ಪ್ರೇಮಿಗಳ ದಿನವೇ ಪ್ರೀತಿಗೆ ಎಳ್ಳು ನೀರು ಬಿಡುತ್ತಾರಾ ಪಾರ್ಥ-ಅಪೇಕ್ಷಾ..? 'ಅಮೃತಧಾರೆ'ಯಲ್ಲಿ ಮುಂದೆನಾಯ್ತು?
'ಅಮೃತಧಾರೆ' ಧಾರಾವಾಹಿಯಲ್ಲಿ ಜೈದೇವ ಮಾಡಿದ ಪ್ಲಾನ್ ಸಕ್ಸಸ್ ಅಗಿದೆ. ತನಗೆ ಬೇಕಾದಂತೆ ಎಲ್ಲಾ ಅರೇಂಜ್ ಮೆಂಟ್ಸ್ ಅನ್ನೂ ಮಾಡಿಕೊಂಡಿದ್ದಾನೆ.
ಇಲ್ಲಿ ಅಪೇಕ್ಷಾ ದಡ್ಡತನವನ್ನು ಮೆರೆದಿದ್ದು, ತಾನು ಪಾರ್ಥನನ್ನು ಪ್ರೀತಿಸುತ್ತಿದ್ದರೂ ಕೂಡ ಈಗ ಜೈದೇವನ ಜೊತೆಗೆ ಬಾಳನ್ನು ಹಂಚಿಕೊಳ್ಳಲು ತಯಾರಾಗಿದ್ದಾಳೆ. ತನಗೂ ಪಾರ್ಥನಿಗೂ ಮದುವೆ ಎಂದು ಅಪಾರ್ಥ ಮಾಡಿಕೊಂಡಿದ್ದ ಅಪೇಕ್ಷಾಳೀಗೆ ಈಗ ಪಾರ್ಥನ ಜಾಗದಲ್ಲಿ ಜೈದೇವ ಇರುವುದು ಗೊತ್ತಾಗಿದ್ದರೂ ಕೂಡ ಸುಮ್ಮನಿದ್ದಾಳೆ.

ಎಲ್ಲಾ ಕಣ್ಣ ಮುಂದೆ ನಡೆಯುತ್ತಿದ್ದರೂ ಅಪ್ಪಿ ಮೌನ
ತಾನು ಪಾರ್ಥನನ್ನು ಪ್ರೀತಿಸುವ ವಿಚಾರವನ್ನು ಎಲ್ಲರ ಮುಂದೆ ಬಾಯಿ ಬಿಟ್ಟು ಹೇಳಿದ್ದರೆ, ಸಮಸ್ಯೆಯೇ ಆಗುತ್ತಿರಲಿಲ್ಲ. ಅದು ಬಿಟ್ಟು ಪಾರ್ಥನನ್ನು ಸಂಪರ್ಕಿಸಲು ಆಗುತ್ತಿಲ್ಲ ಅನ್ನುವ ಆತಂಕದಲ್ಲಿದ್ದಾಳೆ. ನೋಡು ನೋಡುತ್ತಿದ್ದಂತೆಯೇ ಜೈದೇವನ ಜೊತೆಗೆ ಉಂಗುರ ಬದಲಾಯಿಸಿಕೊಂಡಿದ್ದಾಳೆ. ಪುರೋಹಿತರು ಲಗ್ನ ಪತ್ರಿಕೆಯನ್ನು ಓದಿದರೂ ಮಾತನಾಡದೇ ಕುಳಿತಿದ್ದಾಳೆ. ಜೈದೇವನಿಗೆ ಹಾರ ಹಾಕಿ ಕೈ ಬೆರಳಿಗೆ ಉಂಗುರವನ್ನು ತೊಡಿಸಿದ್ದಾಳೆ. ಅಪೇಕ್ಷಾಳ ಮೌನವೇ ಸದ್ಯ ಜೈದೇವನಿಗೆ ಪ್ಲಸ್ ಪಾಯಿಂಟ್ ಆಗಿದೆ. ಅಪೇಕ್ಷಾಳೇ ಮನಸಾರೆ ಒಪ್ಪಿದ ಪಾರ್ಥನ ಪ್ರೀತಿಯನ್ನು ತನ್ನ ಕೈಯ್ಯಾರೆ ಹಾಳು ಮಾಡಿಕೊಂಡಿದ್ದಾಳೆ. ಅಪೇಕ್ಷಾ ಮತ್ತು ಜೈದೇವ ಎಂಗೇಜ್‌ಮೆಂಟ್ ಸುಸೂತ್ರವಾಗಿ ನೆರವೇರಿದೆ.
ಜೈದೇವನ ಮಾತು ಕೇಳಿ ಕಣ್ಣೀರಿಟ್ಟ ಮಲ್ಲಿ
ಇತ್ತ ಮಲ್ಲಿ ಜೈದೇವ ಮತ್ತು ಅಪೇಕ್ಷಾಳ ನಿಶ್ಚಿತಾರ್ಥವನ್ನು ಕಣ್ಣಾರೆ ನೋಡಿದ್ದಾಳೆ. ಜೈದೇವನನ್ನು ಭೇಟಿಯಾಗಿ ಯಾಕೆ ಮೋಸ ಮಾಡಿದೆ ಎಂದು ಪ್ರಶ್ನೆ ಮಾಡಿದ್ದಾಳೆ. ಜೈದೇವ ತಾನು ಮಾಡಿದ ತಪ್ಪಿಗೆ ಪಶ್ಚಾತಾಪವಿಲ್ಲದೇ, ಅವಳಿಗೆ ಎದುರು ಉತ್ತರ ಕೊಟ್ಟಿದ್ದಾನೆ. ಮಗುವನ್ನು ತೆಗೆಸಿಕೊ, ನಿನಗೆ ಬೇಕಾದಷ್ಟು ಹಣವನ್ನು ಕೊಡುತ್ತೀನಿ. ನಿನ್ನ ಮದುವೆಯನ್ನೂ ನಾನೇ ಮಾಡಿಸುತ್ತೀನಿ. ನಿನ್ನಂತಹ ನೂರಾರು ಹುಡುಗಿಯರು ನನ್ನ ಬಾಳಲ್ಲಿ ಬಂದು ಹೋಗಿದ್ದಾರೆ ಎಂದು ಬೈದು ಕಳಿಸುತ್ತಾನೆ. ಮಲ್ಲಿ ಈಗ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಭೂಮಿಕಾ ಬಂದು ಉಳಿಸಿದ್ದಾಳೆ. ನಿನಗೆ ಮೋಸ ಮಾಡಿರುವ ಹುಡುಗ ಯಾರು ಎಂಬ ಸತ್ಯ ಹೇಳು. ಇಲ್ಲದೇ ಹೋದಲ್ಲಿ ನಿನ್ನ ಬದುಕು ಕಷ್ಟವಾಗುತ್ತದೆ ಎಂದು ಬುದ್ಧಿ ಹೇಳುತ್ತಾಳೆ.

