Amruthadhaare ;ತಂತ್ರಕ್ಕೆ ಪ್ರತಿತಂತ್ರ, ದಿಯಾಳನ್ನೇ ಕಿಡ್ನಾಪ್ ಮಾಡಿದ ಮಲ್ಲಿ ; ಭೂಮಿಕಾ ಕೈಯಲ್ಲಿದ್ದ ಮಗು ಏನಾಯ್ತು?
''ಅಮೃತಧಾರೆ'' ಧಾರಾವಾಹಿಯಲ್ಲಿ ಗೌತಮ್ ಕೆಲಸದ ಪ್ರಯುಕ್ತ ಮತ್ತೆ ವಿದೇಶಕ್ಕೆ ತೆರಳಲು ಸಿದ್ಧನಾಗಿದ್ದಾನೆ. ಆದರೆ.. ಭೂಮಿಕಾಳನ್ನು ಮನೆಯಲ್ಲಿ ಬಿಟ್ಟು ಹೋಗಲು ಗೌತಮ್‌ಗೆ ಮನಸಾಗುತ್ತಿಲ್ಲ. ಹೀಗಾಗಿ ನೀವ್ಯಾಕೇ ಮಗುನ ಕರ್ಕೊಂಡು ನನ್ನನ್ನು ಏರ್‌ಪೋರ್ಟ್‌ಗೆ ಡ್ರಾಪ್ ಮಾಡಬಾರದು ಎಂದು ಹೇಳಿದ್ದಾನೆ. ಭೂಮಿಕಾ ಕೂಡ ಗುಡ್ ಐಡಿಯಾ ಎಂದು ಹೇಳಿ ಗೌತಮ್ ಜೊತೆ ಹೊರಡಲು ಮುಂದಾಗಿದ್ದಾಳೆ. ಪಾರ್ಥ ಕೂಡ ಇವರ ಜೊತೆ ಹೊರಟಿದ್ದಾನೆ.
ಜೈಲಿನಲ್ಲಿರುವ ಮನೆಹಾಳ ಅಣ್ಣನಿಗೆ ಶಕುಂತಲಾ ಫೋನ್ ಮಾಡಿದ್ದು ಗೌತಮ್ ಜೊತೆ ಭೂಮಿಕಾ ಮನೆಯಿಂದ ಹೊರಗೆ ಹೋಗುತ್ತಿರುವ ವಿಚಾರ ಹೇಳುತ್ತಾಳೆ. ಇಂತಹ ಅವಕಾಶ ನಮಗೆ ಸಿಗಲ್ಲ ಎನ್ನುತ್ತಾಳೆ.

ಶಕುಂತಲಾ ಮಾತುಗಳಿಗೆ ಲಕ್ಷ್ಮೀಕಾಂತ ಕರೆಕ್ಟ್ ಸಿಸ್ಟರ್ ಒಂದೇ ಬುಲೆಟ್‌ನಲ್ಲಿ ಎರಡು ಹಕ್ಕಿನ ಹೊಡೆದು ಹಾಕ್ತೀನಿ ಎಂದು ಹೇಳಿದ್ದು, ಶಕುಂತಲಾ ಭೂಮಿಕಾ ಜೊತೆ ಪಾರ್ಥ ಕೂಡ ಇರುವ ವಿಚಾರ ಹೇಳ್ತಾಳೆ. ಪಾರ್ಥನಿಗೆ ಏನೂ ಆಗದಂತೆ ನೋಡಿಕೊಂಡು ಅವಳನ್ನು ಹೊಡೆಯಬೇಕು ಎಂದು ಹೇಳುತ್ತಾಳೆ. ಈ ಸಲ ಮಾತ್ರ ಯಾವುದೇ ಕಾರಣಕ್ಕೂ ಮಿಸ್ ಆಗಬಾರದು ಒಟ್ನಲ್ಲಿ ಅವಳ ಕಥೆ ಮುಗಿಯಬೇಕು ಎನ್ನುತ್ತಾಳೆ.
