Amruthadhaare ; ಮಲತಾಯಿಯನ್ನು ನಂಬಿರುವ ದಿವಾನ್‌ಗೆ ಕಾದಿದೆಯಾ ಬಿಗ್ ಶಾಕ್..?
ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಕಂಪನಿಯ ಮೇಜರ್ ಶೇರ್ ಗಳನ್ನು ರಾಜೇಂದ್ರ ಭೂಪತಿ ತನ್ನ ಕೈ ವಶ ಮಾಡಿಕೊಳ್ಳಲು ಪ್ರಯತ್ನ ಪಡುತ್ತಿದ್ದಾನೆ. ರಾಜೇಂದ್ರ ಭೂಪತಿಯ ಈ ಪ್ಲಾನ್ ತಿಳಿದ ಗೌತಮ್ ತಲೆ ಕೆಡಿಸಿಕೊಂಡಿಲ್ಲ. ಆಂಕತ ಇದ್ದರೂ ಕೂಡ ಬೋರ್ಡ್ ಮೆಂಬರ್ಸ್ ಗೆ ತೊಂದರೆ ಇಲ್ಲ ಎಂದು ಹೇಳಿದ್ದಾನೆ. ತನ್ನ ಬಳಿ 51% ಶೇರ್ ಗಳು ಹಾಗೂ ತಂದೆ ಬರೆದಿರುವ ವಿಲ್ ಇದೆ ಎಂಬುದೇ ಗೌತಮ್ ಗೆ ಸಮಾಧಾನ ತಂದಿದೆ. ಹೀಗಾಗಿ ಸಮಸ್ಯೆ ಆಗುವುದಿಲ್ಲ ಎಂದು ನಂಬಿದ್ದಾನೆ.
ಭೂಪತಿ ಕೈ ಸೇರಿದ ಮಹಿಮಾಳ ಶೇರ್ಸ್
ರಾಜೇಂದ್ರ ಭೂಪತಿ ಗೌತಮ್ ನನ್ನು ಮಟ್ಟ ಹಾಕಲು ಸಾಕಷ್ಟು ತಯಾರಿಗಳನ್ನು ಮಾಡಿಕೊಂಡಿದ್ದಾನೆ. ಅದೇನೇ ಆಗಲಿ ಎಂದು ದಿವಾನ್ ಕಂಪನಿಯ ಎಲ್ಲಾ ಶೇರ್ ಗಳನ್ನು ಖರೀದಿ ಮಾಡಲು ತಯಾರಿ ನಡೆಸಿದ್ದಾನೆ. ಇತ್ತ ಜೈದೇವ್ ಮತ್ತು ಜೀವನ್ ಕೂಡ ರಾಜೇಂದ್ರ ಜೊತೆ ಸೇರಿಕೊಂಡಿದ್ದಾರೆ. ಜೀವನ್ ಗೆ ರಾಜೇಂದ್ರ ಭೂಪತಿಯ ಕೆಟ್ಟ ಉದ್ದೇಶ ಇನ್ನೂ ಗೊತ್ತಾಗಿಲ್ಲ. ತನ್ನ ಹೊಸ ಪ್ರಾಜೆಕ್ಟ್ ಗೆ ರಾಜೇಂದ್ರ ಭೂಪತಿ ಕೋಟ್ಯಾಂತರ ರೂಪಾಯಿ ಇನ್ವೆಸ್ಟ್ ಮಾಡುತ್ತಿದ್ದಾನೆ. ಇದಕ್ಕಾಗಿ ಶ್ಯೂರಿಟಿ ಎಂದು ಹೇಳಿ ಮಹಿಮಾಳ ಹೆಸರಲ್ಲಿರುವ ದಿವಾನ್ ಕಂಪನಿಯ ಕೆಲ ಶೇರ್ ಗಳನ್ನು ತನ್ನ ವಶ ಮಾಡಿಕೊಂಡಿದ್ದಾನೆ. ಆದರೆ, ಈ ಶೇರ್ ಪ್ರೊಮೋಟರ್ಸ್ ಗೆ ಮೀಸಲಿರುವುದು ಎಂದು ತಿಳಿದು ಈಗ ಪ್ಲಾನ್ ಚೇಂಜ್ ಮಾಡಿಕೊಂಡಿದ್ದಾನೆ.

