೊತ್ತಾದರೆ ಆತ ಎದೆ ಒಡೆದುಕೊಂಡು ಬಿಡುತ್ತಾನೆ. ಈ ವಿಷಯ ಆನಂದ್‌ಗೆ ಬಹಳ ಬೇಸರ ತರಿಸುತ್ತೆ. ಜಯದೇವ್‌ಗೆ ವಾರ್ನಿಂಗ್ ಮಾಡಿ ಆನಂದ್ ಮನೆಗೆ ಬರುತ್ತಾನೆ.

ಅಪರ್ಣ ಇದೇನಿದು ಆನಂದ್ ಕೆಲಸದ ಒತ್ತಡದಿಂದ ಹೀಗೆ ಮೌನವಾಗಿ ಕುಳಿತಿದ್ದಾರೋ ಅಥವಾ ಆಫೀಸಿನಲ್ಲಿ ಏನಾದರೂ ತೊಂದರೆ ಆಯ್ತಾ ಎಂದು ಯೋಚನೆ ಮಾಡುತ್ತಿರುತ್ತಾಳೆ. ಆನಂದ್ ಬಳಿ ಯಾವುದನ್ನು ಡಿಸ್ಕಸ್ ಮಾಡಲು ಆಕೆ ಹೋಗುವುದಿಲ್ಲ. ಇನ್ನು ಬೆಳಗಾಗುವಷ್ಟರಲ್ಲಿ ಆನಂದ್ ಮೂಡ್ ಚೇಂಜ್ ಆಗಿರುತ್ತದೆ. ಇದನ್ನು ನೋಡಿದ ಅಪರ್ಣಗೆ ಬಹಳ ಖುಷಿಯಾಗುತ್ತದೆ. "ಇದೇನಿದು ನಿನ್ನೆ ಮುಖ ಒಂದು ಥರ ಇತ್ತು. ಇವತ್ತು ಬಹಳ ಲವಲವಿಕೆಯಿಂದ ಇದ್ದೀಯಾ" ಎಂದು ಹೇಳಿದಾಗ ಆನಂದ್ ನಗುತ್ತಾ ಅಪರ್ಣಾಗೆ ಚೇಡಿಸುತ್ತಾನೆ.
ಗಂಡನ ನಗು ಕಂಡು ಸಮಾಧಾನ
ಗಂಡನ ನಗು ಮುಖವನ್ನು ನೋಡಿದ ಅಪರ್ಣಗೆ "ಅಬ್ಬಾ ಇವರು ಸರಿ ಹೋಗಿ ಬಿಟ್ಟರಲ್ಲ" ಎನ್ನುವ ಯೋಚನೆ ಬರುತ್ತದೆ. ಇನ್ನೂ ಆನಂದ್ ಬಹಳ ಖುಷಿಯಿಂದ ಹೆಂಡತಿಯೊಡನೆ ತಮಾಷೆ ಮಾಡಿ ಆಫೀಸ್‌ಗೆ ಹೊರಡಲು ಕಾರಿನ ಬಳಿ ಬರುತ್ತಾನೆ. ಇನ್ನೇನು ಅಪರ್ಣಗೆ ಕೈ ಬೀಸಿ ಬಾಯ್ ಹೇಳುವ ವೇಳೆ ಆತನಿಗೆ ಲಾರಿ ಡಿಕ್ಕಿ ಹೊಡೆಯುತ್ತದೆ. ಅಪರ್ಣ ಶಾಕ್‌ನಲ್ಲಿ ಇದೇನಾಯ್ತು ಎಂದು ಗಂಡನ ಬಳಿಗೆ ಓಡಿ ಬರುತ್ತಾಳೆ.

ಜೈ ದೇವ್ ಮನದಲ್ಲಿ ನೂರಾರು ಯೋಚನೆ
ಇತ್ತ ಜೈ ದೇವ್ ಅದೇನೇನೋ ಯೋಚನೆ ಮಾಡಿಕೊಂಡು ಅಲ್ಲಿ ನಿಂತಿರುತ್ತಾನೆ. ಆಗ ಅಲ್ಲಿಗೆ ಬಂದ ಲಕ್ಷ್ಮಿಕಾಂತ "ಯಾಕೆ ಹೀಗೆ ನಿಂತಿದ್ದೀಯಾ" ಎಂದು ಪ್ರಶ್ನೆ ಮಾಡಿದಾಗ, ಜೈ ದೇವ್ ನಡೆದ ಎಲ್ಲಾ ವಿಚಾರವನ್ನು ತನ್ನ ಮಾವನ ಬಳಿ ಹೇಳುತ್ತಾನೆ. ಆಗ ಲಕ್ಷ್ಮಿಕಾಂತನಿಗೆ ಶಾಕ್ ಆಗುತ್ತೆ. "ಯಾಕೆ ಹೀಗೆಲ್ಲ ಮಾಡಲು ಹೋದೆ. ಈ ವಿಚಾರನ ತಾಯಿಗೆ ಎಲ್ಲಾದರೂ ತಿಳಿದರೆ, ಖಂಡಿತವಾಗಿಯೂ ಅವರು ಸುಮ್ಮನೆ ಬಿಡುವುದಿಲ್ಲ" ಎಂದು ಹೇಳುತ್ತಾನೆ. ಆಗ ಜೈದೇವ್ "ನಾನು ಖಂಡಿತವಾಗಿಯೂ ಆನಂದ್‌ನನ್ನು ಸುಮ್ಮನೆ ಬಿಡುವುದಿಲ್ಲ. ಅದಕ್ಕೂ ಒಂದು ಪ್ರತಿ ತಂತ್ರ ಹೂಡಿದ್ದೇನೆ" ಎಂದು ಹೇಳಿ ಮೀಸೆ ತಿರುವುತ್ತಾನೆ.
ಅಪ್ಪಿಗೆ ಬುದ್ದಿ ಹೇಳಿದ ಭೂಮಿಕಾ
ಅಪ್ಪಿಗೆ ಭೂಮಿಕಾ ಬುದ್ಧಿವಾದ ಹೇಳುತ್ತಿರುತ್ತಾಳೆ. ಮಲ್ಲಿಗೆ ಹ್ಯಾಪಿ ಮಾಡಿದ ಅವಮಾನದಿಂದಾಗಿ ಭೂಮಿಕಾಗೆ ಏನು ಮಾಡಬೇಕು ಎಂದು ತಿಳಿಯುವುದಿಲ್ಲ. ಆಗ ಭೂಮಿಕಾ ಅಪ್ಪಿ ಬಳಿ ಬಂದು "ಮಲ್ಲಿ ಜೊತೆ ನೀನು ನಡೆದುಕೊಂಡ ರೀತಿ ಚೂರು ಸರಿ ಇಲ್ಲ. ಈ ರೀತಿ ನಡೆದುಕೊಳ್ಳಬೇಡ. ಆಕೆ ನಿನಗಿಂತ ಮೊದಲು ಈ ಮನೆಗೆ ಸೊಸೆಯಾಗಿ ಬಂದಿದ್ದಾಳೆ" ಎಂದು ಹೇಳಿದಾಗ, ಅಪ್ಪಿ ಭೂಮಿಕಾ ಮಾತಿಗೆ ಬೆಲೆ ಕೊಡದೆ ಮನೆಯೊಳಗೆ ಹೋಗುತ್ತಾಳೆ.


Click it and Unblock the Notifications











