Amruthadhaare; ಜೈ ದೇವ್ ಅಸಲಿ ಮುಖ ಬಯಲಾಯ್ತು; ಗೌತಮ್ ಮಾತಿಗೆ ಭೂಮಿಕಾ ಶಾಕ್ ?
ಗೌತಮ್‌ಗೆ ಜೈದೇವ್ ಇನ್ನೊಂದು ಮುಖ ತಿಳಿದು ಕಂಗಾಲಾಗಿದ್ದಾನೆ. ಯಾಕೆಂದರೆ ಮಲ್ಲಿ ಮನೆಯಲ್ಲಿ ತನ್ನ ಗಂಡನಿಗಾಗಿ ಕಾಯುತ್ತಿರುತ್ತಾಳೆ. ಆದರೆ, ಜೈ ದೇವ್ ಬೇರೆ ಹುಡುಗಿಗಾಗಿ ಕಾರು ಖರೀದಿ ಮಾಡಿರುವುದಂತೂ ಗೌತಮ್‌ಗೆ ಗೊತ್ತಾಗಿದೆ. ತನ್ನ ತಮ್ಮ ಈ ರೀತಿ ನಡೆದುಕೊಳ್ಳುತ್ತಾನಾ ಎಂದು ಬಹಳ ಬೇಸರಗೊಳ್ಳುತ್ತಾರೆ. ಆಂದ್ಹಾಗೆ ಈ ವಿಚಾರ ಗೌತಮ್‌ಗೆ ತಿಳಿಯುತ್ತಿರಲಿಲ್ಲ. ಆದರೆ, ಅಚಾನಕ್ ಆಗಿ ಗೌತಮ್‌ಗೆ ಕಾರು ಡೆಲಿವರಿ ಆಗಲಿರುವ ಮೆಸೇಜ್ ತಲುಪುತ್ತದೆ.
ಆಗ ಇದೇನಿದು ನಾನು ಕಾರು ಖರೀದಿ ಮಾಡಲು ಹೋಗಿಲ್ಲ ಅಂದ್ಮೇಲೆ ಹೇಗೆ ಡೆಲಿವರಿ ಮೆಸೇಜ್ ಬರಲು ಸಾಧ್ಯ ಎಂದು ಯೋಚನೆ ಮಾಡುತ್ತಿರುತ್ತಾನೆ. ಆನಂದ್‌ನನ್ನು ಕರೆದುಕೊಂಡು ಕಾರು ಶೋ ರೂಮ್‌ಗೆ ಹೋಗುತ್ತಾನೆ. ಅಲ್ಲಿ ನೋಡಿದರೆ ಜೈ ದೇವ್ ಯಾವುದೋ ಹುಡುಗಿಯ ಜೊತೆ ಕೈ ಕೈ ಹಿಡಿದುಕೊಂಡು ಆಕೆಗೆ ಜೊತೆ ರೊಮ್ಯಾಂಟಿಕ್ ಮೂಡ್‌ನಲ್ಲಿ ಇರುತ್ತಾನೆ. ಆದರೆ, ಇದೆಲ್ಲ ನೋಡಿದ ಗೌತಮ್‌ಗೆ ಶಾಕ್ ಆಗುತ್ತದೆ.

