Amruthadhaare ; ಮುನಿಸು ಮರೆತು ಒಂದಾದ ಗೌತಮ್-ಭೂಮಿಕಾ, ನಿನ್ನ ಮಗನ ಸಾವು ನನ್ನ ಕೈಯಲ್ಲೇ ಎಂದ ಶಕುಂತಲಾ

ಅಮೃತಧಾರೆ ಧಾರಾವಾಹಿಯಲ್ಲಿ ಶಕುಂತಲಾಗೆ ಜೈದೇವ್ ಫೋನ್ ಮಾಡಿದ್ದಾನೆ. ಎಲ್ಲಿ ನಿನ್ನೆ ಇಂದ ಸುಳಿವು ಇಲ್ಲ ಎನ್ನುತ್ತಾನೆ. ಆಗ ಶಕುಂತಲಾ ಮನೆಯಲ್ಲಿ ನಡೆದ ಕನಕಾಭಿಷೇಕದ ವಿಚಾರ ಹೇಳಿದ್ದು ಜೈದೇವ್ ನನ್ನ ಮನೆಯಿಂದ ಆಚೆ ಹಾಕಿ ಅಲ್ಲಿ ಅವನ ಮಗನ ಜೊತೆ ಸಂಭ್ರಮವನ್ನಾಚರಿಸುತ್ತಿದ್ದಾನಾ ಅವನು ಎಂದು ಕಿಡಿ ಕಾರುತ್ತಾನೆ. ಇದೇ ಸಮಯದಲ್ಲಿ ತಾನು ವಿದೇಶಕ್ಕೆ ಹೋಗುತ್ತಿರುವ ವಿಚಾರ ಹೇಳಲು ಗೌತಮ್ ಬಂದಿದ್ದು ಶಕುಂತಲಾ ಫೋನ್ ಕಟ್ ಮಾಡುತ್ತಾಳೆ.

ಗೌತಮ್‌ಗೆ ಎಲ್ಲಾ ಒಳ್ಳೆಯದಾಗುತ್ತೆ ಲಾಭ ಎಲ್ಲಿ ಬರುತ್ತೆ ಅಲ್ಲಿ ಹೂಡಿಕೆ ಮಾಡ್ತಿದ್ದೀಯಾ ಲಾಭ ಬಂದೇ ಬರುತ್ತೆ ಒಳ್ಳೆಯದಾಗಲಿ ಎನ್ನುತ್ತಾಳೆ. ಬಹುಮುಖ್ಯವಾದ ಡೀಲ್ ಎಂದು ಇವನು ಹೇಳ್ತಿದ್ದಾನೆ, ಹೋಗಬೇಡಿ ಹೋಗಬೇಡಿ ಎಂದು ಅವಳು ಹೇಳ್ತಿದ್ದಾಳೆ. ಇದನ್ನು ಇಟ್ಕೊಂಡು ಗೇಮ್ ಆಡಿದರೆ ಮಜಾ ಇರುತ್ತಲ್ವಾ ಎಂದು ಶಕುಂತಲಾ ಆ ನಂತರ ಮನದಲ್ಲಿಯೇ ಲೆಕ್ಕ ಹಾಕುತ್ತಾಳೆ.

amruthadhaare-serial-august-24-episode-written-update

ಪಾಸ್‌ಫೋರ್ಟ್‌ ಎಗರಿಸುವ ಶಕುಂತಲಾ

ವಿದೇಶಕ್ಕೆ ತೆರಳಲು ಅಣಿಯಾದ ಗೌತಮ್‌ನ ಬ್ಯಾಗ್‌ನ್ನೆಲ್ಲಾ ಭೂಮಿಕಾ ಪ್ಯಾಕ್ ಮಾಡಿದ್ದಾಳೆ. ಇದೇ ಸಮಯದಲ್ಲಿ ತಾಯಿಯ ಫೋನ್ ಬಂದಿದ್ದು ಭೂಮಿಕಾ ಮಾತನಾಡಲು ರೂಮ್ ಆಚೆ ಹೋಗುತ್ತಾಳೆ. ಆಗ ರೂಮ್‌ಗೆ ತೆರಳುವ ಶಕುಂತಲಾ ಪಾಸ್‌ಫೋರ್ಟ್‌ನ ಎತ್ಕೊಂಡು ಹೋಗುತ್ತಾಳೆ.


ಮನೆಯಿಂದ ಹೊರಡುವ ಗೌತಮ್

ಇದ್ಯಾವುದರ ಪರಿವೇ ಇಲ್ಲದ ಭೂಮಿಕಾ ಮರಳಿ ರೂಮ್‌ಗೆ ಬಂದಿದ್ದು ಗೌತಮ್ ನಿರ್ಮಾಣ ಹಂತದಲ್ಲಿರುವ ಅಪಾರ್ಟ್‌ಮೆಂಟ್‌ ಒಂದು ಮಾರಾಟಕ್ಕಿದೆ. ಅಲ್ಲಿ ಹೋಗಬೇಕು ನೋಡಬೇಕು ಅವರ ಹತ್ರ ಮಾತಾಡಬೇಕು ಆಮೇಲೆ ವಿಮಾನ ನಿಲ್ದಾಣಕ್ಕೆ ಹೋಗಬೇಕೆಂದು ಹೇಳುತ್ತಾನೆ. ಅದಕ್ಕೆ ಈಗ ಹೊರಡ್ತಿದ್ದೀನಿ ಎಂದು ಹೇಳಿ ಹೊರಡುತ್ತಾನೆ.

