Amruthadhaare ; ಮಲ್ಲಿ ಮತ್ತು ಭೂಮಿಕಾಗೆ ಗೊತ್ತಾದ ಸತ್ಯ ಗೌತಮ್‌ಗೆ ಗೊತ್ತಾಗುತ್ತಾ ? ಮುಂದೇನು ಮಾಡ್ತಾಳೆ ಶಕುಂತಲಾ ?

'ಅಮೃತಧಾರೆ' ಧಾರಾವಾಹಿಯಲ್ಲಿ ಶಕುಂತಲಾ ವಿರುದ್ಧ ಮಲ್ಲಿ ತಿರುಗಿ ಬಿದ್ದಿದ್ದಾಳೆ. ದೊಡ್ಡವರಾಗಿ ತಿಳಿದವರಾಗಿ ನೀವೇ ಹೀಗೆ ಮಾಡಿದರೆ ಹೇಗೆ ಅತ್ತೆ ಎಂದು ಪ್ರಶ್ನೆ ಮಾಡಿರುವ ಮಲ್ಲಿ ಅವಳನ್ನು ಆರತಿ ಎತ್ತಿ ಮನೆಗೆ ಕರೆದರಲ್ಲ ಇದು ಎಷ್ಟು ಸರಿ ಎನ್ನುತ್ತಾಳೆ. ನಿಮ್ಮಂಥ ತಾಯಿ ಈ ಪ್ರಪಂಚದಲ್ಲಿ ಇಲ್ಲ ಎನ್ನುವ ಮಲ್ಲಿ ಗೋಸುಂಬೆಗಿಂತ ಸ್ಪೀಡ್‌ ಆಗಿ ಬಣ್ಣ ಬದಲಿಸುದರಲ್ಲಿ ನೀವು ನಿಸ್ಸೀಮರು ಎನ್ನುವುದು ನನಗೆ ಗೊತ್ತು ಎನ್ನುತ್ತಾಳೆ.

ನಾನು ಆಚೆ ಇದ್ದವಳು.. ಕೆಲಸದವಳು.. ಎಂದೆಲ್ಲಾ ನನಗೆ ಹೇಳಿದ್ರಲ್ಲಾ ನೀವು ಎಲ್ಲಿಂದ ಉದ್ಭವರಾದ್ರೀ ಎಂದು ಕೇಳುತ್ತಾಳೆ. ನೀವು ಹೇಗೆ ಬಂದ್ರೀ.. ಒಂದು ಕಾಲದಲ್ಲಿ ನೀವು ಏನಾಗಿದ್ರಿ ಎನ್ನುವುದು ಎಲ್ಲರಿಗೆ ಗೊತ್ತು ಎನ್ನುತ್ತಾಳೆ. ಇದರಿಂದ ಶಕುಂತಲಾ ಕೆರಳಿ ಅವಾಜ್ ಹಾಕಲು ಮುಂದಾಗುತ್ತಾಳೆ. ಅದಕ್ಕೆ ಮಲ್ಲಿ ತಿರುಗೇಟು ಕೊಟ್ಟಿದ್ದು ಕಂಡೋರ ಗಂಡನ ಬುಟ್ಟಿಗೆ ಹಾಕೊಂಡು ತಾನೇ ನೀವು ಈ ಮನೆಗೆ ಬಂದಿದ್ದು ಎಂದಿದ್ದಾಳೆ. ನಿಮ್ಮ ಸಂಸ್ಕಾರನೇ ನಿಮ್ಮ ಮಗನಿಗೆ ಬಂದಿದೆ ತಾಯಿಗೆ ತಕ್ಕ ಮಗ ಎಂದು ಹೇಳುತ್ತಾಳೆ.

amruthadhaare-serial-august-7-episode-written-update

ಶಕುಂತಲಾಗೆ ಪ್ರಶ್ನೆ ಕೇಳುವ ಗೌತಮ್

ಜೈದೇವ್ ಮತ್ತು ದಿಯಾ ಮನೆಗೆ ಬಂದು ಹೋದ ವಿಚಾರ ಗೌತಮ್‌ಗೆ ಗೊತ್ತಾಗಿದ್ದು, ಶಕುಂತಲಾ ಹತ್ತಿರ ಈ ಕುರಿತು ಗೌತಮ್ ಪ್ರಶ್ನೆ ಮಾಡಿದ್ದಾನೆ. ನಿಮಗೆ ಮನಸಾದರು ಹೇಗೆ ಬಂತು ಎಂದು ಕಿಡಿ ಕಾರಿದ್ದಾನೆ. ಇದಕ್ಕೆ ಭಾವನಾತ್ಮಕವಾದ ಮಾತುಗಳನ್ನಾಡುವ ಶಕುಂತಲಾ ನಾಳೆ ನಿನ್ನ ಮಗ ಬೆಳೆದು ದೊಡ್ಡವನಾಗುತ್ತಾನಲ್ಲ ಆಗ ನಿನಗೆ ಗೊತ್ತಾಗುತ್ತೆ ಎಂದು ಹೇಳುತ್ತಾಳೆ.

