Amruthadhaare Serial:ಗೌತಮ್ ಬೆನ್ನಿಗೆ ಚೂರಿ ಹಾಕಿದ ಮನೆಮಂದಿ.. ಗೆದ್ದುಬಿಟ್ನಾ ರಾಜೇಂದ್ರ?
ಗೌತಮ್ ದಿವಾನ್‌ಗೆ ಆತನ ಬೆನ್ನ ಹಿಂದೆ ಚೂರಿ ಹಾಕಲು ಸಾಕಷ್ಟು ಜನ ಕಾಯುತ್ತಿರುತ್ತಾರೆ. ಅದರಲ್ಲಿ ರಾಜೇಂದ್ರ ಹಾಗೆ ಜೈದೇವ್, ಶಕುಂತಲಾ ದೇವಿ ಇವರು ಮೂವರು ಸೇರಿಕೊಂಡು ಗೌತಮ್ ಬುಡವನ್ನೇ ಅಲ್ಲಾಡಿಸುತ್ತಿದ್ದಾರೆ ಎಂದು ನಂಬುವುದಕ್ಕೂ ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಗೌತಮ್‌ಗೆ ಮನೆಯವರ ಮೇಲೆ ನಂಬಿಕೆ ಇರುತ್ತದೆ. ಆದರೆ ಭೂಮಿಕಾ ತಮ್ಮ ಕೂಡ ರಾಜೇಂದ್ರನ ಜೊತೆ ಕೈ ಜೋಡಿಸಿಕೊಂಡು ಅಕ್ಕನ ಮನೆಯನ್ನು ಒಡೆಯುವ ಕೆಲಸ ಮಾಡುತ್ತಿದ್ದಾನೆ.
ಭೂಮಿಕಾಗೆ ಬಹಳಷ್ಟು ಭಯ ಕಾಡುತ್ತದೆ. ಗೌತಮ್ ಆಫೀಸಿನಿಂದ ಬರುವಾಗ ಕೂಡ ಬಹಳ ಟೆನ್ಶನ್‌ನಲ್ಲಿರುತ್ತಾರೆ. ಏಕೆಂದರೆ ಶೇರ್ ಹೋಲ್ಡರ್‌ಗಳನ್ನು ಗೌತಮ್ ವಿಶ್ವಾಸದಲ್ಲಿ ಇಟ್ಟುಕೊಳ್ಳಬೇಕು. ತಾನು ಎಂತಹ ಬಿಸಿನೆಸ್ ಅನ್ನು ಕೈಗೆತ್ತಿ ಕೊಂಡಿದ್ದೇನೆ ಎನ್ನುವುದು ಗೌತಮ್ ಎಲ್ಲರಿಗೂ ತೋರಿಸಬೇಕಾಗಿತ್ತು. ಆ ಕಾರಣಕ್ಕೆ ಸುಮಾರು ಫೈಲ್‌ಗಳನ್ನು ಎತ್ತಿಟ್ಟುಕೊಂಡಿರುತ್ತಾನೆ. ಹಾಗೆಯೇ ಶಕುಂತಲಾ ದೇವಿಯ ಬಳಿಯಲ್ಲಿ ಕೂಡ ಸಾಕಷ್ಟು ಫೈಲ್ ಕೊಟ್ಟಿರುತ್ತಾನೆ. ಆದರೆ, ಶಕುಂತಲಾ ದೇವಿ ಆ ಫೈಲ್‌ಗಳನ್ನು ಜೈದೇವ್ ಕೈಗೆ ಕೊಡುತ್ತಾಳೆ.

ಏಕೆಂದರೆ ನಾಳೆ ದಿನ ನನ್ನ ಮನೆಯಲ್ಲಿ ನನ್ನ ಮಗ ಜೈದೇವ್ ಹೇಳಿದ್ದೆ ನಡೆಯಬೇಕು. ಆತ ಆಫೀಸ್ ವ್ಯವಸ್ಥೆಯನ್ನು ನೋಡಿಕೊಳ್ಳಬೇಕು. ಹಾಗೇನಾದರೂ ಆದರೆ ಮಾತ್ರ ಈ ಮನೆಯಲ್ಲಿ ನಾವು ಹೇಳಿದ ಹಾಗೆ ನಡೆಯುತ್ತದೆ. ಇಲ್ಲವಾದರೆ ನಾವು ಜೀವನ ಪರ್ಯಂತ ಗೌತಮ್ ಅಡಿಯಾಳಗೆ ಇರಬೇಕಾಗುತ್ತದೆ ಎಂದುಕೊಂಡ ಶಕುಂತಲಾ ದೇವಿ ಇದೀಗ ಖುಷಿಯಲ್ಲಿದ್ದಾಳೆ. ಗೌತಮ್ ಪತ್ರಗಳನ್ನು ಕೇಳಿದಾಗ ತನ್ನ ಬಳಿ ಇಲ್ಲ ಎಂದು ಸಾಕಷ್ಟು ಸುಳ್ಳುಗಳನ್ನು ಹೇಳುತ್ತಾಳೆ. ಇದರಿಂದ ಕೋಪಗೊಂಡ ಗೌತಮ್ ತನ್ನ ತಾಯಿಯ ಮೇಲೆ ರೇಗಿ ಬಿಡುತ್ತಾನೆ.
