Amruthadhaare:ಅಣ್ಣನ ಮಾತನ್ನು ತಿರಸ್ಕರಿಸಿ ಅಪ್ಪಿನಾ ಮದುವೆ ಆಗುತ್ತಾನಾ ಪಾರ್ಥ?
ಪಾರ್ಥ ಹಾಗೂ ಅಪ್ಪಿ ಮದುವೆಗೆ ಸದಾಶಿವನೇ ಅಡ್ಡಗಾಲಾಗಿ ನಿಂತಿದ್ದಾನೆ. ಆದರೆ, ಅದು ಏಕೆ ಎಂದು ಎಲ್ಲರಿಗೂ ಮೂಡಿರುವ ಪ್ರಶ್ನೆ. ಭೂಮಿಕಾ ತಂದೆ ಸದಾಶಿವ ಊರಿನಲ್ಲಿರುವ ಜನರ ಮಾತಿಗೆ ಚುಚ್ಚು ಮಾತಿಗೆ ಕಟ್ಟು ಬಿದ್ದು ತನ್ನ ಮಗಳ ಪ್ರೀತಿಯನ್ನೇ ಬಲಿ ಕೊಡುವ ಮಟ್ಟಿಗೆ ಬಂದು ನಿಂತಿದೆ. ಯಾರೇ ಏನೇ ಹೇಳಿದರೂ ಸದಾಶಿವ ಗೌತಮ್ ಮಾತಿಗೆ ಒಪ್ಪಿಗೆ ನೀಡುವ ಹಾಗೆ ಕಾಣುತ್ತಿಲ್ಲ. ಗೌತಮ್‌ಗೆ ಕೂಡ ಏನು ಮಾಡಬೇಕು ಎಂದು ಗೊತ್ತಾಗದೆ ಬಹಳ ನೋವಿನಿಂದ ಅಲ್ಲಿಂದ ಎಲ್ಲರೂ ಹೊರಟು ಹೋಗುತ್ತಾರೆ.
ಹಾಗೆಯೇ ಭೂಮಿಕಾಗೆ ಅಪ್ಪಿ ಮನದ ನೋವು ಅರ್ಥ ಆಗಿ ಅಳು ಒತ್ತರಿಸಿ ಬರುತ್ತದೆ. ತನ್ನ ತಂದೆ ತನ್ನಿಂದ ಮಾತು ತೆಗೆದುಕೊಂಡಿರುವುದು ಯಾಕೆ ಎನ್ನುವುದು ಇದುವರೆಗೆ ಕೂಡ ಭೂಮಿಕಾಗೆ ತಿಳಿದಿಲ್ಲ. ಆ ಬಗ್ಗೆ ತಂದೆಯನ್ನು ಪ್ರಶ್ನೆ ಕೂಡ ಮಾಡಿಲ್ಲ. ಅಪ್ಪ ಮಾಡಿದ್ದು ಸರಿ ಇರುತ್ತದೆ. ಸುಮ್ಮನೆ ತಂದೆಯನ್ನು ಪ್ರಶ್ನೆ ಮಾಡುವುದು ಯಾಕೆ ಎಂದು ಸುಮ್ಮನೆ ಇರುತ್ತಾಳೆ. ಸದಾಶಿವ ನಿರ್ಧಾರ ಕೇಳಿ ಮಂದಾಕಿನಿಗೆ ಆಘಾತ ಆಗುತ್ತದೆ. ಯಾಕೆ ಹೀಗೆ ಹೇಳುತ್ತಿದ್ದೀರಾ ಎಂದು ಕೇಳಲು ಹೋದಾಗ ಕೂಡ ಆಕೆಗೆ ಅವಕಾಶವನ್ನು ನೀಡುವುದಿಲ್ಲ ಸದಾಶಿವ.

