Amruthadhaare ; ಶಕುಂತಲಾಗೆ ಕಪಾಳಮೋಕ್ಷ ಮಾಡಿದ ಭೂಮಿಕಾ, ಸೊಸೆಯ ರೌದ್ರಾವತಾರಕ್ಕೆ ಬೆಚ್ಚಿ ಬಿದ್ದ ಅತ್ತೆ

'ಅಮೃತಧಾರೆ' ಧಾರಾವಾಹಿಯಲ್ಲಿ ಶಕುಂತಲಾ ಮುಖವಾಡ ಕಳಚಿ ಬಿದ್ದಿದ್ದು ಭೂಮಿಕಾ ಮನೆಯಿಂದ ನೇರವಾಗಿ ಜೈದೇವ್ ಬಳಿ ಶಕುಂತಲಾ ಬಂದಿದ್ದಾಳೆ. ಭಾಗ್ಯಳಿಂದ ಭೂಮಿಕಾಗೆ ಎಲ್ಲಾ ವಿಚಾರ ಗೊತ್ತಾಗಿದೆ ಅವಳಿಗೆ ಮಾತು ಬರುವ ತನಕ ಮಾತ್ರ ನಮ್ಮ ಬಳಿ ಟೈಮ್ ಇದೆ ಅವಳಿಗೆ ಮಾತು ಬಂತು ಅಂದರೆ ನಮ್ಮ ಕಥೆ ಮುಗಿತು ಅಂತಾನೇ ಅರ್ಥ ಎನ್ನುತ್ತಾಳೆ.

ಶಕುಂತಲಾ ಮಾತು ಕೇಳಿ ಜೈದೇವ್ ಮತ್ತು ದಿಯಾ ಆತಂಕಗೊಂಡಿದ್ದು ಗೌತಮ್‌ ಮೇಲೆ ನನಗೆ ನಂಬಿಕೆ ಇದೆ, ಅವಳು ಓವರ್ ಪೊಸೆಸಿವ್ ಆಗಿದ್ದಾಳೆ. ವಿಚಿತ್ರವಾಗಿ ಆಡ್ತಿದ್ದಾಳೆ ಎಂದು ಅವನೇ ಹೇಳಿದ್ದಾನೆ ನಾನು ಅದನ್ನೇ ಎನ್‌ಕ್ಯಾಶ್ ಮಾಡಿಕೊಂಡು ನನ್ನ ಅಸ್ತ್ರವನ್ನಾಗಿ ಉಪಯೋಗ ಮಾಡ್ತೀನಿ ಎಂದು ಶಕುಂತಲಾ ಹೇಳುತ್ತಾಳೆ. ನಾನಾ ಅವಳಾ ನೋಡೇ ಬಿಡೋಣ ಎನ್ನುತ್ತಾಳೆ.

amruthadhaare-serial-august-9-episode-written-update

ಗೌತಮ್‌ಗೆ ವಿಷಯ ಹೇಳಲು ಮುಂದಾದ ಭೂಮಿಕಾ

ಶಕುಂತಲಾ ಅತ್ತೆಗೆ ಗೌತಮ್‌ ಕಂಡರೆ ಆಗಲ್ಲ, ಮಗ ಅಂತ ಬಾಯಿ ಮಾತಿಗೆ ಹೇಳ್ತಾರೆ ಆದರೆ ತೋರಿಸುವುದು ಮಲತಾಯಿ ಧೋರಣೆ ಎಂದು ಮನದಲ್ಲಿಯೇ ಭೂಮಿಕಾ ಅಂದುಕೊಳ್ಳುತ್ತಾಳೆ. ಇವತ್ತಿನವರೆಗೆ ಮನೆಯಲ್ಲಿ ಏನೆಲ್ಲಾ ಆಗಿದೆ ಅದಕ್ಕೆ ಶಕುಂತಲಾನೇ ಕಾರಣ ಮಾಡಿದ ಪಾಪಕ್ಕೆ ಪ್ರಾಯಶ್ಚಿತ ಆಗಲೇಬೇಕು ಎಂದುಕೊಂಡು ಗೌತಮ್‌ಗೆ ಎಲ್ಲಾ ವಿಷಯ ಹೇಳಬೇಕು ಅಂದುಕೊಂಡು ಭೂಮಿಕಾ ಕರೆ ಮಾಡುತ್ತಾಳೆ.

