Amruthadhaare ; ಗೌತಮ್-ಭೂಮಿಕಾ ಮಧ್ಯೆ ಬೆಂಕಿ ಹಚ್ಚಿದ ಶಕುಂತಲಾ, ದಾಂಪತ್ಯದಲ್ಲಿ ಬಿರುಕು ಮೂಡಲು ಶುರುವಾಯ್ತಾ ?
ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಮನೆಗೆ ಆಕೆಯ ಸ್ನೇಹಿತೆ ಕಾವೇರಿ ಬಂದಿದ್ದಾಳೆ. ಬೆಂಗಳೂರಿನಲ್ಲಿ ಬದುಕುವುದು ತುಂಬಾ ಕಷ್ಟ, ಸಂಬಳ ಬರದಿದ್ದರೆ ಮುಂದೇನು ಮಾಡಬೇಕು ಅಂತ ದಿಕ್ಕು ತೋಚದಂತಾಗುತ್ತೆ ಎನ್ನುವ ಕಾವೇರಿ ನನ್ನ ಜೀವನ ಕಷ್ಟ ಆಗಿದೆ. ಚಿಕ್ಕಮಗಳೂರಿನ ನಿಮ್ಮ ಕಾಫಿ ಎಸ್ಟೇಟ್‌ನಲ್ಲಿ ನನಗೆ ಕೆಲಸ ಕೊಡಿಸಿ, ತುಂಬ ಉಪಕಾರ ಆಗುತ್ತದೆ. ಅಲ್ಲೇ ಸೆಟಲ್ ಆಗ್ತೀನಿ ಎಂದು ಹೇಳುತ್ತಾಳೆ.
ಭೂಮಿಕಾ ಏನಾದರೊಂದು ವ್ಯವಸ್ಥೆ ಮಾಡೋಣ ನಿಮ್ಮ ಗಂಡ ಅವರೇನು ಮಾಡ್ತಿದ್ದಾರೆ ಎಂದು ಕೇಳುತ್ತಾಳೆ. ಅವರು ಹಾಸಿಗೆ ಹಿಡಿದು ಎರಡು ವರ್ಷವಾಯ್ತು ಎಲ್ಲರನ್ನು ನಾನೇ ನೋಡಿಕೊಳ್ಳಬೇಕು.. ಮನೆ ನಡೆಸಬೇಕು.. ಎನ್ನುವ ಕಾವೇರಿ ನಾನು ಮನೆಗೆ ಹೋಗಬೇಕು ಮಗುನ ಪಕ್ಕದ ಮನೆಯಲ್ಲಿ ಬಿಟ್ಟು ಬಂದಿದ್ದೇನೆ ಎಂದು ಹೇಳುತ್ತಾಳೆ.

ಕಾವೇರಿ ಮಾತು ಕೇಳಿ ಆಶ್ಚರ್ಯಗೊಳ್ಳುವ ಭೂಮಿಕಾ ನಿನಗೆ ಮಗು ಆಯ್ತಾ ಎಂದು ಕೇಳುತ್ತಾಳೆ. ಆಗ ಕಾವೇರಿ ನಾನು ಹೆತ್ತ ಮಗು ಅಲ್ಲ ದತ್ತು ಪಡೆದಿರುವುದು ಎಂದು ಹೇಳುತ್ತಾಳೆ. ಹೆಣ್ಣು ಮಗು ಮೂರು ತಿಂಗಳಾಯ್ತು ಎಂದಿದ್ದಾಳೆ. ಕಾವೇರಿಗೆ ಉಡುಗೊರೆಯನ್ನು ನೀಡುವ ಭೂಮಿಕಾ, ನನ್ನ ಮಗುಗೂ ಕೂಡ ಮೂರು ತಿಂಗಳಾಯ್ತು ಅದಕ್ಕೆ ಮನೆಯಲ್ಲಿ ಕನಕಾಭಿಷೇಕ ಪೂಜೆ ಮಾಡಿಸಿದ್ದು ಎನ್ನುತ್ತಾಳೆ. iಇದರ ನಡುವೆ ಕಾವೇರಿ ಮಗಳಿಗೆ ನಕ್ಷತ್ರ ಎಂಬ ಹೆಸರನ್ನು ಕೂಡ ಸೂಚಿಸುತ್ತಾಳೆ. ಮೇಲ್ನೋಟಕ್ಕೆ ಕಾವೇರಿಯ ಪಾತ್ರ ಅತಿಥಿ ಪಾತ್ರ ಎಂದು ಅನಿಸಿದರೂ ಕೂಡ ಮುಂಬರುವ ದಿನಗಳಲ್ಲಿ ಈ ಪಾತ್ರದಿಂದ ಧಾರಾವಾಹಿಗೆ ರೋಚಕ ಟ್ವಿಸ್ಟ್ ಸಿಗುವ ಸಾಧ್ಯತೆ ಇದೆ.
