Amruthadhaare: ಆನಂದ್‌ಗೆ ಆಕ್ಸಿಡೆಂಟ್ ಮಾಡಿಸಿ, ಕೋಮಾಗೆ ಕಳಿಸಿದ ಜೈದೇವ್; ವೀಕ್ಷಕರಿಗೆ ಬೇಸರ

By ಪ್ರಿಯಾದೊರೆ

'ಅಮೃತಧಾರೆ' ಧಾರಾವಾಹಿಯಲ್ಲಿ ಪಾರ್ಥ ಮತ್ತು ಅಪೇಕ್ಷಾ ಮದುವೆ ಹಾಗೋ ಹೀಗೋ ನಡೆದು ಹೋಯ್ತು. ಬೇಸರವಿದ್ದರೂ ಜೋಡಿಗಳು ಒಂದಾಗಿದ್ದಕ್ಕೆ ಅಭಿಮಾನಿಗಳು ಹ್ಯಾಪಿ ಆಗಿದ್ದಾರೆ.

ಆದರೆ, ಮದುವೆ ತಡೆಯಲು ಜೈದೇವ್ ಅಪೇಕ್ಷಾಳನ್ನು ಕೊಲ್ಲಲು ಪ್ಲಾನ್ ಮಾಡಿದ್ದ. ಇದಕ್ಕಾಗಿ ಸುಪಾರಿ ಕೊಟ್ಟಿದ್ದಲ್ಲದೇ, ತಾನೇ ಖುದ್ದಾಗಿ ಹೋಗಿ ಫೈಟ್ ಕೂಡ ಮಾಡಿದ್ದ.

Amruthadhaare Serial August 23rd episode update

ಆದರೆ, ಸರಿಯಾದ ಸಮಯಕ್ಕೆ ಗೌತಮ್ ಬಂದು ಪಾರ್ಥ ಮತ್ತು ಅಪೇಕ್ಷಾಳನ್ನು ಪಾರು ಮಾಡಿದ್ದರು. ಆದರೆ ಈ ಕೆಲಸ ಯಾರು ಮಾಡಿದ್ದು ಎಂದು ಗೊತ್ತಾಗಿರಲಿಲ್ಲ.

ಆಕ್ಸಿಡೆಂಟ್ ಮಾಡಿಸಿದ ಜೈದೇವ್

ಗಲಾಟೆ ಮಾಡಿದ್ದ ರೌಡಿಗಳಲ್ಲಿ ಒಬ್ಬ ಆನಂದ್ ಕೈಗೆ ಸಿಕ್ಕಿ ಬಿದ್ದಿದ್ದ. ಆತ ಆನಂದ್ ಬಳಿ ಜೈದೇವ್ ಸುಪಾರಿ ಕೊಟ್ಟ ವಿಚಾರವನ್ನು ಹೇಳಿ ಜೀವ ಉಳಿಸಿಕೊಂಡಿದ್ದ. ಇದರಿಂದ ಆನಂದ್ ಚಿಂತೆಗೊಳಗಾಗಿದ್ದ. ಜೈದೇವ್ ಏನೋ ಚಿಕ್ಕವನು, ಬದುಕಿನ ಬಗ್ಗೆ ಅರಿಯದವನು. ಆಸೆಗಳ ಹಿಂದೆ ಬಿದ್ದು ತಪ್ಪು ಮಾಡುತ್ತಿದ್ದಾನೆ ಎಂದು ಹಲವು ವಿಚಾರಗಳನ್ನು ಗೌತಮ್‌ನಿಂದ ಮುಚ್ಚಿಟ್ಟಿದ್ದ. ಆದರೆ, ಈಗ ಮನೆಯವರನ್ನೇ ಕೊಲ್ಲುವ ಮಟ್ಟಕ್ಕೆ ಹೋಗಿರುವ ಜೈದೇವ್ ಆಲೋಚನೆಯನ್ನು ಕಂಡು ಆನಂದ್ ಬೆಚ್ಚಿ ಬಿದ್ದಿದ್ದ. ಈ ವಿಚಾರವನ್ನು ಗೌತಮ್‌ಗೆ ತಿಳಿಸಿದರೆ, ನಿಂತಲೇ ಕುಸಿದು ಬೀಳುತ್ತಾನೆ ಎಂದು ಗಾಬರಿಯಾಗಿದ್ದ. ಹೀಗಾಗಿ ಜೈದೇವ್‌ನನ್ನು ಆನಂದ್ ಭೇಟಿ ಮಾಡಿ ಕಪಾಳಕ್ಕೆ ಹೊಡೆದು ಬುದ್ಧಿ ಹೇಳಿದ್ದ. ಆನಂದ್‌ಗೆ ಸ್ಯ ಗೊತ್ತಾದರೆ, ಗೌತಮ್‌ಗೂ ಗೊತ್ತಾಗುತ್ತೆ ಎಂಬ ಆತಂಕದಲ್ಲಿ ಆನಂದ್‌ಗೆ ಆಕ್ಸಿಡೆಂಟ್ ಮಾಡಿಸಿದ್ದಾನೆ.

