Amruthadhaare ; ಮಗು ಪ್ರಾಣದ ಹಿಂದೆ ಬಿದ್ದ ಶಕುಂತಲಾ, ಭೂಮಿಕಾಗೆ ಸವಾಲು ಹಾಕಿದ ಮನೆಹಾಳ ಅತ್ತೆ !

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಮತ್ತು ಆನಂದ್ ಗಂಡಾಂತರದಿಂದ ಪಾರಾಗಿದ್ದಾರೆ. ಅಗ್ನಿ ಅನಾಹುತದಿಂದ ಬದುಕುಳಿದ ವಿಚಾರವನ್ನು ಆನಂದ್ ಹೇಳುತ್ತಿದ್ದಂತೆಯೇ ಶಕುಂತಲಾ ಹೊಟ್ಟೆಗೆ ಬೆಂಕಿ ಬಿದ್ದಂತಾಗಿದೆ. ಎಂಥಾ ಕೆಲಸ ಆಗೋಯ್ತು ನಾನಾಗಿ ನಾನೇ ಇವನನ್ನು ಕಾಪಾಡಿದೆ ಅಲ್ಲ, ನನ್ನ ಬಾಯಿಗೆ ನಾನೇ ಮಣ್ಣು ಹಾಕಿಕೊಂಡೆ ಎಂದು ಶಕುಂತಲಾ ವಿಲ ವಿಲ ಒದ್ದಾಡಿದ್ದಾಳೆ. ಇನ್ನೊಂದು ಕಡೆ ಆ ದೇವರೇ ನಿನ್ನನ್ನು...

ಕಾಪಾಡಿದ, ಭೂಮಿಕಾ ಪಾಸ್‌ಫೋರ್ಟ್‌ ಎತ್ತಿಕೊಂಡಿದ್ದರೆ.. ಒಳ್ಳೇಯದೇ ಎಂದು ಅಜ್ಜಿ ಗೌತಮ್‌ಗೆ ಹೇಳಿದ್ದು ಗೌತಮ್‌ಗೆ ತನ್ನ ತಪ್ಪಿನ ಅರಿವಾಗಿದೆ. ಹೀಗಾಗಿ ಕ್ಷಮೆಯನ್ನು ಕೇಳಲು ಬಂದ ಗೌತಮ್ ನಿಮಗೆ ತುಂಬಾ ನೋವಾಗಿದೆ ಎನ್ನುವುದು ನನಗೆ ಗೊತ್ತು. ಕಷ್ಟಪಟ್ಟು ಬೆಳೆಸಿದ ಬ್ಯುಸಿನೆಸ್ ಹಾಳಾಗಿ ಹೋಗುತ್ತಲ್ಲ ಎಂದು ಹಾಗೆಲ್ಲಾ ಮಾತನಾಡಿದೆ. ನನಗೆ ನಿಮ್ಮ ಮೇಲೆ ಇರುವುದು ಪ್ರೀತಿ ಮಾತ್ರ ಯಾವುದೇ ತಪ್ಪು ಮಾಡಿಲ್ಲ ಭೂಮಿಕಾ ಈ ಜೀವ ನೀವು ಕೊಟ್ಟ ಭಿಕ್ಷೆ ಅಂದರೂ ತಪ್ಪಿಲ್ಲ ಎನ್ನುತ್ತಾನೆ. ಭಾವುಕಗೊಂಡು ಗೌತಮ್‌ನ ಭೂಮಿಕಾ ಅಪ್ಪಿಕೊಳ್ಳುತ್ತಾಳೆ. ಅಪ್ಪುಗೆಯ ದಂಡ ಕಟ್ಟುವ ಮೂಲಕ ಇಬ್ಬರ ಮುನಿಸು ಮರೆಯಾಗಿದೆ. ಪ್ರೀತಿ ಹೆಚ್ಚಾಗಿದೆ.

amruthadhaare-serial-august-25-episode-written-update

ಶಕುಂತಲಾ ವಿಲವಿಲ

ಛೇ ಎಂಥಾ ಕೆಲಸ ಮಾಡಿಕೊಂಡೆ ಶಕುಂತಲಾ ಎಂದು ಒಬ್ಬಳೇ ಓಡಾಡುತ್ತಾ ಗೊಣಗುತ್ತಿರುವ ಶಕುಂತಲಾ, ಆ ಪಾಸ್‌ ಫೋರ್ಟ್‌ನ ತೆಗೆದುಕೊಳ್ಳದೇ ಇದ್ದಿದ್ದರೆ ಆ ದೇವರೆ ನಿನ್ನ ಕೆಲಸ ಮಾಡಿ ಬಿಡುತ್ತಿದ್ದ ರಿಸ್ಕೇ ಆಗುತ್ತಿರಲಿಲ್ಲ. ಛೇ ಸುಮ್ಮನೆ ಇರಬೇಕಿತ್ತು ಎಂದುಕೊಳ್ಳುತ್ತಾಳೆ.

