Amruthadhaare ; ಗೆಳೆಯನನ್ನು ಮನೆಗೆ ಕರೆ ತಂದ ಗೌತಮ್ : ಸತ್ಯ ಕೇಳಿ ಕಂಗಾಲಾಗಿರುವ ದಿಯಾ

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಆನಂದ್ ಗೆ ಆಕ್ಸಿಡೆಂಟ್ ಆಗಿದೆ. ಅಪರ್ಣಾ ಗಂಡನ ಸ್ಥಿತಿಯನ್ನು ಕಂಡು ಕಂಗಾಲಾಗಿದ್ದಾಳೆ. ಬಿಕ್ಕಿ ಬಿಕ್ಕಿ ಅಳುತ್ತಲೇ ಇದ್ದಾಳೆ.ಗೌತಮ್ ಮತ್ತು ಭೂಮಿಕಾ ಅಪರ್ಣಾಳನ್ನು ಸಮಾಧಾನ ಮಾಡಲು ತಮ್ಮ ಕೈಲಾದಷ್ಟು ಪ್ರಯತ್ನ ಪಡುತ್ತಿದ್ದಾಳೆ. ಆದರೆ, ಅಪರ್ಣಾ ಯಾರ ಮಾತಿಗೂ ಬಗ್ಗದೇ ಕಣ್ಣೀರು ಹಾಕುತ್ತಾ ಅಳುತ್ತಲೇ ಇದ್ದಾಳೆ. ಗೌತಮ್ ಅಂತೂ ಆನಂದ್ ನನ್ನು ಆಸ್ಪತ್ರೆಗೆ ಸೇರಿಸಿದಾಗಿನಿಂದಲೂ ಆಸ್ಪತ್ರೆಯನ್ನು ಬಿಟ್ಟು ಕದಲಲಿಲ್ಲ. ಆನಂದ್ ಹುಷಾರಾಗುವವರೆಗೂ ಇಲ್ಲೇ ಇರುವುದಾಗಿ ಹೇಳಿದ್ದಾನೆ.

ಅಪೇಕ್ಷಾ ಬಳಿ ಚಾಡಿ ಹೇಳಿದ ಶಕುಂತಲಾ

ಭೂಮಿಕಾ ಕೂಡ ಅಪರ್ಣಾ ಜೊತೆಗೆ ಇದ್ದಾಳೆ. ಒಂದು ಕ್ಷಣವೂ ಅವಳನ್ನು ಬಿಟ್ಟಿಲ್ಲ. ಗೌತಮ್ ಮನೆಯಲ್ಲಿ ಎಲ್ಲರೂ ಕಹಿ ಸುದ್ದಿ ಕೇಳಿ ದುಃಖದಲ್ಲಿದ್ದರೆ, ಜೈದೇವ್, ಶಕುಂತಲಾ ಮಾತ್ರ ಖುಷಿಯಾಗಿದ್ದಾರೆ. ಆನಂದ್ ಗೆ ಹೀಗೆ ಆಗಬೇಕಿತ್ತು. ಸದ್ಯ ಈ ಮನೆಗೆ ಅವನ ಕಾಟ ತಪ್ಪಿತಲ್ಲ ಎಂದು ಮಾತನಾಡಿಕೊಂಡಿದ್ದಾರೆ. ಇನ್ನು ಶಕುಂತಲಾ ಬೇಕಂತಲೇ ಅಪೇಕ್ಷಾ ಬಳಿ ಗೌತಮ್ ಮತ್ತು ಭೂಮಿಕಾ ಬಗ್ಗೆ ಚಾಡಿ ಹೇಳಿದ್ದಾಳೆ. ಇಬ್ಬರೂ ಆನಂದ್ ಬಗ್ಗೆ ಕಾಳಜಿ ತೋರಿಸುತ್ತಿರುವುದು ತಪ್ಪು ಎಂಬ ರೀತಿಯಲ್ಲಿ ಮಾತನಾಡಿದ್ದಾಳೆ. ಆನಂದ್ ಒಳ್ಳೆಯವನಂತೆ ಇದ್ದು, ಈ ಮನೆಗೆ ಮೋಸ ಮಾಡುತ್ತಿದ್ದಾನೆ. ಇದು ಗೌತಮ್ ಗೆ ಗೊತ್ತಾಗುತ್ತಿಲ್ಲ ಎಂದು ಹೇಳಿದ್ದಾಳೆ.

