Amruthadhaare:ಆನಂದ್ ಸ್ಥಿತಿ ನೆನೆದು ಗೌತಮ್ ಭಾವುಕ; ಅಪ್ಪಿ ವಿರುದ್ಧ ಭೂಮಿಕಾ ಗರಂ ಆಗಿದ್ದೇಕೆ?
ಗೌತಮ್‌ಗೆ ಆನಂದ್ ಎಂದರೆ ಜೀವ. ಆತನ ಜೊತೆ ಮಾತನಾಡಬೇಕು. ಆತನ ಜೊತೆ ಹೆಚ್ಚು ಕಾಲ ಕಳೆಯಬೇಕು ಎಂದು ಗೌತಮ್ ಅಂದುಕೊಂಡಿರುತ್ತಾನೆ. ಆದರೆ, ಆನಂದ್‌ಗೆ ಇದ್ಯಾವುದರ ಪರಿವು ಕೂಡ ಇರುವುದಿಲ್ಲ. ಆನಂದ್ ಜೊತೆಗೆ ಗೌತಮ್ ಇರುತ್ತಾನೆ. ಇದೆಲ್ಲವನ್ನು ನೋಡಿ ಅಪ್ಪಿ ತನ್ನ ಅಕ್ಕನ ಬಳಿ ಏನಾದರೂ ಈ ಬಗ್ಗೆ ಹೇಳಬೇಕು ಅಂದುಕೊಂಡಿರುತ್ತಾಳೆ.
ಅವರನ್ನು ಆ ಮನೆಯವರೇ ನೋಡಿಕೊಳ್ಳುತ್ತಾರೆ. ನಾವು ಯಾಕೆ ಆನಂದ್ ಅವರನ್ನು ನೋಡಿಕೊಳ್ಳಬೇಕೆಂದು ಅಪೇಕ್ಷ ಮನದಲ್ಲಿ ನೂರಾರು ಯಕ್ಷ ಪ್ರಶ್ನೆ ಮೂಡುತ್ತದೆ. ಇನ್ನು ಭೂಮಿಕಾ ಒಬ್ಬಳೇ ಕುಳಿತಿರುತ್ತಾಳೆ. ಅಪರ್ಣಗೆ ಸಮಾಧಾನ ಹೇಳಿ ಆಕೆಯನ್ನು ಆಕೆಯ ಮನೆಗೆ ಕಳುಹಿಸಿರುತ್ತಾಳೆ. ಯಾಕಂದರೆ, ಮನೆಯಲ್ಲಿ ಆಕೆಯ ಮಕ್ಕಳು ಕಾಯುತ್ತಿರುತ್ತಾರೆ. ಆಕೆಯ ಮಕ್ಕಳಿಗಾಗಿ ಅಪರ್ಣ ಮನೆಗೆ ಹೋಗಲೇಬೇಕಾಗಿತ್ತು.

ಆ ವೇಳೆ ಭೂಮಿಕಾ ಆಕೆಗೆ ಸಮಾಧಾನ ಮಾಡುತ್ತಾಳೆ. ಹಾಗೆಯೇ ಆನಂದ್ ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ ಎನ್ನುವ ಭರವಸೆಯನ್ನು ಕೂಡ ನೀಡುತ್ತಾಳೆ. ಭೂಮಿಕಾ ಮಾತನ್ನು ಕೇಳಿ ಅಪರ್ಣ ಆಕೆಯ ಮನೆಗೆ ಹೋಗುತ್ತಾಳೆ. ಇನ್ನು ಭೂಮಿಕಾ ಕುಳಿತುಕೊಂಡು ಗೌತಮ್ ಹಾಗೂ ಆನಂದ್ ಬಗ್ಗೆ ಯೋಚನೆ ಮಾಡುತ್ತಿರುತ್ತಾಳೆ. ಆಗ ಅಲ್ಲಿಗೆ ಬಂದ ಅಪ್ಪಿ ತನ್ನ ಅಕ್ಕನ ಬಳಿ ಮಾತನಾಡುವುದಕ್ಕೆ ಶುರು ಮಾಡುತ್ತಾಳೆ.
ತಂಗಿ ಮಾತಿಗೆ ಭೂಮಿಕಾ ಬೇಸರ
ಅಪ್ಪಿ ತನ್ನ ಅಕ್ಕನ ಬಳಿ "ಅಲ್ಲ ಅಕ್ಕ ಆನಂದ್ ಅವರನ್ನು ನೋಡಿಕೊಳ್ಳಲು ಅವರ ಮನೆಯವರಿದ್ದಾರೆ. ನಾವು ಯಾಕೆ ಅವರನ್ನು ಈ ಮನೆಯಲ್ಲಿಟ್ಟು ನೋಡಿಕೊಳ್ಳಬೇಕು" ಎಂದಾಗ ಭೂಮಿಕಾಗೆ ಸಿಟ್ಟು ಬರುತ್ತೆ. ಯಾವತ್ತೂ ಕೂಡ ಭೂಮಿಕಾ ಬಳಿ ಅಪ್ಪಿ ಆ ರೀತಿ ಮಾತನಾಡಿಯೇ ಇಲ್ಲ. ಆದರೆ, ಇದೀಗ ಅಪ್ಪಿ ಆ ರೀತಿ ಹೇಳಿದಾಗ ಭೂಮಿಕಾಗೆ ಬಹಳ ನೋವುವಾಗುತ್ತೆ. ಈ ರೀತಿ ಮಾತನಾಡುತ್ತಿರುವುದು ನನ್ನ ತಂಗಿಯಾ? ಎಂದು ಆಕೆಗೆ ಅನಿಸಿತ್ತೆ.
ತಂಗಿ ಮಾತಿಗೆ ಸಿಡುಕಿದ ಭೂಮಿಕಾ
ಅಪೇಕ್ಷಾ ಮಾತಿಗೆ ಭೂಮಿಕಾ "ಇದು ಗೌತಮ್ ಅವರ ಮನೆ. ಅವರ ಮನೆಯಲ್ಲಿ ಅವರ ಗೆಳೆಯನನ್ನು ಅವರಿಗೆ ನೋಡಿಕೊಳ್ಳಬೇಕು ಎಂದು ಅನಿಸಿದೆ. ಅದಕ್ಕಾಗಿ ಆನಂದ ಅವರನ್ನು ನೋಡಿಕೊಳ್ಳುತ್ತಿದ್ದಾರೆ. ಅವರನ್ನು ಪ್ರಶ್ನೆ ಮಾಡುವ ಅಧಿಕಾರ ಯಾರಿಗೂ ಇಲ್ಲ. ಯಾಕೆಂದರೆ, ಇದು ಅವರ ಮನೆ" ಎಂದು ಹೇಳಿ ಅಲ್ಲಿಂದ ಹೊರಟು ಹೋಗುತ್ತಾಳೆ. ಈ ಮಾತನ್ನು ಕೇಳಿದ ಅಪೇಕ್ಷಾಗೆ ಬಹಳ ಸಿಟ್ಟು ಬರುತ್ತೆ.