ಇದೇ ಹತಾಶೆಯಲ್ಲಿ ಜೈದೇವ್ ಮನೆಗೆ ಬರುವ ಶಕುಂತಲಾ ನಡೆದಿದ್ದನ್ನೆಲ್ಲಾ ಹೇಳಿ ಈ ಸಲ ಯಾವುದೇ ಕಾರಣಕ್ಕೂ ಮಿಸ್ ಆಗಬಾರದು ಆ ಮಗು ಕಥೆ ಮುಗಿಸಲೇಬೇಕು ಎನ್ನುತ್ತಾಳೆ. ಆ ನಂತರ ಆ ಭೂಮಿಕಾಗೆ ಕೂಡ ಒಂದು ಗತಿ ಕಾಣಿಸಬೇಕು ನನ್ನ ಕೆನ್ನೆಗೆ ಹೊಡೆದಳಲ್ಲಾ ಅದಕ್ಕೆ ತಕ್ಕ ಬೆಲೆ ಅವಳು ಕಟ್ಲೇಬೇಕು, ಅದನ್ನ ಮಾತ್ರ ನನ್ನ ಕೈಯಿಂದ ಮರೆಯಲು ಸಾಧ್ಯವೇ ಇಲ್ಲ ಎನ್ನುತ್ತಾಳೆ.


ಮನೆಹಾಳ ಮಾವನ ನೆನೆದ ಜೈದೇವ್

ನಾವು ಪ್ರತಿ ಸಲ ಫೇಲ್ ಆಗ್ತಿದ್ದೀವಿ ಎಲ್ಲದರಲ್ಲಿಯೂ ಅವಳದ್ದೇ ಮೇಲುಗೈ ಎಂದು ಜೈದೇವ್ ಹೇಳಿದ್ದು ನಾವು ಇಷ್ಟೆಲ್ಲಾ ಪ್ಲ್ಯಾನ್ ಮಾಡಿ ಎಡವುತ್ತಿದ್ದೇವೆ ಎಂದರೆ ಎಲ್ಲೋ ತಪ್ಪಾಗುತ್ತಿದೆ ನೀನ್ಯಾಕೆ ಮಾವನ ಭೇಟಿಯಾಗಬಾರದು ಎನ್ನುತ್ತಾನೆ. ನೀನು ಹೇಳ್ತಿರುವುದು ಕರೆಕ್ಟ್ ಆಗಿದೆ ಇದಕ್ಕೆಲ್ಲಾ ಅಣ್ಣಾನೇ ಸರಿ ಅವನ ತಲೆ ಬೇರೆನೇ ಓಡುತ್ತೆ ಎಂದು ತನ್ನ ಅಣ್ಣನ ಭೇಟಿಯಾಗಲು ಶಕುಂತಲಾ ಮುಂದಾಗುತ್ತಾಳೆ.

ಭಾಗ್ಯಮ್ಮನ ಕೆಣಕುವ ಶಕುಂತಲಾ

ಗೌತಮ್ ಪ್ರಾಣಾಪಾಯದಿಂದ ಪಾರಾಗಿದ್ದಕ್ಕೆ ದೇವರ ಬಳಿ ಭಾಗ್ಯಮ್ಮ ಪ್ರಾರ್ಥನೆ ಮಾಡುತ್ತಿದ್ದು, ನನ್ನ ಮಗನಿಗೆ ಅವನ ಕುಟುಂಬಕ್ಕೆ ಏನೂ ಆಗದಂತೆ ನೋಡಿಕೊಳ್ಳಪ್ಪಾ ಎಂದು ದೇವರಲ್ಲಿ ಬೇಡಿಕೊಳ್ಳುತ್ತಾಳೆ. ಇದೇ ಸಮಯದಲ್ಲಿ ಅಲ್ಲಿ ಬರುವ ಶಕುಂತಲಾ ಇಷ್ಟಕ್ಕೆ ಎಲ್ಲ ಮುಗೀತು ಅಂತ ತುಂಬಾ ಖುಷಿ ಪಡಬೇಡ, ನಿನ್ನ ಮಗನ ಸಾವು ನನ್ನ ಕೈಯಲ್ಲೇ ಎಂದು ಅವನ ಹಣೆಯ ಮೇಲೆ ಬರೆದು ಬಿಟ್ಟಿದೆ, ಅದನ್ನ ಯಾರಿಂದಲೂ ತಪ್ಪಿಸಲು ಸಾಧ್ಯ ಇಲ್ಲ ಎಂದು ಹೇಳುತ್ತಾಳೆ. ಶಕುಂತಲಾ ಮಾತು ಭಾಗ್ಯಮ್ಮ ಆತಂಕ ಹೆಚ್ಚಿಸಿದೆ.