ಆಗ ನೀವೇ ಹೋಗಿ ನೋಡ್ಕೊಂಡು ಬಂದಿದ್ದರೆ ನಾನು ಪ್ರಶ್ನೆ ಮಾಡ್ತಿರಲಿಲ್ಲ ಆದರೆ ಮನೆಗೆ ಕರೆಸಿ ಉಪಚಾರ ಮಾಡುವ ಅವಶ್ಯಕತೆ ಏನಿತ್ತು ಎಂದು ಗೌತಮ್ ಕೇಳಿದ್ದು, ಶಕುಂತಲಾ ನನ್ನ ಬುದ್ದಿಗೇನು ಆಗಿತ್ತು ಗೊತ್ತಿಲ್ಲ ಇದೊಂದು ಸಲ ಕ್ಷಮಿಸು ಎಂದು ಹೇಳುತ್ತಾಳೆ. ಜೈದೇವ್‌ನ ನಿನ್ನ ತಮ್ಮ ಅವನನ್ನು ಕೂಡ ಕ್ಷಮಿಸು ಎನ್ನುತ್ತಾಳೆ. ಇದಕ್ಕೆ ಗೌತಮ್ ಕೋಪ ಮಾಡಿಕೊಂಡಿದ್ದು ಅವನು ಈ ಮನೆ ಮರ್ಯಾದೆಗೆ ಮಸಿ ಬಳಿಯುವ ಪ್ರಯತ್ನ ಮಾಡಿದ್ದಾನೆ ನಾನು ಯಾವತ್ತು ಕ್ಷಮಿಸಲ್ಲ ಎಂದು ಹೇಳಿದ್ದಾನೆ.

ಭೂಮಿಕಾಗೆ ನಡೆದ ವಿಚಾರ ಹೇಳುವ ಮಲ್ಲಿ

ಮಲ್ಲಿ ಮನಸಲ್ಲಿ ಕೊರಗುತ್ತಿದ್ದು ಭೂಮಿಕಾಗೆ ಕರೆ ಮಾಡಿದ್ದಾಳೆ. ನನ್ನ ಕಣ್ಮುಂದೆಯೇ ಎಲ್ಲಾ ನಡೆದೆ ಹೋಯ್ತು ಎಂದು ಹೇಳುತ್ತಾ ಕಣ್ಣೀರು ಹಾಕುತ್ತಾಳೆ. ಜೈದೇವ್ ಮತ್ತು ದಿಯಾ ಮನೆಗೆ ಬಂದು ಹೋದ ವಿಚಾರವನ್ನು ಹೇಳುತ್ತಾಳೆ.

ಮಲ್ಲಿಯ ಈ ಮಾತು ಕೇಳಿ ಭೂಮಿಕಾ ಆಶ್ಚರ್ಯಗೊಂಡಿದ್ದು ಗೌತಮ್ ಏನು ಮಾತನಾಡಿಲ್ವಾ ಎಂದು ಕೇಳುತ್ತಾಳೆ. ಇದಕ್ಕೆ ಮಲ್ಲಿ ಮಾತನಾಡಿದಾರೆ ಆದರೆ ಏನು ಮಾತನಾಡಿದಾರೆ ಎಂದು ಗೊತ್ತಿಲ್ಲ ಎಂದಿದ್ದು ಮಲ್ಲಿಯನ್ನು ಸಮಾಧಾನ ಮಾಡುವ ಭೂಮಿಕಾ, ಅತ್ತೆ ಯಾಕೆ ಹೀಗೆ ಮಾಡ್ತಿದ್ದಾರೆ. ಭಾಗ್ಯ ಅತ್ತೆ ಬೇರೆ ಅವರು ಸರಿ ಇಲ್ಲ ಬರೆದಿದ್ದಾರೆ ಏನೂ ಗೊತ್ತಾಗ್ತಿಲ್ಲವಲ್ಲಾ ಎಂದು ಮನದಲ್ಲಿಯೇ ಅಂದುಕೊಳ್ಳುತ್ತಾಳೆ.