Amruthadhaare Serial 25 August episode written update

ಆನಂದ್‌ನನ್ನು ಮನೆಗೆ ಕರೆತಂದ ಗೌತಮ್

ಇನ್ನು ವೈದ್ಯರು ಆನಂದ್ ತಲೆಗೆ ಏಟು ಬಿದ್ದಿದೆ. ಬ್ರೈನ್ ನಲ್ಲಿ ಬ್ಲಡ್ ಕ್ಲಾಟ್ ಆಗಿದೆ. ಹಾಗಾಗಿ ಆತ ಸದ್ಯ ಕೋಮಾ ಸ್ಟೇಜ್ ನಲ್ಲಿ ಇದ್ದಾನೆ. ನಾವು ಈಗ ಆತನಿಗೆ ಕೊಡಬೇಕಿರುವ ಎಲ್ಲಾ ರೀತಿಯ ಟ್ರೀಟ್ ಮೆಂಟ್ ಅನ್ನು ಕೂಡ ನೀಡಿದ್ದಾಗಿದೆ. ಆದರೆ, ಸದ್ಯ ಯಾವುದೂ ಪ್ರಯೋಜನವಾಗಿಲ್ಲ. ಬದಲಿಗೆ ಆನಂದ್ ನನ್ನು ಮನೆಗೆ ಕರೆದುಕೊಂಡು ಹೋಗಿ, ಅಲ್ಲಿನ ವಾತಾವರಣಕ್ಕೆ ಆನಂದ್ ಗೆ ಬೇಗನೇ ಪ್ರಜ್ಞೆ ಬರಬಹುದು ಎಂದು ಹೇಳುತ್ತಾರೆ. ಗೌತಮ್ ಗೂ ಕೂಡ ಅದೇ ಸತ್ಯ ಅನಿಸುತ್ತದೆ. ಹೀಗಾಗಿ ಗೌತಮ್ ತಮ್ಮ ಮನೆಗೆ ಆನಂದ್ ಅನ್ನು ಕರೆದುಕೊಂಡು ಹೋಗುತ್ತಾನೆ. ಇದು ಶಕುಂತಲಾಳಿಗೆ ಇಷ್ಟವಾಗುವುದಿಲ್ಲ. ಗೌತಮ್ ಗೆ ಪ್ರಶ್ನೆ ಮಾಡುತ್ತಾಳೆ. ಆದರೆ, ಗೌತಮ್ ಆನಂದ್ ಇಲ್ಲೇ ಇರುತ್ತಾನೆ. ಅವನ ಜೊತೆಗೆ ಎಲ್ಲರೂ ಲವಲವಿಕೆಯಿಂದ ಮಾತನಾಡಿ ಎಂದು ಹೇಳುತ್ತಾನೆ.


ದಿಯಾ ಬಳಿ ಸತ್ಯ ಹೇಳಿದ ಜೈದೇವ್

ಇತ್ತ ಜೈದೇವ್ ಫುಲ್ ಹ್ಯಾಪಿ ಆಗಿದ್ದಾನೆ. ದಿಯಾ ಜೊತೆಗೆ ಡ್ರಿಂಕ್ಸ್ ಪಾರ್ಟಿ ಮಾಡಿದ್ದಾನೆ. ಕುಡಿದ ಮತ್ತಿನಲ್ಲಿ ದಿಯಾ ಬಳಿ ಜೈದೇವ್ ಸತ್ಯ ಹೇಳಿದ್ದಾನೆ. ಆನಂದ್ ಅನನು ತಾನೇ ಕೊಲೆ ಮಾಡಿಸಲು ಮುಂದಾಗಿದ್ದು, ಈಗ ಆನಂದ್ ಗೆ ಆಕ್ಸಿಡೆಂಟ್ ಆಗಿರುವುದಕ್ಕೆ ತಾನೇ ಕಾರಣ ಸತ್ಯ ಹೇಳುತ್ತಾನೆ. ಕುಡಿದ ಮತ್ತಿನಲ್ಲಿ ಜೈದೇವ್ ದಿಯಾ ಬಳಿ ಇದ್ದದ್ದನ್ನು ಇದ್ದ ಹಾಗೆ ಹೇಳಿದ್ದಾನೆ. ಈ ಸತ್ಯ ಲಕ್ಷ್ಮೀಕಾಂತನಿಗೆ ಮಾತ್ರ ಗೊತ್ತಿತ್ತು. ಆದರೆ, ಈಗ ದಿಯಾಗೂ ಸತ್ಯ ಗೊತ್ತಾಗಿದೆ.

Amruthadhaare Serial 25 August episode written update

ಜೈದೇವ್ ಕಂಡರೆ ಹೆದರುತ್ತಿರುವ ದಿಯಾ

ಇನ್ನು ಕುಡಿದ ಮತ್ತಿನಲ್ಲಿ ಮಾತನಾಡಿದ್ದನ್ನು ಜೈದೇವ್ ಮರೆತಿದ್ದಾನೆ. ದಿಯಾ ಜೊತೆಗೆ ಫೋನ್ ನಲ್ಲಿ ಸಲುಗೆಯಿಂದ ಮಾತನಾಡಿದ್ದಾನೆ. ಆದರೆ, ದಿಯಾ ಜೈದೇವ್ ನನ್ನು ಅವಾಯ್ಡ್ ಮಾಡುತ್ತಿದ್ದಾಳೆ. ಯಾಕೆಂದರೆ, ಜೈದೇವ್ ಕೆಟ್ಟವನು, ಎಂಬುದು ಗೊತ್ತಾಗಿದ್ದು, ಅವನ ಜೊತೆಗಿನ ಈ ಸಂಬಂಧವನ್ನು ಮುಂದುವರೆಸಬೇಕಾ ಎಂದು ಅನುಮಾನ ಹುಟ್ಟಿದೆ. ದಿಯಾ ತನ್ನ ಸಂಬಂಧದ ಬಗ್ಗೆ ಈಗ ಯೋಚಿಸಲು ಮುಂದಾಗಿದ್ದಾಳೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X