Amruthadhaare ; ಶಕುಂತಲಾಗೆ ಭಾರೀ ಮುಖಭಂಗ, ಭೂಮಿಕಾ ಕೈ ಸೇರಿತು ದಿವಾನ್ ಮನೆಯ ಅಧಿಕಾರ
ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್ ಮನೆಯಲ್ಲಿ ಗೌರಿ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಮತ್ತೊಂದು ಕಡೆ ಜೈದೇವ್ ಮತ್ತು ದಿಯಾ ಮನೆಯಲ್ಲಿ ಕೂಡ ಹಬ್ಬದ ವಾತಾವರಣ ಇದ್ದು ಜೈದೇವ್ ಮುಖ ಗಂಟು ಹಾಕಿಕೊಂಡು ನಿಂತಿದ್ದಾನೆ. ಇದಕ್ಕೆ ನೋಡುವ ದಿಯಾ ಯಾಕೆ ಹೀಗೆ ನಿಂತಿದ್ದೀರಾ, ಇವತ್ತು ಹಬ್ಬ ಖುಷಿಯಾಗಿರಬೇಕು ತಾನೇ ಎಂದು ಹೇಳುತ್ತಾಳೆ.
ಆಗ ಜೈದೇವ್ ಆ ಜನಜಂಗುಳಿಯ ನಡುವೆ ಹೋಗಿ ಇದೆಲ್ಲ ತಗೊಂಡು ಬಂದೆ, ಈ ತರಹದ ಕೆಲಸವನ್ನು ನಾನು ಯಾವತ್ತು ಮಾಡಿದವನೇ ಅಲ್ಲ, ಇದೆಲ್ಲಾ ಬೇಕಿತ್ತಾ ಎಂದು ನನಗೆ ಅನಸ್ತಿದೆ ಎಂದು ಹೇಳುತ್ತಾನೆ. ಹೀಗೆ ಬಿಟ್ರೆ ಮುಂದೊಂದು ದಿನ ಕೊತ್ತಂಬರಿ ಸೊಪ್ಪು.. ಹಾಲು.. ಎಲ್ಲ ತರೋಕೆ ನನ್ನ ಕಳಿಸ್ತೀಯಾ ನೀನು ಎಂದು ಹೇಳುತ್ತಾನೆ.

ಭಾಗ್ಯ ಕಂಡು ಕೈ ಮುಗಿದ ಪುರೋಹಿತರು
ಗೌತಮ್ ಮನೆಗೆ ದೇವಸ್ಥಾನದಿಂದ ಪುರೋಹಿತರು ಬಂದಿದ್ದು ಭಾಗ್ಯಮ್ಮನನ್ನು ಕಂಡು ಪುರೋಹಿತರು ಕೈ ಮುಗಿದಿದ್ದಾರೆ. ಭಾಗ್ಯಮ್ಮನವರು ಎಷ್ಟು ವರ್ಷ ಆಯ್ತು ಅಮ್ಮ ನಿಮ್ಮನ್ನು ನೋಡಿ ನೀವು ಇಲ್ಲಾ ಅಂತಾನೇ ನಾವೆಲ್ಲಾ ಅಂದುಕೊಂಡಿದ್ವಿ ಎನ್ನುವ ಪುರೋಹಿತರು ನೀವು ಮಾಡಿದ ಉಪಕಾರನ ನಮ್ಮ ಊರಿನ ಜನ ಮರೆಯಲು ಸಾಧ್ಯನೇ ಇಲ್ಲ ಎನ್ನುತ್ತಾರೆ.