ಶಕುಂತಲಾಳನ್ನು ನಂಬಿರುವ ಗೌತಮ್
ಇತ್ತ ಗೌತಮ್ ಬೋರ್ಡ್ ಮೆಂಬರ್ಸ್ ಗಳಿಗೆ ನಂಬಿಕೆ ಬರಲು ತನ್ನ ತಂದೆ ತನ್ನ ಹೆಸರಿಗೆ ಕಂಪನಿಯ ಶೇರ್ ಗಳ ಬಗ್ಗೆ ಬರೆದಿರುವ ವಿಲ್ ಅನ್ನು ತಂದು ತೋರಿಸಬೇಕು ಎಂದುಕೊಂಡಿದ್ದಾನೆ. ಹೀಗಾಗಿ ಆಫೀಸಿನಲ್ಲಿ ಸಮಸ್ಯೆ ಆಗಿದೆ ಎಂದು ಶಕುಂತಲಾ ಬಳಿ ಹೇಳಿದ್ದು, ವಿಲ್ ನಿಮ್ಮ ಬಳಿಯೇ ಇದೆ ಅಲ್ವಾ ಎಂದು ವಿಚಾರಿಸಿದ್ದಾನೆ. ಕಂಪನಿ ಬಗ್ಗೆ ಹೆಚ್ಚು ಮಾಹಿತಿ ತಿಳಿಯದ ಶಕುಂತಲಾ, ವಿಲ್ ಲಾಕರ್ ನಲ್ಲೇ ಇದೆ ಎಂದು ಹೇಳಿದ್ದಾಳೆ. ಅಮ್ಮನ ಮಾತನ್ನು ಗೌತಮ್ ನಂಬಿದ್ದು, ಸುಮ್ಮನಾಗಿದ್ದಾನೆ.
ವಿಲ್ ತನ್ನ ಕೈ ವಶ ಮಾಡಿಕೊಂಡ ಜೈದೇವ್
ಇನ್ನು ರಾಜೇಂದ್ರ ಭೂಪತಿ ವಿಲ್ ತಂದು ಕೊಡು ಎಂದು ಜೈದೇವ್ ಬಳಿ ಕೇಳಿದ್ದಾನೆ. ವಿಲ್ ಸಿಕ್ಕರೆ ನಿನ್ನನ್ನು ದಿವಾನ್ ಕಂಪನಿಯ ಚೇರ್ ಮ್ಯಾನ್ ನಾಗಿ ಮಾಡುತ್ತೇನೆ ಎಂದಿದ್ದಾನೆ. ಇತ್ತ ವಿಲ್ ನಲ್ಲಿ ಏನಿದೆ ಎಂದು ಶಕುಂತಲಾ ನೋಡುತ್ತಿದ್ದು, ಇದೇ ಸಮಯಕ್ಕೆ ಜೈದೇವ್ ಎಂಟ್ರಿ ಕೊಟ್ಟಿದ್ದಾನೆ. ತಂದೆ ಬರೆದ ವಿಲ್ ಎಂದು ತಿಳಿದ ಜೈದೇವ್ ತನ್ನ ಹಾಗೂ ರಾಜೇಂದ್ರ ಭೂಪತಿಯ ಪ್ಲಾನ್ ಮತ್ತು ಆಫೀಸಿನಲ್ಲಿ ಏನೆಲ್ಲಾ ಆಗುತ್ತಿದೆ ಎಂಬುದನ್ನು ಶಕುಂತಲಾಳಿಗೆ ಅರ್ಥ ಮಾಡಿಸಿದ್ದಾನೆ. ಈ ವಿಲ್ ನನಗೆ ಕೊಟ್ಟರೆ, ನಾನೇ ಕಂಪನಿಯ ಚೇರ್ ಮ್ಯಾನ್ ಆಗುತ್ತೇನೆ ಎಂದಿದ್ದಾನೆ. ಈ ಮಾತನ್ನು ಕೇಳಿದ ಶಕುಂತಲಾ ವಿಲ್ ನ ಜೈದೇವ್ ಗೆ ಕೊಟ್ಟಿದ್ದಾನೆ.
ಮಲತಾಯಿಯನ್ನು ನಂಬಿ ಕೆಟ್ಟ ಗೌತಮ್
ಗೌತಮ್ ಏನಾದರೂ ಬಂದು ವಿಲ್ ಬಗ್ಗೆ ಕೇಳಿದರೆ ಬೇಕಂತಲೇ ಕಣ್ಣೀರು ಹಾಕುತ್ತಾ ಮಿಸ್ ಆಗಿದೆ ಎಂದು ಹೇಳುತ್ತೇನೆ. ಗೌತಮ್ ನನ್ನ ಮಾತನ್ನು ನಂಬುತ್ತಾನೆ. ನನ್ನ ಮಗ ನೀನು ಚೇರ್ ಮ್ಯಾನ್ ಆಗುತ್ತೀಯಾ ಎಂದರೆ ನಾನು ಯಾವ ನಾಟಕ ಬೇಕಿದ್ದರೂ ಮಾಡುತ್ತೀನಿ ಎಂದಿದ್ದಾಳೆ. ಒಟ್ನಲ್ಲಿ ಗೌತಮ್ ಮಲತಾಯಿಯನ್ನು ನಂಬಿ ಮೋಸ ಹೋಗುತ್ತಿದ್ದಾನೆ. ಈಗ ವಿಲ್ ಇಲ್ಲದೇ ಆಫೀಸಿಗೆ ಹೇಗೆ ಹೋಗುತ್ತಾನೆ. ಮುಂದೆ ಏನಾಗುತ್ತದೆ ಎಂಬ ಕುತೂಹಲವಿದೆ.


Click it and Unblock the Notifications











