Amruthadhaare serial:ಶಕುಂತಲಾ ದೇವಿ ಮಸಲತ್ತಿಗೆ ಬಲಿಯಾದರೆ ಭೂಮಿಕಾ-ಗೌತಮ್? ಅಂತಹದ್ದೇನಾಯ್ತು?

By ಪೂರ್ವ

ಭೂಮಿಕಾಗೆ ಮಕ್ಕಳೆಂದರೆ ಪಂಚಪ್ರಾಣ. ಗೌತಮ್‌ಗೆ ಆಫೀಸ್‌ನಲ್ಲಿ ನಡೆದ ಘಟನೆಗಳು ಮಾಸುವ ಮುನ್ನವೇ ಇದೀಗ ಮತ್ತೊಂದು ಶಾಕಿಂಗ್ ನ್ಯೂಸ್ ಸಿಕ್ಕಿದೆ. ಭೂಮಿಕಾಗೆ ಹಾಗೂ ಗೌತಮ್‌ಗೆ ಮಕ್ಕಳೆಂದರೆ ಬಹಳ ಪ್ರೀತಿ. ತಮಗೂ ಎಲ್ಲರ ಹಾಗೆ ಮಕ್ಕಳು ಬೇಕು. ನಮ್ಮ ಸಂಸಾರವೂ ಕೂಡ ಬಹಳ ಖುಷಿಯಿಂದ ಇರಬೇಕು ಎನ್ನುವುದು ಅವರಿಬ್ಬರಿಗೂ ಇದ್ದ ಆಸೆ . ಆದರೆ, ಶಕುಂತಲಾ ದೇವಿ ಇದಕ್ಕೆಲ್ಲವೂ ಅಡ್ಡಗಾಲು ಹಾಕುವ ಲಕ್ಷಣಗಳು ಕಾಣಿಸುತ್ತಿದೆ.

ಭೂಮಿಕಾ ಗರ್ಭಿಣಿಯಾಗಿದ್ದಾಳೆ ಎಂದು ಅನ್ನಿಸುತ್ತಿದೆ. ಡಾಕ್ಟರ್ ಬಳಿ ಹೋಗಿ ಚೆಕಪ್ ಮಾಡಿಸಿಕೊಂಡು ತೋರಿಸಿಕೊಳ್ಳುವುದು ಉತ್ತಮ ಎಂದು ಎಲ್ಲರೂ ಹೇಳುತ್ತಾರೆ. ಇದನ್ನು ಕೇಳಿಸಿಕೊಂಡ ಗೌತಮ್ ಬಹಳ ಖುಷಿಯಿಂದ ಆಯ್ತು ಎಂದು ಒಪ್ಪಿಕೊಳ್ಳುತ್ತಾನೆ. ಹಾಗೆಯೇ ಅವರಿಬ್ಬರೂ ಆಸ್ಪತ್ರೆಗೂ ಹೋಗುತ್ತಾರೆ. ಅದಕ್ಕಿಂತ ಮುಂಚಿತವಾಗಿ ಶಕುಂತಲಾ ದೇವಿಗೆ ಬಹಳಷ್ಟು ಆತಂಕ ಶುರುವಾಗುತ್ತೆ. ಎಲ್ಲಾದರೂ ಭೂಮಿಕಾ ಗರ್ಭಿಣಿಯಾದರೆ ತಮಗೆಲ್ಲರಿಗೂ ಆಸ್ತಿ ಖಂಡಿತವಾಗಿಯೂ ಸಿಗುವುದಿಲ್ಲವೆಂದು ಮಸಲತ್ತು ಮಾಡುತ್ತಾರೆ. ಗರ್ಭಿಣಿಯಾಗುವುದನ್ನು ಹೇಗಾದರೂ ಮಾಡಿ ತಪ್ಪಿಸಬೇಕು ಎಂದು ಶಾಕುಂತಲಾ ದೇವಿ ಅಂದುಕೊಂಡು ಡಾಕ್ಟರ್ ಬಳಿ ಮಾತನಾಡುತ್ತಾಳೆ.