ಶಕುಂತಲಾಗೆ ಹೊಟ್ಟೆಗೆ ಬಿದ್ದ ಬೆಂಕಿ
ಹೇಗಿದ್ದರು ಇವರು ನಮ್ಮ ಪಾಲಿನ ದೇವರಿದ್ದಂತೆ ಎಂದು ಹೇಳುವ ಪುರೋಹಿತರು ಆ ನಂತರ ಶಕುಂತಲಾಗೆ ಸನ್ಮಾನ ಮಾಡಲು ಮುಂದಾಗುತ್ತಾರೆ. ಇದೇ ವೇಳೆ ತಡೆಯುವ ಭೂಮಿಕಾ ಇಷ್ಟು ವರ್ಷ ಭಾಗ್ಯ ಅತ್ತೆ ನಮ್ಮ ಜೊತೆ ಇರಲಿಲ್ಲ ಆದರೆ ಈಗ ಇದ್ದಾರೆ ಅವರಿಗೆ ಸನ್ಮಾನ ಮಾಡಬಹುದಲ್ವಾ ಎಂದು ಹೇಳುತ್ತಾಳೆ. ಇದಕ್ಕೆ ಅಜ್ಜಿ ಕೂಡ ಸಮ್ಮತಿಯನ್ನು ಸೂಚಿಸಿದ್ದು ನನ್ನ ತಲೆಗೆ ಇದು ಹೊಳಿಲೇ ಇಲ್ವಾ ಎನ್ನುತ್ತಾಳೆ. ಇದರಿಂದ ಶಕುಂತಲಾ ಹೊಟ್ಟೆಗೆ ಬೆಂಕಿ ಬಿದ್ದಂತಾಗಿದ್ದು ಪುರೋಹಿತರು ಭಾಗ್ಯಮ್ಮಗೆ ಸನ್ಮಾನ ಮಾಡುತ್ತಾರೆ.
ಜೈದೇವ್ ಮನೆಗೆ ಹೋಗದ ಶಕುಂತಲಾ
ಈ ಅವಮಾನ ಸಹಿಸಲಾಗದೇ ಶಕುಂತಲಾ ಒದ್ದಾಡುವ ಸಮಯದಲ್ಲಿಯೇ ಜೈದೇವ್ ಫೋನ್ ಮಾಡಿದ್ದು ಇನ್ನೂ ಎಷ್ಟೊತ್ತು ಬರಲೇ ಇಲ್ಲವಲ್ಲಾ ಎಂದು ಹೇಳುತ್ತಾನೆ. ಇದಕ್ಕೆ ಶಕುಂತಲಾ ಕಿಡಿ ಕಾರಿದ್ದು ನಾನು ಬರೋಕಾಗಲ್ಲ ನಿಮ್ಮಷ್ಟಕ್ಕೆ ನೀವು ಫೂಜೆ ಮಾಡಿ ಎನ್ನುತ್ತಾಳೆ. ಭಾಗ್ಯಗೆ ಸನ್ಮಾನ ಮಾಡಿದ ವಿಚಾರವನ್ನು ಹೇಳುತ್ತಾಳೆ.
ಇದ್ಯಾಕೋ ಅತಿಯಾಯ್ತು ಆದರೂ ಕೂಡ ನೀನ್ಯಾಕೆ ಸುಮ್ಮನೆ ಇದ್ದೀಯಾ ಎಂದು ಜೈದೇವ್ ಕೇಳಿದ್ದು ತನ್ನ ಅಸಹಾಯಕತೆಯನ್ನು ಶಕುಂತಲಾ ವ್ಯಕ್ತಪಡಿಸಿ ಅಲ್ಲಿ ಬಂದು ಪೂಜೆ ಮಾಡಲು ನನಗೆ ಮೂಡ್ ಇಲ್ಲ ನೀವು ಮಾಡಿ ಎಂದು ಹೇಳುತ್ತಾಳೆ.