ಆನಂದ್ ಎದುರು ಗೌತಮ್
ಇನ್ನು ಗೌತಮ್ ಆನಂದ್ ಮಲಗಿರುವ ಸ್ಥಳಕ್ಕೆ ಬಂದು ಆತನ ಬಳಿ ಮಾತನಾಡುತ್ತಿರುತ್ತಾನೆ. ಆನಂದ್ ಹಾಗೂ ತಾನು ಮಾಡುತ್ತಿರುವ ಕೆಲಸದ ಬಗ್ಗೆ, ಚಿಕ್ಕ ವಯಸ್ಸಿನಲ್ಲಿ ಮಾಡುತ್ತಿದ್ದ ತೀಟೆಯ ಬಗ್ಗೆ ಆನಂದ್ ಬಳಿ ಹೇಳುತ್ತಿರುತ್ತಾರೆ. ಆದರೆ, ಕೋಮದಲ್ಲಿರುವ ಆನಂದ್ ಇದ್ಯಾವುದಕ್ಕೂ ಕೂಡ ಸ್ಪಂದನೆ ನೀಡುತ್ತಿಲ್ಲ. ಈ ನೋವು ಗೌತಮ್‌ಗೂ ಗೊತ್ತಿದೆ. "ಯಾಕೋ ನೀನು ನಾನು ಮಾತನಾಡಿದ ಯಾವ ಪ್ರಶ್ನೆಗೂ ಉತ್ತರ ನೀಡುತ್ತಿಲ್ಲ. ಹಾಗೆ, ಯಾಕೆ ನೀನು ಮೌನವಾಗಿ ಇದ್ದೀಯಾ? ಎಂದು ಆತನ ಬಳಿ ಪದೇ ಪದೇ ಪ್ರಶ್ನೆ ಮಾಡಿ ಕಣ್ಣೀರು ಸುರಿಸುತ್ತಾನೆ. ಇದ್ಯಾವುದೂ ಆನಂದ್‌ಗೆ ಮಾತ್ರ ತಿಳಿಯುತ್ತಿಲ್ಲ. ಇತ್ತ ಜೈದೇವ್ ಪುನ: ಆಟ ಆಡಲು ಶುರು ಮಾಡಿದ್ದಾನೆ. ನನ್ನ ಹೆಂಡತಿ ನಾನು ಏನೇ ಮಾಡಿದರೂ ನಂಬಿಯೇ ನಂಬುತ್ತಾಳೆ. ಇನ್ನು ಬಿಗ್ ಬ್ರೋ ಅಂತೂ ಆನಂದ್ ಜೊತೆಗೆ ಇರುತ್ತಾನೆ. ಯಾರಿಗೂ ಕೂಡ ನಮ್ಮ ಮೇಲೆ ಅನುಮಾನ ಬರಲು ಸಾಧ್ಯವಿಲ್ಲ ಎಂದು ತನ್ನ ಹಳೆಯ ಹುಡುಗಿಗೆ ಕರೆ ಮಾಡಲು ಶುರು ಮಾಡುತ್ತಾನೆ. ಆದರೆ ಆಕೆಗೆ ಜೈದೇವ್ ಕರೆ ನೋಡಿ ಬಹಳ ಭಯ ಆಗುತ್ತದೆ. ಜೈ ದೇವ್ ಜೊತೆ ನಯವಾಗಿ ಸುಳ್ಳು ಹೇಳಿ ಎಸ್ಕೇಪ್ ಆಗುತ್ತಾಳೆ.


Click it and Unblock the Notifications











