Amruthadhaare ; ಜೈಲಿನಿಂದಲೇ ಗೌತಮ್-ಭೂಮಿಕಾ ಪ್ರೀತಿಗೆ ಕೊಳ್ಳಿ ಇಡ್ತಾನಾ ಲಕ್ಷ್ಮೀಕಾಂತ್ ?ಶಕುಂತಲಾ ಸೇಡಿನ ಸಂಚು

ಅಮೃತಧಾರೆ ಧಾರಾವಾಹಿಯಲ್ಲಿ ಜೈಲಿನಲ್ಲಿ ಅಣ್ಣನನ್ನು ಬಂದು ಶಕುಂತಲಾ ಭೇಟಿಯಾಗಿದ್ದು, ಲಕ್ಷ್ಮೀಕಾಂತ ನನ್ನ ಮರೆತೆ ಹೋದೆಯೆಲ್ಲಾ ಸಿಸ್ಟರ್ ಎಂದು ನೊಂದುಕೊಳ್ಳುತ್ತಾನೆ. ಆಗ ಹಾಗೆಲ್ಲಾ ಮಾತನಾಡಬೇಡ ಎನ್ನುವ ಶಕುಂತಲಾ ನಡೆದ ಎಲ್ಲ ಘಟನೆಗಳನ್ನು ಅಣ್ಣನ ಬಳಿ ಹೇಳುತ್ತಾಳೆ. ಶಕುಂತಲಾ ಮಾತು ಕೇಳಿದ ಆಕೆಯ ಅಣ್ಣ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡಿದ್ದು ಎಂಥಾ ಅವಮಾನ ಸಿಸ್ಟರ್ ಇದು ಹೇಗಿದ್ದವಳು ಹೇಗಾಗಿ ಹೋದೆ, ಈಗ ಆಗಿರುವುದು ಅಂತಿಂಥಾ ಅವಮಾನ ಅಲ್ಲ ಇದಕ್ಕೆ ಪ್ರತೀಕಾರ ತೆಗೆದುಕೊಳ್ಳಲೇಬೇಕು ಎನ್ನುತ್ತಾನೆ.

ಆಗ ಶಕುಂತಲಾ ಇದಕ್ಕೆ ನೀನೆ ಒಂದು ಉಪಾಯ ಹೇಳಬೇಕು ಅದಕ್ಕೆ ನಾನು ಬಂದಿದ್ದು ಶಕುಂತಲಾ ಹೇಳಿದ್ದು, ನೀನು ನನ್ನ ನೋಡೋಕೆ ಬಂದಿಲ್ಲ.. ನಿನಗೆ ಸಮಸ್ಯೆಯಾದಾಗ ಮಾತ್ರ ನಾನು ನೆನಪಾಗೋದಾ ಎಂದು ಲಕ್ಷ್ಮೀಕಾಂತ್ ಬೇಸರ ಮಾಡಿಕೊಳ್ತಾನೆ. ಆಗ ಶಕುಂತಲಾ ಸುಮ್ಮನೇ ಏನೇನೋ ಮಾತನಾಡಿ ನನಗೆ ನೋವು ಮಾಡಬೇಡ, ಬಾಯಿಗೆ ಬಂದಂತೆ ಮಾತನಾಡಬೇಡ.. ನೀನು ಜೈ ನನ್ನ ಜೊತೆ ಇರದೇ ನನಗೆ ನಾನು ಅನಾಥೆ ಎಂದು ಅನ್ಸುತ್ತೆ ಎಂದು ಹೇಳುತ್ತಾಳೆ.

amruthadhaare-serial-august-26-episode-written-update

ಜೈಲಿನಿಂದಲೇ ಸ್ಕೆಚ್ ಹಾಕ್ತಾನಾ ಮನೆಹಾಳ ಮಾವ ?

ಶಕುಂತಲಾ ಮಾತುಗಳಿಗೆ ನೀನೇನೂ ತಲೆ ಕೆಡಿಸಿಕೊಳ್ಳಬೇಡ ಏನಾದರೊಂದು ಉಪಾಯ ಮಾಡೋಣ ನಿನ್ನ ಮೇಲೆ ಕೈ ಮಾಡಿದ್ಧಾಳೆ ಅಂದರೆ ನಮ್ಮ ಪ್ರತೀಕಾರ ತುಂಬಾ ಸ್ಟ್ರಾಂಗ್ ಆಗಿರಬೇಕು ಎಂದು ಲಕ್ಷ್ಮೀಕಾಂತ್ ಹೇಳುತ್ತಾನೆ. ಆ ದೇವರೇ ಬಂದರೂ ಕಾಪಾಡೋಕೆ ಆಗಬಾರದು ಆ ರೀತಿಯ ಖತರ್ನಾಕ್ ಪ್ಲಾನ್ ನಾನು ಹೇಳ್ತೀನಿ ಸಿಸ್ಟರ್ ಎಂದು ಹೇಳುತ್ತಾನೆ.

