Amruthadhaare ; ಮತ್ತದೇ ತಂತ್ರ, ಕುತಂತ್ರ- ಪ್ರೇಕ್ಷಕರ ಪಿತ್ತ ನೆತ್ತಿಗೇರಿಸಿದ ನಿರ್ದೇಶಕರು..!
''ಅಮೃತಧಾರೆ'' ಧಾರಾವಾಹಿಯಲ್ಲಿ ಮಲ್ಲಿಗೆ ಭೂಮಿಕಾ ಉಪದೇಶ ಮಾಡಿದ್ದಾಳೆ. ಮುಳ್ಳನ್ನು ಮುಳ್ಳಿಂದಲೇ ತೆಗೆಯಬೇಕು ಎಂದು ಹೇಳಿದ್ದಾಳೆ. ಈ ಹಿನ್ನೆಲೆ.. ರೊಚ್ಚಿಗೆದ್ದಿರುವ ಮಲ್ಲಿ ಸೀದಾ ಶಕುಂತಲಾ ಹತ್ರ ಹೋಗಿ ಬಹುಮುಖ್ಯವಾದ ವ್ಯಕ್ತಿಗೆ ಬಾಗಿನ ಕೊಡಬೇಕೆಂದು ಹೇಳಿ ಜೈದೇವ್ ಮತ್ತು ದಿಯಾ ಮನೆಗೆ ಬಂದಿದ್ದಾಳೆ. ಮಲ್ಲಿಯನ್ನು ಮನೆಯ ಬಾಗಿಲಿನ ಬಳಿ ಕಂಡು ಜೈದೇವ್ ಮತ್ತು ದಿಯಾ ಶಾಕ್ ಆಗಿದ್ದು...
ಹಬ್ಬದ ದಿನ ಮನೆ ಬಾಗಿಲಿಗೆ ಬಂದ ಗೌರಿಯನ್ನು ಒಳಗಡೆ ಕರೆಯಲ್ವಾ ಎಂದು ಮಲ್ಲಿ ಕೇಳುತ್ತಾಳೆ. ನಿಮಗೆ ಆ ಸಂಸ್ಕಾರ ಕೊನೆವರೆಗೆ ಬರಲ್ಲ ಎಂದು ಅನ್ಸುತ್ತೆ ಪರವಾಗಿಲ್ಲ ನಾನೇ ಬರ್ತಿನಿ ಎಂದು ಒಳಗಡೆ ಬರುತ್ತಾಳೆ. ಗಣೇಶನ ಪೂಜೆ ಮಾಡಲು ಮುಂದಾಗುತ್ತಾಳೆ. ಈ ವಿಚಾರಕ್ಕೆ ದಿಯಾ ಬಳಿ ಜೈದೇವ್ ಕಿಡಿ ಕಾರಿದ್ದು ನಮಗೆ ಹೇಗೂ ಪೂಜೆ ಮಾಡೋಕೆ ಬರಲ್ಲ ಅವಳು ಮಾಡ್ತೀನಿ ಎಂದು ಹೇಳ್ತಿದ್ದಾಳೆ ಮಾಡಲಿ ಬಿಡಿ ಎಂದು ಹೇಳುತ್ತಾಳೆ.

ದಿಯಾಳನ್ನು ಉರಿಸುವ ಮಲ್ಲಿ
ಜೈದೇವ್ ಮತ್ತು ಮಲ್ಲಿಯ ಸಮ್ಮುಖದಲ್ಲಿ ಗಣಪತಿ ಪೂಜೆಯನ್ನು ಮಾಡುವ ಮಲ್ಲಿ ಆ ನಂತರ ದಿಯಾಗೆ ಬಾಗಿನ ಕೊಡಲು ಮುಂದಾಗಿದ್ದು ಜೈದೇವ್ ಫೋನ್ ಹಿಡಿದುಕೊಂಡು ಆಚೆ ಹೋಗುತ್ತಾನೆ. ಈ ಸಮಯದಲ್ಲಿ ಮಲ್ಲಿ ಉರಿಸುವ ಕೆಲಸ ಮಾಡಿದ್ದು ಹೆಂಡತಿ ಎನ್ನುವ ಸ್ಥಾನ ನಿನಗೆ ಯಾವತ್ತು ಸಿಗಲ್ಲ ಎಂದೆಲ್ಲಾ ಡೈಲಾಗ್ ಹೊಡೆಯುತ್ತಾಳೆ. ಮತ್ತೆ ಹೇಳ್ತಿದ್ದೀನಿ ನೀನು ಇಟ್ಕೊಂಡವ್ಳೇ ಎನ್ನುತ್ತಾಳೆ. ನೀನು ಎಷ್ಟೇ ಬೆಡಗು ಭಿನ್ನಾಣ ತೋರಿಸಿದರೂ.. ಸರ್ಕಸ್ ಮಾಡಿದರೂ ನನ್ನ ಸ್ಥಾನವನ್ನು ನೀನು ಕಿತ್ತುಕೊಳ್ಳಲು ಸಾಧ್ಯ ಇಲ್ಲ ಎಂದು ಹೇಳುತ್ತಾಳೆ.
