Amruthadhaare ; ಹಬ್ಬದ ದಿನವೂ ಮುಖ ಗಂಟು ಹಾಕಿಕೊಂಡ ಶಕುಂತಲಾ, ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಎಂದ ಭೂಮಿಕಾ
ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವ್ ಬಳಿ ದಿಯಾ ಗಣೇಶನ ಹಬ್ಬದ ಕುರಿತು ಮಾತನಾಡಿದ್ದಾಳೆ. ಮದುವೆಯಾದ ನಂತರ ನಮ್ಮ ಮೊದಲ ಹಬ್ಬ, ಹೀಗಾಗಿ ಅದ್ದೂರಿಯಾಗಿ ಆಚರಿಸೋಣ ಎಂದು ಹೇಳಿದ್ದಾಳೆ. ನಿಮ್ಮ ಮನೆಯಲ್ಲಿ ಗ್ರ್ಯಾಂಡ್ ಆಗಿ ಆಚರಿಸುತ್ತಾರೆ. ನಾವು ಮಾಡದೇ ಇದ್ದರೆ ಹೇಗೆ ಎನ್ನುತ್ತಾಳೆ. ದಿಯಾ ತುಂಬಾ ಕೇಳಿಕೊಂಡ ನಂತರ ಆಚರಣೆಯ ಪದ್ದತಿಯನ್ನು ಕೇಳಲು ಶಕುಂತಲಾಗೆ ಜೈದೇವ್ ಫೋನ್ ಮಾಡಿದ್ದು...
ಈ ವಿಚಾರದಲ್ಲಿ ನಾನೇ ನಿನಗೆ ಫೋನ್ ಮಾಡೋಣ ಎಂದುಕೊಂಡಿದ್ದೇ ಅಷ್ಟರಲ್ಲಿ ನೀನೆ ಮಾಡಿದೆ, ದಿಯಾ ಹೇಳಿದ್ದು ಸರಿಯಾಗಿದೆ ನೀವು ಹಬ್ಬ ಮಾಡಬೇಕು ಎಂದು ಹೇಳುತ್ತಾಳೆ. ನಾನು ಮನೆಗೆ ಬಂದು ಎಲ್ಲ ಹೇಳಿ ಕೊಡ್ತೀನಿ ಎಂದು ಹೇಳುತ್ತಾಳೆ. ಅವಳೇ ತಾನೇ ನನ್ನ ನಿಜವಾದ ಸೊಸೆ ನಾನು ಅವಳ ಜೊತೆಯಲ್ಲಿಯೇ ಹಬ್ಬ ಮಾಡಬೇಕು ಎಂದಿದ್ದಾಳೆ.

ಶಕುಂತಲಾ ಮೇಲೆ ಅಜ್ಜಿ ಕೋಪ
ಮಲ್ಲಿ ಬಂದು ಶಕುಂತಲಾಳನ್ನು ಕರೆದಿದ್ದು ಶಕುಂತಲಾಗೆ ಅಜ್ಜಿ ತರಾಟೆ ತಗೆದುಕೊಳ್ಳುತ್ತಾಳೆ. ಹಬ್ಬ ಇದ್ದರೂ ಕೂಡ ಮನೆಯ ಹಿರಿಯ ಸದಸ್ಯಳಾಗಿ ತಯಾರಿಗಳನ್ನು ಮಾಡುವುದು ಬಿಟ್ಟು ರೂಮ್ ಸೇರಿಕೊಂಡಿದಿಯಾ ಅಲ್ಲಾ ಎನ್ನುತ್ತಾಳೆ.
ಆಗ ಶಕುಂತಲಾ ಆ ತರ ಏನಿಲ್ಲ ಭೂಮಿಕಾ ಇದ್ದಳಲ್ಲ ಎಲ್ಲಾ ಅವಳೇ ಮಾಡ್ತಾಳೆ ಎಂದುಕೊಂಡು ಸುಮ್ಮನೆ ಇದ್ದೆ ಎನ್ನುತ್ತಾಳೆ. ಆದರೂ ಕೂಡ ಒಪ್ಪದ ಅಜ್ಜಿ ನಿನ್ನ ಜವಾಬ್ದಾರಿಯನ್ನು ನೀನು ಮರೆಯಬಾರದು ಚಿಕ್ಕ ಮಕ್ಕಳಿಗೆ ಏನು ಗೊತ್ತಾಗುತ್ತೆ ಹಿರಿಯರಾದ ನಾವು ಮುಂದೆ ನಿಂತು ಹೇಳಿ ಮಾಡಿಸಬೇಕು ಅಲ್ವಾ ಎನ್ನುತ್ತಾಳೆ. ನಾಳೆ ಯಾವ ಕೆಲಸ ಕೂಡ ಇಟ್ಟುಕೊಳ್ಳಬೇಡ ಪುರೋಹಿತರು ಮನೆಗೆ ಬರ್ತಿದ್ದಾರೆ. ದೇವಸ್ಥಾನದ ಒಡವೆ ಎಲ್ಲ ತೆಗೆದಿಡು ಎಂದು ಹೇಳುತ್ತಾಳೆ.
