Amruthadhaare:ಜೈ ದೇವ್ ನಾಟಕದ ಮಾತಿಗೆ ಆನಂದ್ ಸೈಲೆಂಟ್; ಮುಂದಿನ ನಡೆಯೇನು?
ಗೌತಮ್ ತನ್ನ ಗೆಳೆಯ ಹುಷಾರಾಗಿಬಿಟ್ಟ ಎನ್ನುವ ಖುಷಿಯಲ್ಲಿದ್ದಾನೆ. ಆದರೆ, ಆನಂದ್‌ಗೆ ಇರುವುದು ಗೌತಮನದ್ದೇ ಚಿಂತೆ. ನನ್ನ ಗೆಳೆಯ ಬಹಳ ಒಳ್ಳೆಯವನು. ಆತನಿಗೆ ಇದೀಗ ಆತನ ಮನೆಯವರು ಶತ್ರುಗಳಾಗಿ ನಿಂತಿದ್ದಾರೆ. ಆತನ ಚಿಕ್ಕಮ್ಮ ಆಗಿರಬಹುದು ಅಥವಾ ಆತನ ತಮ್ಮ ಆಗಿರಬಹುದು ಗೌತಮ್ ನನ್ನು ಹೇಗಾದರೂ ಮಾಡಿ ಮುಗಿಸಬೇಕು ಎನ್ನುವುದು ಅವರ ಕುತಂತ್ರ. ಗೌತಮ್‌ನನ್ನು ಸಾಯಿಸಿದರೆ ಆಸ್ತಿಯಲ್ಲ ತಮ್ಮ ಪಾಲಾಗಿ ಬಿಡುತ್ತದೆ ಎನ್ನುವುದು ಅವರ ಆಲೋಚನೆ.
ಇನ್ನೂ ಜೈದೇವ್ ಆಟಗಳೆಲ್ಲವೂ ಆನಂದ್ ಮುಂದೆ ಬಯಲಾಗಿದೆ. ಆನಂದ್‌ನನ್ನ ಕೊಲ್ಲಿಸುವ ಮಟ್ಟಕ್ಕೂ ಹೋಗಿದೆ. ಇನ್ನು ಜೈದೇವ್ ಮಾಡಿದ ಕುತಂತ್ರ ಗೌತಮ್ ಬಳಿ ಹೇಳಬೇಕೆಂದು ಆನಂದ್ ಅಂದುಕೊಂಡಿರುತ್ತಾನೆ. ಆನಂದ್‌ಗೆ ಪ್ರಜ್ಞೆ ಬಂದ ಕೂಡಲೇ ತನ್ನ ಗೆಳೆಯನ ಬಗ್ಗೆ ವಿಚಾರಿಸುತ್ತಾನೆ. ಹಾಗೆ ತನ್ನ ಗೆಳೆಯನ ಬಳಿ ಮಾತನಾಡಬೇಕು ಎಂದು ಪದೇ ಪದೆ ಹೇಳುತ್ತಿರುತ್ತಾನೆ.