ಶಕುಂತಲಾಗೆ ಸ್ವೀಟ್ ಕೊಡಲು ಬಂದ ಭೂಮಿಕಾ
ಮನೆಯಲ್ಲಿ ಮೂಲೆಗುಂಪಾಗಿರುವ ಶಕುಂತಲಾ, ತನ್ನ ಕೋಣೆಯಲ್ಲಿ ಒಬ್ಬಳೇ ನಿಂತಿದ್ದಾಳೆ. ಇದೇ ಸಮಯದಲ್ಲಿ ಸ್ವೀಟ್ಸ್ ತಗೊಂಡು ಬರುವ ಭೂಮಿಕಾ, ಶಕುಂತಲಾಗೆ ಸ್ವೀಟ್ ಕೊಟ್ಟಿದ್ದು ಶಕುಂತಲಾ ಮುಖ ತಿರುಗಿಸಿಕೊಂಡು ನಿಲ್ಲುತ್ತಾಳೆ. ಆಗ ಸ್ವೀಟ್ ನಿಮಗೆ ಕಹಿ ಅನಸ್ತಿದೆಯಾ ನನಗೆ ಅರ್ಥ ಆಗುತ್ತೆ ಬಿಡಿ ಅತ್ತೆ ಎನ್ನುವ ಭೂಮಿಕಾ ನಾವು ಅಂದುಕೊಂಡಿದ್ದಿದ್ದು ಆಗದೇ ಇದ್ದಾಗ ನಮಗೆ ನಿರಾಸೆಯಾದಾಗ ಹೀಗೆಲ್ಲಾ ಆಗುವುದು ಸಹಜ ಎನ್ನುತ್ತಾಳೆ. ಕರ್ಮ ತಿರುಗಿಕೊಂಡು ನಮಗೆ ಬಂದು ಹೊಡೆಯುತ್ತೆ ಎಂದು ಭೂಮಿಕಾ ಹೇಳಿದ್ದು ಶಕುಂತಲಾ ಕೊತ ಕೊತ ಕುದಿಯುತ್ತಿದ್ದಾಳೆ.
ಹೊಸ ಐಡಿಯಾ ಕೊಡಲು ಮುಂದಾದ ಸೃಜನ್
ಸೃಜನ್‌ನನ್ನು ಭೂಮಿಕಾ ಭೇಟಿಯಾಗಿದ್ದು ಶಕುಂತಲಾ ಫೋನ್ ಟ್ಯಾಪ್ ಮಾಡಿಸಲು ನಾವು ಮಾಡಿದ್ದ ಯೋಜನೆ ವಿಫಲವಾಗಿದೆ. ಅವರ ಫೋನ್‌ನಲ್ಲಿದ್ದ ಬಗ್‌ನ್ನ ಜೈದೇವ್ ತೆಗೆದಿದ್ದಾರೆ. ಇದು ಅವರದ್ದೇ ಕೆಲಸ ಎಂದು ಭೂಮಿಕಾಗೆ ಸೃಜನ್ ಹೇಳುತ್ತಾನೆ. ಅವರು ಅದನ್ನು ತೆಗೆದಿರುವುದರಿಂದ ನಮಗೆ ಯಾವ ಮಾಹಿತಿ ಸಿಕ್ತಿಲ್ಲ, ಅದಕ್ಕೆ ಮತ್ತೆ ಗಾಳ ಹಾಕಬೇಕು ಎಂದು ಮತ್ತೊಂದು ಐಡಿಯಾ ನೀಡಲು ಮುಂದಾಗಿದ್ದು ಭೂಮಿಕಾ ನಾವು ಅವರಂತೆಯೇ ಆಗ್ತಿದ್ದೀವಿ ಅಂತ ನಿಮಗೆ ಅನಿಸಲ್ವಾ ಬೇಡ ಅದೆಲ್ಲಾ ಎಂದು ಹೇಳುತ್ತಾಳೆ. ಸೃಜನ್ ಎಷ್ಟೇ ಹೇಳಿದರೂ ಕೂಡ ಒಪ್ಪದ ಭೂಮಿಕಾ ಅವರು ಬದಲಾದರೆ ಎಲ್ಲಾ ಬದಲಾಗುತ್ತೆ ಎನ್ನುತ್ತಾಳೆ.
