Amruthadhaare ; ಆನಂದ್ ಗೆ ಪ್ರಜ್ಞೆ ಬಂದಾಯ್ತು : ಜೈದೇವ್ ಗೆ ಸಂಕಟ ಶುರುವಾಯಿತು..!

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಅಪೇಕ್ಷಾಳಿಗೆ ಮನೆಯವರ ಮೇಲಿನ ಪ್ರೀತಿಗಿಂತಲೂ ತನ್ನ ಬದುಕಿನ ಬಗ್ಗೆ ಚಿಂತೆಯೇ ಹೆಚ್ಚಾಗಿದೆ. ಪಾರ್ಥ ತನ್ನ ಕಡೆಗೆ ಗಮನ ಕೊಡುತ್ತಿಲ್ಲ ಎಂದು ಬೇಸರ ಮಾಡಿಕೊಂಡಿದ್ದಾಳೆ. ಪಾರ್ಥ ಮನೆಯ ಪರಿಸ್ಥಿತಿಗೆ ತಕ್ಕಂತೆ ನಡೆದುಕೊಳ್ಳುತ್ತಿದ್ದು, ತಾವು ವಿರೋಧದಿಂದ ಮದುವೆಯಾಗಿರುವುದು ಕೂಡ ಪಾರ್ಥನಲ್ಲಿ ಬೇಸರವನ್ನು ಮೂಡಿಸಿದೆ. ಅಪೇಕ್ಷಾ ಬಹಳ ಬೇಸರ ಮಾಡಿಕೊಂಡಿರುವ ಕಾರಣ ಪಾರ್ಥ ಹೆಂಡತಿಯನ್ನು ಮೊದಲ ಬಾರಿಗೆ ಮನೆಯಿಂದ ಹೊರಗೆ ಕರೆದುಕೊಂಡು ಹೋಗಲು ಮುಂದಾಗಿದ್ದಾನೆ.

ಆನಂದ್‌ನನ್ನು ಕೊಲ್ಲುತ್ತಾನಾ ಜೈದೇವ್..?

ಜೈದೇವ್ ಮಾತಿಗೆ ಆನಂದ್ ಕಣ್ನೂ ಆಡಿಸಿದ್ದಕ್ಕೆ, ಈಗ ಅವನೇ ಜೊತೆಗೆ ಕೂರುವಂತೆ ಗೌತಮ್ ಮಾಡಿದ್ದಾನೆ. ರೂಮ್ ನಲ್ಲಿ ಯಾರೂ ಇಲ್ಲದ ಕಾರಣ ಜೈದೇವ್ ತನ್ನ ಕೋಪವನ್ನೆಲ್ಲಾ ತೋರಿಸಿಕೊಂಡಿದ್ದಾನೆ. ಆನಂದ್ ನನ್ನು ಬಾಯಿಗೆ ಬಂದ ಹಾಗೆ ಬೈದಿದ್ದಾನೆ. ಅಪರ್ಣಾ ತಾಳಿ ಭಾಗ್ಯ ಗಟ್ಟಿಯಾಗಿದೆ ಹಾಗಾಗಿ ನೀನು ಸಾಯದೇ ಬದುಕಿದ್ದೀಯಾ ಎಂದು ಹೇಳುತ್ತಾನೆ. ನಾನು ಮಾಡಿಸಿದ ಆಕ್ಸಿಡೆಂಟ್ ಗೆ ನೀನು ಸ್ಪಾಟ್ ಔಟ್ ಆಗಬೇಕಿತ್ತು. ಬದುಕಿ ಬಿಟ್ಟಿದ್ದೀಯಾ. ನೀನು ಸಾಯಲೇಬೇಕು ಎಂದು ಕತ್ತು ಹಿಸುಕಿ ಕೊಲ್ಲಲು ಮುಂದಾಗುತ್ತಾನೆ. ಆದರೆ, ತಾನೇ ಆನಂದ್ ಸಾವಿಗೆ ಕಾರಣ ಎಂಬುದು ಗೊತ್ತಾದರೆ ಕಷ್ಟ ಎಂದು ಸುಮ್ಮನಾಗುತ್ತಾನೆ. ಇದೆಲ್ಲಾ ಮಾತುಗಳು ಆನಂದ್ ಗೆ ಪ್ರಜ್ಞೆ ಬರಲು ಸಹಾಯ ಮಾಡುತ್ತದೆ.