ಆಗ ಭೂಮಿಕಾ ಹಾಗೂ ಅಪರ್ಣಗೆ ಇವರದ್ದು ಯಾವತ್ತೂ ಇದ್ದಿದ್ದೆ ಎಂದು ಕೊಳ್ಳುತ್ತಾರೆ. ಆಗ ಅಲ್ಲಿಗೆ ಜೈದೇವ್ ಬರುತ್ತಾನೆ. ಆತನ ತಲೆಯಲ್ಲಿದ್ದಿದ್ದು ಒಂದೇ ಆನಂದ್, ಅಣ್ಣ ಗೌತಮ್ ಬಳಿ ಏನಾದರೂ ನನ್ನ ಬಗ್ಗೆ ಹೇಳಿಬಿಟ್ಟರೆ ಎನ್ನುವ ಭಯ ಆತನ ಮುಖದಲ್ಲಿರುತ್ತದೆ.
ಜೈ ದೇವ್ ಮನದಲ್ಲಿ ನೂರಾರು ಆಲೋಚನೆ
"ಜೈದೇವ್ ಅವರೇ, ನೀವು ಮಾತನಾಡಿದ ಕಾರಣ ನನ್ನ ಗಂಡ ಬದುಕಿದ್ದಾರೆ" ಎಂದು ಅಪರ್ಣ ಹೇಳುತ್ತಾಳೆ. ಆಗ ಜೈದೇವ್‌ಗೆ ಏನು ಮಾತನಾಡಬೇಕು ಎಂದು ಗೊತ್ತಾಗದೆ ಸುಮ್ಮನೆ ಇರುತ್ತಾನೆ. "ನಾನು ಆನಂದ್ ಅಣ್ಣನ ಬಳಿ ಮಾತನಾಡಬೇಕಿದೆ" ಎಂದು ಜೈ ದೇವ್ ಹೇಳಿದಾಗ, ಭೂಮಿಕಾ "ನಿನ್ನ ಅಣ್ಣ ಹಾಗೂ ಆನಂದವರು ಏನೋ ಮಾತನಾಡಬೇಕು ಎಂದು ಅವರಿಬ್ಬರೂ ರೂಮಲ್ಲಿ ಕುಳಿತುಕೊಂಡು ಮಾತನಾಡುತ್ತಿದ್ದಾರೆ" ಎಂದು ಹೇಳಿದಾಗ ಜೈ ದೇವ್‌ಗೆ ಇನ್ನೂ ನಡುಕ ಹೆಚ್ಚಾಗುತ್ತದೆ.
ಅಪರ್ಣಾ ಮಾತು ಕೇಳಿ ನಡುಗಿದ ಜೈ ದೇವ್
ಇದೇನಪ್ಪಾ ಆನಂದ್ ನನ್ನ ಬಗ್ಗೆ ಎಲ್ಲಾದರೂ ಹೇಳಿಬಿಟ್ಟರೆ ಎನ್ನುವ ಭಯ ಆತನನ್ನು ಕಾಡುತ್ತಿರುತ್ತದೆ. ಅದಕ್ಕಾಗಿ ನೇರವಾಗಿ ಆನಂದ್ ಇರುವ ರೂಮ್‌ಗೆ ಹೋಗುತ್ತಾನೆ. ಅಲ್ಲಿ ಆನಂದ್, ಗೌತಮ್ ಬಳಿ ಜೈ ದೇವನ ಬಗ್ಗೆ ಏನೋ ಹೇಳಬೇಕು ಎಂದು ಕೊಂಡಾಗಲೇ ಜೈದೇವ್ ಅಲ್ಲಿಗೆ ಎಂಟ್ರಿ ನೀಡುತ್ತಾನೆ. ಆನಂದ್‌ಗೆ ಬಹಳ ಭಯ ಕಾಡುತ್ತದೆ. ಆತನಿಗೆ ಏನು ಮಾತನಾಡಬೇಕು ಎಂದು ಕೂಡ ಮರೆತು ಹೋಗುತ್ತದೆ. ಜೈದೇವ ಬಂದು "ಆನಂದ್ ಬ್ರೋ, ನೀವು ಚೆನ್ನಾಗಿದ್ದೀರಾ?" ಎಂದು ಕೇಳುತ್ತಾನೆ.

ಆನಂದ್ ಮನದಲ್ಲಿ ನೂರಾರು ಅನುಮಾನ
ಜೈ ದೇವ್‌ಗೆ ಏನು ಉತ್ತರ ನೀಡಬೇಕು ಎಂದು ಗೊತ್ತಾಗದೆ ಸುಮ್ಮನೆ ಇರುತ್ತಾನೆ. ಇನ್ನೂ ಗೌತಮ್ ಮಾತ್ರ ಬಹಳ ಖುಷಿಯಲ್ಲಿ ಇರುತ್ತಾನೆ. ತನ್ನ ಗೆಳೆಯ ಅಪಾಯದಿಂದ ಪಾರಾಗಿ ಬಿಟ್ಟ ಎಂದು ಬಹಳ ಖುಷಿ ಪಡುತ್ತಿರುತ್ತಾನೆ.


Click it and Unblock the Notifications