ಆನಂದ್ ಸ್ಥಿತಿ ಕಂಡು ಕುಣಿದ ಜೈದೇವ್

ಆನಂದ್ ಆಸ್ಪತ್ರೆಗೆ ಸೇರಿದ ವಿಚಾರವನ್ನು ಕೇಳಿ ಜೈದೇವ್ ಫುಲ್ ಹ್ಯಾಪಿ ಆಗಿದ್ದಾನೆ. ಇನ್ನು ತನ್ನ ಬದುಕಿನಲ್ಲಿ ಯಾರೂ ಅಡ್ಡ ಬರಲಾರರು ಎಂದು ಖುಷಿ ಪಡುತ್ತಿದ್ದಾನೆ. ಇತ್ತ ಶಕುಂತಲಾ ಕೂಡ ಆನಂದ್‌ಗೆ ಆಕ್ಸಿಡೆಂಟ್ ಆದ ವಿಚಾರ ಕೇಳಿ, ಈ ಮನೆಗೆ ಅವನ ಕಾಟ ತಪ್ಪಿತು ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾಳೆ. ಆದರೆ, ಜೈದೇವ್ ಈ ಆಕ್ಸಿಡೆಂಟ್ ಮಾಡಿಸಿದ್ದಾನೆ ಎಂಬುದು ಗೊತ್ತಾದರೆ ಏನು ಮಾಡುತ್ತಾಳೋ ಗೊತ್ತಿಲ್ಲ. ಸದ್ಯಕ್ಕಂತೂ ಅಮ್ಮ, ಮಗ ಇಬ್ಬರೂ ಕೂಡ ಖುಷಿಯಾಗಿದ್ದಾರೆ.

Amruthadhaare Serial August 23rd episode update

ಕೋಮಾದಲ್ಲಿರುವ ಆನಂದ್

ಆನಂದ್ ತಲೆಗೆ ಏಟಾಗಿರುವುದರಿಂದ ಅವನ ಸ್ಥಿತಿ ಗಂಭೀರವಾಗಿದ್ದು, ವೈದ್ಯರು ಅಬ್ಸರ್ವೇಶನ್‌ನಲ್ಲಿ ಇಟ್ಟಿದ್ದಾರೆ. ಗೌತಮ್ ಸದ್ಯ ಯಾವುದಕ್ಕೂ ರೆಸ್ಪಾಂಡ್ ಮಾಡುತ್ತಿಲ್ಲ. ಅಭಿಮಾನಿಗಳು ಈ ಹಿಂದೆ ಗೆಸ್ ಮಾಡಿದಂತೆ ಆನಂದ್ ಕೋಮಾಗೆ ಹೋಗಿದ್ದು, ಜೈದೇವ್ ಬಗ್ಗೆ ಸತ್ಯ ಸದ್ಯಕ್ಕಂತೂ ಹೊರ ಬರಲು ಸಾಧ್ಯವೇ ಇಲ್ಲ. ಅಪರ್ಣಾ ಗಂಡನ ಪರಿಸ್ಥಿತಿಯನ್ನು ಕಂಡು ಕಂಗಾಲಾಗಿದ್ದಾಳೆ. ಗೌತಮ್ ಕೈ ಕಾಲುಗಳು ನಿಂತು ಹೋಗಿದ್ದು, ಗೆಳೆಯನ ಸ್ಥಿತಿಗೆ ನಿಶ್ಯಕ್ತನಾಗಿದ್ದಾನೆ. ಮುಂದೆ ಈ ಪರಿಸ್ಥಿತಿಯಿಂದ ಗೌತಮ್ ಹೇಗೆ ನಿಭಾಯಿಸುತ್ತಾನೆ ಎಂಬ ಕುತೂಹಲ ಮೂಡಿದೆ.

ಟ್ವಿಸ್ಟ್ ನೋಡಿದ ಅಭಿಮಾನಿಗಳಿಗೆ ಬೇಸರ

ಇನ್ನು ಭೂಮಿಕಾ, ಜೈದೇವ್ ಆಟವನ್ನು ಹೊರ ತರುತ್ತಾಳಾ? ಇಲ್ಲ ಅವಳಿಗೂ ಇದೇ ಪರಿಸ್ಥಿತಿ ಎದುರಾಗುತ್ತಾ? ಅನ್ನೋದು ಸದ್ಯಕ್ಕೆ ಕುತೂಹಲ. ಅಬಿಮಾನಿಗಳಂತೂ ಆನಂದ್ ಸ್ಥಿತಿ ಕಂಡು ಬಹಳ ಬೇಸರ ಮಾಡಿಕೊಂಡಿದ್ದಾರೆ. ಸೀರಿಯಲ್‌ನಲ್ಲಿ ಆಕ್ಟೀವ್ ಆಗಿ, ಕಾಮಿಡಿ ಮಾಡಿಕೊಂಡು ಎಲ್ಲರನ್ನೂ ನಗಿಸುತ್ತಿದ್ದ ಆನಂದ್ ಮೌನವಾಗಿರುವುದಕ್ಕೆ ನೊಂದುಕೊಂಡಿದ್ದಾರೆ. ಸೀರಿಯಲ್ ಟ್ವಿಸ್ಟ್ ನೋಡಿ ಫುಲ್ ಶಾಕ್ ಆಗಿರುವ ಅಭಿಮಾನಿಗಳು ಮುಂದೆ ಕಥೆ ಹೇಗೆ ಓಡುತ್ತೆ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

More from Filmibeat

English summary
Amruthadhaare Serial August 23rd episode update
Read more about: serial priya dore filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X