ಪಾಸ್‌ಫೋರ್ಟ್‌ ಹುಡುಕುವ ಗೌತಮ್

ಕಾರಿನಲ್ಲಿ ಹೊರಟಿರುವ ಗೌತಮ್ ಹೋಗೋಕೆ ಮನಸಿಲ್ಲ ಹಾಗೇ ಕಾರ್ ತಿರುಗಿಸಿಕೊಂಡು ಮನೆಗೆ ಹೋಗೋಣ ಅನ್ಸುತ್ತಿದೆ ಎಂದು ಆನಂದ್‌ಗೆ ಹೇಳುತ್ತಾನೆ. ಭೂಮಿಕಾ ಅವರಿಗೆ ಕೂಡ ಕಳುಹಿಸಿ ಕೊಡುವ ಮನಸು ಇರಲಿಲ್ಲ ಹೇಗೋ ಸಮಾಧಾನ ಮಾಡಿ ಬಂದಿದ್ದೇನೆ ಎನ್ನುವ ಗೌತಮ್ ಪಾಸ್‌ಫೋರ್ಟ್‌ ಹುಡುಕಲು ಮುಂದಾಗುತ್ತಾನೆ.


ಮರಳಿ ಮನೆಗೆ ಬಂದ ಗೌತಮ್

ಆಗ ಪಾಸ್‌ಫೋರ್ಟ್‌ ಕಾಣದೇ ಆತಂಕ ಮತ್ತು ಕೋಪಗೊಳ್ಳುವ ಗೌತಮ್ ಮರಳಿ ಮನೆಗೆ ಬಂದಿದ್ದು ಎಲ್ಲರೆದುರು ಎಲ್ಲಾ ವಿಚಾರದಲ್ಲಿ ಹುಡುಗಾಟ ನಿಮ್ಮದು ಪಾಸ್‌ಫೋರ್ಟ್ ಎಲ್ಲಿ ಎಂದು ಜೋರು ಧ್ವನಿಯಲ್ಲಿ ಭೂಮಿಕಾಗೆ ಕೇಳುತ್ತಾನೆ. ಭೂಮಿಕಾ ನಾನು ಬ್ಯಾಗ್‌ನಲ್ಲಿಟ್ಟಿದ್ದೇ ಎಂದು ಹೇಳಿದರೂ ಕೂಡ ನಂಬಂದ ಗೌತಮ್ ಅದರಲ್ಲಿದ್ದರೂ ನಾನು ವಾಪಸ್ ಬಂದಿದೀನಾ ? ನನಗೇನು ತಲೆ ಕೆಟ್ಟಿದೆಯಾ ಎಂದು ಕೂಗುತ್ತಾನೆ.

amruthadhaare-serial-august-24-episode-written-update

ನಿಮಗೆ ಹುಚ್ಚು ಹಿಡಿದಿದೆ ಅದಕ್ಕೆ ಹೀಗೆಲ್ಲಾ ಮಾಡ್ತಿದ್ದೀರಾ ಎಂದು ಹೇಳುತ್ತಾನೆ. ಇದರಿಂದ ಕೋಪಗೊಳ್ಳುವ ಭೂಮಿಕಾ ಹೌದು ನನಗೆ ಹುಚ್ಚು ಹಿಡಿದಿದೆ, ತಲೆ ಕೆಟ್ಟಿದೆ, ಆಗಲಿಂದ ಹೇಳ್ತಿದ್ದೀನಿ ಬ್ಯಾಗ್‌ನಲ್ಲಿ ಇಟ್ಟಿದೀನಿ ಅಂತ ಮತ್ತೆ ಮತ್ತೆ ಅದನ್ನೇ ಕೇಳ್ತಿದ್ದೀರಲ್ಲ, ನಾನು ಪಾಸ್‌ಫೋರ್ಟ್ ಬ್ಯಾಗ್‌ನಲ್ಲೇ ಇಟ್ಟಿದ್ದೇ ನಂಬುವ ಹಾಗಿದ್ದರೆ ನಂಬಿ ಇಲ್ಲಾ ಬಿಡಿ ಎಂದು ಹೋಗುತ್ತಾಳೆ. ಆಗ ಜೋರಾಗಿಯೇ ಬೆಂಕಿ ಬಿದ್ದಿದೆ ಈ ಬೆಂಕಿಯಲ್ಲಿ ಚಳಿ ಕಾಯಿಸೋಣ ಎಂದು ಶಂಕುತಲಾ ಅಂದುಕೊಳ್ಳುತ್ತಾಳೆ.

