Amruthadhaare:ಆನಂದ್‌ಗೆ ಬಂದೇ ಬಿಡ್ತು ಪ್ರಜ್ಞೆ; ಜೈ ದೇವ್ ನಾಟಕ ಪತ್ತೆ ಹಚ್ಚಲು ಮಾಸ್ಟರ್ ಪ್ಲಾನ್

By ಪೂರ್ವ

ಜೈ ದೇವ್ ಎನಿಸಿಕೊಂಡು ಇದ್ದಿದ್ದು ಒಂದು ಆದರೆ ಅಲ್ಲಿ ನಡೆಸಿದ್ದು ಇನ್ನೊಂದು. ಗೌತಮ್ ಯಾವಾಗ ಆನಂದ್ ಕಣ್ಣು ಗುಡ್ಡೆಗಳು ಚಲಿಸುವುದನ್ನು ನೋಡಿದನೋ ಆವತ್ತಿನಿಂದ ಗೌತಮ್ ಬಹಳ ಸಂತೋಷವಾಗಿ ಇದ್ದಾನೆ. ತನ್ನ ಗೆಳೆಯನಿಗಾಗಿ ಕ್ಯಾರೆಟ್ ಹಲ್ವಾ ಮಾಡಿದ್ದು ಆತನಿಗೆ ತಿಳಿಯಲಿಲ್ಲ.

ಆದರೆ ಜೈ ದೇವ್ ಮಾತು ಕೇಳಿದಿದ್ದೆ ತಡ ಆನಂದ್‌ಗೆ ಒಮ್ಮೆಗೆ ಹೋದ ಜೀವ ಮತ್ತೆ ಬಂದ ಹಾಗೆ ಆಗುತ್ತೆ. ಇತ್ತ ಗೌತಮ್, ಜೈ ದೇವ್‌ನನ್ನು ಕಂಡು "ನೀನು ಆನಂದ್‌ನನ್ನು ನೋಡಿಕೊಳ್ಳಬೇಕು. ನಾನು ಆಫೀಸ್ಗೆ ಹೋಗುತ್ತೇನೆ. ನೀನು ಆತನ ಬಳಿ ಮಾತನಾಡಿಕೊಂಡು ಇರು. ನಿನ್ನ ಧ್ವನಿಗೆ ಆತ ಪ್ರತಿಕ್ರಿಯೆ ನೀಡುತ್ತಾನೆ" ಎಂದು ಹೇಳುತ್ತಾನೆ. ಇನ್ನೂ ಈ ಮಾತನ್ನು ಕೇಳಿದ ಜೈ ದೇವ್ ಮನಸ್ಸಿನಲ್ಲೆ ನಗುತ್ತಾನೆ.

Amruthadhaare serial August 28th episode update

"ನಾನೇ ಆನಂದ್‌ನನ್ನು ಸಾಯಿಸಲು ಎಲ್ಲಾ ರೀತಿಯ ಕ್ರಮ ತೆಗೆದುಕೊಂಡಿದ್ದೆ. ಆದರೆ, ಇದೀಗ ಆತನನ್ನು ನನ್ನ ಕೈಯಲ್ಲಿ ನೋಡಿಕೊಳ್ಳಲು ಹೇಳಿ ಬಿಗ್ ಬ್ರೋ ಹೋಗಿದ್ದಾನೆ" ಎಂದು ನಗುತ್ತಾನೆ. ಅಪರ್ಣಾ ದೇವರ ಬಳಿ ಕೇಳಿಕೊಳ್ಳುತ್ತಲೇ ಇರುತ್ತಾಳೆ. ನನ್ನ ಗಂಡನನ್ನು ನೀನು ಕಾಪಾಡಲೇ ಬೇಕು ದೇವರೆ. ಅವರಿಲ್ಲದೆ ನನಗೆ ಇರಲು ಖಂಡಿತವಾಗಿಯೂ ಇರಲು ಸಾಧ್ಯ ಆಗುವುದಿಲ್ಲ ಎಂದು ದೇವರ ಬಳಿ ಪ್ರಾರ್ಥನೆ ಮಾಡಿಕೊಂಡು ಇರುವ ವೇಳೆ ಭೂಮಿಕಾ ಬರುತ್ತಾಳೆ.

