Amruthadhaare Serial:ಭೂಮಿಕಾ-ಗೌತಮ್ ಪ್ಲಾನ್ ಸಕ್ಸಸ್; ಶಾಕುಂತಲಾ ದೇವಿ ಪ್ಲಾನ್ ಏನಾಯ್ತು?
ಭೂಮಿಕಾ ಹಾಗೂ ಗೌತಮ್ ಜೀವ ಹಾಗೂ ಮಹಿಮಾಳನ್ನು ಒಂದು ಮಾಡಲು ಬಹಳಷ್ಟು ಕಷ್ಟಪಡುತ್ತಿದ್ದಾರೆ. ಭೂಮಿಕಾಗೆ ಮಹಿಮಾ ಮೇಲೆ ಅದೆಷ್ಟು ಪ್ರೀತಿ ಇದೆಯೋ ಅದಕ್ಕಿಂತ 10 ಪಟ್ಟು ಪ್ರೀತಿ ಗೌತಮ್‌ಗೆ ಇದೆ. ಹೇಗಾದರೂ ಮಾಡಿ ಜೀವ ಹಾಗೂ ಮಹಿಮಾಳನ್ನು ಒಂದು ಮಾಡಬೇಕು ಎಂದು ಭೂಮಿಕಾ ಹಾಗೂ ಗೌತಮ್ ಪಣ ತೊಟ್ಟಿರುತ್ತಾರೆ. ಈ ಕಾರಣಕ್ಕೆ ಭೂಮಿಕಾ ತವರುಮನೆ ಸೇರಿಕೊಂಡಿರುತ್ತಾಳೆ.
ತನ್ನ ತಮ್ಮನಿಗೆ ಹೇಗಾದರೂ ಮಾಡಿ ಬುದ್ಧಿ ಕಲಿಸಬೇಕು. ಹೆಂಡತಿಯ ಜೊತೆಯಲಿ ಬಹಳ ಪ್ರೀತಿಯಿಂದ ವರ್ತಿಸಬೇಕು ಎನ್ನುವ ಬುದ್ಧಿ ಮಾತನ್ನು ತಮ್ಮನಿಗೆ ಹೇಳಬೇಕೆಂದು ಭೂಮಿಕಾ ಅಂದುಕೊಳ್ಳುತ್ತಾಳೆ. ಭೂಮಿಕಾಳ ಮನವೊಲಿಸಲು ಗೌತಮ್ ಹಾಗೂ ಆಕೆ ತವರು ಮನೆಗೆ ಹುಡುಕಿಕೊಂಡು ಬರುತ್ತಾನೆ. ಆದರೆ, ಭೂಮಿಕಾ ಮಾತ್ರ ನಾಟಕೀಯವಾಗಿ ಗೌತಮ್ ಜೊತೆ ಮಾತನಾಡುತ್ತಾಳೆ. ಗೌತಮ್‌ಗೆ ಇಷ್ಟವಿಲ್ಲದ ಹಾಗೆ ನಡೆದುಕೊಳ್ಳುತ್ತಾಳೆ.

