Amruthadhaare: ಭೂಮಿಕಾ ಹಾಗೂ ಅಪೇಕ್ಷಾ ನಡುವೆ ಧ್ವೇಷದ ಬೀಜ ಬಿತ್ತಿದ ಶಕುಂತಲಾ: ಮುಂದೇನು?

By ಪ್ರಿಯಾ ದೊರೆ

'ಅಮೃತಧಾರೆ' ಧಾರಾವಾಹಿಯಲ್ಲಿ ಪಾರ್ಥ ತುಂಬಾನೇ ಹೆದರಿಕೊಂಡಿದ್ದಾನೆ. ಅತ್ತಿಗೆ ಕೂಡ ಕೈ ಕೊಟ್ಟರು ಎಂದು ಗಾಬರಿಯಾಗಿರುತ್ತಾನೆ. ಈ ಸಂದರ್ಭದಲ್ಲಿ ಶಕುಂತಲಾ ಪಾರ್ಥನ ಕಣ್ಣಿಗೆ ಬೀಳುತ್ತಾಳೆ.

ಪಾರ್ಥ ಸೀದಾ ಅಮ್ಮನ ಬಳಿ ಹೋಗಿ ಬಿಕ್ಕಿ ಬಿಕ್ಕಿ ಅಳುತ್ತಾನೆ. ಶಕುಂತಲಾ ಏನು ಎಂದು ಕೇಳಿದ್ದಕ್ಕೆ ತಾನು ಅಪೇಕ್ಷಾಳನ್ನು ಪ್ರೀತಿ ಮಾಡುತ್ತಿದ್ದೇನೆ. ಅಣ್ಣ ನೋಡಿರುವ ಹುಡುಗಿ ಬೇಡ ಎಂದು ಹೇಳುತ್ತಾನೆ.

Amruthadhaare Serial August 2nd episode update

ಅತ್ತಿಗೆ "ಅಪೇಕ್ಷಾ ನಾನು ತುಂಬಾ ಪ್ರೀತಿ ಮಾಡುತ್ತಿದ್ದೇವೆ. ನಾನು ಮದುವೆ ಅಂತ ಆದರೆ, ಅವಳನ್ನೇ" ಎಂದು ಹೇಳುತ್ತಾನೆ. ಇತ್ತ ಶಕುಂತಲಾ ನಾನು ಏನಾದರೂ ಮಾಡುತ್ತೇನೆ ಎಂದು ಸಮಾಧಾನ ಮಾಡುತ್ತಾಳೆ.

ಪರೀಕ್ಷೆ ಬರೆದ ಮಕ್ಕಳು

ಗೌತಮ್ ಹುಡುಗಿಯ ಮನೆಗೆ ಫೋನ್ ಮಾಡಿ ಮದುವೆ ಫಿಕ್ಸ್ ಎಂದು ಹೇಳುತ್ತಾನೆ. ಆದರೆ, ಪಾರ್ಥನಿಗೆ ಹೇಳುವುದು ಎಂದು ಗೊತ್ತಾಗದೆ ಒದ್ದಾಡುವಾಗ ಶಕುಂತಲಾ "ಬೇಡ ನಾನು ಹೇಳುವವರೆಗೂ ಹುಡುಗಿ ಮನೆಯವರಿಗೆ ಏನೂ ಹೇಳಬೇಡ" ಎಂದು ಹೇಳುತ್ತಾಳೆ. ಪಾರ್ಥ ಅಮ್ಮ ಎಲ್ಲಾ ಸರಿ ಮಾಡಬಹುದು ಎಂದು ಸಮಾಧಾನಪಟ್ಟುಕೊಳ್ಳುತ್ತಾನೆ. ಬಳಿಕ ಶಾಲೆಗೆ ಹೋಗುತ್ತಾನೆ. ಶಾಲೆಯಲ್ಲಿ ನಾಲ್ವರು ಮಕ್ಕಳು ಪರೀಕ್ಷೆ ಬರೆಯಲು ಮೇಷ್ಟ್ರು ಬರಲಿ ಎಂದು ಕಾಯುತ್ತಿರುತ್ತಾರೆ. ಪಾರ್ಥ ಬಂದ ಕೂಡಲೇ ಆಶೀರ್ವಾದ ಮಾಡಿ ಎನ್ನುತ್ತಾರೆ. ಆದರೆ, ಪಾರ್ಥ ಬೇಕಂತಲೇ ಮಕ್ಕಳ ಮೇಲೆ ಕೂಗಾಡುತ್ತಾನೆ. ನಿಮಗೆ ತಲೆ ಇದ್ದರೆ ಪರೀಕ್ಷೆ ಬರೆಯಿರಿ ಎಂದು ಬೈದು ಕಳಿಸುತ್ತಾನೆ.