ಹೊಸ ಮನೆ ವಿಚಾರ ಹೇಳುವ ಗೌತಮ್

ಹೊಸ ಮನೆ ತೆಗೆದುಕೊಂಡಿರುವ ವಿಚಾರವನ್ನು ಸುಧಾ ಮತ್ತು ಸೃಜನ್‌ಗೆ ಗೌತಮ್ ಹೇಳಿದ್ದಾನೆ. ಈ ಮಾತು ಕೇಳಿ ನಮ್ಮನ್ನು ದೂರ ಮಾಡ್ತಿದ್ದೀಯಲ್ಲ ಎಂದು ಸುಧಾ ಬೇಸರ ಮಾಡಿಕೊಂಡಿದ್ದು ನಿಮ್ಮನ್ನು ದೂರ ಮಾಡೋಕೆ ನಾನು ಈ ಕೆಲಸ ಮಾಡಿಲ್ಲ ನಿಮಗೂ ಕೂಡ ಪ್ರೈವೇಸಿ ಬೇಕಿರುತ್ತೆ ಎಂದೆಲ್ಲಾ ಹೇಳಿ ಮನವೊಲಿಸುತ್ತಾನೆ.

amruthadhaare-serial-august-26-episode-written-update

ಆ ನಂತರ ಎಲ್ಲರೂ ಮನೆ ನೋಡಿಕೊಂಡು ಬಂದಿದ್ದು ಅಜ್ಜಿ ಮನೆ ಇಷ್ಟ ಆಯ್ತಾ ಎಂದು ಕೇಳಿದ್ದಾಳೆ. ಇದಕ್ಕೆ ಸೃಜನ್ ತುಂಬಾ ಚೆನ್ನಾಗಿದೆ ಎಂದು ಹೇಳಿದ್ದು ಸೃಜನ್ ಮತ್ತು ಸುಧಾ ಬೇರೆ ಮನೆಗೆ ಹೋಗುತ್ತಿರುವ ವಿಚಾರವನ್ನು ಶಕುಂತಲಾಗೆ ಗೌತಮ್ ಹೇಳುತ್ತಾನೆ. ನಿಮ್ಮ ಕೈಯಾರೆ ನೀವೆ ಮನೆಯ ಕೀ ಅವರಿಗೆ ಕೊಡಿ ಎಂದು ಹೇಳುತ್ತಾನೆ. ಆಗ ನಮಗೆ ಎಷ್ಟು ದಿನ ಇರಬೇಕು ಅನ್ಸುತ್ತೆ ಅಷ್ಟು ದಿನ ನಾವು ಮನೆಯಲ್ಲಿ ಇರ್ತಿವಿ ನೀನು ಬೇಡ ಎನ್ನಬಾರದು ಎಂದು ಸುಧಾ ಷರತ್ತು ಹಾಕಿದ್ದು ಗೌತಮ್ ಒಪ್ಪಿಕೊಳ್ಳುತ್ತಾನೆ. ಆ ನಂತರ ಸುಧಾಗೆ ಶಕುಂತಲಾ ಬೀಗದ ಕೈ ಕೊಟ್ಟಿದ್ದಾಳೆ.


ಶಕುಂತಲಾ- ಭೂಮಿಕಾ ವಾಕ್ಸಮರ

ಒಲ್ಲದ ಮನಸಿಂದ ಹೊಸ ಮನೆಯ ಕೀ ನೀಡಿರುವ ಶಕುಂತಲಾ, ತನ್ನ ಕೋಣೆಯಲ್ಲಿ ಬಂದು ಕುಂತಿದ್ದಾಳೆ. ಆಗ ಅಲ್ಲಿ ಬರುವ ಭೂಮಿಕಾ, ಸುಧಾ ಮತ್ತು ಸೃಜನ್‌ಗೆ ಬೇರೆ ಕಡೆ ಮನೆ ಮಾಡಿ ಕೊಡುವ ಸಲಹೆಯನ್ನು ಗೌತಮ್‌ಗೆ ನೀಡಿದ್ದು ನಾನೇ, ನಾವೆಲ್ಲರೂ ಕುರಿಹಿಂಡಿನಂತೆ ಒಂದೆ ಕಡೆ ಇದ್ದರೆ ತೋಳಗಳಿಗೆ ಭೇಟಿಯಾಡಲು ಸುಲಭವಾಗುತ್ತೆ ಎಂದು ಹೇಳುತ್ತಾಳೆ. ನಿಮ್ಮಿಂದ ದೂರ ಇದ್ದಷ್ಟು ಅವರೆಲ್ಲ ಸೇಫ್ ಆಗಿರ್ತಾರೆ ಎಂದು ಹೇಳುತ್ತಾಳೆ.ದುಷ್ಟರಿಂದ ದೂರ ಇಡಬೇಕು ಅಂತ ನಿಮ್ಮಂಥ ದೊಡ್ಡವರೇ ಹೇಳಿದ್ದಾರೆ ಎನ್ನುತ್ತಾಳೆ.

ಭೂಮಿಕಾ ಮಾತುಗಳಿಗೆ ಕೆರಳುವ ಶಕುಂತಲಾ ನೀನು ನನ್ನ ಉರಿಸೋಕೆ ಅಂತಾನೇ ಬಂದಿದ್ದೀಯಾ ಎನ್ನುತ್ತಾಳೆ. ಯಾಮಾರಿಸಿ ಒಂದು ಏಟು ಹೊಡೆದೆ ಅಂದ ಮಾತ್ರಕ್ಕೆ ನಿನ್ನ ನೀನು ಕಿಲಾಡಿ ಅಂದುಕೊಳ್ಳಬೇಡ ಎನ್ನುತ್ತಾಳೆ. ಎಲ್ಲರನ್ನು ನೀನು ಪ್ರೊಟೆಕ್ಟ್ ಮಾಡ್ತೀಯಾ ? ಮೊದಲು ನಿನ್ನ ಪುಟ್ಟ ಮಗು ಇದೆಯಲ್ಲ ಅದನ್ನು ಕಾಪಾಡು ಎಂದು ಸವಾಲು ಹಾಕುತ್ತಾಳೆ. ಉಳಿದವರ ಕಥೆ ಆಮೇಲೆ ನೋಡೋಣ ಎಂದು ಹೇಳುತ್ತಾಳೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X