ಗೌತಮ್ ಕೂಡ ಭೂಮಿಕಾಳನ್ನು ಬಹಳಷ್ಟು ಇಂಪ್ರೆಸ್ ಮಾಡಲು ನೋಡುತ್ತಾನೆ. ಬಲೂನ್‌ಗಳನ್ನು ತಂದು ಆಕಾಶದಲ್ಲಿ ಹಾರಿಸುವುದು. ಹಾಗೆಯೇ ಆಕಾಶದಲ್ಲಿ ಹಾರಾಡುವ ವಿಮಾನದ ಹಿಂದೆ ಸಾರಿ ಎಂದು ಬರೆದಿರುವುದು ಇದೆಲ್ಲವೂ ಕಾಣಿಸುತ್ತದೆ. ಒಳಗೊಳಗೇ ಭೂಮಿಕಾ ಬಹಳಷ್ಟು ಖುಷಿ ಪಡುತ್ತಿರುತ್ತಾಳೆ. ಹಾಗೆಯೇ ತನ್ನ ಗಂಡನ ಬಗ್ಗೆ ಸಿಕ್ಕಾಪಟ್ಟೆ ಹೆಮ್ಮೆ ಪಡುತ್ತಾಳೆ. ಆದರೆ, ಜೀವನಿಗೆ ಇದೆಲ್ಲವನ್ನು ನೋಡಿ ತನ್ನ ಹೆಂಡತಿಯ ನೆನಪಾಗುತ್ತೆ. ಇತ್ತ ಮಂದಾಕಿನಿ ಕೂಡ ಜೀವನಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳುತ್ತಾಳೆ. ಪ್ರೀತಿಸಿ ಮದುವೆಯಾದ ನೀನು ಮತ್ತೆ ಮಹಿಮಾ ಎಷ್ಟು ಒಗಟ್ಟಾಗಿ ಜೀವನ ಸಾಗಿಸಬೇಕಾಗಿತ್ತು. ನಿಮ್ಮಿಬ್ಬರಿಗಾಗಿ ಭೂಮಿಕಾ ಹಾಗೂ ಗೌತಮ್ ಮದುವೆಯಾದರು. ಆದರೆ, ಇದೀಗ ಅವರಿಬ್ಬರು ದೂರವಾಗಲು ನೀನೇ ಕಾರಣ ಎಂದು ಜೀವನಿಗೆ ಮಂದಾಕಿನಿ ಹೇಳುತ್ತಾಳೆ.
ಜೀವ ನೀನು ಪ್ರೀತಿಸಿ ಮದುವೆಯಾಗಿದ್ದೀಯ. ಆದರೆ ನೀನು ನಿನ್ನ ಭಾವನನ್ನು ನೋಡಿ ಕಲಿತುಕೊಳ್ಳುವುದು ಬಹಳಷ್ಟು ಇದೆ. ನಿಮ್ಮ ಭಾವ ಕೂಡ ನಿನ್ನ ಅಕ್ಕನನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಆ ರೀತಿ ನೀನು ಕೂಡ ನಿನ್ನ ಹೆಂಡತಿಯನ್ನು ನೋಡಿಕೊಳ್ಳಬೇಕು ಎಂದು ಜೀವಗೆ ತಾಯಿ ಮಂದಾಕಿನಿ ಬುದ್ಧಿ ಮಾತನ್ನು ಹೇಳುತ್ತಾರೆ. ಇದಾದ ಬಳಿಕ ಭೂಮಿಕಾ ಹಾಗೂ ಮಂದಾಕಿನಿ ಮಾತನಾಡುತ್ತಿರುತ್ತಾರೆ. ಮಂದಾಕಿನಿ ತನ್ನ ಅಳಿಯನ ಬಗ್ಗೆ ಸಿಕ್ಕಾಪಟ್ಟೆ ಹೊಗಳುತ್ತಾರೆ. ಭೂಮಿ ನಿನ್ನ ಗಂಡ ಶ್ರೀ ರಾಮ ಇದ್ದ ಹಾಗೆ ಅಷ್ಟು ಒಳ್ಳೆಯ ಗಂಡನ ಮೇಲೆ ಮುನಿಸಿಕೊಂಡು ಬಂದಿರುವುದು ತಪ್ಪು. ಅವರು ಹೇಗೆಲ್ಲಾ ನಿನ್ನನ್ನು ಸಾರಿ ಕೇಳಿದರು. ಆದರೆ ನೀನು ಮಾತ್ರ ಅದ್ಯಾವುದಕ್ಕೂ ಉತ್ತರವೇ ಕೊಡುತ್ತಿಲ್ಲ ಎಂದು ಬಹಳ ಬೇಸರದಿಂದ ಇರುತ್ತಾರೆ. ಇದನ್ನು ಕೇಳಿದ ಭೂಮಿಕಾಗೆ ಜೋರಾಗಿ ನಗು ಬರುತ್ತದೆ.