amruthadhaare-serial-august-25-episode-written-update

ಮನೆಹಾಳ ಅಣ್ಣನ ಭೇಟಿಯಾದ ಶಕುಂತಲಾ

ಜೈಲಿನಲ್ಲಿ ಅಣ್ಣನನ್ನು ಬಂದು ಶಕುಂತಲಾ ಭೇಟಿಯಾಗಿದ್ದು, ಅಣ್ಣ ನನ್ನ ಮರೆತೆ ಹೋದೆಯೆಲ್ಲಾ ಸಿಸ್ಟರ್ ಎಂದು ನೊಂದುಕೊಳ್ಳುತ್ತಾನೆ. ಆಗ ಹಾಗೆಲ್ಲಾ ಮಾತನಾಡಬೇಡ ಎನ್ನುವ ಶಕುಂತಲಾ ನಡೆದ ಎಲ್ಲ ಘಟನೆಗಳನ್ನು ಅಣ್ಣನ ಬಳಿ ಹೇಳುತ್ತಾಳೆ. ಶಕುಂತಲಾ ಮಾತು ಕೇಳಿದ ಆಕೆಯ ಅಣ್ಣ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡಿದ್ದು ಎಂಥಾ ಅವಮಾನ ಸಿಸ್ಟರ್ ಇದು ಹೇಗಿದ್ದವಳು ಹೇಗಾಗಿ ಹೋದೆ, ಈಗ ಆಗಿರುವುದು ಅಂತಿಂಥಾ ಅವಮಾನ ಅಲ್ಲ ಇದಕ್ಕೆ ಪ್ರತೀಕಾರ ತೆಗೆದುಕೊಳ್ಳಲೇಬೇಕು ಎನ್ನುತ್ತಾನೆ.

ಭೂಮಿಕಾಗೆ ಶಕುಂತಲಾ ಸವಾಲು

ಇಂದು (ಆಗಸ್ಟ್ 26 ) ಬಿಡುಗಡೆಯಾದ ಪ್ರೋಮೋದಲ್ಲಿ ಶಕುಂತಲಾಳನ್ನು ಕೆಣಕಲು ಬಂದಿದ್ದು, ಸುಧಾ ಮತ್ತು ಸೃಜನ್‌ಗೆ ಬೇರೆ ಕಡೆ ಮನೆ ಮಾಡಿ ಕೊಡುವ ಸಲಹೆಯನ್ನು ಗೌತಮ್‌ಗೆ ನೀಡಿದ್ದು ನಾನೇ, ನಾವೆಲ್ಲರೂ ಕುರಿಹಿಂಡಿನಂತೆ ಒಂದೆ ಕಡೆ ಇದ್ದರೆ ತೋಳಗಳಿಗೆ ಭೇಟಿಯಾಡಲು ಸುಲಭವಾಗುತ್ತೆ ಎಂದು ಹೇಳಿದ್ದಾಳೆ. ಇದಕ್ಕೆ ಎಲ್ಲರನ್ನು ನೀನು ಪ್ರೊಟೆಕ್ಟ್ ಮಾಡ್ತೀಯಾ ? ಮೊದಲು ನಿನ್ನ ಪುಟ್ಟ ಮಗು ಇದೆಯಲ್ಲ ಅದನ್ನು ಕಾಪಾಡು ಎಂದು ಸವಾಲು ಹಾಕುತ್ತಾಳೆ. ಸದ್ಯ ಶಕುಂತಲಾ ಮಗು ಪ್ರಾಣ ಪಡೆದೇ ತೀರಬೇಕು ಎಂದು ಶಪಥ ಮಾಡಿದಂತೆ ಇದ್ದು ಭೂಮಿಕಾ ಮುಂದೇನು ಮಾಡುತ್ತಾಳೆ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X