ಇನ್ನೂ ಗೌತಮ್ ಹಾಗೂ ಅವರ ಮನೆ ಮಂದಿ ವಾಪಸ್ ಮನೆ ಕಡೆಗೆ ಮುಖ ಮಾಡುತ್ತಾರೆ. ಅಪ್ಪನ ಮಾತು ಕೇಳಿ ಅಪ್ಪಿಗೆ ಬಹಳ ಸಿಟ್ಟು ಬರುತ್ತದೆ. ಅಳು ಕೂಡ ಬರುತ್ತದೆ. "ನಾನು ಪ್ರೀತಿ ಮಾಡಿದ ಹುಡುಗ ನನ್ನ ಕೈ ಬಿಟ್ಟು ಹೋಗಿ ಬಿಡುತ್ತಾನೆ ಎನ್ನುವ ಸಣ್ಣ ಅಳುಕು ಆಕೆಗೆ ಕಾಡುತ್ತದೆ. ಆತನನ್ನು ನಾನು ಬಹಳಷ್ಟು ಪ್ರೀತಿ ಮಾಡಿದ್ದೆ. ಆದರೆ ಅಪ್ಪ ಅದೆಲ್ಲದಕ್ಕೂ ಅಡ್ಡಿ ಆಗುತ್ತಲೇ ಇದ್ದಾರೆ. ಇದುವೇ ನನಗೆ ಬಹಳ ಕಷ್ಟ ಆಗಿದ್ದು, ಇದರಿಂದ ನಾನೇನು ಮಾಡಲು ಆಗುತ್ತಿಲ್ಲ" ಎಂದು ಅಳುತ್ತಿರುತ್ತಾರೆ.
ಸದಾಶಿವ ಮಾತು ಕೇಳಿ ಕುಸಿದ ಅಪ್ಪಿ, ಪಾರ್ಥ
ಇನ್ನೊಂದು ಕಡೆ ಪಾರ್ಥ ಕುಸಿದು ಬಿಟ್ಟಿರುತ್ತಾನೆ. ಗೌತಮ್ ಪಾರ್ಥನಲ್ಲಿಗೆ ಬಂದು ಸಮಾಧಾನ ಮಾಡುತ್ತಾನೆ. ಗೌತಮ್‌ಗೆ ಇದೂವರೆಗೆ ಕೂಡ ತಿಳಿದಿರುವುದಿಲ್ಲ. ಅಪ್ಪಿ ಹಾಗೂ ಪಾರ್ಥ ಒಬ್ಬರನ್ನೊಬ್ಬರು ಪ್ರೀತಿ ಮಾಡುತ್ತಾರೆ ಎನ್ನುವ ವಿಚಾರ. ಆದರೆ, ಪಾರ್ಥಗೆ ಮದುವೆ ವಿಚಾರದಲ್ಲಿ ಬಹಳ ನೋವಾಗಿದೆ ಎನ್ನುವುದು ಮಾತ್ರ ಗೌತಮ್‌ಗೆ ಅರ್ಥ ಆಗುತ್ತದೆ. ಆದರೆ, ಮೆತ್ತಗೆ ಪಾರ್ಥನಲ್ಲಿಗೆ ಬಂದ ಗೌತಮ್ ಆತನಿಗೆ ಸಮಾಧಾನ ಹೇಳುತ್ತಾನೆ. ಹಾಗೆಯೇ ಇನ್ನೂ ಮೇಲೆ ಆ ರೀತಿ ಆಗುವುದಿಲ್ಲ ಎಂದು ಹೇಳುತ್ತಾನೆ.