ಶಕುಂತಲಾ ಮೇಲೆ ಮುನಿಸಿಕೊಂಡ ಗೌತಮ್
ಆತನ ಕೋಪಕಂಡು ಶಕುಂತಲಾಗೆ ಹೆದರಿಕೆ ಆಗುವುದಿಲ್ಲ. ಏಕೆಂದರೆ ತನ್ನ ಮೇಲೆ ಮುನಿಸಿಕೊಂಡರು ಕೊಂಚ ಸಮಯದ ಬಳಿಕ ಎಲ್ಲಾ ಸರಿ ಹೋಗಬಹುದು ಎಂದು ಶಕುಂತಲಾಗೆ ತಿಳಿದಿದೆ. ಇದರಿಂದ ಶಕುಂತಲಾ ಮಾತ್ರ ಅಳುವ ಹಾಗೆ ನಟನೆ ಮಾಡುತ್ತಾಳೆ. ಗೌತಮ್ ಮಾತ್ರ ಶಕುಂತಲಾಗೆ ಕೊಂಚ ಮಟ್ಟಿಗೆ ಸಮಾಧಾನ ಹೇಳಿ ಅಲ್ಲಿಂದ ಹೊರಟು ಹೋಗುತ್ತಾನೆ. ಇತ್ತ ಕಂಪನಿಗೆ ಆನಂದ್ ಹಾಗೂ ಗೌತಮ್ ಹೋಗುತ್ತಾರೆ. ಗೌತಮ್ ಬಳಿ ಅಷ್ಟಾಗಿ ಶೇರ್‌ಗಳು ಇರುವುದಿಲ್ಲ. ಆ ವಿಚಾರ ರಾಜೇಂದ್ರಗೆ ತಿಳಿದಿರುತ್ತದೆ.
ಗೌತಮ್ ಆಫೀಸ್‌ಗೆ ಬಂದ ರಾಜೇಂದ್ರ
ಆತ ನೇರವಾಗಿ ಗೌತಮ್ ಆಫೀಸ್‌ಗೆ ಬಂದಾಗ ಆನಂದ್ ಜೋರಾಗಿ "ಇಲ್ಲಿಗೆ ನೀನು ಯಾಕೆ ಬಂದೆ. ಇಲ್ಲಿಗೆ ಬರುವ ಅಗತ್ಯ ಆದರೂ ಏನಿದೆ" ಎಂದು ಕೇಳಿದಾಗ ಅಲ್ಲಿಯೇ ಇದ್ದವರೊಬ್ಬರು "ಅವರು ಕೂಡ ಈ ಕಂಪನಿಯ ಶೇರ್ ಹೋಲ್ಡರ್‌ನಲ್ಲಿ ಒಬ್ಬರು. ಅದಕ್ಕೆ ಬಂದಿದ್ದಾರೆ" ಎಂದಾಗ ಗೌತಮ್ ಏನು ಮಾತನಾಡುವುದಿಲ್ಲ. ಆತನಿಗೆ ಈತನೇ ಏನೋ ಗೋಲ್ ಮಾಲ್ ಮಾಡಿದ್ದಾನೆ. ಇಲ್ಲವಾದರೆ ಈ ರೀತಿ ಆಗಲು ಸಾಧ್ಯವಿಲ್ಲ ಎಂದು ಮನಸ್ಸಿದಲ್ಲಿ ಅಂದುಕೊಳ್ಳುತ್ತಾನೆ.
ರಾಜೇಂದ್ರನ ಮಾತಿಗೆ ಟಕ್ಕರ್ ಕೊಟ್ಟ ಗೌತಮ್
ಎಲ್ಲದರ ಹಿಂದೆ ನೀವಿದ್ದೀರಾ ನನಗೆ ಗೊತ್ತು. ವಿಲ್ ಕಾಣೆಯಾಗುವುದಕ್ಕೆ ನೀವೇ ಕಾರಣ ಎನ್ನುವುದು ಮನೆಗೆ ತಿಳಿಯಿತು ಎಂದು ಹೇಳುತ್ತಾನೆ ಇದನ್ನು ಕೇಳಿದ ರಾಜೇಂದ್ರ ಮಾತ್ರ ಕೆಟ್ಟ ನಗೆ ಬೀರುತ್ತಾನೆ. ಇತ್ತ ಭೂಮಿಕಾಗೆ ಶಕುಂತಲಾ ದೇವಿ ಬಗ್ಗೆ ತಿಳಿದುಕೊಳ್ಳಬೇಕಾಗಿದೆ. ಶಕುಂತಲಾ ದೇವಿ ಒರಿಜಿನಲ್ ಮುಖ ಇನ್ನೇನು ಎಲ್ಲರೆದುರು ಬಯಲಾಗಬೇಕಿದೆ.


Click it and Unblock the Notifications