ಅಧಿಕಾರ ಹಸ್ತಾಂತರ
ದೇವಸ್ಥಾನದ ಆಭರಣಗಳನ್ನು ಶಕುಂತಲಾ ತೆಗೆದುಕೊಂಡು ಬಂದು ಪುರೋಹಿತರಿಗೆ ನೀಡಿದ್ದು, ಪುರೋಹಿತರು ಮನೆಯಿಂದ ಹೊರಟಿದ್ದಾರೆ. ಶಕುಂತಲಾ ಕೂಡ ತನ್ನ ಕೋಣೆಗೆ ಹೋಗಲು ಮುಂದಾದಾಗ ತಡೆಯುವ ಅಜ್ಜಿ, ಈ ಮನೆಯ ಜವಾಬ್ಧಾರಿಯನ್ನು ನೀನು ಇನ್ನೂ ಎಷ್ಟ ವರ್ಷ ವಹಿಸುತ್ತೀಯಾ, ನಾವು ಗಟ್ಟಿಯಾಗಿದ್ದಾಗಲೇ ನಮ್ಮ ಜವಾಬ್ಧಾರಿಯನ್ನು ಮುಂದಿನ ತಲೆ ಮಾರಿಗೆ ಒಪ್ಪಿಸಬೇಕು ಎಂದು ಹೇಳುತ್ತಾಳೆ. ಇವತ್ತು ಒಳ್ಳೆ ದಿನ ಭೂಮಿಕಾ ಕೈಯಲ್ಲಿ ಯಜಮಾನಿಕೆಯನ್ನು ಕೊಡು ಎನ್ನುತ್ತಾಳೆ.
ಅಜ್ಜಿಯ ಮಾತು ಕೇಳಿ ಶಕುಂತಲಾ ಶಾಕ್ ಆಗಿದ್ದು, ತನ್ನ ದುಗುಡ ದುಮ್ಮಾನ ತೋರಿಸಿಕೊಳ್ಳದೇ ಅಜ್ಜಿಯ ಎದುರು ನಾಟಕವಾಡುತ್ತಾಳೆ. ನೀವು ಹೇಳೋದು ಸರಿ ಆದರೆ ಪಾಪ ಅವಳಿಗ್ಯಾಕೆ ತೊಂದರೆ ಎನ್ನುತ್ತಾಳೆ. ಮಗು ಸ್ವಲ್ಪ ದೊಡ್ಡದಾಗಲಿ ಹೇಗೂ ನಾನು ಗಟ್ಟಿ ಮುಟ್ಟಾಗಿ ಇದೀನಲ್ಲಾ ನಾನೇ ನೋಡಿಕೊಳ್ತೀನಿ ಎನ್ನುತ್ತಾಳೆ. ಸುಮ್ಮನೆ ಹೊರೆಯಾಗುವುದು ಬೇಡ ಎನ್ನುತ್ತಾಳೆ.
ಅವಳು ಗಟ್ಟಿಗಿತ್ತಿ ಎಂದ ಅಜ್ಜಿ
ಶಕುಂತಲಾ ಮಾತನ್ನು ಒಪ್ಪದ ಅಜ್ಜಿ, ಅವಳೇನು ಕಡಿಮೆ ಇಲ್ಲ. ಗಟ್ಟಿಗಿತ್ತಿ. ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುವ ಶಕ್ತಿ, ಜಾಣ್ಮೆ, ತಾಳ್ಮೆ ಎಲ್ಲವೂ ಅವಳಲ್ಲಿದೆ ಎನ್ನುತ್ತಾಳೆ. ಸುಮ್ಮನೆ ನಾನು ಹೇಳಿದಷ್ಟು ಮಾಡು, ಕೀ ತಗೊಂಡು ಬಂದು ಅವಳಿಗೆ ಕೊಡು ಎನ್ನುತ್ತಾಳೆ. ಆಗ ಭೂಮಿಕಾ ಬೇಡ ಎಂದು ಹೇಳಿದರೂ ಕೂಡ ಅಜ್ಜಿ ಬ್ಯೆಯ್ಯುತ್ತಾಳೆ. ಕೊನೆಗೆ ಸರಿ ಅಜ್ಜಿ ನೀವು ಹೇಳಿದಂತೆ ಆಗಲಿ ಎಂದು ಭೂಮಿಕಾ ಹೇಳಿದ್ದು ಶಕುಂತಲಾ ಕೀ ತೆಗೆದುಕೊಂಡು ಬಂದು ಭೂಮಿಕಾ ಕೊಟ್ಟಿದ್ದಾಳೆ.


Click it and Unblock the Notifications











