Amruthadhaare ; ಭೂಮಿಕಾ ಎದುರು ಶಕುಂತಲಾ ಹೆಸರು ಹೇಳಿದ ಭಾಗ್ಯಮ್ಮ, ತಿರುಗಿ ಬೀಳ್ತಾಳಾ ಮಲ್ಲಿ ?

''ಅಮೃತಧಾರೆ' ಧಾರಾವಾಹಿಯಲ್ಲಿ ಭಾಗ್ಯಮ್ಮನ ತನ್ನ ತವರು ಮನೆಗೆ ಕರ್ಕೊಂಡು ಹೋಗಿರುವ ಭೂಮಿಕಾ, ಸದ್ಯ ಹೊಸದೊಂದು ಐಡಿಯಾ ಮಾಡಿದ್ದಾಳೆ. ಆ ಮನೆಯಲ್ಲಿ ನೀವು ಏನೋ ಬರಿಯೋಕೆ ಟ್ರೈ ಮಾಡಿದ್ದರಲಾ ? ಅದಕ್ಕೆ ನಾನು ಈ ಚಾರ್ಟ್‌ನಲ್ಲಿ ಎಲ್ಲ ಅಕ್ಷರ ಬರೆದಿದ್ದೀನಿ, ನೀವೇನು ಅಂದ್ಕೊಂಡಿದ್ದೀರಾ ಅದನ್ನು ಹೇಳಿ..ನಾನು ಅದನ್ನು ಬರೆದುಕೊಳ್ತೋನಿ ಎಂದು ಹೇಳುತ್ತಾಳೆ. ಅ.ಆ.ಇ.ಈ ಇಂದ ಶುರು ಮಾಡುತ್ತಾಳೆ.

ಆಗ ಭಾಗ್ಯಮ್ಮ ಮೊದಲಿಗೆ ''ಕ'' ಅಕ್ಷರವನ್ನು ಗುರುತಿಸಿದ್ದು ಆ ನಂತರ ಶಕುಂತಲಾ ಎಂಬ ಹೆಸರನ್ನು ಭಾಗ್ಯಮ್ಮ ಹೇಳುತ್ತಿರುವ ವಿಚಾರ ಭೂಮಿಕಾಗೆ ಗೊತ್ತಾಗಿದೆ. ಇದರಿಂದ ಭೂಮಿಕಾ ಬೆಚ್ಚಿ ಬಿದ್ದಿದ್ದು ಭಾಗ್ಯಮ್ಮ ಸಂಜ್ಞೆಯ ಮೂಲಕ ಎಲ್ಲ ವಿವರಿಸುವ ಪ್ರಯತ್ನ ಮಾಡುತ್ತಾಳೆ.

amruthadhaare-serial-august-4-episode-written-update

ಭಾಗ್ಯಮ್ಮಗೆ ಭೂಮಿಕಾ ಸಮಾಧಾನ ಮಾಡುವ ಪ್ರಯತ್ನವನ್ನು ಮಾಡಿದ್ದು ಅತ್ತೆ ನನ್ನ ಬಳಿ ಹೇಳಬೇಕಿರುವ ವಿಚಾರ ತುಂಬಾ ಇದೆ, ಆದರೆ ಈ ರೀತಿ ಒಂದೊಂದೇ ಅಕ್ಷರ ಕೂಡಿಸುತ್ತಾ ಹೋದರೆ ತುಂಬಾ ಟೈಮ್ ತೆಗೆದುಕೊಳ್ಳುತ್ತೆ ಎಂದು ಮನದಲ್ಲಿಯೇ ಅಂದುಕೊಳ್ಳುತ್ತಾಳೆ.

ಅತ್ತೆ ಈ ರೀತಿ ಒಂದೊಂದೇ ಅಕ್ಷರ ಕೂಡಿಸುತ್ತಾ ಹೋದರೆ ತುಂಬಾ ಲೇಟಾಗುತ್ತೆ, ನೀವೇನು ಅಂದ್ಕೊಂಡಿದ್ದೀರಾ ಎನ್ನುವುದನ್ನು ನೀವು ನಿಮ್ಮ ಕೈಯಾರೆ ಬರೆದರೆ ಅದು ಸುಲಭವಾಗುತ್ತೆ ಎನ್ನುತ್ತಾಳೆ. ನಿಮ್ಮ ಕೈಯಿಂದ ನಾನು ಅಕ್ಷರ ತಿದ್ದಿಸುವ ಕೆಲಸ ಮಾಡ್ತೀನಿ ಟ್ರೈ ಮಾಡೋಣ ಎನ್ನುತ್ತಾಳೆ.