ಭೂಮಿಕಾ ಬಳಿ ನೋವನ್ನು ತೋಡಿಕೊಂಡ ಪಾರ್ಥ
ಇನ್ನೂ ಯಾರು ಇಲ್ಲದೆ ಇರುವ ವೇಳೆ ಗೌತಮ್, ಭೂಮಿಕಾ ಬಳಿಗೆ ಬಂದು ಜೋರಾಗಿ ಅತ್ತು ಬಿಡುತ್ತಾನೆ. "ನನಗೆ ಅಪ್ಪಿಯನ್ನು ಬಿಟ್ಟು ಬದುಕಲು ಆಗುವುದಿಲ್ಲ. ಆಕೆಯನ್ನು ಬಿಟ್ಟು ನಾನು ಹೇಗೆ ಜೀವಿಸಲಿ" ಎಂದು ಬಹಳ ಬೇಸರದಿಂದ ಭೂಮಿಕಾ ಬಳಿ ಹೇಳಿದಾಗ ಭೂಮಿಕಾಗೆ ಅಳುನೇ ಬರುತ್ತದೆ. ಭೂಮಿಕಾ ಪಾರ್ಥಗೆ ಬುದ್ಧಿ ಮಾತನ್ನು ಹೇಳುತ್ತಾಳೆ ಹಾಗೆ "ಅಪ್ಪಿಯನ್ನು ಬಿಟ್ಟು ನನಗೆ ಇರಲು ಸಾಧ್ಯವಿಲ್ಲ ಎನ್ನುವ ಮಾತನ್ನು ನೀನು ವಾಪಸ್ ತೆಗೆದುಕೋ, ಆ ರೀತಿ ಮಾತುಗಳನ್ನು ನೀನು ಹೇಳಬೇಡ. ಆದರೆ, ಮರ್ಯಾದೆ ಹೋಗುವಂತಹ ಕೆಲಸವನ್ನು ಯಾವತ್ತೂ ಮಾಡಬೇಡ. ಯಾವುದೇ ಕೆಲಸ ಮಾಡಬೇಕಾದರೂ ಯೋಚನೆ ಮಾಡಿ ಕೆಲಸ ಮಾಡು" ಎಂದು ಭೂಮಿಕಾ ಬುದ್ಧಿ ಮಾತು ಹೇಳಿ ಅಲ್ಲಿಂದ ಹೊರಟು ಹೋಗುತ್ತಾಳೆ.
ಅಣ್ಣನ ಮಾತಿಗೆ ಧೈರ್ಯಗೊಂಡ ಅಪ್ಪಿ
ಇನ್ನು ಅಪ್ಪಿ ಬಳಿಗೆ ಬಂದ ಜೀವ ಆಕೆಗೆ ಸಮಾಧಾನ ಮಾಡುತ್ತಾನೆ. "ನೀನು ಅಳಬೇಡ ಅಪ್ಪಿ. ನೀನು ಈ ವಿಚಾರವನ್ನು ನನ್ನ ಬಳಿ ಹೇಳಬಹುದಾಗಿತ್ತು ಅಲ್ವಾ? ಯಾಕೆ ನೀನು ಏನು ಹೇಳಲಿಲ್ಲ" ಎಂದಾಗ ಅಪ್ಪಿ ಹೇಳುತ್ತಾಳೆ. "ಅಣ್ಣ ನೀನಾದರೂ ನನಗೆ ಸಹಾಯವನ್ನು ಮಾಡಿ ಬಿಡು . ನಾವಿಬ್ಬರೂ ಎಲ್ಲಾದರೂ ಹೋಗಿ ಮದುವೆ ಆಗುತ್ತೇವೆ" ಎಂದು ಕೇಳಿಕೊಂಡಾಗ ಜೀವ ಆಯಿತು ಎಂದು ಹೇಳುತ್ತಾನೆ. ಹಾಗೆಯೇ ಪಾರ್ಥಗೆ ಕರೆ ಮಾಡಿ ಪಾರ್ಥ "ನೀನು ಹಾಗೂ ಅಪ್ಪಿ ಎಲ್ಲಾದರೂ ಹೋಗಿ ಮದುವೆ ಆಗಿ ನಾನು ಸಹಾಯ ಮಾಡುತ್ತೇನೆ" ಎಂದು ಹೇಳುತ್ತಾರೆ.


Click it and Unblock the Notifications