ಗೌತಮ್ ಕಾರ್ ಪಂಕ್ಚರ್
ದಾವಣಗೆರೆಯಿಂದ ಆನಂದ್ ಮತ್ತು ಗೌತಮ್ ಮರಳಿ ಬರುವ ಸಮಯದಲ್ಲಿ ಕಾರಿನ ಟೈರ್ ಪಂಕ್ಷರ್ ಆಗಿದೆ. ಹೀಗಾಗಿ ಅಲ್ಲಿಯೇ ರಸ್ರೆ ಬದಿಯಲ್ಲಿ ಇಬ್ಬರು ಕಾರು ಪಾರ್ಕ್ ಮಾಡಿಕೊಂಡು ಕಷ್ಟ ಸುಖ ಹಂಚಿಕೊಳ್ಳುತ್ತಿದ್ದು ಅಪರ್ಣಾಗೆ ಫೋನ್ ಮಾಡಿ ಆನಂದ್ ತಡವಾಗುತ್ತೆ ಎಂದು ಹೇಳುತ್ತಾನೆ. ಇನ್ನೊಂದು ಕಡೆ ಗೌತಮ್‌ಗೆ ಭೂಮಿಕಾ ಫೋನ್ ಮಾಡಿದ್ದು ಗೌತಮ್ ಕೂಡ ಕಾರ್ ಪಂಕ್ಚರ್ ಆದ ವಿಚಾರ ಹೇಳುತ್ತಾನೆ.

ಗೌತಮ್ ಮಾತುಗಳನ್ನು ಕೇಳಿ ಭೂಮಿಕಾ ಸರಿ ಬೇಗ ಬನ್ನಿ ಹುಶಾರಾಗಿ ಬನ್ನಿ ಎಂದು ಹೇಳಿದ್ದು ಗೌತಮ್ ಹಬ್ಬ ಎಲ್ಲಾ ಹೇಗಾಯ್ತು ಎಂದು ವಿಚಾರಿಸುತ್ತಾನೆ. ಹಬ್ಬ ಎಲ್ಲಾ ಚೆನ್ನಾಗಿ ಆಯ್ತು ನಾನು ಅಮ್ಮನ ಮನೆಗೆ ಬಂದಿದ್ದೀನಿ ಮಹಿಮಾ ನಿಮ್ಮನ್ನು ತುಂಬಾ ಕೇಳ್ತಿದ್ದಳು ಎಂದು ಹೇಳಿದ್ದು ಇಲ್ಲಿಯೇ ಬನ್ನಿ ಜೊತೆಯಲ್ಲಿ ಹೋಗೋಣ ಎನ್ನುತ್ತಾಳೆ. ಆಗ ಗೌತಮ್ ನಾನು ಬರುವುದು ತಡವಾಗುತ್ತೆ ನೀವು ಹೊರಡಿ ಎಂದು ಗೌತಮ್ ಹೇಳಿದ್ದು ಆ ನಂತರ ಇಬ್ಬರು ಪ್ರೀತಿಯ ಮಾತುಗಳನ್ನಾಡುತ್ತಾರೆ.
ಶಕುಂತಲಾ ಕುತಂತ್ರದಿಂದ ಹೇಗೆ ಪಾರಾಗುತ್ತಾಳೆ ಭೂಮಿಕಾ ?
ಇಂದು (ಆಗಸ್ಟ್ 31) ಬಿಡುಗಡೆಯಾದ ಪ್ರೋಮೊದಲ್ಲಿ ಗೌತಮ್‌ನ ವಿಮಾನಿಲ್ದಾಣಕ್ಕೆ ಬಿಡಲು ಭೂಮಿಕಾ ಮಗುನ ಕರೆದುಕೊಂಡು ಹೋಗಿದ್ದಾಳೆ. ಪಾರ್ಥ ಕೂಡ ಜೊತೆಯಲ್ಲಿ ಹೋಗಿದ್ದು, ಭೂಮಿಕಾ ಮನೆಯಾಚೆ ಹೋದ ವಿಚಾರವನ್ನು ಶಕುಂತಲಾ ಫೋನ್ ಮಾಡಿ ತನ್ನ ಅಣ್ಣನಿಗೆ ಹೇಳಿದ್ದಾಳೆ. ಆ ನಂತರ ಜೈದೇವ್ ಮನೆಯಲ್ಲಿ ಈ ಕುರಿತು ಚರ್ಚೆ ಮಾಡುವ ಶಕುಂತಲಾ ಪ್ಲಾನ್ ಏನೆಂದು ಕೇಳಿದ್ದಾಳೆ. ಜೈದೇವ್ ಮುಂದಿನ ಪ್ಲಾನ್ ಹೇಳಿದ್ದು ರೋಡ್ ಬ್ಲಾಕ್ ಆಗುತ್ತೆ ಹೀಗಾಗಿ ಎಲ್ಲರಂತೆ ಡೈವರ್ಷನ್ ತೆಗೆದುಕೊಳ್ಳುತ್ತಾರೆ. ಆದರೆ ಅವರು ತಲುಪುವುದು ಸಿಟಿಯನ್ನಲ್ಲ ಬದಲಿಗೆ ಕಾಡನ್ನ ಅಲ್ಲಿಗೆ ಖೇಳ್ ಖತಂ ನಾಟಕ್ ಬಂದ್ ಎಂದು ಹೇಳುತ್ತಾನೆ. ಭೂಮಿಕಾಗೆ ಅಪಾಯದ ಮುನ್ಸೂಚನೆ ಸಿಕ್ಕಿದ್ದು ಪಾರ್ಥನನ್ನು ರೌಡಿಗಳ ಪಡೆ ಹೊಡೆದು ಉರುಳಿಸಿದೆ. ಸದ್ಯ ಭೂಮಿಕಾ ಮಗುನ ಎತ್ತಿಕೊಂಡು ಕಾಡಿನಲ್ಲಿ ಓಡುತ್ತಿದ್ದು ಈ ಬಾರಿ ಕಾಡಿನಲ್ಲಿ ಭೂಮಿಕಾಳನ್ನು ಯಾರು ಕಾಪಾಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