ಹೆಂಡತಿಗೆ ಸುಂಕ ನೀಡುವ ಗೌತಮ್
ಗೌತಮ್ ಫಾರಿನ್ ಟ್ರಿಪ್‌ಗೆ ಹೊರಟಿದ್ದು ಭೂಮಿಕಾ ಹೋಗಲೇಬೇಕಾ ಎಂದು ಕೇಳುತ್ತಾಳೆ. ಆಗ ಗೌತಮ್ ತುಂಬಾ ಮುಖ್ಯವಾದ ಮೀಟಿಂಗ್ ಎಂದು ಹೇಳಿದ್ದು ಕಂಪನಿ ಅಂದರೆ ನಾನು ಮಾತ್ರ ಅಲ್ಲ ಅದರ ಮೇಲೆ ತುಂಬಾ ಅವಲಂಬಿತರಾಗಿದ್ದಾರೆ. ನಮಗೆ ಅಗತ್ಯ ಇಲ್ಲದಿದ್ದರೂ ಕೂಡ ಅವರಿಗೋಸ್ಕರವಾದರೂ ಈ ತರಹದ ಕೆಲಸ ಮಾಡಬೇಕಾಗುತ್ತೆ ಎಂದು ಹೇಳಿದ್ದು ಭೂಮಿಕಾ ನಿಮಗೆ ಹೋಗಲು ಪಾಸ್‌ಫೋರ್ಟ್ ಬೇಕಲ್ವಾ ನಾನು ಪಾಸ್‌ಫೋರ್ಟ್ ಬಚ್ಚಿಡ್ತೀನಿ ಎಂದು ತಮಾಷೆ ಮಾಡುತ್ತಾಳೆ. ಶಕುಂತಲಾ ಇಬ್ಬರ ಮಾತುಗಳನ್ನು ಕೇಳಿಸಿಕೊಳ್ಳುತ್ತಾಳೆ. ಕೊನೆಗೆ ಭೂಮಿಕಾ ಸುಂಕ ಕೇಳಿದ್ದು ಮುದ್ದಿನ ಪತ್ನಿಗೆ ಮುತ್ತಿನ ಸುಂಕ ಕೊಟ್ಟು ಗೌತಮ್ ಹೊರಡುತ್ತಾನೆ.