ಜೈದೇವ್‌ಗೆ ಪ್ಲಾನ್ ಹೇಳುವ ಲಕ್ಷ್ಮೀಕಾಂತ್
ಜೈದೇವ್‌ಗೆ ಜೈಲಿಂದಲೇ ಲಕ್ಷ್ಮೀಕಾಂತ್ ಫೋನ್ ಮಾಡಿದ್ದು ಮುಂದೇನು ಮಾಡಬೇಕೆನ್ನುವುದನ್ನು ವಿವರಿಸುತ್ತಾನೆ. ಇಷ್ಟು ಮಾಡು ಆಮೇಲೆ ನೋಡು ಎನ್ನುತ್ತಾನೆ. ಪ್ಲಾನ್ ಕೇಳಿ ಜೈದೇವ್ ಖುಷಿಯಾಗಿದ್ದು ಇದು ಪಕ್ಕಾ ವರ್ಕೌಟ್ ಆಗುತ್ತೆ ಈ ತರಹದ ಐಡಿಯಾ ಎಲ್ಲ ನಿನಗೆ ಬರೋಕೆ ಸಾಧ್ಯ ಎಂದು ಹೇಳುತ್ತಾನೆ. ಇನ್ನೊಂದು ಕಡೆ ಇದ್ಯಾವುದರ ಅರಿವು ಇಲ್ಲದ ಭೂಮಿಕಾ ತನ್ನ ಮಗು ಜೊತೆ ಕಾರಿನಲ್ಲಿ ಗೌತಮ್‌ನ ಬಿಡೋಕೆ ಹೋಗ್ತಿದ್ದಾಳೆ.
ಪ್ಲಾನ್ ಬಗ್ಗೆ ಚರ್ಚೆ ಮಾಡುವ ಶಕುಂತಲಾ
ಜೈದೇವ್ ಮನೆಗೆ ಶಕುಂತಲಾ ಬಂದಿದ್ದು ಮಾಡಿರುವ ಪ್ಲಾನ್ ವಿಚಾರಿಸಿದ್ದಾಳೆ. ಜೈದೇವ್ ಪ್ಲಾನ್ ಹೇಳಿದ್ದು ಆದರೆ ಅವಳ ಜೊತೆ ಪಾರ್ಥ ಇದಾನಲ್ಲ, ನಾವೇ ಮಾಡಿಸಿದ್ದು ಎನ್ನುವ ಅನುಮಾನ ಯಾರಿಗಾದರೂ ಬಂದರೆ ಎಂದು ಶಕುಂತಲಾ ಕೇಳುತ್ತಾಳೆ. ಜೈದೇವ್ ತಲೆ ಕೆಡಿಸಿಕೊಳ್ಳುವಂತೆ ಇಲ್ಲ ಯಾರಿಗೂ ನಮ್ಮ ಮೇಲೆ ಅನುಮಾನ ಬರಲ್ಲ ಎಂದು ಹೇಳುತ್ತಾನೆ.
ಖೆಡ್ಡಾಗೆ ಬಿದ್ದ ಭೂಮಿಕಾ-ಪಾರ್ಥ
ಲಕ್ಷ್ಮೀಕಾಂತ್, ಜೈದೇವ್ ಮತ್ತು ಶಕುಂತಲಾ ತೋಡಿದ್ದ ಖೆಡ್ಡಾಗೆ ಭೂಮಿಕಾ ಮತ್ತು ಪಾರ್ಥ ಬಿದ್ದಿದ್ದು ಮಾರ್ಗ ಮಧ್ಯದಲ್ಲಿ ಡೈವರ್ಷನ್ ತೆಗೆದುಕೊಂಡಿದ್ದಾರೆ. ಸ್ವಲ್ಪ ದೂರ ಬಂದ ನಂತರ ಪಾರ್ಥಗೆ ಅನುಮಾನ ಬಂದಿದ್ದು ಈ ರೋಡ್ ಬೆಂಗಳೂರಿಗೆ ಹೋಗುತ್ತಾ ಎಂದು ಭೂಮಿಕಾಗೆ ಕೇಳುತ್ತಾನೆ. ಆಗ ಭೂಮಿಕಾ ನನಗೇನು ಗೊತ್ತಾಗುತ್ತೆ ಎಂದು ಹೇಳಿದ್ದು ದಾರಿಹೋಕನ ಬಳಿ ಪಾರ್ಥ ಈ ರೋಡ್ ಬೆಂಗಳೂರಿಗೆ ಹೋಗುತ್ತಾ ಎಂದು ಕೇಳುತ್ತಾನೆ. ಆ ವ್ಯಕ್ತಿ ಬೆಂಗಳೂರಿಗೆ ಹೋಗುತ್ತೆ ಎಂದು ಹೇಳಿದ್ದು ಅವನ ಮಾತು ನಂಬಿ ಭೂಮಿಕಾಳನ್ನು ಕರೆದುಕೊಂಡು ಪಾರ್ಥ ಮುಂದೆ ಹೊರಟಿದ್ದಾನೆ.

