Amruthadhaare ; ಅಂತೂ ಇಂತೂ ಕಳಚಿಬಿತ್ತು ಶಕುಂತಲಾ ಮುಖವಾಡ, ಆಟ ಈಗ ಶುರು ಎಂದು ಗುಡುಗಿದ ಭೂಮಿಕಾ
'ಅಮೃತಧಾರೆ' ಧಾರಾವಾಹಿಯಲ್ಲಿ ಭಾಗ್ಯಮ್ಮನ ಭೂಮಿಕಾ ತವರು ಮನೆಗೆ ಕರ್ಕೊಂಡು ಹೋಗಿದ್ದಾಳೆ. ಇದೇ ಸಮಯದಲ್ಲಿ ಶಕುಂತಲಾ ಮುಖವಾಡ ಭೂಮಿಕಾ ಮುಂದೆ ಕಳಚಿ ಬಿದ್ದಿದೆ. ತನ್ನ ಮಗುಗೆ ಶಕುಂತಲಾಳಿಂದ ಅಪಾಯ ಇದೆ ಎನ್ನುವ ಸತ್ಯ ಭಾಗ್ಯಮ್ಮಳಿಂದ ಭೂಮಿಕಾಗೆ ಗೊತ್ತಾಗಿದೆ. ಮತ್ತೊಂದು ಕಡೆ ಭೂಮಿಕಾ ಮತ್ತು ಗೌತಮ್ ಮನೆಯಲ್ಲಿ ಇಲ್ಲದಿರುವ ಸಮಯದಲ್ಲಿ ಶಕುಂತಲಾ ತನ್ನ ಮಗ ಜೈದೇವ್‌ಗೆ ತನ್ನ ಸೊಸೆ ದಿಯಾ ಜೊತೆ ಮನೆಗೆ ಬರುವಂತೆ ಹೇಳಿದ್ದಾಳೆ.
ಜೈದೇವ್ ಮತ್ತು ದಿಯಾ ಮನೆಗೆ ಬರುತ್ತಿರುವ ವಿಚಾರವನ್ನು ಪಾರ್ಥ, ಅಪೇಕ್ಷಾ ಮತ್ತು ಮಲ್ಲಿಯ ಎದುರು ಶಕುಂತಲಾ ಹೇಳಿದ್ದಾಳೆ. ಶಕುಂತಲಾ ಮಾತುಗಳಿಗೆ ಮಲ್ಲಿ ಚಕಾರ ಎತ್ತಿದ್ದು, ಮಲ್ಲಿಯ ಮೇಲೆ ಶಕುಂತಲಾ ಕಿಡಿ ಕಾರಿದ್ದಾಳೆ. ನಿನ್ನ ಜೊತೆ ಅವನಿಗೆ ಬದುಕೋಕೆ ಇಷ್ಟ ಇಲ್ಲ ಅದಕ್ಕೆ ಅವನು ಇನ್ನೊಂದು ಮದುವೆಯಾಗಿದ್ದು ಎನ್ನುತ್ತಾಳೆ. ನಿಂದು ಎಷ್ಟಿದೆಯೋ ಅಷ್ಟು ನೋಡ್ಕೊಂಡು ಹೋಗ್ತಾ ಇರು ಎನ್ನುತ್ತಾಳೆ. ಶಕುಂತಲಾ ಮಾತು ಕೇಳಿ ಮಲ್ಲಿ ನೊಂದುಕೊಳ್ಳುತ್ತಾಳೆ.