ಬೆಂಕಿ ಹಚ್ಚಿದ ಶಕುಂತಲಾ, ಕೆರಳಿದ ಗೌತಮ್
ಇಂದು [ ಆಗಸ್ಟ್ 24 ] ಬಿಡುಗಡೆಯಾದ ಪ್ರೋಮೊದಲ್ಲಿ ಗೌತಮ್ ಪಾಸ್‌ಫೋರ್ಟ್ ಕಾಣೆಯಾಗಿದೆ. ಬ್ಯಾಗ್‌ನಲ್ಲಿ ಪಾರ್ಸ್ ಫೋರ್ಟ್ ಸಿಗದ ಹಿನ್ನೆಲೆ ವಿಮಾನ ನಿಲ್ದಾಣಕ್ಕೆ ಹೊರಟಿದ್ದ ಗೌತಮ್ ಮರಳಿ ಮನೆಗೆ ಬಂದಿದ್ದು, ಎಲ್ಲರೆದುರು ಎಲ್ಲಾ ವಿಚಾರದಲ್ಲಿ ಹುಡುಗಾಟ ನಿಮ್ಮದು ಪಾಸ್‌ಫೋರ್ಟ್ ಎಲ್ಲಿ ಎಂದು ಜೋರು ಧ್ವನಿಯಲ್ಲಿ ಕೇಳುತ್ತಾನೆ. ಭೂಮಿಕಾ ನಾನು ಬ್ಯಾಗ್‌ನಲ್ಲಿಟ್ಟಿದ್ದೇ ಎಂದು ಹೇಳಿದರೂ ಕೂಡ ನಂಬಂದ ಗೌತಮ್ ಅದರಲ್ಲಿದ್ದರೂ ನಾನು ವಾಪಸ್ ಬಂದಿದೀನಾ ? ನನಗೇನು ತಲೆ ಕೆಟ್ಟಿದೆಯಾ ಎಂದು ಕೂಗುತ್ತಾನೆ. ನಿಮಗೆ ಹುಚ್ಚು ಹಿಡಿದಿದೆ ಅದಕ್ಕೆ ಹೀಗೆಲ್ಲಾ ಮಾಡ್ತಿದ್ದೀರಾ ಎಂದು ಹೇಳುತ್ತಾನೆ. ಇದರಿಂದ ಕೋಪಗೊಳ್ಳುವ ಭೂಮಿಕಾ ಹೌದು ನನಗೆ ಹುಚ್ಚು ಹಿಡಿದಿದೆ, ತಲೆ ಕೆಟ್ಟಿದೆ, ಆಗಲಿಂದ ಹೇಳ್ತಿದ್ದೀನಿ ಬ್ಯಾಗ್‌ನಲ್ಲಿ ಇಟ್ಟಿದೀನಿ ಅಂತ ಮತ್ತೆ ಮತ್ತೆ ಅದನ್ನೇ ಕೇಳ್ತಿದ್ದೀರಲ್ಲ, ನಾನು ಪಾಸ್‌ಫೋರ್ಟ್ ಬ್ಯಾಗ್‌ನಲ್ಲೇ ಇಟ್ಟಿದ್ದೇ ನಂಬುವ ಹಾಗಿದ್ದರೆ ನಂಬಿ ಇಲ್ಲಾ ಬಿಡಿ ಎಂದು ಹೋಗುತ್ತಾಳೆ. ಆಗ ಜೋರಾಗಿಯೇ ಬೆಂಕಿ ಬಿದ್ದಿದೆ ಈ ಬೆಂಕಿಯಲ್ಲಿ ಚಳಿ ಕಾಯಿಸೋಣ ಎಂದು ಶಂಕುತಲಾ ಅಂದುಕೊಳ್ಳುತ್ತಾಳೆ.
ಸದ್ಯ ಶಕುಂತಲಾನೇ ಗೌತಮ್ ಪಾರ್ಸ್‌ಫೋರ್ಟ್ ಎಗರಿಸಿರುವ ಅನುಮಾನ ಎಲ್ಲರನ್ನು ಕಾಡುತ್ತಿದ್ದು, ಗೌತಮ್ ಮತ್ತು ಭೂಮಿಕಾ ದಾಂಪತ್ಯದಲ್ಲಿ ಇಲ್ಲಿಂದ ಬಿರುಕು ಮೂಡಲು ಶುರುವಾಯ್ತಾ ಎನ್ನುವ ಪ್ರಶ್ನೆ ಕೂಡ ಸದ್ಯ ಹಲವರನ್ನು ಕಾಡುತ್ತಿದೆ. ಮುಂದೆ ಧಾರಾವಾಹಿ ಯಾವ ತಿರುವು ಪಡೆಯುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