amruthadhaare-serial-august-7-episode-written-update


ಭೂಮಿಕಾಗೆ ಗೊತ್ತಾಯ್ತು ಸತ್ಯ

ಇನ್ನೊಂದು ಕಡೆ ಶಕುಂತಲಾ ಅಸಲಿಯತ್ತು ಭೂಮಿಕಾಗೆ ಹೇಳುವ ಪ್ರಯತ್ನವನ್ನು ಭಾಗ್ಯ ಮಾಡುತ್ತಿದ್ದು, ಭೂಮಿಕಾ ಒಂದಿಲ್ಲೊಂದು ದಿನ ನೀವು ಮಾತನಾಡ್ತೀರಾ ಎನ್ನುತ್ತಾಳೆ. ಶಕುಂತಲಾ ಅತ್ತೆಯಿಂದ ನಿಮಗೆ ತೊಂದರೆ ಇದೆಯಾ ಎಂದು ಪ್ರಶ್ನೆ ಮಾಡಿದ್ದಾಳೆ. ಇದಕ್ಕೆ ಭಾಗ್ಯ ಹೌದು ಎಂದಿದ್ದು ನಿನಗೆ, ಗೌತಮ್‌ಗೆ ಮತ್ತು ಮಗುಗೂ ಕೂಡ ತೊಂದರೆ ಇದೆ ಎಂದು ಸಂಜ್ಞೆ ಮಾಡುವ ಮೂಲಕ ಹೇಳುತ್ತಾಳೆ.

ಇದರಿಂದ ಗಾಬರಿಯಾಗುವ ಭೂಮಿಕಾ ಅಂದರೆ ಶಕುಂತಲಾ ಅತ್ತೆ ಮಗು ಮೇಲೆ ತೋರಿಸುತ್ತಿರುವ ಕಾಳಜಿ ಸುಳ್ಳಾ ಎಂದು ಪ್ರಶ್ನೆ ಮಾಡುತ್ತಾಳೆ. ಗೌತಮ್ ಮೇಲಿರುವ ಸುಳ್ಳಾ ಎನ್ನುತ್ತಾಳೆ. ಒಳ್ಳೆಯತನದ ಮುಖವಾಡ ಹಾಕಿಕೊಂಡಿದ್ದಾರಾ ಎನ್ನುತ್ತಾಳೆ. ಭಾಗ್ಯ ಎಲ್ಲದಕ್ಕೂ ಹೂ ಎನ್ನುತ್ತಾಳೆ. ಆಗ ತುಂಬಾ ಮೋಸ ಹೋಗ್ಬಿಟ್ವಿ ಅತ್ತೆ ನಾವು ಎಂದು ಭೂಮಿಕಾ ಹೇಳುತ್ತಾಳೆ. ನೀವು ಯೋಚನೆ ಮಾಡಬೇಡಿ ಅವರಿಂದ ಯಾರಿಗೂ ತೊಂದರೆಯಾಗಲ್ಲ ನಾನು ನೋಡ್ಕೊಳ್ತೀನಿ ಎಂದು ಹೇಳುತ್ತಾಳೆ.

ಭೂಮಿಕಾ ಮನೆಗೆ ಬಂದ ಶಕುಂತಲಾ

ಜೈದೇವ್ ವಿಚಾರದಲ್ಲಿ ಕೋಪ ಮಾಡಿಕೊಂಡಿರುವ ಗೌತಮ್‌ನ ಇಂಪ್ರೆಸ್ ಮಾಡಲು ಶಕುಂತಲಾ, ಭೂಮಿಕಾ ತವರು ಮನೆಗೆ ಬಂದಿದ್ಧಾಳೆ. ಭೂಮಿಕಾ ಮತ್ತು ಮೊಮ್ಮಗನ ಮನೆಗೆ ಕರ್ಕೊಂಡು ಹೋಗೋಣ ಅಂತ ಬಂದಿರುವುದಾಗಿ ಹೇಳುವ ಶಕುಂತಲಾ ಮೊಮ್ಮಗನ ನೋಡುವ ಪ್ರಯತ್ನ ಮಾಡುತ್ತಾಳೆ. ಆಗ ಶಕುಂತಲಾಳನ್ನು ತಡೆಯುವ ಭೂಮಿಕಾ ಅವನು ಈಗಷ್ಟೇ ಮಲಗಿದ್ದಾನೆ. ಆಮೇಲೆ ನೋಡಿದರಾಯ್ತು ಎನ್ನುತ್ತಾಳೆ.

ಸದ್ಯ ಭೂಮಿಕಾಗೆ ಶಕುಂತಲಾ ವಿಚಾರ ಗೊತ್ತಾಗಿದ್ದು, ಮಲ್ಲಿ ಕೂಡ ಶಕುಂತಲಾ ವಿರುದ್ದ ತಿರುಗಿ ಬಿದ್ದಿದ್ದಾಳೆ. ಇಂದು ಶಕುಂತಲಾ ಮುಖವಾಡ ಕಳಚಿ ಬೀಳಲಿದ್ದು ಭೂಮಿಕಾ ಆಟ ಶುರು ಎಂದು ಹೇಳಲಿದ್ದಾಳೆ. ಮಲ್ಲಿ ಮತ್ತು ಭೂಮಿಕಾಗೆ ಗೊತ್ತಾದ ವಿಚಾರ ಗೌತಮ್‌ಗೆ ಯಾವಾಗ ಗೊತ್ತಾಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X