Amruthadhaare ; ಮಗಳು ಸಿಕ್ಕ ಸಂತೋಷದಲ್ಲೇ ಗೌತಮ್​ಗೆ ಆಘಾತ, ಭೂಮಿಕಾ ಪ್ರಾಣಕ್ಕೆ ಕಂಟಕ..?

'ಅಮೃತಧಾರೆ' ಧಾರಾವಾಹಿಯಲ್ಲಿ ಶಕುಂತಲಾ ಅಸಲಿಯತ್ತು ಭೂಮಿಕಾಗೆ ಗೊತ್ತಾಗಿದೆ. ಭೂಮಿಕಾ ಎದುರು ಭಾಗ್ಯಮ್ಮ ಎಲ್ಲವನ್ನು ಸಂಜ್ಞೆಯ ಮೂಲಕವೇ ಹೇಳಿದ್ದು, ತುಂಬಾ ಮೋಸ ಹೋಗ್ಬಿಟ್ವಿ ಅತ್ತೆ ನಾವು ಎಂದು ಭೂಮಿಕಾ ಹೇಳುತ್ತಾಳೆ. ನೀವು ಯೋಚನೆ ಮಾಡಬೇಡಿ ಅವರಿಂದ ಯಾರಿಗೂ ತೊಂದರೆಯಾಗಲ್ಲ ನಾನು ನೋಡ್ಕೊಳ್ತೀನಿ ಎಂದು ಹೇಳುತ್ತಾಳೆ. ಇದೇ ಸಮಯದಲ್ಲಿ ಜೈದೇವ್ ವಿಚಾರದಲ್ಲಿ ಕೋಪ ಮಾಡಿಕೊಂಡಿರುವ ಗೌತಮ್‌ನ ಮನಸ್ಸು ಗೆಲ್ಲಲು ಪ್ಲ್ಯಾನ್ ಮಾಡಿರುವ ಶಕುಂತಲಾ, ಭೂಮಿಕಾ ಮನೆಗೆ ಬಂದಿದ್ದಾಳೆ.

ಭೂಮಿಕಾ ಮತ್ತು ಮೊಮ್ಮಗನ ಮನೆಗೆ ಕರ್ಕೊಂಡು ಹೋಗೋಣ ಅಂತ ಬಂದಿರುವುದಾಗಿ ಹೇಳುವ ಶಕುಂತಲಾ ಮೊಮ್ಮಗನ ನೋಡುವ ಪ್ರಯತ್ನ ಮಾಡುತ್ತಾಳೆ. ಆಗ ಶಕುಂತಲಾಳನ್ನು ತಡೆಯುವ ಭೂಮಿಕಾ ಅವನು ಈಗಷ್ಟೇ ಮಲಗಿದ್ದಾನೆ. ಆಮೇಲೆ ನೋಡಿದರಾಯ್ತು ಎನ್ನುತ್ತಾಳೆ. ಆದರೂ ಸುಮ್ಮನಾಗದ ಶಕುಂತಲಾ ನಿಮ್ಮಮ್ಮ ತಿಂಡಿ ಮಾಡ್ತಿದ್ದಾರೆ ತಿಂಡಿ ರೆಡಿಯಾಗುವಷ್ಟರಲ್ಲಿ ಹೋಗಿ ಮಗುನ ನೋಡ್ಕೊಂಡು ಬರ್ತಿನಿ ಎಂದು ಹೇಳಿ ಹೋಗುತ್ತಾಳೆ.