ಜೈದೇವ್‌ಗೆ ಕರೆ ಮಾಡುವ ಶಕುಂತಲಾ

ಇತ್ತ ಜೈದೇವ್‌ಗೆ ಕರೆ ಮಾಡುವ ಶಕುಂತಲಾ ಎಲ್ಲಾ ನಾವು ಅಂದುಕೊಂಡತೆ ನಡೆಯುತ್ತಿದೆ, ಭೂಮಿಕಾ ತವರು ಮನೆಗೆ ಹೋಗಿದ್ದಾಳೆ ಎನ್ನುತ್ತಾಳೆ. ಇದಕ್ಕೆ ಜೈದೇವ್ ನಮಗೆ ಹೆದರಿ ಪಲಾಯನ ಮಾಡಿದ್ದಾಳೆ ಎಂದು ಹೇಳಿದ್ದು ಶಕುಂತಲಾ ಇದು ಪಲಾಯನ ಅಲ್ಲ ಏನೋ ಪ್ಲ್ಯಾನ್ ಇರಬಹುದು ಎನ್ನುತ್ತಾಳೆ. ಹೋಗ್ತಾ ತನ್ನ ಜೊತೆ ಭಾಗ್ಯಮ್ಮನನ್ನು ಕರೆದುಕೊಂಡು ಹೋಗಿರುವ ವಿಚಾರ ಹೇಳ್ತಾಳೆ. ಅವಳಿಗೆ ಏನಾದರೂ ವಿಷಯ ಗೊತ್ತಾಯ್ತಾ ? ಅಥವಾ ಅನುಮಾನ ಬಂದಿದೆಯಾ ? ಗೊತ್ತಾಗುತ್ತಿಲ್ಲ ಎನ್ನುತ್ತಾಳೆ.

ಮುಂದುವರೆದು ಅದೆಲ್ಲಾ ನಾನು ಆಮೇಲೆ ನೋಡ್ಕೋಳ್ತೀನಿ ನೀನು ದಿಯಾನ ಕರ್ಕೊಂಡು ಮನೆಗೆ ಬಾ ಎಂದು ಹೇಳುತ್ತಾಳೆ. ಶಕುಂತಲಾ ಮಾತು ಕೇಳಿ ಜೈದೇವ್ ಗಾಬರಿ ಬಿದ್ದಿದ್ದು ಬೇಡ ನಾನು ಬರಲ್ಲ, ಅಣ್ಣ ಅನಸ್ಕೊಂಡವನು ಸುಮ್ಮನೆ ಇರಲ್ಲ ಎನ್ನುತ್ತಾನೆ. ಆಗ ಶಕುಂತಲಾ ಮನೆಯಲ್ಲಿ ನಿಮ್ಮ ಅಣ್ಣ ಅಲ್ಲ ಮೀಟಿಂಗ್ ಅಂತ ಕೊಚ್ಚಿಗೆ ಹೋಗಿದ್ದಾನೆ, ನೀನು ದಿಯಾನ ಕರ್ಕೊಂಡು ಮನೆಗೆ ಬಾ ಎಂದು ಹೇಳುತ್ತಾಳೆ. ಶಕುಂತಲಾ ಮಾತಿಗೆ ಜೈದೇವ್ ಕೂಡ ಒಪ್ಪಿದ್ದು ಮನೆಗೆ ಬರುವುದಾಗಿ ಹೇಳಿದ್ದಾನೆ.

amruthadhaare-serial-august-4-episode-written-update

ಚಕಾರ ಎತ್ತುವ ಮಲ್ಲಿ ಕೆರಳಿ ಕೆಂಡವಾದ ಶಕುಂತಲಾ

ಜೈದೇವ್ ಮತ್ತು ದಿಯಾ ಮನೆಗೆ ಬರುತ್ತಿರುವ ವಿಚಾರವನ್ನು ಶಕುಂತಲಾ, ಪಾರ್ಥ, ಅಪೇಕ್ಷಾ ಮತ್ತು ಮಲ್ಲಿಯ ಎದುರು ಹೇಳಿದ್ದು, ಮಲ್ಲಿ ಚಕಾರ ಎತ್ತಿದ್ದಾಳೆ. ನಾನು ಭಾವನವರ ಬಳಿ ಈ ವಿಚಾರ ಹೇಳುತ್ತೇನೆ ಎಂದು ಹೇಳಿದ್ದಾಳೆ. ಇದರಿಂದ ಕೆರಳಿ ಕೆಂಡವಾಗಿರುವ ಶಕುಂತಲಾ, ಮಲ್ಲಿಯ ಮೇಲೆ ಕಿಡಿ ಕಾರಿದ್ದಾಳೆ. ನಿನ್ನ ಜೊತೆ ಅವನಿಗೆ ಬದುಕೋಕೆ ಇಷ್ಟ ಇಲ್ಲ ಅದಕ್ಕೆ ಅವನು ಇನ್ನೊಂದು ಮದುವೆಯಾಗಿದ್ದು ಎನ್ನುತ್ತಾಳೆ.