ಅಮ್ಮನ ಪ್ರೀತಿ ಬಗ್ಗೆ ಗೌತಮ್ ಮಾತು

ಭೂಮಿಕಾ ಕರೆಯನ್ನು ಸ್ವೀಕರಿಸುವ ಗೌತಮ್ ಅಮ್ಮ ಅಲ್ಲಿ ಬಂದಿದ್ದಾರಾ , ಮನೆಗೆ ಬನ್ನಿ ಎಂದು ಕರೆಯುತ್ತಿದ್ದಾರಾ, ಅವರಿಗೆ ತವರು ಮನೆಯಲ್ಲಿರುವುದಕ್ಕೆ ಆಸೆ ಕರಿಬೇಡಿ ಅಂತ ನಾನು ಹೇಳಿದೆ, ಆದರೆ ಅವರು ಮಗುನ ಮಿಸ್ ಮಾಡ್ಕೊಳ್ತಿದ್ದೀನಿ ಹೇಗಾದರೂ ಕನ್ವಿನ್ಸ್ ಮಾಡಿ ಕರ್ಕೊಂಡು ಬರ್ತಿನಿ ಎಂದು ಅಲ್ಲಿಗೆ ಬಂದರು. ನಾನು ಶಕುಂತಲಾ ಹೆತ್ತ ಮಗ ಅಲ್ಲದಿರಬಹುದು ಆದರೆ ನನ್ನ ನೋವು ಸಂಕಟ ಎಲ್ಲ ಅವರಿಗೆ ಅರ್ಥ ಆಗುತ್ತೆ, ನನಗಂತೂ ಶಕುಂತಲಾ ಅಮ್ಮನಿಗೂ ಹೆತ್ತ ಅಮ್ಮನಿಗೂ ವ್ಯತ್ಯಾಸ ಗೊತ್ತಾಗಲ್ಲ, ಇಬ್ಬರ ಪ್ರೀತಿ ಕೂಡ ಒಂದೇ ಎಂದು ಒಂದೇ ಉಸಿರಿನಲ್ಲಿ ಹೇಳುತ್ತಾನೆ.

ಶಾಕ್ ಆದ ಶಕುಂತಲಾ

ಗೌತಮ್ ಆಡಿದ ಈ ಮಾತು ಕೇಳಿ ಹೇಳಬೇಕೆಂದುಕೊಂಡ ವಿಷ ಹೇಳದ ಭೂಮಿಕಾ ಮನೆಗೆ ಬರ್ತಿನಿ ಕರ್ಕೊಂಡು ಹೋಗಿ ಎನ್ನುತ್ತಾಳೆ. ಗೌತಮ್ ಜೊತೆ ಭಾಗ್ಯಮ್ಮ ಮತ್ತು ಭೂಮಿಕಾ ಮನೆಗೆ ಬಂದಿದ್ದು ಶಕುಂತಲಾ ಶಾಕ್ ಆಗಿದ್ದಾಳೆ. ಮಲ್ಲಿ ಮತ್ತು ಅಪೇಕ್ಷಾ ಆರತಿ ಎತ್ತಿ ಮಗು ಮತ್ತು ಭೂಮಿಕಾನ ಮನೆಯೊಳಗೆ ಬರ ಮಾಡಿಕೊಂಡಿದ್ದಾರೆ. ಇದೇನು ಗೌತಮ್ ನಾನು ಹೋಗಿ ಕರೆದಾಗ ಭೂಮಿಕಾ ಬರಲಿಲ್ಲ ನೀನು ಕರೆದ ತಕ್ಷಣ ಬಂದಳು ಎನ್ನುತ್ತಾಳೆ. ಇದಕ್ಕೆ ಇಲ್ಲ ನೀವು ಹೋಗಿ ಬಂದ ಮೇಲೆ ಅವರಿಗೂ ಅನಸಿದೆ ಅದಕ್ಕೆ ಬಂದರು ಎಂದು ಗೌತಮ್ ಹೇಳುತ್ತಾನೆ.