Amruthadhaare serial February 23rd episode about Gowtham dream vanished

ಎಲ್ಲಾ ಸೆಟ್ ಆದ ಬಳಿಕ ಶಕುಂತಲಾ ದೇವಿ ಗೌತಮ್ ಬಳಿಗೆ ಬಂದು ನನಗೆ ಒಬ್ಬರು ಗರ್ಭಿಣಿ ತಜ್ಞರು ಪರಿಚಿತರಿದ್ದಾರೆ. ಅವರ ಬಳಿಗೆ ಹೋಗು ಎಂದು ಡಿಟೇಲ್ಸ್ ಕೊಟ್ಟಿರುತ್ತಾರೆ. ಆ ಪ್ರಕಾರವಾಗಿ ಗೌತಮ್ ಹಾಗೂ ಶಕುಂತಲಾ ಕೊಟ್ಟ ಡೀಟೇಲ್ಸ್ ನ ಅಡ್ರೆಸ್ ಹುಡುಕಿಕೊಂಡು ಆಸ್ಪತ್ರೆಗೆ ಹೋಗುತ್ತಾನೆ. ಅಲ್ಲಿ ಭೂಮಿಕಾಗೆ ಪರೀಕ್ಷೆ ಮಾಡಿಸಲಾಗುತ್ತದೆ. ಇನ್ನು ಆರೋಗ್ಯದ ಪರೀಕ್ಷೆಗಳು ಮುಗಿದ ಬಳಿಕ ಡಾಕ್ಟರ್ ಗೌತಮ್ ನನ್ನು ಒಳಗೆ ಕರೆದು ಕೆಲವು ಸಂಗತಿಗಳನ್ನು ಹೇಳುತ್ತಾರೆ. ಇದನ್ನು ಕೇಳಿದ ಗೌತಮ್‌ಗೆ ನಿಂತ ನೆಲ ಕುಸಿದ ಹಾಗೆ ಆಗುತ್ತದೆ. ಡಾಕ್ಟರ್ ಗೌತಮ್‌ಗೆ ಕಿವಿ ಮಾತುಗಳನ್ನ ಹೇಳುತ್ತಾರೆ. ಯಾವತ್ತು ನೀವು ಮಕ್ಕಳ ಮಾಡಿಕೊಳ್ಳುವ ಬಗ್ಗೆ ಯೋಚನೆಯನ್ನು ಮಾಡಬೇಡಿ. ಯಾಕೆಂದರೆ ನಿಮಗೆ ಹುಟ್ಟುವ ಮಕ್ಕಳು ಬುದ್ಧಿಮಾಂದ್ಯ ಆಗುವ ಚಾನ್ಸಸ್ ಜಾಸ್ತಿ ಇರುತ್ತದೆ ಎನ್ನುತ್ತಾರೆ.

