Amruthadhaare ; ಜೈದೇವ್-ದಿಯಾ ಹಬ್ಬದ ಸಂಭ್ರಮಕ್ಕೆ ಕೊಳ್ಳಿ ಇಟ್ಟ ಮಲ್ಲಿ-ಭೂಮಿಕಾ..!

''ಅಮೃತಧಾರೆ'' ಧಾರಾವಾಹಿಯಲ್ಲಿ ಶಕುಂತಲಾ ಕಡೆಯಿಂದ ಭೂಮಿಕಾಗೆ ಅಧಿಕಾರ ಹಸ್ತಾಂತರವಾಗಿದೆ. ಶಕುಂತಲಾ ಎಷ್ಟೇ ಹೇಳಿದರೂ ಕೂಡ ಒಪ್ಪದ ಅಜ್ಜಿ ಸುಮ್ಮನೆ ನಾನು ಹೇಳಿದಷ್ಟು ಮಾಡು, ಕೀ ತಗೊಂಡು ಬಂದು ಅವಳಿಗೆ ಕೊಡು ಎಂದು ಹೇಳಿದ್ದಾಳೆ. ಭೂಮಿಕಾ ಬೇಡ ಎಂದರೂ ಕೂಡ ಸೊಪ್ಪು ಹಾಕದ ಅಜ್ಜಿ ಶಕುಂತಲಾ ಕಡೆಯಿಂದ ಭೂಮಿಕಾಗೆ ಕೀ ಕೊಡಿಸಿದ್ದಾಳೆ.

ಸದ್ಯ ಮನೆಯಲ್ಲಿ ಗಣೇಶನ ಪೂಜೆ ನಡೆಯುತ್ತಿದ್ದು ಮೋದಕ ಕಳ್ಳ ಡುಮ್ಮ ಸಾರನ ನೆನೆದು ಭೂಮಿಕಾ ಒಳಗೊಳಗೆ ನಕ್ಕಿದ್ದಾಳೆ. ಇದನ್ನು ಗಮನಿಸುವ ಮನೆಯ ಸದಸ್ಯರು ಭೂಮಿಕಾ ಕಾಲೆಳೆದಿದ್ದಾರೆ. ಆ ನಂತರ ಗೌತಮ್‌ಗೆ ಭೂಮಿಕಾ ಫೋನ್ ಮಾಡಿದ್ದು ಕೆಲ ಹೊತ್ತು ಇಬ್ಬರು ಮಾತನಾಡುತ್ತಾರೆ. ಒಬ್ಬರನ್ನೊಬ್ಬರು ಹೊಗಳಿಕೊಂಡು.. ಕಾಲೆಳೆದುಕೊಂಡು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.

amruthadhaare-serial-august29-episode-written-update

ಸುಧಾ ಮತ್ತು ಮಲ್ಲಿಗೆ ಬಾಗಿನ ಕೊಡುವ ಭೂಮಿಕಾ

ಸುಧಾಗೆ ಆ ನಂತರ ಭೂಮಿಕಾ ಬಾಗಿನ ನೀಡಿದ್ದು ಸುಧಾ ಭಾವುಕಳಾಗುತ್ತಾಳೆ. ಇದೆಲ್ಲ ನನಗೆ ಹೊಸದು ಅತ್ತಿಗೆ ನಾನು ಇದೆಲ್ಲ ಇಲ್ಲಿಯವರೆಗೆ ನೋಡಿಯೇ ಇರಲಿಲ್ಲ ಎನ್ನುತ್ತಾಳೆ. ಸುಧಾಳನ್ನು ಸಮಾಧಾನ ಮಾಡುವ ಭೂಮಿಕಾ ಆ ನಂತರ ಮಲ್ಲಿಗೆ ಬಾಗಿನ ನೀಡುತ್ತಾಳೆ. ಮಲ್ಲಿ ಕೂಡ ಬೇಸರ ಮಾಡಿಕೊಂಡಿದ್ದು ಇದನ್ನು ಗಮನಿಸುವ ಭೂಮಿಕಾ ಆ ನಂತರ ಮಲ್ಲಿಯನ್ನು ತನ್ನ ರೂಮ್‌ನಲ್ಲಿ ಕೂರಿಸಿಕೊಂಡು ಬುದ್ದಿ ಮಾತು ಹೇಳುತ್ತಾಳೆ.