amruthadhaare-serial-august-8-episode-written-update

ಮುಖಗಳಿಗಿಂತ ಮುಖವಾಡ ಜಾಸ್ತಿ

ಮಗುನ ನೋಡಲು ಹೋದ ಶಕುಂತಲಾಳನ್ನು ಭೂಮಿಕಾ ಬಾಲ್ಕನಿಗೆ ಕರೆದುಕೊಂಡು ಬಂದಿದ್ದು, ನೀವು ನನ್ನ ಮಗುನ ನೋಡುವುದು ಬೇಡ ಎನ್ನುತ್ತಾಳೆ. ಇಷ್ಟು ದಿನ ನೀವು ಗೌತಮ ಅವರ ತಾಯಿ ಎನ್ನುವ ಕಾರಣಕ್ಕೆ ಭಯ ಭಕ್ತಿ ಇತ್ತು ಆದರೆ ಈಗ ಭಕ್ತಿ ಹೋಗಿ ಕೇವಲ ಭಯ ಮಾತ್ರ ಉಳಿದುಕೊಂಡಿದೆ ಎನ್ನುತ್ತಾಳೆ. ಮುಖಗಳಿಗಿಂತ ಮುಖವಾಡ ಜಾಸ್ತಿ ಎನ್ನುತ್ತಾಳೆ.

ದಿವಾನ್ ಮನೆತನಕ್ಕೆ ಹಿಡಿದಿರುವ ಗೆದ್ದಲು

ನೀವೇನು ಎನ್ನುವುದು ನನಗೆ ಗೊತ್ತಾಗಿದೆ ಎನ್ನುವ ಭೂಮಿಕಾ, ದಿವಾನ್ ಮನೆತನಕ್ಕೆ ಹಿಡಿದಿರುವ ಗೆದ್ದಲು ನೀವು ಎಂದು ಹೇಳುತ್ತಾಳೆ. ಭೂಮಿಕಾ ಮಾತುಗಳಿಂದ ಕೆರಳುವ ಶಕುಂತಲಾ ಮೊದ ಮೊದಲು ಸತ್ಯ ಒಪ್ಪಿಕೊಳ್ಳಲು ಹಿಂದೇಟು ಹಾಕಿದರು ಕೂಡ ಆ ನಂತರ ನಿನಗೆ ಎಲ್ಲಾ ವಿಚಾರ ಗೊತ್ತಾದ ಮೇಲೆ ಮುಚ್ಚಿಡೋಕೆ ಏನಿದೆ ಎಂದು ಹೇಳುತ್ತಾಳೆ.


ನಿನ್ನಿಂದ ನೆಮ್ಮದಿ ಭಂಗ

ನಿನಗೇನು ಗೊತ್ತಾಗಿದೆ ಅದೇ ಸತ್ಯ ಎನ್ನುವ ಶಕುಂತಲಾ ನನ್ನ ನೆಮ್ಮದಿ ಹಾಳು ಮಾಡಿದವಳು ನೀನು, ನನ್ನ ಪಾಲಿನ ದೊಡ್ಡ ಶತ್ರು ನೀನು ಎಂದು ಹೇಳುತ್ತಾಳೆ. ಗೌತಮ್ ನಾನು ಹಾಕಿದ ಗೇರೆ ದಾಟಿದವನಲ್ಲ ಅಂತಹವನನ್ನು ನನ್ನಿಂದ ಕಿತ್ಕೊಂಡೆ, ಜೈದೇವ್‌ನ ಮನೆಯಾಚೆ ಕಳುಹಿಸಿದೆ ಎಂದು ಕಿಡಿ ಕಾರುವ ಶಕುಂತಲಾ, ಪಾರ್ಥನ ವಿಚಾರದಲ್ಲಿ ಕೂಡ ನನಗೆ ಸೋಲಾಯ್ತು ಎನ್ನುತ್ತಾಳೆ. ಸೋಲು ಅಂದರೆ ಏನೂ ಅಂತ ಗೊತ್ತಿರದ ನನಗೆ ಸೋಲಿನ ರುಚಿ ತೋರಿಸಿದೆ ಎಂದು ಹೇಳುತ್ತಾಳೆ.

