Amruthadhaare Serial: ಶಕುಂತಲಾ ಪ್ಲಾನ್ ಪ್ಲಾಪ್: ಮತ್ತೆ ಚೇರ್ಮನ್ ಪಟ್ಟಕ್ಕೇರಿದ ಗೌತಮ್

By ಪೂರ್ವ

ಗೌತಮ್‌ಗೆ ಚೇರ್ಮನ್ ಪಟ್ಟ ಸಿಕ್ಕಾಯ್ತು. ಆತನಿಗೆ ಹೆಂಡತಿ , ತಂಗಿ ಹಾಗೂ ಅಮ್ಮನ ಬಲದಿಂದಾಗಿ ಇದೀಗ ಕಂಪನಿಯನ್ನು ಉಳಿಸಿಕೊಳ್ಳುವ ರೀತಿ ಆಗಿದೆ. ಶಕುಂತಲಾ ದೇವಿ ಜೈ ದೇವ್ ಇವರಿಬ್ಬರ ಆಟಕ್ಕೆ ಫುಲ್ ಸ್ಟಾಪ್ ಇಡಲಾಗಿದೆ. ಗೌತಮ್‌ನನ್ನ ಹೇಗಾದರೂ ಮಾಡಿ ಚೇರ್ಮನ್ ಪಟ್ಟದಿಂದ ಕೆಳಗಿಳಿಸಬೇಕು ಎಂದು ಅಂದುಕೊಂಡಿದ್ದ ರಾಜೇಂದ್ರಗೆ ಕೂಡ ಈ ಬೆಳವಣಿಗೆ ಶಾಕ್ ಆಗಿದೆ. ರಾಜೇಂದ್ರಗೆ ಗೌತಮ್ ಎಂದರೆ ಎಲ್ಲಿಲ್ಲದ ದ್ವೇಷ. ತನ್ನ ಹಗೆತನವನ್ನು ದಿನದಿಂದ ದಿನಕ್ಕೆ ಹೆಚ್ಚು ಮಾಡುತ್ತಿದ್ದಾನೆ ಹೊರತು ಕಡಿಮೆ ಮಾಡುತ್ತಿಲ್ಲ. ಭೂಮಿಕಾ ಆಫೀಸ್‌ಗೆ ಬರುವುದು ಒಂದೇ ಒಂದು ನಿಮಿಷ ತಡ ಆಗುತ್ತಿದ್ದರೂ ಗೌತಮ್ ಚೇರ್ಮನ್ ಪಟ್ಟದಿಂದ ಕೆಳಗಿಳಿದು ಬಿಡಬೇಕಿತ್ತು.

ಆದರೆ ಆ ರೀತಿ ಆಗಲು ಭೂಮಿಕಾ ಬಿಡುವುದಿಲ್ಲ. ಆಕೆ ಭಾಗ್ಯ ಅತ್ತೆಯ ಬಳಿ ಬಂದು ಗೌತಮ್ ಅನುಭವಿಸುತ್ತಿರುವ ನೋವನ್ನು ಹೇಳಿ ಅಳುತ್ತಾಳೆ. ಅಷ್ಟೊತ್ತಿಗೆ ಭಾಗ್ಯಾ ಕೈ ಸನ್ನೆಯಲ್ಲಿ ಇಲ್ಲಿ ಏನೋ ಇದೆ ಎನ್ನುವ ಹಾಗೆ ತೋರಿಸುತ್ತಾರೆ. ಅಲ್ಲಿ ಒಂದು ಫೈಲ್ ಇರುತ್ತದೆ. ಆ ಫೈಲ್ ನೋಡಿ ಭೂಮಿಕಾಗೆ ಆಶ್ಚರ್ಯ ಆಗುತ್ತೆ. ಇದು ಇಲ್ಲಿ ಹೇಗೆ ಬಂತು ಎನ್ನುವುದಕ್ಕಿಂತ ಆಕೆಗೆ ತನ್ನ ಗಂಡನಿಗೆ ಇದನ್ನು ಆದಷ್ಟು ಬೇಗ ತಲುಪಿಸಬೇಕು ಎನ್ನುವ ಆಲೋಚನೆ ಮೂಡುತ್ತದೆ. ಆಫೀಸ್‌ಗೆ ಹೋದಾಗ ರಾಜೇಂದ್ರ ಭೂಪತಿ ಚೇರ್ಮನ್ ಸೀಟ್‌ನಲ್ಲಿ ಕುಳಿತುಕೊಳ್ಳಲು ನೋಡುತ್ತಿದ್ದ. ಇದನ್ನು ತಡೆದ ಭೂಮಿಕಾ ಗೌತಮ್‌ಗೆ ಒಂದು ಫೈಲ್ ಕೊಡುತ್ತಾಳೆ. ಅದರಲ್ಲಿ ಎಲ್ಲಾ ಶೇರ್ಸ್ ಇರುತ್ತದೆ.