ಪಾರ್ಥ ಮೇಲೆ ಹಲ್ಲೆ
ಪಾರ್ಥ ಕಾರನ್ನು ತಡೆದು ರೌಡಿಗಳು ಹಲ್ಲೆ ಮಾಡಿದ್ದು, ಭೂಮಿಕಾ ತನ್ನ ಮಗುನ ಕರೆದುಕೊಂಡು ಕಾರಿಂದ ಇಳಿದು ಓಡಿ ಹೋಗಿದ್ದಾಳೆ. ರೌಡಿಗಳು ಭೂಮಿಕಾ ಬೆನ್ನು ಹತ್ತಿದ್ದು ಈ ಕಡೆ ಪಾರ್ಥನಿಗೆ ಅಪೇಕ್ಷಾ ಫೋನ್ ಮಾಡುತ್ತಿದ್ದಾಳೆ. ಆದರೆ ಪಾರ್ಥ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಸೃಜನ್ ಮತ್ತು ಮಲ್ಲಿ ಕೂಡ ಫೋನ್ ಟ್ರೈ ಮಾಡಿದ್ದು ಇಬ್ಬರು ಫೋನ್ ತೆಗೆಯದ ಕಾರಣ ಆತಂಕಕ್ಕೊಳಗಾಗಿದ್ದಾರೆ.
ಕೈಯಲ್ಲಿದ್ದ ಮಗು ಏನಾಯ್ತು ? ದಿಯಾಳನ್ನು ಕಿಡ್ಯಾಪ್ ಮಾಡಿದ ಮಲ್ಲಿ
ಸದ್ಯ ಇಂದು (ಸೆಪ್ಟೆಂಬರ್1) ಬಿಡುಗಡೆಯಾದ ಪ್ರೋಮೋದಲ್ಲಿ ನಿರೀಕ್ಷೆಗೂ ಮೀರಿದ ಟ್ವಿಸ್ಟ್‌ನ್ನು ನೀಡಲಾಗಿದೆ. ಕಾಡಿನಲ್ಲಿ ಭೂಮಿಕಾ ಪ್ರಜ್ಞೆ ತಪ್ಪಿ ಬಿದ್ದಿದ್ದು ಅಲ್ಲಿ ಪೊಲೀಸರು ಬಂದಿದ್ದಾರೆ. ಆದರೆ ಭೂಮಿಕಾ ಬಳಿ ಮಗು ಇಲ್ಲ. ಮತ್ತೊಂದು ಕಡೆ ಭೂಮಿಕಾ ಇರುವ ಜಾಗಕ್ಕೆ ಸರಿಯಾಗಿ ಮಲ್ಲಿ ಕಾರು ತೆಗೆದುಕೊಂಡು ಬಂದಿದ್ದು, ದಿಯಾಳನ್ನು ಕಿಡ್ನಾಪ್ ಮಾಡಿದ್ದಾಳೆ. ಮಲ್ಲಿ, ಭೂಮಿಕಾ ಇಬ್ಬರೂ ಸೇರಿಕೊಂಡು ಈ ಪ್ಲಾನ್ ಮಾಡಿರುವಂತೆ ಕಾಣುತ್ತಿದ್ದು ಮಗು ಎಲ್ಲಿ ಹುಡುಕಿಕೊಡಿ ಎಂದು ಭೂಮಿಕಾ ಪೊಲೀಸರಿಗೆ ಹೇಳಿದ್ದಾಳೆ. ಇನ್ನೊಂದು ಕಡೆ ಮಲ್ಲಿ ಮತ್ತು ಭೂಮಿಕಾ ಕುಹುಕ ನಗೆ ಬೀರಿದ್ದಾರೆ. ಈ ಹಿನ್ನೆಲೆ ಜೈದೇವ್ ಮತ್ತು ಶಕುಂತಲಾ ಖೆಡ್ಡಾಗೆ ಭೂಮಿಕಾ ಅಲ್ಲ ಬದಲಿಗೆ ಭೂಮಿಕಾ ತೋಡಿದ ಹಳ್ಳಕ್ಕೆ ಶಕುಂತಲಾ ಮತ್ತು ಜೈದೇವ್ ಬಿದ್ದರಾ ಎನ್ನುವ ಅನುಮಾನ ಮೂಡುತ್ತಿದೆ. ಇಂದಿನ ಎಪಿಸೋಡ್ ಕುತೂಹಲ ಕೆರಳಿಸಿದೆ.


Click it and Unblock the Notifications