ಅವನ ಖುಷಿ ಎಲ್ಲಿದೆಯೋ ಅಲ್ಲಿ ಹೋಗಿದ್ದಾನೆ ಈಗ ಅವನು ನೆಮ್ಮದಿಯಾಗಿದ್ದಾನೆ ಎನ್ನುವ ಶಕುಂತಲಾ ಮತ್ತೆ ಅವನಿಗೆ ತೊಂದರೆ ಕೊಡಬೇಡ ಅದು ಅಲ್ಲದೇ ನನಗೆ ಮೊಮ್ಮಗು ಬೇಕು ಈ ಮನೆಗೆ ವಾರಸ್ದಾರ ಬೇಕು ಎಂದು ಹೇಳುತ್ತಾಳೆ. ನಿಂದು ಎಷ್ಟಿದೆಯೋ ಅಷ್ಟು ನೋಡ್ಕೊಂಡು ಹೋಗ್ತಾ ಇರು ಎನ್ನುತ್ತಾಳೆ. ಶಕುಂತಲಾ ಮಾತು ಕೇಳಿ ಮಲ್ಲಿ ಕಣ್ಣೀರು ಹಾಕುತ್ತಾ ಅಲ್ಲಿಂದ ಹೊರ ನಡೆಯುತ್ತಾಳೆ.

ಮಲ್ಲಿಗೆ ಫೋನ್ ಮಾಡುವ ಭೂಮಿಕಾ

ಮಲ್ಲಿ ಫೋನ್ ಬಾರದಿರುವುದಕ್ಕೆ ಭೂಮಿಕಾನೇ ಮಲ್ಲಿಗೆ ಫೋನ್ ಮಾಡಿದ್ದು ಆರೋಗ್ಯ ವಿಚಾರಿಸಿದ್ದಾಳೆ. ಯಾಕೆ ವಾಯ್ಸ್ ಡಲ್ ಆಗಿದೆ ಎನ್ನುತ್ತಾಳೆ. ಇದಕ್ಕೆ ಮಲ್ಲಿ ಹಾಗೇನು ಇಲ್ಲ ಅಕ್ಕಾರೇ ಎಂದು ಹೇಳಿದ್ದು ಆ ನಂತರ ಭೂಮಿಕಾ ನಿಜಾ ಹೇಳು ಏನಾಯ್ತು ಎಂದು ಹೇಳಿದಾಗ ಏನು ಹೇಳಲಿ ನಿಜಾ ಹೇಳ್ಲಾ ಅವರು ಅಲ್ಲಿ ಚೆನ್ನಾಗಿದ್ದಾರೆ ಎಂದು ಮನದಲ್ಲಿಯೇ ಅಂದುಕೊಂಡು ಸುಮ್ನಾಗುತ್ತಾಳೆ. ಸುಧಾ ಅಕ್ಕ ಕರೆಯುತ್ತಿದ್ದಾರೆ ಎಂದು ಫೋನ್ ಕಟ್ ಮಾಡುತ್ತಾಳೆ.

ಮಲ್ಲಿಯ ಈ ನಡೆಯಿಂದ ಭೂಮಿಕಾಗೆ ಅನುಮಾನ ಬಂದಿದ್ದು, ಮಲ್ಲಿ ಬೇಸರದಲ್ಲಿರುವುದು ಸತ್ಯ.. ಆದರೆ ಏನಾಯ್ತು ಎಂದು ಯೋಚನೆ ಮಾಡುತ್ತಾಳೆ. ಏನಾದರೂ ಸಮಸ್ಯೆಯಾಗಿರಬಹುದಾ ಎಂದು ಅಂದುಕೊಳ್ಳುತ್ತಾಳೆ. ಸದ್ಯ ಜೈದೇವ್ ಮತ್ತು ದಿಯಾ ಮನೆಗೆ ಬರುತ್ತಿದ್ದು ಶಕುಂತಲಾಗೆ ಮಲ್ಲಿ ತಿರುಗೇಟು ನೀಡುತ್ತಾಳಾ ಎನ್ನುವುದನ್ನು ಈಗ ಕಾದು ನೋಡಬೇಕಿದೆ. ಶಕುಂತಲಾ ಮುಖವಾಡ ಭೂಮಿಕಾ ಎದುರು ಕಳಚಿ ಬೀಳುವ ದಿನ ಕೂಡ ಹತ್ತಿರ ಬಂತಾ ಎನ್ನುವ ಪ್ರಶ್ನೆ ಕೂಡ ಹಲವರನ್ನು ಈಗ ಕಾಡುತ್ತಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X