ದಿಯಾಳನ್ನು ಪರಿಚಯ ಮಾಡಿಸುವ ಜೈದೇವ್
ಜೈದೇವ್ ಮತ್ತು ದಿಯಾ ಮನೆಗೆ ಬಂದಿದ್ದು, ಮನೆ ಕೆಲಸದವರಿಂದ ಆರತಿಯನ್ನು ಮಾಡಿಸಿ.. ಇಬ್ಬರನ್ನು ಶಕುಂತಲಾ ಮನೆಯೊಳಗೆ ಕರೆದುಕೊಂಡಿದ್ದಾಳೆ. ದಿಯಾ ಬಲಗಾಲಿಟ್ಟು ಮನೆಯೊಳಗೆ ಬಂದಿದ್ದು ಜೈದೇವ್ ಮತ್ತು ದಿಯಾ ನಮಗೆ ಆಶೀರ್ವಾದ ಮಾಡಿ ಎಂದು ಕಾಲು ಮುಗಿಯುತ್ತಾರೆ. ಜೈದೇವ್ ಮತ್ತು ದಿಯಾ ಮನೆಗೆ ಬಂದ ಹಿನ್ನೆಲೆ ಮಲ್ಲಿ, ಪಾರ್ಥ ಮತ್ತು ಅಪೇಕ್ಷಾ ಬೇಸರಗೊಂಡಿದ್ದಾರೆ.
ಮಲ್ಲಿಯ ಹೊಟ್ಟೆ ಉರಿಸಬೇಕು ಎಂದೇ ಜೈದೇವ್, ಪಾರ್ಥಗೆ ದಿಯಾಳನ್ನು ಪರಿಚಯಿಸುತ್ತಾನೆ. ನೋಡಿದ್ದೇ ಆದರೆ ಮಾತನಾಡಿಸರಲಿಲ್ಲ ಹೀಗಾಗಿ ಪರಿಚಯ ಮಾಡಿಸ್ತಿದ್ದೀನಿ ಇವರೇ ನಿನ್ನ ಹೊಸ ಅತ್ತಿಗೆ ಎಂದು ಹೇಳುತ್ತಾನೆ.
ಮನೆಯಾಚೆ ಕಳುಹಿಸುವಂತೆ ಹೇಳುವ ಪಾರ್ಥ
ಜೈದೇವ್ ಮನೆಗೆ ಬಂದಿರುವ ಕಾರಣಕ್ಕೆ ಶಕುಂತಲಾ ಬಳಿ ಪಾರ್ಥ ಜಗಳವಾಡುತ್ತಾನೆ. ಮನೆಗೆ ಕರೆಸಿದ್ದಲ್ಲದೇ ಊಟ ಉಪಚಾರ ಎಲ್ಲ ಮಾಡ್ತಿದ್ದೀಯಾ ನನ್ನ ಹೊಟ್ಟೆಗೆ ಬೆಂಕಿ ಹಾಕಿದಂತಾಗುತ್ತಿದೆ ಎಂದು ಹೇಳುತ್ತಾನೆ. ಮಲ್ಲಿ ಅತ್ತಿಗೆ ಮನೆಯಲ್ಲಿರುವಾಗಲೇ ಕರೆಸಿದ್ದೀಯಾ ಅಲ್ಲಾ ಈಗಲೇ ಅವರು ಇಬ್ಬರನ್ನು ಮನೆಯಾಚೆ ಹೋಗುವಂತೆ ಹೇಳು ಎಂದು ಹೇಳುತ್ತಾನೆ. ಇದಕ್ಕೆ ಶಕುಂತಲಾ ಕಿಡಿ ಕಾರಿದ್ದು ನನಗೆ ಆರ್ಡರ್ ಮಾಡ್ತಿದ್ದೀಯಾ ಎನ್ನುತ್ತಾಳೆ. ಗೌತಮ್‌ಗೆ ವಿಚಾರ ಗೊತ್ತಾದರೆ ನಾನು ಸಂಭಾಳಿಸುತ್ತೇನೆ ಎಂದು ಹೇಳುತ್ತಾಳೆ.