ಮಲ್ಲಿಗೆ ಭೂಮಿಕಾ ಬುದ್ದಿಮಾತು

ಈ ರೀತಿ ಬೇಜಾರು ಮಾಡಿಕೊಂಡು ಕುಂತರೆ ಕೊನೆಯವರೆಗೆ ಬೇಜಾರು ಮಾಡಿಕೊಂಡೇ ಕೂರಬೇಕಾಗುತ್ತೆ ಎಂದು ಹೇಳೂವ ಭೂಮಿಕಾ, ಆಗಿರುವುದೆಲ್ಲವನ್ನು ಮರೆತು ಮುಂದೇನು ಎಂದು ಯೋಚನೆ ಮಾಡು ಎಂದು ಹೇಳುತ್ತಾಳೆ. ಜೀವನ ನಿಂತಿರುವುದು ನಿನ್ನೆಯ ಮೇಲಲ್ಲ ಇವತ್ತಿನ ಮೇಲೆ ನಾಳೆಯ ಮೇಲೆ ಎಂದು ಹೇಳುತ್ತಾಳೆ. ಇನ್ನೊಂದು ಮದುವೆ ಬಗ್ಗೆ ಹೇಳೀದ್ದೇ ಅಲ್ಲ ಅದರ ಬಗ್ಗೆ ಯಾವ ನಿರ್ಧಾರ ತೆಗೆದುಕೊಂಡೆ ಎಂದು ಕೇಳುತ್ತಾಳೆ. ನನಗೆ ಇನ್ನೊಂದು ಮದುವೆಯಾಗುವ ಮನಸ್ಥಿತಿ ಇಲ್ಲ ಎಂದು ಮಲ್ಲಿ ಹೇಳಿದ್ದು ಯಾವ ಸಮಸ್ಯೆ ಕೂಡ ನಮ್ಮ ಜೀವನಕ್ಕಿಂತ ದೊಡ್ಡದಲ್ಲ ಎಂದು ಭೂಮಿಕಾ ಹೇಳುತ್ತಾಳೆ.

ಶಕುಂತಲಾ ಹೇಳಿದ ಮಾತು ಹೇಳುವ ಮಲ್ಲಿ

ಇದೇ ಸಮಯದಲ್ಲಿ ನಾನು ನಿಮ್ಮ ಹತ್ರ ಹೇಳಬಾರದು ಎಂದುಕೊಂಡಿದ್ದೇ, ಆದರೆ ನಿನ್ನೆ ಅತ್ತೆ ರೂಮ್‌ಗೆ ನಾನು ಹೋಗಬೇಕಾದರೆ ಅತ್ತೆ ಇವರ ಹತ್ರ ಈ ಮನೆಯಲ್ಲಿ ಮಾಡೋ ಹಬ್ಬ ಮುಖ್ಯ ಅಲ್ಲ ಆ ಮನೆಯಲ್ಲಿ ಹಬ್ಬ ಮಾಡೋದು ಮುಖ್ಯ ಎಂದು ಹೇಳ್ತಿದ್ದರು, ಅವರಿಗೆ ಅವಳೇ ಸೊಸೆಯಂತೆ ಎಂದು ಹೇಳುತ್ತಾಳೆ. ನಾನು ಅಲ್ಲೇ ಬರ್ತಿನಿ ಅಂತ ಹೇಳ್ತಿದ್ದರು ಅದೆಲ್ಲ ಕೇಳಿ ನನಗೆ ಬೇಜಾರಾಯ್ತು ಎಂದು ಹೇಳುತ್ತಾಳೆ.

ಮುಳ್ಳನ್ನ ಮುಳ್ಳಿಂದ ತೆಗೆಯಬೇಕೆಂದ ಭೂಮಿಕಾ

ನೀನ್ಯಾಕೇ ಬೇಜಾರು ಮಾಡಿಕೊಳ್ಳಬೇಕೆಂದು ಪ್ರಶ್ನೆ ಮಾಡುವ ಭೂಮಿಕಾ, ಮುಳ್ಳನ್ನ ಮುಳ್ಳಿಂದನೇ ತೆಗೆಯಬೇಕು, ನಮಗ್ಯಾರು ನೋವು ಕೊಡ್ತಾರೆ, ನಮಗ್ಯಾರು ಉರಿಸುತ್ತಾರೆ ಅಲ್ವಾ ನಾವು ಅವರನ್ನು ಉರಿಸಬೇಕು ಎಂದು ಹೇಳುತ್ತಾಳೆ. ನಾನು ಹೇಳಿದಂತೆ ಮಾಡು ಎಂದು ಪ್ಲಾನ್ ಹೇಳುತ್ತಾಳೆ. ಇದಕ್ಕೆ ಮಲ್ಲಿ ಸರಿ ಅಕ್ಕೋರೆ ಮಾಡ್ತೀನಿ ಅವರಿಗೆ ಎಂದು ಹೇಳುತ್ತಾಳೆ.