ಶಕುಂತಲಾಗೆ ವಾರ್ನಿಂಗ್ ಕೊಟ್ಟ ಭೂಮಿಕಾ

ಭೂಮಿಕಾ ಮನೆಗೆ ಬಂದಿದ್ದಕ್ಕೆ ತಲೆ ಕೆಡಿಸಿಕೊಂಡು ಶಕುಂತಲಾ ಓಡಾಡುತ್ತಿರುವ ಸಮಯದಲ್ಲಿ ಸರ್‌ಫ್ರೈಸ್ ಎಂದು ಕೊಂಡು ಬರುವ ಭೂಮಿಕಾ ನೀವು ದ್ವೇಷ ಮಾಡಿದರೆ ನಾನು ಅದಕ್ಕೆ ಉತ್ತರ ಕೊಡಬೇಕಾಗುತ್ತೆ. ಪ್ರೀತಿ ಮಾಡಿದರೆ ಪ್ರೀತಿ ಮಾಡಬೇಕಾಗುತ್ತೆ. ಆಕ್ಷನ್‌ಗೆ ತಕ್ಕಂತೆ ರಿಯ್ಯಾಕ್ಷನ್ ಇರುತ್ತೆ ಎಂದು ಹೇಳುತ್ತಾಳೆ. ನೀವು ನಾನ್ ವಾರ್ ಡಿಕ್ಲೇರ್ ಮಾಡಿದೆ ಅಂತ ಹೇಳೀದ್ರಲ್ಲಾ ಅದಕ್ಕೆ ನಾನು ಬಂದೆ ಅಖಾಡದಲ್ಲಿ ನಾನು ಇರಲೇಬೇಕಲ್ವಾ ಎನ್ನುತ್ತಾಳೆ. ಫೈಟ್ ಮಾಡಬೇಕು ಅಂದರೆ ಸ್ಟ್ರಾಂಗ್ ಆದ ಎದುರಾಳಿ ಇರಬೇಕು ಅದಕ್ಕೆ ನಾನು ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟೆ ಎಂದು ಹೇಳುತ್ತಾಳೆ.

amruthadhaare-serial-august-9-episode-written-update

ಕಪಾಳಮೋಕ್ಷ ಮಾಡಿದ ಭೂಮಿಕಾ

ಸದ್ಯ ಇಂದು ಬಿಡುಗಡೆಯಾದ ಪ್ರೋಮೋದಲ್ಲಿ ನಿನ್ನ ಗಂಡ ಗೌತಮ್​ ನಾನು ಸಾಕಿರೋ ನಾಯಿ, ಅವನಿಗೆ ನನ್ನ ವಿಷ್ಯ ನೀನು ಏನೇ ಹೇಳಿದ್ರೂ ನಂಬಲ್ಲ ಎಂದು ಶಕುಂತಲಾ ಹೇಳಿದ್ದಾಳೆ. ಈ ಮಾತುಗಳನ್ನು ಕೇಳಿ ಕೆರಳಿ ಕೆಂಡವಾಗುವ ಭೂಮಿಕಾ ಅತ್ತೆಗೆ ಕಪಾಳಮೋಕ್ಷ ಮಾಡಿದ್ದಾಳೆ. ಭೂಮಿಕಾ ರೌದ್ರಾವತಾರಕ್ಕೆ ಶಕುಂತಲಾ ಬೆಚ್ಚಿ ಬಿದ್ದಿದ್ದು ಈಗ ಹೋಗಿ ನಿಮ್ಮ ಮಗನಿಗೆ ನಿನ್ನ ಹೆಂಡತಿ ನನಗೆ ಹೊಡೆದಳು ಎಂದು ಹೋಗಿ ಹೇಳಿ, ನಿಮ್ಮ ಮಾತನ್ನು ನಂಬ್ತಾರಾ ನೋಡಿ ಎಂದು ಭೂಮಿಕಾ ಗುಡುಗಿದ್ದಾಳೆ. ಮುಂದೆ ಈ ಕಥೆ ಯಾವ ರೋಚಕ ತಿರುವು ಪಡೆದುಕೊಳ್ಳುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X