ದಕ್ಷಿಣ ಕನ್ನಡದ ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನೀಡಿದ ಸಾರಾ ಅಣ್ಣಯ್ಯ
ಅಮೃತಧಾರೆ ಧಾರಾವಾಹಿಯಲ್ಲಿ ನಟಿಸಿ ವೀಕ್ಷಕರ ಮನಗೆದ್ದ ಮುದ್ದು ಮೊಗದ ಚೆಲುವೆ ಸಾರಾ ಅಣ್ಣಯ್ಯ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮಿಲ್ಕಿ ಬ್ಯೂಟಿ ಸಾರಾ ಅಣ್ಣಯ್ಯ ಧರ್ಮಸ್ಥಳ ಮಂಜುನಾಥ ದೇವರ ದರ್ಶನ ಪಡೆದು ಪುನೀತರಾದರು. ಹಾಗೆಯೇ ದಕ್ಷಿಣ ಕನ್ನಡದಲ್ಲಿ ಇರುವ ಪ್ರಖ್ಯಾತ ದೇವಾಲಯಗಳಿಗೆ ಹೋಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
'ಕನ್ನಡತಿ' ಧಾರವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ನಟಿ ಸಾರಾ ಅಣ್ಣಯ್ಯ ಕಿರುತೆರೆ ಜರ್ನಿ ಬಗ್ಗೆ ಬಿಡಿಸಿ ಹೇಳುವುದು ಬೇಕಿಲ್ಲ. 'ಕನ್ನಡತಿ' ಧಾರಾವಾಹಿಯಲ್ಲಿ ವರುಧಿನಿ ಪಾತ್ರದಲ್ಲಿ ಮಿಂಚಿದ ನಟಿ ಎಲ್ಲರ ಮನಸ್ಸನ್ನು ಗೆದ್ದಿದ್ದರು. ಇದೀಗ ಅಮೃತಧಾರೆ ಧಾರಾವಾಹಿಯಲ್ಲಿ ಸಖತ್ ಸ್ಟೈಲಿಶ್ ಹಾಗೂ ಬೋಲ್ಡ್ ಆಗಿರುವ ಕ್ಯಾರೆಕ್ಟರ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯಕ್ಕೆ ಕೊಂಚ ಫ್ರೀ ಮಾಡಿಕೊಂಡು ಟೆಂಪಲ್ ರನ್ ಮಾಡುತ್ತಿದ್ದಾರೆ.

ಸಾರಾ ಅಣ್ಣಯ್ಯ ಅವರು ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿರುತ್ತಾರೆ. ಆಗಾಗ ಫೋಟೋಶೂಟ್ ಮಾಡಿಸಿ ಹಂಚಿಕೊಳ್ಳುತ್ತಾರೆ. ಫನ್ನಿ ರೀಲ್ಸ್ ಮಾಡುತ್ತಿರುತ್ತಾರೆ. ಧರ್ಮಸ್ಥಳ ದೇವಾಲಯದ ಬಳಿಕ ಕೊಕ್ಕಡದಲ್ಲಿ ಇರುವ ಸೌತಡ್ಕ ಮಹಾ ಗಣಪತಿ ದೇವಾಲಯಕ್ಕೆ ಕೂಡ ಭೇಟಿ ನೀಡಿ ದೇವರ ಆಶಿರ್ವಾದ ಪಡೆದುಕೊಂಡಿದ್ದಾರೆ.