amruthadhaare-serial-august-29-episode-written-update

ಎಚ್ಚರಗೊಂಡ ಆನಂದ್

ಅಲ್ಲಿಂದ ಜೈದೇವ್ ತನ್ನ ಪ್ರೇಯಸಿ ದಿಯಾಳನ್ನು ಭೇಟಿ ಮಾಡಲು ಹೋಗುತ್ತಾನೆ. ಅಲ್ಲಿ ದಿಯಾ ಜೈದೇಔ ಗೆ ಕುಡಿದ ಮತ್ತಿನಲ್ಲಿ ಆನಂದ್ ಗೆ ಅಪಘಾತ ಮಾಡಿಸಿದ ವಿಚಾರವನ್ನು ನನ್ನ ಬಳಿ ಹೇಳಿದ್ದೀರಾ. ನಾನು ಏನಾದರೂ ತಪ್ಪು ಮಾಡಿದರೆ, ನನಗೂ ಹೀಗೆ ಮಾಡುತ್ತೀರಾ ಎಂದು ಹೆದರಿಕೊಂಡು ಕೇಳುತ್ತಾಳೆ. ಜೈದೇವ್ ದಿಯಾಳನ್ನು ಸಮಾಧಾನ ಮಾಡುತ್ತಾನೆ. ಇತ್ತ ಆನಂದ್ ಗೆ ಇದ್ದಕ್ಕಿದ್ದ ಹಾಗೆಯೇ ಎಚ್ಚರವಾಗುತ್ತದೆ. ತನಗೆ ಏನಾಯ್ತು ಎಂದು ನೆನಪು ಮಾಡಿಕೊಳ್ಳಲು ಪ್ರಯತ್ನಿಸುತ್ತಾನೆ. ಆಗ ಆಕ್ಸಿಡೆಂಟ್ ಆಗಿದ್ದು, ಅಪೇಕ್ಷಾಳನ್ನು ಕೊಲ್ಲಲು ಸುಪಾರಿ ಕೊಟ್ಟ ವಿಚಾರಗಳೆಲ್ಲವೂ ನೆನಪಾಗುತ್ತದೆ.

ಗೆಳೆಯನನ್ನು ಕಂಡು ಗೌತಮ್ ಹ್ಯಾಪಿ

ಆನಂದ್ ಗೌತಮ್ ನನ್ನು ಆಟವಾಡಿಸಬೇಕು ಎಂದು ಸ್ವಲ್ಪ ಹೊತ್ತು ತನಗೆ ಪ್ರಜ್ಞೆಯೇ ಬಂದಿಲ್ಲ ಎಂಬಂತೆ ನಡೆದುಕೊಳ್ಳುತ್ತಾನೆ. ಗೌತಮ್ ಆನಂದ್ ಮುಂದೆ ಕುಳಿತು ಕಣ್ಣೀರು ಹಾಕುತ್ತಾನೆ. ನೀನು ಇಲ್ಲದೇ ನಾನು ಇರಲು ಸಾಧ್ಯವಿಲ್ಲ. ನಿನ್ನ ಮಾತು ಕೇಳದೇ ಕುಗ್ಗಿ ಹೋಗಿದ್ದೇನೆ ಎಂದೆಲ್ಲಾ ಗೋಳಾಡುತ್ತಾನೆ. ಬಳಿಕ ಆನಂದ್ ಎಚ್ಚರವಾಗಿದ್ದನ್ನು ನೋಡಿದ ಗೌತಮ್ ಫೂಲ್ ಖುಷಿಯಾಗುತ್ತಾನೆ. ಕೊನೆಗೂ ತನ್ನ ಗೆಳೆಯ ಚೇತರಿಸಿಕೊಂಡು ಎಂದು ನೆಮ್ಮದಿಯ ನಿಟ್ಟುಸಿರು ಬಿಡುತ್ತಾನೆ. ಮನೆಯವರೆಲ್ಲರೂ ಕೂಡ ಆನಂದ್ ಗೆ ಇಷ್ಟು ಬೇಗ ಪ್ರಜ್ಞೆ ಬಂದಿದ್ದಕ್ಕೆ ಖುಷಿ ಪಡುತ್ತಾರೆ. ಅಪರ್ಣಾ ಆನಂದ್ ಗೆ ಏನೆಲ್ಲಾ ಆಯ್ತು ಎಂಬುದನ್ನು ವಿವರಿಸಿ ಹೇಳುತ್ತಾಳೆ. ಗೌತಮ್, ಭೂಮಿಕಾ ಇದ್ದಿದ್ದರಿಂದ ತಮಗೆ ಎಷ್ಟು ಸಹಾಯವಾಯ್ತು ಎಂಬುದನ್ನು ಹೇಳಿ ಸ್ನೇಹವನ್ನು ಕೊಂಡಾಡುತ್ತಾರೆ.

amruthadhaare-serial-august-29-episode-written-update

ಶಾಕ್ ಆಗಿರುವ ಜೈದೇವ್

ಮಲ್ಲಿ ಆನಂದ್ ಗೆ ಪ್ರಜ್ಞೆ ಬಂದಿದ್ದಕ್ಕೆ ಖುಷಿ ಪಟ್ಟು ಜೈದೇವ್ ಗೆ ಫೋನ್ ಮಾಡುತ್ತಾಳೆ. ಆನಂದ್ ಬೆಡ್ ಬಿಟ್ಟು ಮೇಲೆ ಏಳಲು ಸಾಧ್ಯವೇ ಇಲ್ಲ ಎಂದುಕೊಂಡಿದ್ದ ಜೈದೇವ್ ಗೆ ಶಾಕ್ ಆಗುತ್ತದೆ. ಎಲ್ಲಿ ತನ್ನ ಎಲ್ಲಾ ವಿಚಾರವನ್ನೂ ಗೌತಮ್ ಗೆ ಹೇಳಿ ಬಿಡುತ್ತಾನೋ ಎಂದು ಗಾಬರಿಯಾಗಿ ಮನೆಗೆ ಓಡಿ ಬರುತ್ತಾನೆ. ಜೈದೇವ್ ಮತ್ತೆ ಆನಂದ್ ಜೀವಕ್ಕೆ ಅಪಾಯವನ್ನು ತಂದಿಡುತ್ತಾನಾ ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X