ಮಗು ಹೆತ್ತು ಚಪ್ಪಡಿ ಕಲ್ಲು ಎಳೆದೆ

ಮುಂದುವರೆದು ಹಸಿ ಗಾಯದ ಮೇಲೆ ಆಸಿಡ್ ಸುರಿಯುವಂತೆ ಮಗುನ ಬೇರೆ ಹೆತ್ತ ಬಿಟ್ಟಿದೀಯಾ, ನಮ್ಮ ಮನೆಯಲ್ಲಿ ಮಗು ಅಂತ ಆದರೆ ಅದು ನನ್ನ ಮಕ್ಕಳದ್ದಾಗಿರಬೇಕು.. ನನ್ನ ರಕ್ತದ್ದಾಗಿರಬೇಕು.. ಅವರೇ ನಮ್ಮ ಮನೆಯ ವಾರಸ್ದಾರರಾಗಿರಬೇಕು ಅಂದುಕೊಂಡಿದ್ದೆ, ಆದರೆ ಆಗಿದ್ದೇ ಬೇರೆ. ನಮ್ಮ ತಲೆ ಮೇಲೆ ಚಪ್ಪಡಿ ಕಲ್ಲು ಎಳೆದು ಬಿಟ್ಟೆ ಎಂದು ಶಕುಂತಲಾ ಹೇಳುತ್ತಾಳೆ.

ನೀನು ಯುದ್ಧ ಘೋಷಣೆ ಮಾಡಿದ್ದೀಯಾ. ನಾನು ಅದನ್ನು ಬೇರೆ ಹಂತಕ್ಕೆ ತೆಗೆದುಕೊಂಡು ಹೋಗುತ್ತೇನೆ ಎಂದು ಶಕುಂತಲಾ ಹೇಳಿದ್ದು, ಗೌತಮ್‌ನ ಮತ್ತು ನಿನ್ನ ಜೊತೆಯಲ್ಲಿರಲು ನಾನು ಬಿಡಲ್ಲ ಎಂದಿದ್ದಾಳೆ. ನೀನು ಗೌತಮ್‌ಗೆ ಈ ವರದಿ ಒಪ್ಪಿಸಿದರೂ ಕೂಡ ಅವನು ನಂಬುವುದು ನನ್ನನ್ನೇ ಹೊರತು ನಿನ್ನನ್ನಲ್ಲ ಎಂದು ಹೇಳಿದ್ದಾಳೆ. ಅಲ್ಲಿಂದ ತೆರಳಿದ್ದಾಳೆ.

ಗೌತಮ್‌ಗೆ ಸಿಕ್ಕ ಮಗು, ಭೂಮಿಕಾ ಪ್ರಾಣಕ್ಕೆ ಸಂಚಕಾರ

ಇದೆಲ್ಲದರ ನಡುವೆ ಕಾಡಿನಲ್ಲಿ ಕಾಣೆಯಾಗಿದ್ದ ಹೆಣ್ಣು ಮಗು, ಗೌತಮ್‌ಗೆ ಸಿಕ್ಕಿದೆ. ಬಿಡುಗಡೆಯಾದ ಪ್ರೋಮೋದಲ್ಲಿ ಮಗಳು ಅನಾಥಾಶ್ರಮದಲ್ಲಿರೋದು ಗೊತ್ತಾಗಿದ್ದು, ಆನಂದ್ ಜೊತೆ ಗೌತಮ್ ಹೋಗಿ ಮಗಳನ್ನು ಹುಡುಕಿದ್ದಾನೆ, ಮಗಳನ್ನು ಎತ್ತಿಕೊಂಡು ಭಾವುಕನಾಗಿದ್ದಾನೆ. ಮತ್ತೊಂದು ಕಡೆ ಭೂಮಿಕಾ ಮತ್ತಯ ಮಗುನ ಕರೆದುಕೊಂಡು ಪಾರ್ಥ ಮನೆಯಾಚೆ ತೆರಳಿದ್ದು ಶಕುಂತಲಾ ಜೈದೇವ್‌ಗೆ ಫೋನ್ ಮಾಡಿದ್ದಾಳೆ. ಆದಷ್ಟು ಬೇಗ ಕೆಲಸ ಮುಗಿಸುವಂತೆ ಹೇಳಿದ್ದಾಳೆ. ಸದ್ಯ ಲಾರಿ ಮತ್ತು ಭೂಮಿಕಾ ಪ್ರಯಾಣಿಸುತ್ತಿರುವ ಕಾರು ಅಪಘಾತಕ್ಕೀಡಾದಂತೆ ತೋರಿಸಲಾಗಿದ್ದು ಇಂದಿನ ಎಪಿಸೋಡ್ ಕುತೂಹಲ ಕೆರಳಿಸಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X