ಗುಲಾಬಿ ಬಣ್ಣದ ಸೀರೆ ಜೊತೆಗೆ ನೀಲಿ ಬಣ್ಣದ ಬ್ಲೌಸ್ ತೊಟ್ಟು ಸಾರಾ ಮಿರ ಮಿರ ಮಿಂಚಿದ್ದಾರೆ. ವಿಭಿನ್ನ ಪೋಸ್ ನೀಡಿ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ಸದಾ ಮಾಡರ್ನ್ ಆಗಿ ಕಾಣಿಸಿಕೊಳ್ಳುವ ಚೆಲುವೆ ದೇವರ ದರ್ಶನಕ್ಕೆ ಸೀರೆಯುಟ್ಟುಕೊಂಡು ಬಂದಿದ್ದಾರೆ. ಹಾಗೆಯೇ ಟ್ರೆಡಿಷನಲ್ ಲುಕ್‌ನಲ್ಲಿ ಸಖತ್ ಆಗಿ ಕಾಣಿಸಿಕೊಂಡ ನಟಿಯ ನೋಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಕಾಮೆಂಟ್ ಮಾಡುತ್ತಿರುವ ಅಭಿಮಾನಿಗಳು
ಸಾರಾ ಫೋಟೋ ಗೆ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಬ್ಯೂಟಿಫುಲ್, ಸೀರೆಯಲ್ಲಿ ಮುದ್ದಾಗಿ ಕಾಣಿಸುತ್ತೀರಾ ಎಂದೆಲ್ಲ ಕಾಮೆಂಟ್ ಮಾಡುತ್ತಿದ್ದಾರೆ. ಸಾರಾ ಈ ಕಾಮೆಂಟ್‌ಗಳಿಗೆ ಯಾವುದೇ ರಿಪ್ಲೈ ನೀಡಿಲ್ಲ. ಸಾರಾ ತಮ್ಮ ಸ್ನೇಹಿತ ಹಾಗೂ ನಿರ್ದೇಶಕರಾಗಿರುವ ನವನೀತ್ ಕುಮಾರ್ ಜೊತೆ ದೇಗುಲ ದರ್ಶನ ಮಾಡಿದ್ದಾರೆ. ಇನ್ನೂ ಅಮೃತಧಾರೆ ಸೀರಿಯಲ್‌ನಲ್ಲಿ ಮಹಿಮಾ ಪಾತ್ರದಲ್ಲಿ ಗೌತಮ್ ದಿವಾನ್ ಮುದ್ದಿನ ತಂಗಿ ಆಗಿದ್ದಾರೆ. ಭೂಮಿಕಾ ತಮ್ಮನನ್ನು ಮದುವೆಯಾದ ಮಹಿಮಾ , ಮೊದಲೆಲ್ಲ ಅಡ್ಜೆಸ್ಟ್ ಮಾಡಿಕೊಳ್ಳಲು ಬಹಳ ಕಷ್ಟ ಪಡಬೇಕಾಯಿತು. ಈಗ ಹೊಂದಾಣಿಕೆ ಮಾಡಿಕೊಂಡು ಹೋಗುತ್ತಿದ್ದಾಳೆ.
ವೈರಲ್ ಆಗುತ್ತಿದೆ ಫೋಟೋ
ಮಹಿಮಾ ಗೆ ಮೂಗಿನ ಮೇಲೆಯೇ ಸಿಟ್ಟು ಇತ್ತು. ಆದರೆ ಇದೀಗ ಮಹಿಮಾ ಕೊಂಚ ಬದಲಾಗಿದ್ದಾಳೆ. ಆಕೆ ಎಲ್ಲರ ಜೊತೆ ಹೊಂದಾಣಿಕೆ ಮಾಡಿಕೊಂಡು ಹೋಗುತ್ತಿದ್ದಾಳೆ, ಮಹಿಮಾ ತಾಯಿ ಶಕುಂತಲಾ ದೇವಿ ಮಾತ್ರ ತನ್ನ ಮಗಳು ಗಂಡನ ಮನೆಯಲ್ಲಿಯೇ ಇರುವುದು ಬೆಟರ್, ಇಲ್ಲಿಗೆ ಬಂದರೆ ನನಗೆ ಕಷ್ಟ ಎಂದು ಸುಮ್ಮಗೆ ಮನದಲ್ಲೇ ಎಂದುಕೊಂಡು ಇರುತ್ತಾಳೆ.
ಫ್ಯಾನ್ಸ್ ಕಾಮೆಂಟ್ಸ್
ಸಾರಾ ಅಣ್ಣಯ್ಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಲೈಕ್ಸ್ ಕೊಡುತ್ತಿದ್ದಾರೆ. ನೀವು ಧರ್ಮಸ್ಥಳ ದೇವಾಲಯಕ್ಕೆ ಹೋಗುವುದು ಎಂದು ಒಂದು ಮಾತು ಹೇಳುತ್ತಿದ್ದರೆ ನಾವು ಬರುತ್ತಿದ್ದೆವು, ದೇವರ ದರ್ಶನ ಮಾಡಿದ ಹಾಗೆಯೇ ಆಗುತ್ತಿತ್ತು, ನಿಮ್ಮನ್ನು ನೋಡಿದ ಹಾಗೆ ಆಗುತ್ತಿತ್ತು ಎಂದು ಕೆಲವರು ತಮ್ಮ ಅಭಿಪ್ರಾಯ ಹೇಳಿಕೊಂಡಿದ್ದಾರೆ.


Click it and Unblock the Notifications