ಪ್ರೇಮಿಗಳ ದಿನವೇ ಪಾರ್ಥನಿಗೆ ಶಾಕಿಂಗ್ ಸುದ್ದಿ..?
ಇನ್ನು ಪಾರ್ಥ ತನ್ನ ಕೆಲಸವನ್ನೆಲ್ಲಾ ಮುಗಿಸಿಕೊಂಡು ಯಾರಿಗೂ ಹೇಳದಂತೆ ಬೇಗನೇ ಮನೆಗೆ ಬಂದಿದ್ದಾನೆ. ಇಷ್ಟು ಬೇಗ ಪಾರ್ಥ ಮನೆಗೆ ಬಂದಿದ್ದಕ್ಕೆ ಜೈದೇವನಿಗೆ ಶಾಕ್ ಆಗುತ್ತದೆ. ಆದರೆ, ಮನೆಯಲ್ಲಿ ಎಲ್ಲರೂ ಜೈದೇವನಿಗೆ ಮದುವೆ ಫಿಕ್ಸ್ ಆಗಿರುವ ವಿಚಾರ ಹಾಗೂ ನಿಶ್ಚಿತಾರ್ಥ ನಡೆದ ಬಗ್ಗೆ ಹೇಳುತ್ತಾರೆ. ಪಾರ್ಥನಿಗೆ ಶಾಕ್ ಆಗುತ್ತದೆ. ಆದರೆ, ಎಲ್ಲರೂ ಪಾರ್ಥನಿಂದ ಹುಡುಗಿ ಯಾರು ಎಂಬ ಸತ್ಯವನ್ನು ಮುಚ್ಚಿಡಲು ಮುಂದಾಗುತ್ತಾರೆ. ಶಕುಂತಲಾ ಪಾರ್ಥನಿಗೆ ವ್ಯಾಲೆನ್‌ಟೈನ್ಸ್ ಡೇ ದಿನವೇ ಕಹಿ ಸತ್ಯವನ್ನು ಹೇಳಿದ್ದಾಳೆ. ಅಪೇಕ್ಷಾ ಜೊತೆಗೆ ಜೈದೇವನ ಮದುವೆ ಫಿಕ್ಸ್ ಆಗಿದೆ ಎಂದು ಹೇಳಿದ್ದನ್ನು ಕೇಳಿದ ಪಾರ್ಥ ಶಾಕ್ ಆಗಿ ಬಿಟ್ಟಿದ್ದಾನೆ.
ಅಪೇಕ್ಷಾ ಮತ್ತು ಪಾರ್ಥ ದೂರವಾದ್ರಾ..?
ಅಪೇಕ್ಷಾ ಮತ್ತು ಪಾರ್ಥ ಭೇಟಿಯಾಗಿ ಇಬ್ಬರೂ ಮಾತನಾಡುತ್ತಾರೆ. ಪಾರ್ಥ ತಮ್ಮಿಬ್ಬರ ಪ್ರೀತಿ ವಿಚಾರವನ್ನು ಮುಚ್ಚಿಟ್ಟು ಈ ಮದುವೆಯನ್ನು ನಡೆಯಲು ಅಣಿ ಮಾಡಿಕೊಟ್ಟಿದ್ದಾನೆ. ಮನೆಯವರ ಆಸೆಗೆ ವಿರುದ್ಧವಾಗಿ ನಡೆದುಕೊಳ್ಳುವುದು ಬೇಡ ಎಂದು ಹೇಳಿದ್ದಾನೆ. ಜೈದೇವನಿಗೆ ಎಲ್ಲಾ ಸತ್ಯವೂ ಗೊತ್ತಿದ್ದರೂ ಕೂಡ ಈಗ ಮದುವೆಯ ಕೆಲಸವನ್ನು ಪಾರ್ಥನ ಜವಾಬ್ದಾರಿಗೆ ಬಿಟ್ಟಿದ್ದಾನೆ. ಪಾರ್ಥ ವ್ಯಾಲೆಟೈನ್ಸ್ ಡೇ ದಿನ ತನ್ನ ಪ್ರೀತಿಗೆ ಎಳ್ಳು ನೀರು ಬಿಡಲು ಮುಂದಾಗಿದ್ದಾನೆ.


Click it and Unblock the Notifications











