Amruthadhaare ; ಅಜ್ಜಿಗೆ ಸುಳ್ಳು ಹೇಳಿದ ಗೌತಮ್, ಆಸ್ತಿಗಾಗಿ ಶಕುಂತಲಾ ಷಡ್ಯಂತ್ರ..!
ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾಳಿಗೆ ಪದೇ ಪದೇ ವಾಂತಿಯಾಗುತ್ತಿದ್ದು, ಹೀಗೆಲ್ಲಾ ಆಗುತ್ತಿರುವುದಕ್ಕೆ ತಾನು ಗರ್ಭಿಣಿ ಆಗಿರಬಹುದು ಎಂದು ಕನಸು ಕಂಡಿದ್ದಾಳೆ. ಆದರೆ ಈ ವಿಚಾರವನ್ನು ತಿಳಿದ ಶಕುಂತಲಾ, ಗೌತಮ್ ಗೆ ಮಗುವಾದರೆ ತನಗಿರುವ ಸ್ವಾತಂತ್ರ್ಯ ಹೋಗುತ್ತದೆ. ಇಡೀ ಆಸ್ತಿ ಗೌತಮ್ ತನ್ನ ಮಗುವಿಗೆ ಬರೆಯುತ್ತಾನೆ ಎಂದು ಗೇಮ್ ಪ್ಲಾನ್ ಮಾಡಿದ್ದಾಳೆ. ಶಕುಂತಲಾ ತನಗೆ ಬೇಕಾದ ವೈದ್ಯರನ್ನು ಕರೆಸಿ ಭೂಮಿಕಾಳನ್ನು ಟೆಸ್ಟ್ ಮಾಡಿಸಿದ್ದಾಳೆ. ಆಕೆ ಗರ್ಭಿಣಿ ಅಲ್ಲ ಫುಡ್ ಪಾಯಿಸನ್ ಆಗಿದೆ ಎಂಬಂತೆ ಸುಳ್ಳು ಹೇಳಿಸಿದ್ದಾಳೆ.
ಗೌತಮ್ ಗೆ ಉರುಳಾದ ಈರುಳ್ಳಿ-ನುಗ್ಗೆಕಾಯಿ
ಇನ್ನು ಆಸ್ಪತ್ರೆಗೆಂದು ಚೆಕಪ್ ಗೆ ಹೋದ ಭೂಮಿಕಾ ಮತ್ತು ಗೌತಮ್ ಗೆ ಟೆಸ್ಟ್ ಗಳನ್ನು ಮಾಡಲಾಗಿದ್ದು, ರಿಪೋರ್ಟ್ ನಾಳೆ ಬರುತ್ತದೆ ಎಂದು ಹೇಳಿ ಕಳಿಸಿದ್ದಾರೆ. ಗೌತಮ್ ಮತ್ತು ಭೂಮಿಕಾ ಆಸ್ಪತ್ರೆಗೆ ಹೋದ ವಿಚಾರವನ್ನು ತಿಳಿದ ಆನಂದ್ ತುಂಬಾ ಖುಷಿಯಾಗಿದ್ದಾನೆ. ಈ ನಡುವೆ ಅಜ್ಜಿ ಮೊಮ್ಮಗನಿಗಾಗಿ ನುಗ್ಗೆಕಾಯಿಯಿಂದ ಸಾಂಬಾರ್, ಗೊಜ್ಜುಗಳನ್ನು ಮಾಡಿದ್ದಾರೆ. ಇವನ್ನೇ ತಿನ್ನಬೇಕು ಇನ್ನು ಮುಂದೆ ಮನೆಯಲ್ಲಿ ಪ್ರತಿ ದಿನವೂ ನುಗ್ಗೆಕಾಯಿಯಿಂದ ಅಡುಗೆ ಮಾಡಬೇಕು ಎಂದಿದ್ದಾರೆ. ಬರೀ ನುಗ್ಗೆಕಾಯಿ ತಿನ್ನೋದಕ್ಕೆ ಕಷ್ಟವಾಗುತ್ತೆ ಎಂದು ಗೌತಮ್ ಹೇಳಿದ್ದಕ್ಕೆ ಈರುಳ್ಳಿ ಬಜ್ಜಿ ಮತ್ತು ಗೊಜ್ಜನ್ನು ತಯಾರಿ ಮಾಡಿಕೊಟ್ಟಿದ್ದಾರೆ. ಇನ್ಮುಂದೆ ನಿಮ್ಮಿಬ್ಬರಿಗೂ ಇದೇ ಮುಖ್ಯವಾದ ಮೆನು ಎಂದು ಹೇಳಿದ್ದಾರೆ. ಗೌತಮ್ ಕೊರಳಿಗೆ ಸದ್ಯ ಈರುಳ್ಳಿ-ನುಗ್ಗೆಕಾಯಿಯ ಉರುಳು ಸುತ್ತಿಕೊಂಡಂತಾಗಿದೆ.