ಉಲ್ಟಾ ಹೊಡೆದ ಸದಾಶಿವ

ಪರೀಕ್ಷೆ ಬರೆದು ಬಂದ ಮೇಲೆ ಮಕ್ಕಳಿಗೆ ಚಾಕಲೇಟ್ ಕೊಟ್ಟು ಖುಷಿ ಪಡಿಸುತ್ತಾನೆ. ಪಾರ್ಥನಿಗೆ ಶಾಳೆಯವರು ಒಂದು ತಿಂಗಳ ಸಂಬಳವನ್ನು ನೀಡುತ್ತಾರೆ. ಇದರಿಂದ ಪಾರ್ಥ ಫುಲ್ ಖುಷಿಯಾಗುತ್ತಾನೆ. ಬಳಿಕ ಆ ಹಣವನ್ನು ಜುಮ್ಕಿಗೆ ಕೊಡುತ್ತಾನೆ. ಬಳಿಕ ಸದಾಶಿವನ ಬಳಿ ಮಾತನಾಡುತ್ತಾನೆ. ಆಗ ಸದಾಶಿವ ಚಾಲೆಂಜ್‌ನಲ್ಲಿ ಗೆಲ್ಲುತ್ತೀಯಾ. ಆದರೆ, ನಾನು ನನ್ನ ಮಗಳನ್ನು ಕೊಡುವುದಿಲ್ಲ. ನನಗೆ ಮರ್ಯಾದೆ ಮುಖ್ಯ ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿದ ಪಾರ್ಥನಿಗೆ ನೋವಾಗುತ್ತದೆ. ಇತ್ತ ಆನಂದ್ ಪಾರ್ಥನ ಮದುವೆ ಹೇಗೆ ನಡೆಯಬೇಕು ಎಂದು ಕಂಪ್ಲೀಟ್ ಪ್ಲಾನ್ ಮಾಡಿರುತ್ತಾನೆ. ಇದನ್ನು ನೋಡಿ ಗೌತಮ್‌ಗೆ ಖುಷಿಯಾಗುತ್ತದೆ.

ಅಪೇಕ್ಷಾ ಪರ ನಿಂತ ಶಕುಂತಲಾ

ಶಕುಂತಲಾ ನನ್ನ ಮಗ ನನ್ನ ಬಳಿ ಬಂದು ತನಗೇನು ಬೇಕು ಎಂದು ಕೇಳಿದ್ದಾನೆ. ಈಗ ಅಪೇಕ್ಷಾ ಮನೆಗೆ ಹೋಗಿ ಸಂಬಂಧ ಬೆಳೆಸಬೇಕು ಎನ್ನುತ್ತಾಳೆ. ಹೀಗ್ಯಾಕೆ ಮಾಡುತ್ತಿದ್ದೀಯಾ ಎಂದು ಲಕ್ಷ್ಮೀಕಾಂತ ಕೇಳಿದ್ದಕ್ಕೆ "ಇಷ್ಟು ದಿನ ಪಾರ್ಥ ಎಲ್ಲವನ್ನೂ ಭೂಮಿಕಾ ಬಳಿ ಹೇಳಿಕೊಳ್ಳುತ್ತಿದ್ದ. ಈಗ ನನ್ನ ಬಳಿ ಬಂದಿದ್ದಾನೆ. ಇದೇ ನನಗೆ ಬೇಕಾಗಿದ್ದು" ಎಂದು ಹೇಳುತ್ತಾಳೆ. ಸೀದಾ ಮಂದಾಕಿನಿ ಮನೆಗೆ ಶಕುಂತಲಾ ಬರುತ್ತಾಳೆ. ಮಂದಾಕಿನಿ ಅಪೇಕ್ಷಾ ಬಗ್ಗೆ ಹೇಳಿ ಬೇಸರ ಮಾಡಿಕೊಳ್ಳುತ್ತಾಳೆ. ಶಕುಂತಲಾ ನಾನು ಅವಳ ಬಳಿ ಮಾತನಾಡುತ್ತೇನೆ ಎಂದು ಹೇಳಿ ಹೋಗುತ್ತಾಳೆ. ಅಪೇಕ್ಷಾಳನ್ನು ನಿಮ್ಮ ಪ್ರೀತಿಯನ್ನು ನಾನು ಉಳಿಸಿಕೊಡುತ್ತೇನೆ ಎಂದು ಹೇಳಿ ಸಮಾಧಾನ ಮಾಡುತ್ತಾಳೆ.

ಭೂಮಿಕಾಳನ್ನು ದೂರ ಮಾಡುವ ಪ್ಲಾನ್

ಇಬ್ಬರೂ ಪ್ರೀತಿ ಮಾಡುತ್ತಿದ್ದೀರಾ ಎಂದರೆ, ನನ್ನ ಬಳಿಯೋ ಅಥವಾ ಗೌತಮ್ ಬಳಿ ಹೇಳಿಕೊಳ್ಳಲು ಕಷ್ಟವೇನು? ಈಗ ನೋಡಿ ಪಾರ್ಥನಿಗೆ ಮದುವೆ ಮಾಡಲು ಇಷ್ಟೆಲ್ಲಾ ಮುಂದುವರೆದ ಮೇಲೆ ನನಗೆ ಗೊತ್ತಾಯ್ತು. ಕೊನೆ ಪಕ್ಷ ಭೂಮಿಕಾಳಿಗಾದರೂ ಹೇಳಬಾರದಾ ಎಂದಾಗ ಅಪೇಕ್ಷಾ, ಅಕ್ಕನಿಗೆ ಗೊತ್ತು ಎನ್ನುತ್ತಾಳೆ. ಆಗ ಶಕುಂತಲಾ ಭೂಮಿಕಾಳಿಗೆ ಗೊತ್ತಿದ್ದರೂ ಪಾರ್ಥನ ಮದುವೆಗೆ ಖುಷಿ ಖುಷಿಯಾಗಿ ಓಡಾಡಿಕೊಂಡಿದ್ದಾಳಾ..? ನಮಗೆಲ್ಲಾ ಯಾಕೆ ಹೇಳಲಿಲ್ಲ ಎಂದು ಅಪೇಕ್ಷಾ ಮನಸ್ಸಿನಲ್ಲಿ ಭೂಮಿಕಾ ಬಗ್ಗೆ ದ್ವೇಷ ಹುಟ್ಟುವಂತೆ ಮಾಡಿದ್ದಾಳೆ.

More from Filmibeat

English summary
Amruthadhaare Serial August 2nd episode update:
Read more about: serial priya dore filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X