Amruthadhaare serial February 17th 2025 episode about Shakunthala plan flop

ಈ ಫೈಲ್ ಸಿಗುತ್ತಿದ್ದಂತೆ ಗೌತಮ್‌ ನೆಮ್ಮದಿಯ ನಿಟ್ಟುಸಿರು ಬಿಡುತ್ತಾನೆ. ಹಾಗೆಯೇ ಮತ್ತೆ ಚೇರ್ಮನ್ ಸೀಟ್‌ನಲ್ಲಿ ಕುಳಿತುಕೊಳ್ಳುತ್ತಾನೆ. ಹಾಗೆ ಸುಧಾಳನ್ನು ವೈಸ್ ಚೇರ್ಮನ್ ಮಾಡುತ್ತಾನೆ. ಇದು ಭೂಮಿಕಾಗೂ ಬಹಳ ಖುಷಿ ಆಗುತ್ತದೆ. ಆದರೆ ಜೈ ದೇವ್ ಸೋಫಾದ ಕೆಳಗೆ ಫೈಲ್ ಇಟ್ಟಿರುವುದು ಭಾಗ್ಯಾಗೆ ಮಾತ್ರ ತಿಳಿದಿರುತ್ತೆ. ಉಳಿದವರಿಗೆ ಇದರ ಬಗ್ಗೆ ಸುಳಿವೇ ಇರುವುದಿಲ್ಲ. ಒಂದು ವೇಳೆ ಇದನ್ನು ಭಾಗ್ಯಾನೇ ಹೇಳಿದರು ಸಾಕು ಜೈ ದೇವ್ ಸಿಕ್ಕಿ ಬೀಳುತ್ತಾನೆ. ಇತ್ತ ಶಕುಂತಲಾದೇವಿಗೆ ಆತನ ಸಹೋದರ ನಡೆದ ವಿಚಾರಗಳನ್ನು ವಿವರಿಸುತ್ತಾನೆ. ಗೌತಮ್ ದಿವಾನ್‌ಗೆ ಮತ್ತೆ ಚೇರ್ಮನ್ ಪಟ್ಟ ಸಿಕ್ಕಿತು ಎಂದು ಹೇಳಿದ ಕೂಡಲೇ ಶಕುಂತಲಾಗೆ ಬಹಳ ಸಿಟ್ಟು ಬರುತ್ತದೆ.