ಅತ್ತೆ ಬಳಿ ಆಸ್ತಿ ವಿಚಾರಿಸುವ ದಿಯಾ
ಮನೆಗೆ ಬಂದಿರುವ ದಿಯಾ ಫುಲ್ ಖುಷಿಯಾಗಿದ್ದಾಳೆ. ಈ ಖುಷಿಯ ಮೂಡಿನಲ್ಲಿಯೇ ಶಕುಂತಲಾ ಬಳಿ ನಿಮ್ಮ ಬಳಿ ಎಷ್ಟು ಆಸ್ತಿಗಳಿವೆ.. ಎಷ್ಟು ಒಡವೆಗಳಿವೆ ಎಂದು ಕೇಳಿದ್ದಾಳೆ. ದಿಯಾ ಪ್ರಶ್ನೆಗೆ ನನ್ನದೇನು ಇದೆ ಅದೆಲ್ಲವೂ ನಿಮ್ಮದೇ ಎಂದು ಶಕುಂತಲಾ ಹೇಳಿದ್ದು, ನನ್ನ ಮಗ ಇಷ್ಟ ಪಟ್ಟು ಮದುವೆಯಾಗಿದ್ದು ನಿನ್ನನ್ನ ನೀನು ಸಂತೋಷವಾಗಿರಬೇಕು ಖುಷಿಯಾಗಿರಬೇಕು ಈ ಮನೆಯ ಸೊಸೆಯಂದರಿಗೆ ಏನೇನು ಸಿಕ್ಕಿದೆಯೋ ಅದೆಲ್ಲವೂ ನಿನಗೂ ಸಿಗಬೇಕು ಎಂದು ಶಕುಂತಾಳೆ ಹೇಳುತ್ತಾಳೆ. ಶಕುಂತಲಾಳ ಈ ಮಾತುಗಳನ್ನು ಕೇಳಿ ದಿಯಾ ಇನ್ನು ಖುಷಿಯಾಗುತ್ತಾಳೆ.

ಶುರುವಾಯ್ತು ಅತ್ತೆ-ಸೊಸೆ ವಾರ್
ಇಂದು [ ಆಗಸ್ಟ್ 6 ] ಭೂಮಿಕಾ ಎದುರು ಶಕುಂತಲಾ ಮುಖವಾಡ ಕಳಚಿ ಬಿದ್ದಿದ್ದು, ಸದ್ಯ ಶಕುಂತಲಾ ಮನೆಗೆ ಭೂಮಿಕಾ ಬಂದು ವಿಚಾರಿಸಿದ್ದಾಳೆ. ನೀವು ಅಮೃತದ ಲೇಬಲ್ ಹಾಕಿರೋ ವಿಷ ಎಂದು ಹೇಳಿದ್ದಾಳೆ. ಬಿಡುಗಡೆಯಾದ ಈ ಪ್ರೋಮೋ ಸದ್ಯ ಕುತೂಹಲ ಕೆರಳಿಸಿದ್ದು ಭೂಮಿಕಾ ಹೇಳಿದ ಮಾತುಗಳಿಗೆ ಸ್ವಲ್ಪ ನೋಡ್ಕೊಂಡು ಮಾತನಾಡು ಎಂದು ಶಕುಂತಲಾ ಹೇಳಿದ್ದು, ಭಾಗ್ಯಮ್ಮ ಬಿಡಿಸಿರುವ ಚಿತ್ರವನ್ನು ಶಕುಂತಲಾಗೆ ಭೂಮಿಕಾ ತೋರಿಸಿದ್ಧಾಳೆ.
ಇದಕ್ಕೆ ಶಕುಂತಲಾ ನಿನಗೆ ಏನು ಗೊತ್ತಾಗಿದೆಯೋ ಅದುವೇ ಸತ್ಯ. ನೀನು ಯುದ್ಧ ಘೋಷಣೆ ಮಾಡಿದ್ದೀಯಾ. ನಾನು ಅದನ್ನು ಬೇರೆ ಹಂತಕ್ಕೆ ತೆಗೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದು ಅದಕ್ಕೆ ಈ ಭೂಮಿಕಾ ಅವಕಾಶ ನೀಡಲ್ಲ. ಆಟ ಈಗ ಶುರು ಎಂದು ಚಿಟಿಕೆ ಹೊಡೆದು ಭೂಮಿಕಾ ಗುಡುಗಿದ್ದಾಳೆ. ಮತ್ತೊಂದು ಕಡೆ ಮಲ್ಲಿ ಕೂಡ ಶಕುಂತಲಾ ವಿರುದ್ದ ತಿರುಗಿ ಬೀಳುತ್ತಾಳೆ.


Click it and Unblock the Notifications