ದಾನ-ಧರ್ಮದಲ್ಲಿ ಭಾಗ್ಯಮ್ಮ ಮುಂದು
ಅಜ್ಜಿಯ ಮಾತು ಕೇಳಿ ಆಶ್ಚರ್ಯಗೊಳ್ಳುವ ಭೂಮಿಕಾ ದೇವಸ್ಥಾನದಲ್ಲಿ ಒಡವೆಗಳೆಲ್ಲಾ ನಮ್ಮ ಮನೆಯಲ್ಲಿದೆಯಾ ? ಯಾಕೆ ಎಂದು ಕೇಳಿದಾಗ ಭಾಗ್ಯ ದೇವಸ್ಥಾನ ಕಟ್ಟಿಸಿರುವ ವಿಚಾರವನ್ನು ಅಜ್ಜಿ ಹೇಳುತ್ತಾಳೆ. ನಮ್ಮ ಮನೆಗೆ ವಿಪತ್ತು ಬರಬಾರದು ಯಾವ ವಿಘ್ನಗಳು ಎದುರಾಗಬಾರದೆಂದು ಒಡವೆ ವಸ್ತ್ರ ಎಲ್ಲವನ್ನು ಮಾಡಿಸಿದಾಳೆ.
ಹೀಗಾಗಿ ಆ ಟ್ರಸ್ಟ್‌ನವರು ಆ ಒಡವೆಗಳನ್ನೆಲ್ಲ ನಮ್ಮ ಮನೆಯಲ್ಲಿಯೇ ಇಡುತ್ತಾರೆ. ಹಬ್ಬ ಹರಿದಿನ ಬಂದಾಗ ಬಂದು ತಗೊಂಡು ಹೋಗುತ್ತಾರೆ ಎಂದು ಹೇಳುತ್ತಾಳೆ. ಭಾಗ್ಯಗೆ ಗಣೇಶ ಇಷ್ಟದ ದೇವರು ಅವಳು ಮಾಡಿರುವ ದಾನ ಧರ್ಮ ಲೆಕ್ಕಕ್ಕೆ ಇಲ್ಲ ಆದರೂ ಕೂಡ ದೇವರು ಅವಳನ್ನು ಹೀಗೆ ಇಟ್ಟಿದ್ದಾನೆ ಅದೇ ಬೇಜಾರಿನ ವಿಚಾರ ಎಂದು ಹೇಳುತ್ತಾಳೆ.
ಹಬ್ಬದ ದಿನವೂ ಶಕುಂತಲಾ ಸಿಡುಕು
ಹಬ್ಬದ ಹಿನ್ನೆಲೆ ತನ್ನ ಕೋಪ ತಾಪ ಮರೆತು ಶಕುಂತಲಾ ಕೋಣೆಗೆ ಬಂದಿರುವ ಭೂಮಿಕಾ ಅತ್ತೆ ಹಬ್ಬದ ತಯಾರಿಯೆಲ್ಲಾ ಮಾಡಿಯಾಗಿದೆ ನೀವು ಒಮ್ಮೆ ಬಂದು ನೋಡಿ ಬನ್ನಿ ಎಂದು ಹೇಳುತ್ತಾಳೆ. ಆಗ ಕ್ಯಾತೆ ತೆಗೆಯುವ ಶಕುಂತಲಾ ನೀನೆ ಎಲ್ಲ ಮಾಡಿದ ಮೇಲೆ ನಂದೇನು ಇದೆ, ನೀನೆ ಮನೆಯ ಯಜಮಾನಿ ತರ ಓಡಾಡ್ತಿದಿಯಲ್ಲ ಎಂದು ಹೇಳುತ್ತಾಳೆ. ಎಲ್ಲಾ ನೀನೆ ನಡೆಸ್ತಿದ್ದೀಯಾ ಅಲ್ಲ ನಾನು ರಬ್ಬರ್ ಸ್ಟ್ಯಾಂಪ್ ಎಂದು ಹೇಳುತ್ತಾಳೆ.
ಶಕುಂತಲಾ ಮಾತುಗಳಿಗೆ ಆ ತರ ನನ್ನ ಮನಸಿನಲ್ಲಿ ಏನಿಲ್ಲ. ನೀವಾಗಿ ನೀವೇ ಏನಾದರೂ ಅಂದುಕೊಂಡರೆ ನಾನೇನು ಮಾಡೋಕೆ ಆಗಲ್ಲ ಎನ್ನುವ ಭೂಮಿಕಾ ನೀವೇನು ಬೇಕಾದರೂ ಅಂದುಕೊಳ್ಳಿ ಏನು ಬೇಕಾದರೂ ಹೇಳಿ ಆದರೆ ಕೆಟ್ಟದು ಮಾಡೋಕೆ ಬಂದರೆ ಗೊತ್ತಲ್ವಾ ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಎನ್ನುತ್ತಾಳೆ. ಹಬ್ಬದ ದಿನ ಈ ಮಾತುಗಳೆಲ್ಲಾ ಯಾಕೆ ಬನ್ನಿ ಎಲ್ಲ ನೋಡಿಕೊಳ್ಳಿ ಅಜ್ಜಿ ಅಲ್ಲೇ ಇದ್ದಾರೆ ಎಂದು ಹೇಳುತ್ತಾಳೆ. ಆಮೇಲೆ ನಾನೇನಾದರೂ ತಪ್ಪು ಮಾಡಿದ್ದರೆ ಅಜ್ಜಿಯ ಹತ್ರ ನೀವೆ ಬೈಯಿಸಿಕೊಳ್ಳಬೇಕಾಗುತ್ತೆ ಎಂದು ಹೇಳಿ ಹೊರಡುತ್ತಾಳೆ.


Click it and Unblock the Notifications