ಉಲ್ಟಾ ಹೊಡೆದ ಪ್ಲಾನ್

ತಾನು ಅದೆಷ್ಟು ಕಷ್ಟಪಟ್ಟು ಗೌತಮ್‌ಗೆ ಯಾವುದೇ ಪಟ್ಟ ಸಿಗಬಾರದು ಎಂದು ಯೋಚನೆ ಮಾಡಿದ್ದೆ. ಅದೆಲ್ಲ ಲೆಕ್ಕಾಚಾರವನ್ನು ತಲೆ ಕೆಳಗೆ ಮಾಡಲಾಗಿದೆ. ಯಾಕೆ ಹೀಗೆಲ್ಲ ಆಗುತ್ತಿದೆ ಎಂದು ಬಹಳ ಬೇಸರದಲ್ಲಿ ಬಹಳ ಕೋಪದಿಂದ ಶಾಕುಂತಲಾ ದೇವಿ ಯೋಚನೆ ಮಾಡುತ್ತಿದ್ದಾಗ ಅಲ್ಲಿಗೆ ಜೈದೇವ್ ಬರುತ್ತಾನೆ. ಜೈ ದೇವ್ ನಡೆದ ವಿಚಾರವನ್ನು ತನ್ನ ಅಮ್ಮನ ಬಳಿ ಹೇಳುತ್ತಾನೆ. ಆಗ ಶಕುಂತಲಾದೇವಿ ತಾನು ಕೊಟ್ಟ ಫೈಲ್ ಎಲ್ಲಿದೆ ಎಂದು ಕೇಳುತ್ತಾಳೆ. ಶಕುಂತಲಾದೇವಿ ಹೇಳಿದ ಮಾತಿಗೆ ಜೈದೇವ್ ತಡವರಿಸಿ ಹೇಳುತ್ತಾನೆ. ಭಾಗ್ಯಾ ಸೋಪದ ಕೆಳಗೆ ನಾನು ಫೈಲ್‌ ಅನ್ನು ಇಟ್ಟಿದ್ದೆ. ಆದರೆ ಅದು ಭೂಮಿಕಾ ಕೈಗೆ ಹೇಗೆ ಸಿಕ್ಕಿತು ಎಂದು ಗೊತ್ತಾಗುತ್ತಿಲ್ಲ ಎಂದಾಗ ಶಕುಂತಲಾದೇವಿ ಪಿತ್ತ ನೆತ್ತಿಗೇರುತ್ತದೆ.

ಮಗನನ್ನು ತರಾಟೆಗೆ ತೆಗೆದುಕೊಂಡ ಶಕುಂತಲಾ ದೇವಿ

"ಯಾಕೆ ಹೀಗೆ ಮಾಡಿದೆ ಜೈ ದೇವ್. ನಿನ್ನಿಂದಾಗಿ ಹೀಗೆಲ್ಲ ಆಗುತ್ತಿದೆ. ಇಷ್ಟೆಲ್ಲ ಆಗಲು ನೀನೇ ಕಾರಣ. ಯಾವ ಕಾರಣಕ್ಕಾಗಿ ಹೀಗೆಲ್ಲ ಮಾಡುತ್ತಿದ್ದಿಯಾ" ಎಂದು ಬಹಳ ಕೋಪದಿಂದ ಶಕುಂತಲಾ ದೇವಿ ಹೇಳುತ್ತಾಳೆ. ತಾಯಿಯ ಕೋಪವನ್ನು ನೋಡಿ ಜೈದೇವ್‌ಗೆ ಬಹಳ ಆಘಾತವಾಗುತ್ತದೆ. ಹಾಗೆಯೇ ತಾಯಿಗೆ ಸಮಾಧಾನ ಮಾಡಲು ಬಹಳಷ್ಟು ಪ್ರಯತ್ನ ಮಾಡುತ್ತಾನೆ. ಆದರೆ ಶಕುಂತಲಾ ದೇವಿಗೆ ಇರೋದು ಒಂದೇ ಒಂದು ಭಯ. ಅದು ಬೇರೆ ಯಾವುದೂ ಅಲ್ಲ. ಎಲ್ಲಾದರೂ ಗೌತಮಿ ಇನ್ವೆಸ್ಟಿಗೇಷನ್‌ಗೆ ತೆರಳಿದರೆ ಏನು ಮಾಡುವುದು ಎನ್ನುವ ಆಲೋಚನೆ ಮೂಡುತ್ತದೆ. ಖಂಡಿತವಾಗಿಯೂ ನಾನು ಸಿಕ್ಕಿ ಬೀಳುತ್ತೇನೆ ಅನ್ನೋ ಭಯ ಶುರುವಾಗಿದೆ.

More from Filmibeat

English summary
Amruthadhaare serial February 17th, 2025 episode about Shakunthala plan flop
Read more about: serial filmibeat original
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X