ಡಾಕ್ಟರ್ ಮಾತಿಗೆ ಗೌತಮ್‌ಗೆ ಆಘಾತ

ಇದನ್ನು ಕೇಳಿದ ಗೌತಮ್ ಕಣ್ಣಾಲಿಗಳು ತುಂಬಿ ಬರುತ್ತದೆ. ಭೂಮಿಕಾ ಅವರಿಂದ ಆದಷ್ಟು ದೂರ ಇದ್ದರೆ ನಿಮಗೆ ಉತ್ತಮ ಎಂದು ಹೇಳುತ್ತಾರೆ. ಇದನ್ನು ಕೇಳಿ ಗೌತಮ್‌ಗೆ ಆಘಾತವಾಗುತ್ತದೆ. ಆದರೆ, ಭೂಮಿಕಾ ಬಳಿ ಈ ವಿಚಾರವನ್ನು ಪ್ರಸ್ತಾಪ ಮಾಡುವುದಿಲ್ಲ. ಇನ್ನು ಭೂಮಿಕಾ ಡಾಕ್ಟರ್ ಏನು ಹೇಳಿದರು ಎಂದು ಕೇಳಿದಾಗ, ನಾಳೆ ರಿಪೋರ್ಟ್ ಬರುತ್ತೆ ಎಂದು ಸುಳ್ಳು ಹೇಳಿ ಅಲ್ಲಿಂದ ಕರೆದುಕೊಂಡು ಹೋಗುತ್ತಾನೆ. ಗೌತಮ್‌ಗೆ ರಾತ್ರಿ ಇಡಿ ಡಾಕ್ಟರ್ ಹೇಳಿದ ಮಾತುಗಳೇ ನೆನಪಾಗುತ್ತಿರುತ್ತದೆ. ಇತ್ತ ಭೂಮಿಕಾ ಪುಟ್ಟ ಮಗುವಿಗಾಗಿ ಹಂಬಲಿಸುತ್ತಾಳೆ. ಮರು ದಿವಸ ಗೌತಮ್ ಆಫೀಸಿಗೆ ಹೊರಡುತ್ತಾನೆ. ಆಫೀಸಿನಲ್ಲಿ ಎಲ್ಲ ಕೆಲಸವನ್ನು ಮಾಡಿ ಸಂಜೆಯ ಹೊತ್ತಿಗೆ ಮನೆಗೆ ಮರಳುತ್ತಾನೆ.

Amruthadhaare serial February 23rd episode about Gowtham dream vanished

ಅಜ್ಜಿಯ ಮಾತಿಗೆ ಸುಳ್ಳು ನೀಡಿದ ಗೌತಮ್

ಆ ವೇಳೆ ಅಲ್ಲಿಗೆ ಬಂದ ಅಜ್ಜಿ ಗೌತಮ್ ಡಾಕ್ಟರ್ ರಿಪೋರ್ಟ್ ಸಿಕ್ಕಿತಾ? ಡಾಕ್ಟರ್ ಏನು ಹೇಳಿದರು ಎಂದು ಕೇಳಿದಾಗ ಗೌತಮ್, ಡಾಕ್ಟರ್ ಬಳಿ ಹೋಗುವುದು ಮರೆತು ಹೋಯಿತು ಎನ್ನುವ ನಾಟಕದ ಮಾತುಗಳನ್ನು ಹೇಳುತ್ತಾರೆ. ಆ ಮಾತನ್ನು ಅಜ್ಜಿ ಮಾತ್ರ ನಂಬುವುದೇ ಇಲ್ಲ. ಕೊನೆಗೆ ಗೌತಮ್ ಕೊಂಚ ಗಟ್ಟಿ ಮನಸ್ಸು ಮಾಡಿ ಡಾಕ್ಟರ್ ಬಳಿ ಹೋಗಿದ್ದೆ. ಪ್ರಾಬ್ಲಂ ಇರುವುದು ಸತ್ಯ. ಆದರೆ ಆ ಪ್ರಾಬ್ಲಂ ಇರುವುದು ನನ್ನ ಬಳಿ. ಭೂಮಿಕಾಗೆ ಯಾವುದೇ ಪ್ರಾಬ್ಲಂ ಇಲ್ಲ ಎಂದು ಹೇಳಿ ಅಲ್ಲಿಂದ ಹೋಗುತ್ತಾನೆ. ಆಗಲೇ ಭೂಮಿಕಾಗೆ ತನ್ನ ಮನದಲ್ಲಿ ಅರಳಿದ ಸಣ್ಣದೊಂದು ಕನಸು ಕಮರಿ ಹೋಯಿತು.

More from Filmibeat

English summary
Amruthadhaare serial February 23rd episode about Gowtham dream vanished
Read more about: serial filmibeat original tv show
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X