ಅಪರ್ಣಾ ಪ್ರಾರ್ಥನೆಗೆ ಒಲಿದ ದೇವರು

ಅಪರ್ಣಾ ಆ ದೇವರು ನಮಗೆ ಮೋಸ ಮಾಡಲಿಲ್ಲ. ಆನಂದ್ ಮೊದಲಿನ ಹಾಗೆ ಸರಿ ಹೋಗುತ್ತಾರೆ ಎನ್ನುವ ಭರವಸೆಯನ್ನು ಡಾಕ್ಟರ್ ನೀಡಿದ್ದಾರೆ. ನನಗೆ ಬಹಳ ಖುಷಿ ಆಗುತ್ತಿದೆ ಎಂದು ಹೇಳಿದಾಗ ಅಪರ್ಣಾ, ಭೂಮಿಕಾ ಹಾಗೂ ಗೌತಮ್‌ಗೆ ಧನ್ಯವಾದವನ್ನು ಹೇಳುತ್ತಾಳೆ. "ನೀವು ಇಬ್ಬರು ಇಲ್ಲ ಎಂದಿದ್ದರೆ ನನಗೆ ಏನಾಗುತ್ತಿತ್ತು? ಎಂದಾಗ ಭೂಮಿಕಾ "ಅಪರ್ಣಾ ನಾವು ಗೆಳೆಯರಾಗಿ ಇಷ್ಟೆಲ್ಲ ಮಾಡದೇ ಇದ್ದರೆ ಹೇಗೆ? ನನಗೆ ನೀನು ಗೆಳತಿಗಿಂತ ಹೆಚ್ಚು. ಆದ ಕಾರಣ ನಾವು ನಿಮ್ಮ ಕಷ್ಟ ಕಾಲದಲ್ಲಿ ನಿಮ್ಮ ಹತ್ತಿರ ಇಲ್ಲ ಎಂದಾದರೆ ಹೇಗೆ?" ಎಂದು ಹೇಳುತ್ತಾಳೆ.

ಭೂಮಿಕಾ ಮಾತಿಗೆ ಅಪರ್ಣಾ ಸಮಾಧಾನ

ಕಷ್ಟ ಕಾಲದಲ್ಲಿ ಯಾರು ನಮ್ಮ ಜೊತೆಗೆ ನಿಲ್ಲುತ್ತಾರೋ ಅವರೇ ನಿಜವಾದ ಗೆಳೆಯರು ಎಂದು ಹೇಳುತ್ತಾರೆ. ಈ ಮಾತಿನಿಂದ ಅಪರ್ಣಾಗೆ ಬಹಳ ಖುಷಿ ಹಾಗೆಯೇ ಬೇಸರ ಎರಡು ಆಗುತ್ತೆ. ಇತ್ತ ಆನಂದ್‌ಗೆ ಒಮ್ಮಿಂದೊಮ್ಮೆಲೆ ಎಚ್ಚರ ಆಗುತ್ತೆ. ನಾನು ಎಲ್ಲಿದ್ದೇನೆ ಎಂದು ಆತನಿಗೆ ತಿಳಿಯದ ಹಾಗೆ ಆಗುತ್ತದೆ. ಆತನಿಗೆ ಒಂದು ಟಿಟಿ ಗಾಡಿ ಬಂದು ಗುದ್ದಿರುವುದು ಮಾತ್ರ ತಿಳಿದಿರುತ್ತೆ. ಯಾಕೆ ಏನು ಎನ್ನುವುದು ಮಾತ್ರ ತಿಳಿಯಲಿಲ್ಲ. ಅದಾದ ಬಳಿಕ ಏನು ಆಯಿತು ಎನ್ನುವುದು ನೆನಪೇ ಇಲ್ಲ.

Amruthadhaare serial August 28th episode update

ಆನಂದ್ ಕಿವಿಗೆ ಅಪ್ಪಳಿಸಿದ ಜೈ ದೇವ್

ಇನ್ನೂ ಜೈ ದೇವ್ ಮಾತುಗಳು ಆನಂದ್‌ಗೆ ನೆನಪು ಬರುತ್ತದೆ. ನಾನು ಜೈ ದೇವ್ ಬಗ್ಗೆ ಗೌತಮ್ ಬಳಿ ಹೇಳಲೇ ಬೇಕು. ಆತ ಬದಲಾಗಿದ್ದೇನೆ ಎಂದು ಹೇಳಿದ್ದಾನೆ. ಆದರೆ ಆತ ಬದಲಾಗಿದ್ದಾನೋ ಇಲ್ಲವೋ ಎಂಬುವುದನ್ನು ನಾನು ಪತ್ತೆ ಹಚ್ಚಬೇಕು ಎಂದು ಆತ ಸುಮ್ಮಗೆ ನಾಟಕ ಮಾಡಲು ಮುಂದಾಗುತ್ತಾನೆ.

More from Filmibeat

English summary
Amruthadhaare serial August 28th episode update:
Read more about: serial poorva filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X