ಇತ್ತ ಆನಂದ್‌ಗೆ ಗೌತಮ್ ಸ್ಥಿತಿ ಕಂಡು ಬಹಳ ಬೇಸರ ಆಗುತ್ತದೆ. ಮನೆಗೆ ಎಷ್ಟೆಲ್ಲ ಕಷ್ಟ ಪಟ್ಟಿದ್ದಾನೆ. ತನ್ನ ತಮ್ಮಂದಿರನ್ನು ಬಹಳ ಕಷ್ಟ ಪಟ್ಟು ಸಾಕಿ ಒಂದು ಹಂತಕ್ಕೆ ಕರೆದುಕೊಂಡು ಬಂದಿದ್ದಾನೆ. ಆದರೆ, ಜೈ ದೇವ್ ಮಾತ್ರ ಅಣ್ಣನಿಗೆ ಮೋಸ ಮಾಡುತ್ತಿರುವುದನ್ನು ನೋಡಿ ಬಹಳ ಬೇಸರ ಆಗುತ್ತೆ. ಗೌತಮ್‌ಗೆ ಜೈ ದೇಮ್‌ನನ್ನು ತಡೆದರೆ ಆತ ಯಾವ ರೀತಿ ರಿಯಾಕ್ಟ್ ಮಾಡುತ್ತಾನೆ ಎನ್ನುವ ಭಯನೂ ಇರುತ್ತೆ.
ಜೈ ದೇವ್ ತಡೆಯಲು ಮುಂದಾದ ಗೌತಮ್
ಮನಸ್ಸಿನಲ್ಲಿಯೇ ಜೈ ದೇವ್ ತಡೆದರೆ ಹೇಗೆ ? ತಡೆದ ಮೇಲೆ ಜೈ ದೇವ್ ಯಾವ ರೀತಿ ನಡೆದುಕೊಳ್ಳುತ್ತಾನೆ ಎನ್ನುವ ಭಯ ಅವರಿಗೆ ಇರುತ್ತದೆ. ಆತ ತನ್ನ ಶೇರ್ ನನಗೆ ಕೊಡು. ನಾನು ಬೇರೆ ಮನೆ ಮಾಡುತ್ತೇನೆ. ಆಗ ಮನೆ ನಿನ್ನ ಹೆಸರಿನಲ್ಲಿ ಇದೆ. ನಾನು ಆಗ ಮನೆಗೆ ತಪ್ಪಿಯೂ ಕಾಲಿಡುವುದು ಇಲ್ಲ ಎಂದು ಹೇಳುತ್ತಾನೆ. ಆತ ಹೀಗೆ ಹೇಳಿದರೆ ಹೇಗೆ ಎಂಬ ಆಲೋಚನೆ ಮಾಡಿಕೊಂಡು ಗೌತಮ್ ಒಮ್ಮೆಲೆ ಬೆಚ್ಚಿ ಬೀಳುತ್ತಾನೆ. ಹಾಗೆಯೇ ಏನು ಹೇಳದೆ ಅಲ್ಲಿಂದ ಹೊರಟು ಹೋಗುತ್ತಾನೆ.
ತಮ್ಮನ ನಡವಳಿಕೆ ಕಂಡು ಗೌತಮ್ ಬೇಸರ
ಆಗ ಆನಂದ್ ಕಾರು ಡೆಲಿವರಿಯವರ ಬಳಿ ನೀವು ಕಾರು ಡೆಲಿವರಿ ಮಾಡಿ ಎಂದು ಹೇಳುತ್ತಾರೆ. ಬಳಿಕ ಆನಂದ್ ಅಲ್ಲಿಂದ ತೆರಳುತ್ತಾರೆ. ಇನ್ನೂ ಕಾರಿನ ಡೆಲಿವರಿ ನೀಡಲು ಮುಂದಾಗುತ್ತಾರೆ. ಇತ್ತ ಗೌತಮ್‌ಗೆ ತಮ್ಮ ಮಾಡುತ್ತಿರುವ ಕೆಟ್ಟ ಕೆಲಸದ ಬಗ್ಗೆ ಬಹಳ ನೋವು ಆಗುತ್ತದೆ.

ಭೂಮಿಕಾ ಬಳಿ ನೋವು ಹಂಚಿಕೊಂಡ ಗೌತಮ್
ಆತ ಯಾವತ್ತೂ ಖುಷಿಯಾಗಿ ಇರಬೇಕು ಆತನಿಗಾಗಿ ಮುತ್ತಿನಂತಹ ಹೆಂಡತಿ ಕಾಯುತ್ತಿದ್ದಾಳೆ ಎನ್ನುವುದು ಜೈ ದೇವ್ ಯಾಕೆ ಗಮನ ಹರಿಸುತ್ತಿಲ್ಲ ಎಂದು ಯೋಚನೆ ಮಾಡುತ್ತಿರುವಾಗ ಭೂಮಿಕಾ ಗಂಡನ ಬಳಿಗೆ ಬರುತ್ತಾರೆ. "ಯಾಕೆ ನೀವು ಇಷ್ಟೊಂದು ತಲೆ ಕೆಡಿಸಿಕೊಂಡು ಆಲೋಚನೆ ಮಾಡುತ್ತಿದ್ದೀರಾ? ಏನಾದರು ಪ್ರಾಬ್ಲಂ ಆಯಿತಾ?" ಎಂದು ಹೇಳಿದಾಗ ಗೌತಮ್, ಭೂಮಿಕಾ ಬಳಿ "ಜೈ ದೇವ್ ಇವತ್ತು ಕಾರು ಡೆಲಿವರಿ ಮಾಡಿಸಿಕೊಂಡ. ಆಗ ಆತನ ಜೊತೆ ಒಂದು ಹುಡುಗಿ ಇದ್ದಳು. ಆತ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ನನಗೆ ಅನ್ನಿಸುತ್ತಿದೆ" ಎಂದು ಹೇಳಿದಾಗ ಭೂಮಿಕಾಗೆ ಶಾಕ್ ಆಗುತ್ತದೆ.


Click it and Unblock the Notifications