ಮಕ್ಕಳು ಬೇಡ ಎಂದು ಗಲಾಟೆ ಮಾಡಿದ ಅಪೇಕ್ಷಾ
ಇನ್ನು ಪಾರ್ಥ ಅಣ್ಣ ಮತ್ತು ಅತ್ತಿಗೆ ಆಸ್ಪತ್ರೆಗೆ ಹೋಗಿರುವ ವಿಚಾರವನ್ನು ತಿಳಿಸಿದ್ದು, ನಾವು ಕೂಡ ಒಂದು ಮಗುವನ್ನು ಮಾಡಿಕೊಳ್ಳೋಣ ಎಂದು ಕೇಳಿದ್ದಾನೆ. ಪಾರ್ಥನ ಮಾತನ್ನು ಕೇಳಿದ ಅಪೇಕ್ಷಾ ಕೆಂಡಾಮಂಡಲವಾಗಿದ್ದಾಳೆ. ನಮಗೆ ಈಗಲೇ ಮಕ್ಕಳು ಮಾಡಿಕೊಳ್ಳುವ ಅಗತ್ಯವೇನಿಲ್ಲ. ನೀವು ನಿಮ್ಮ ಕೆರಿಯರ್ ಕಡೆಗೆ ಗಮನ ಕೊಡಿ. ನಾನು ನನ್ನ ಮಾಡೆಲಿಂಗ್ ಕಡೆ ಗಮನ ಕೊಡುತ್ತೇನೆ ಎಂದು ಹೇಳಿದ್ದಾಳೆ. ಈಗಲೇ ಮಕ್ಕಳನ್ನು ಮಾಡಿಕೊಂಡು ಇರುವ ಬದುಕನ್ನು ಹಾಳು ಮಾಡಿಕೊಳ್ಳಲು ನನಗಿಷ್ಟವಿಲ್ಲ ಎಂದು ಹೇಳಿದ ಮಾತುಗಳು ಪಾರ್ಥನಿಗೆ ನೋವು ತಂದಿದೆ.
ಶಕುಂತಲಾ ಪ್ಲಾನ್ ವರ್ಕೌಟ್ ಆಯ್ತಾ..?
ರಿಪೋರ್ಟ್ ತರಲು ನಾನೂ ಕೂಡ ಬರುತ್ತೇನೆ ಎಂದು ಆನಂದ್ ಬೊಕ್ಕೆ ಕೊಟ್ಟು ಮೊದಲೇ ಗೌತಮ್ ಗೆ ವಿಶ್ ಮಾಡಿದ್ದಾನೆ. ಗೌತಮ್ ಜೊತೆಗೆ ಆನಂದ್ ಆಸ್ಪತ್ರೆಗೆ ಹೋಗಿ ರಿಪೋರ್ಟ್ ತರಲು ಮುಂದಾಗಿದ್ದಾನೆ. ಆದರೆ, ವೈದ್ಯರು ಶಾಕಿಂಗ್ ವಿಚಾರವನ್ನು ಹೇಳಿದ್ದಾರೆ. ಶಕುಂತಲಾ ಗೌತಮ್ ಗೆ ಮಕ್ಕಳಾದರೆ ತನ್ನ ಬದುಕಿಗೆ ಕಷ್ಟವಾಗುತ್ತದೆ ಎಂದು ವೈದ್ಯರ ಬಳಿ ಸುಳ್ಳು ಹೇಳಿಸಿದ್ದಾಳೆ. ಅದರಂತೆ ವೈದ್ಯರು ಭೂಮಿಕಾಳಿಗೆ ಹುಟ್ಟಿನಿಂದಲೂ ಗರ್ಭಕೋಶದ ಸಮಸ್ಯೆ ಇದೆ. ಮಕ್ಕಳಾಗುವುದು ಕಷ್ಟ ಎಂದು ಹೇಳಿದ್ದಾರೆ. ಈ ಮಾತನ್ನು ಕೇಳಿದ ಗೌತಮ್ ಗಾಬರಿಯಾಗಿದ್ದಾನೆ.
ಅಪವಾದವನ್ನು ಹೊತ್ತುಕೊಂಡ ಗೌತಮ್
ಮನೆಯಲ್ಲಿ ಅಜ್ಜಿ ಗೌತಮ್ ನನ್ನು ರಿಪೋರ್ಟ್ ಎಲ್ಲಿ ಎಂದು ಕೇಳಿದ್ದಕ್ಕೆ, ನೆಪ ಹೇಳುತ್ತಾನೆ. ಆಗ ಅಜ್ಜಿ ಏನಾದರೂ ಸಮಸ್ಯೆ ಇದ್ದರೆ ಹೇಳು ಎಂದು ಕೇಳಿದಾಗ, ಸುಮ್ಮನಿರಲಾಗದೇ ಗೌತಮ್ ತನ್ನ ಮೇಲೆ ಅಪವಾದವನ್ನು ಹೊತ್ತುಕೊಂಡಿದ್ದಾನೆ. ನನಗೆ ಸಮಸ್ಯೆ ಇದೆ ಎಂದು ವೈದ್ಯರು ಹೇಳಿದ್ದಾರೆ. ನನಗೆ ಮಕ್ಕಳಾಗುವುದಿಲ್ಲ ಎಂದು ಸುಳ್ಳು ಹೇಳಿದ್ದಾನೆ. ಭೂಮಿಕಾಳಿಗೆ ಸಮಸ್ಯೆ ಇದೆ ಎಂದರೆ ತಪ್ಪಾಗಬಹುದು, ಹೆಂಡತಿಗೆ ನೋವಾಗುವುದರ ಜೊತೆಗೆ ಮನೆಯವರೆಲ್ಲಾ ಅವಳನ್ನು ನೋಡುವ ದೃಷ್ಟಿಯೂ ಬದಲಾಗಬಹುದು ಎಂದು ಹೀಗೆ ಸುಳ್ಳು ಹೇಳಿದ್ದಾನೆ. ಈ ಸುಳ್ಳು ಗೌತಮ್ ಮತ್ತು ಭೂಮಿಕಾ ಬದುಕನ್ನು ಎಲ್ಲಿಗೆ ಕರೆದುಕೊಂಡು ಹೋಗಿ ಮುಟ್ಟಿಸುತ್ತದೋ ಕಾದು ನೋಡಬೇಕಿದೆ.


Click it and Unblock the Notifications