ಅಮ್ಮನ ಬಳಿ ನಿಜ ವಿಚಾರ ಬಿಚ್ಚಿಟ್ಟ ಭೂಮಿಕಾ
ಅಮ್ಮ ನಿನ್ನ ಅಳಿಯ ಶ್ರೀರಾಮಚಂದ್ರ ಇದ್ದ ಹಾಗೆ. ಆದರೆ, ನಾನು ಅವರನ್ನು ಬಿಟ್ಟು ಬರಲು ಕಾರಣ ಜೀವ ಹಾಗೂ ಮಹಿಮಾ ಒಟ್ಟಾಗಿ ಜೀವನ ನಡೆಸಲಿ ಎನ್ನುವ ಕಾರಣಕ್ಕೆ. ನಾನು ಮತ್ತು ಗೌತಮ್ ಹೀಗೆ ನಾಟಕ ಮಾಡುತ್ತಿದ್ದೇವೆ ಎಂದು ತಾಯಿಯ ಬಳಿ ನಿಜ ವಿಚಾರ ಬಿಚ್ಚಿಡುತ್ತಾಳೆ ಭೂಮಿಕಾ. ಇದೀಗ ಜೀವನಿಗೆ ತಾನು ಮಾಡುತ್ತಿರುವುದು ಸರಿಯಲ್ಲ ಮಹಿಮಳನ್ನು ಆದಷ್ಟು ಬೇಗ ಮನೆಗೆ ಕರೆದುಕೊಂಡು ಬರಬೇಕೆಂದು ಅಂದುಕೊಂಡು ಗೌತಮನ ಮನೆಗೆ ಜೀವ ತೆರುಳುತ್ತಾನೆ. ಜೀವನನ್ನ ನೋಡಿದ ಮಹಿಮಗೆ ಖುಷಿಯಾಗಿದೆ.
ಭೂಮಿಕಾ ವಿರುದ್ಧ ಶಾಕುಂತಲಾ ಸಂಚು
ತಾನು ಮಾಡಿದ ತಪ್ಪಿಗೆ ಮಹಿಮಾ ಜೊತೆ ಜೀವ ಕ್ಷಮೆ ಕೇಳುತ್ತಾನೆ. ಇದರಿಂದ ಖುಷಿಯಾಗಿ ಮಹಿಮಾ ಈಗಲೇ ಮನೆಗೆ ಹೊರಟು ಬರುತ್ತೇನೆ ಎಂದು ಹೇಳುತ್ತಾಳೆ. ಇತ್ತ ಶಕುಂತಲಾ ದೇವಿ ತನ್ನ ಮಗಳನ್ನು ದಾಳವಾಗಿ ಇಟ್ಟುಕೊಂಡು ಭೂಮಿಕಾಳನ್ನು ಈ ಮನೆಗೆ ಬಾರದೇ ಇರುವ ಹಾಗೆ ಮಾಡಬೇಕು ಎಂದು ಅಂದುಕೊಳ್ಳುತ್ತಾಳೆ. ಭೂಮಿಕಾ ಮನೆಗೆ ಬಂದರೆ ಖಂಡಿತವಾಗಿಯೂ ತನ್ನ ಮಾತು ಯಾವುದು ನಡೆಯುವುದಿಲ್ಲ ಎನ್ನುವುದು ಆಕೆಗೆ ಗೊತ್ತಿದೆ. ಆದ ಕಾರಣ ಭೂಮಿಕಾಳನ್ನು ಈ ಮನೆಗೆ ಬಾರದೇ ಇರುವ ಹಾಗೆ ನೋಡಿಕೊಳ್ಳಬೇಕು. ಭೂಮಿಕಾ ಹಾಗೂ ಗೌತಮ್ ನಾಟಕ ಮಾಡುತ್ತಿದ್ದಾರೆ ಎನ್ನುವ ವಿಚಾರ ಮಾತ್ರ ಇನ್ನಷ್ಟೇ ಶಕುಂತಲಾ ದೇವಿ ಗೊತ್ತಿಲ್ಲ.


Click it and Unblock the Notifications