amruthadhaare-serial-august29-episode-written-update

ಶಕುಂತಲಾ ಬಳಿ ಪರ್ಮಿಷನ್ ಕೇಳುವ ಮಲ್ಲಿ

ಶಕುಂತಲಾ ರೂಮ್‌ಗೆ ಬರುವ ಮಲ್ಲಿ ನಾನು ಚೂರು ಆಚೆ ಹೋಗಿ ಬರ್ತಿನಿ ಎಂದು ಹೇಳುತ್ತಾಳೆ. ಎಲ್ಲಿಗೆ ಯಾಕೆ ಎಂದು ಶಕುಂತಲಾ ಕೇಳಿದಾಗ ಒಬ್ಬರಿಗೆ ಬಾಗಿನ ಕೊಡಬೇಕಿತ್ತು ಎಂದು ಮಲ್ಲಿ ಹೇಳುತ್ತಾಳೆ. ಇಷ್ಟು ದಿನ ಹಿಂದೆ ಮುಂದೆ ಯಾರು ಇರಲಿಲ್ಲ ಈಗ ಯಾರಿದಾರೆ ಬಾಗಿನ ಕೋಡೊಕೆ ಎಂದು ಕೇಳುತ್ತಾಳೆ. ಆಗ ಹೀಗೆ ಒಬ್ಬರು ಇದ್ದಾರೆ ಅವರು ಯಾರು ಅಂತ ನಿಮಗೂ ಗೊತ್ತು ಅಲ್ಲಿ ಹೋದ ನಂತರ ನಿಮಗೂ ಫೋನ್ ಮಾಡ್ತೀನಿ ಎಂದು ಮಲ್ಲಿ ಹೇಳಿದ್ದು ಇದೇ ಸಮಯದಲ್ಲಿ ಅಜ್ಜಿ ಬಂದು ಶಕುಂತಲಾಗೆ ಗದರಿದ್ದು ಏನದು ಆ ಹುಡುಗಿಯನ್ನು ನಿಲ್ಲಿಸಿಕೊಂಡು ಪೊಲೀಸನವರು ವಿಚಾರಣೆ ಮಾಡಿದಂತೆ ಮಾಡ್ತಿದ್ದೀಯಲ್ಲಾ ಎಂದು ಹೇಳುತ್ತಾಳೆ. ಇದನ್ನೇ ನಿನ್ನ ಮಗನ ವಿಚಾರದಲ್ಲಿ ಮಾಡಿದ್ದರೆ ಎಷ್ಟೋ ಚೆನ್ನಾಗಿರುವುದು ಎಂದು ಹೇಳುತ್ತಾಳೆ.

ಜೈದೇವ್-ದಿಯಾ ಹಬ್ಬದ ಸಂಭ್ರಮಕ್ಕೆ ಕೊಳ್ಳಿ ಇಟ್ಟ ಮಲ್ಲಿ

ಇಂದು (ಆಗಸ್ಟ್ 30) ಬಿಡುಗಡೆಯಾದ ಪ್ರೋಮೋದಲ್ಲಿ ಜೈದೇವ್ ಮತ್ತು ದಿಯಾ ಮನೆಗೆ ಬಂದಿರುವ ಮಲ್ಲಿ, ದಿಯಾಳನ್ನು ಉರಿಸಿದ್ದಾಳೆ. ಹೆಂಡತಿ ಎನ್ನುವ ಸ್ಥಾನ ನಿನಗೆ ಯಾವತ್ತು ಸಿಗಲ್ಲ ಎಂದೆಲ್ಲಾ ಮಾತನಾಡಿದ್ದಾಳೆ. ಮಲ್ಲಿಯ ಮಾತು ಕೇಳಿ ದಿಯಾ ಕೋಪ ಮಾಡಿಕೊಂಡಿದ್ದು ಮುಂದೇನಾಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X