ಗಂಡಾಂತರರಿಂದ ಪಾರಾದ ಗೌತಮ್ ಮತ್ತು ಆನಂದ್

ಮನೆಯಲ್ಲಿ ಗಂಡ-ಹೆಂಡ್ತಿಯ ಈ ವಾಗ್ಯುದ್ದ ಕಂಡು ಎಲ್ಲರು ಆತಂಕದಲ್ಲಿದ್ದಾಗ ಆನಂದ್‌ಗೆ ಕರೆಯೊಂದು ಬಂದಿದ್ದು, ಗೆಳೆಯ ನಾವು ಮೀಟಿಂಗ್‌ಗೆ ಹೋಗಬೇಕಿತ್ತಲ್ಲಾ ಆ ಬಿಲ್ಡಿಂಗ್‌ನಲ್ಲಿ ಅಗ್ನಿ ಅನಾಹುತವಾಗಿದೆ ಎಂದು ಹೇಳುತ್ತಾನೆ. ತುಂಬಾ ಜನ ಸತ್ತು ಹೋಗಿದಾರೆ ಎನ್ನುತ್ತಾನೆ.

ಆನಂದ್ ಮಾತು ಕೇಳಿ ಗೌತಮ್ ಮುಖದಲ್ಲಿ ಆತಂಕ ಮನೆ ಮಾಡಿದ್ದು ನಾವು ಅಲ್ಲಿರಬೇಕಿತ್ತು ಅಜ್ಜಿ ನಾವು ಅಲ್ಲಿ ಹೋಗಿದ್ದರೆ ದೊಡ್ಡ ಅನಾಹುತನೇ ಆಗುತ್ತಿತ್ತು ಎಂದು ಆನಂದ್ ಹೇಳುತ್ತಾನೆ. ಗೆಳೆಯ ಗಂಡಾಂತರದಿಂದ ಪಾರಾಗಿದೇವೆ ನಾವು ಎನ್ನುತ್ತಾನೆ. ಆನಂದ್‌ನ ಈ ಮಾತು ಕೇಳಿ ಶಕುಂತಲಾ ಕೈ ಕೈ ಹಿಸಿಕಿಕೊಂಡಿದ್ದು ಎಂಥಾ ಕೆಲಸ ಆಗೋಯ್ತು ನಾನಾಗಿ ನಾನೇ ಇವನನ್ನು ಕಾಪಾಡಿದೆ ಅಲ್ಲ ನನ್ನ ಬಾಯಿಗೆ ನಾನೇ ಮಣ್ಣು ಹಾಕಿಕೊಂಡೆ ಎಂದುಕೊಳ್ಳುತ್ತಾಳೆ.

ನಿನ್ನ ಮಗನ ಸಾವು ನನ್ನ ಕೈಯಲ್ಲೇ ಎಂದ ಶಕುಂತಲಾ

ಇಂದು (ಆಗಸ್ಟ್ 25) ಬಿಡುಗಡೆಯಾದ ಪ್ರೋಮೋದಲ್ಲಿ ಭೂಮಿಕಾ ಬಳಿ ಗೌತಮ್ ಕ್ಷಮೆ ಕೇಳಿದ್ದು ನಿಮಗೆ ತುಂಬಾ ನೋವಾಗಿದೆ ಎನ್ನುವುದು ನನಗೆ ಗೊತ್ತು. ಕಷ್ಟಪಟ್ಟು ಬೆಳೆಸಿದ ಬ್ಯುಸಿನೆಸ್ ಹಾಳಾಗಿ ಹೋಗುತ್ತಲ್ಲ ಎಂದು ಹಾಗೆಲ್ಲಾ ಮಾತನಾಡಿದೆ. ನನಗೆ ನಿಮ್ಮ ಮೇಲೆ ಇರುವುದು ಪ್ರೀತಿ ಮಾತ್ರ ಯಾವುದೇ ತಪ್ಪು ಮಾಡಿಲ್ಲ ಭೂಮಿಕಾ ಈ ಜೀವ ನೀವು ಕೊಟ್ಟ ಭಿಕ್ಷೆ ಅಂದರೂ ತಪ್ಪಿಲ್ಲ ಎನ್ನುತ್ತಾನೆ. ಮತ್ತೊಂದು ಕಡೆ ದೇವರ ಬಳಿ ಭಾಗ್ಯಮ್ಮ ಪ್ರಾರ್ಥನೆ ಮಾಡುತ್ತಿದ್ದು ಇಷ್ಟಕ್ಕೆ ಎಲ್ಲ ಮುಗೀತು ಅಂತ ತುಂಬಾ ಖುಷಿ ಪಡಬೇಡ ಎಂದು ಶಕುಂತಲಾ ಹೇಳಿದ್ದಾಳೆ. ನಿನ್ನ ಮಗನ ಸಾವು ನನ್ನ ಕೈಯಲ್ಲೇ ಎಂದು ಅವನ ಹಣೆಯ ಮೇಲೆ ಬರೆದು ಬಿಟ್ಟಿದೆ ಎಂದು ಹೇಳುತ್ತಾಳೆ. ಇಂದು ಏನೆಲ್ಲಾ ಆಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X