Amruthadhaare ; ಅತ್ತೆಗೊಂದು ಕಾಲ ಸೊಸೆಗೊಂದು ಕಾಲ, ಭೂಮಿಕಾ ಕಾಲು ಹಿಡಿದ ಶಕುಂತಲಾ..!

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಅಪ್ಪನೊಂದಿಗೆ ಮಾತನಾಡಲು ಫೋನ್ ಮಾಡಿದ ಭೂಮಿಕಾಳನ್ನು ಸದಾಶಿವ ಸಮಾಧಾನ ಮಾಡಿದ್ದಾನೆ. ದೇವರು ನಮಗೆ ಏನು ಬೇಕು ಎಂದು ಮುಂಚೆಯೇ ನಿರ್ಧಾರ ಮಾಡಿರುತ್ತಾನೆ. ಅವನು ಆಡಿಸಿದಾಗ ನಾವು ಆಡಬೇಕು. ಅವನು ಬೇಕೆಂದಾಗ ತೇಲಿಸುತ್ತಾನೆ. ನಾವು ತೇಲಬೇಕು. ಇಷ್ಟೇ ಜೀವನ ಎಂದು ಭೂಮಿಕಾಳಿಗೆ ಸದಾಶಿವ ಸಮಾಧಾನ ಮಾತುಗಳನ್ನು ಆಡಿ ಫೋನ್ ಇಡುತ್ತಾನೆ. ಮನದಲ್ಲಿ ತಡೆದುಕೊಳ್ಳಲಾರದಷ್ಟು ದುಃಖವನ್ನು ಬಚ್ಚಿಟ್ಟುಕೊಳ್ಳಲು ಭೂಮಿಕಾ ಪ್ರಯತ್ನಪಡುತ್ತಿದ್ದಾಳೆ. ಆದರೆ, ಅವಳ ಕೈಯಲ್ಲಿ ಏನೂ ಮಾಡಲೂ ಸಾಧ್ಯವಾಗುತ್ತಿಲ್ಲ.

ಅಪೇಕ್ಷಾ ಸರಿ ಹೋಗುವುದು ಡೌಟ್

ಇತ್ತ ಅಪೇಕ್ಷಾ ಅತ್ತೆ ಶಕುಂತಲಾ ಜೊತೆಗೆ ಸೇರಿಕೊಂಡು ಈಗಾಗಲೇ ಅರ್ಧ ಕೆಟ್ಟ ಬುದ್ಧಿಗಳನ್ನು ಕಲಿತಿದ್ದಾಳೆ. ಕ್ಲಬ್ ನಲ್ಲಿ ಆಡಿ ಅಪೇಕ್ಷಾ ಎರಡು ಲಕ್ಷ ಸೋತಿದ್ದು, ಈಗ ಹಣ ಕೊಡು ಎಂದು ಪಾರ್ಥನ ಬಳಿ ಕೇಳಿಕೊಳ್ಳುತ್ತಿದ್ದಾಳೆ. ಇದೊಂದು ಸಲ ಹಣ ಕೊಟ್ಟು ಸಹಾಯ ಮಾಡಿದರೆ, ಮತ್ತೆ ಯಾವತ್ತೂ ಕ್ಲಬ್ ಕಡೆ ಮುಖ ಮಾಡುವುದಿಲ್ಲ ಎಂದು ಕೇಳಿಕೊಳ್ಳುತ್ತಾಳೆ. ಅಪೇಕ್ಷಾಳ ಬಳಿ ಮಾತು ತೆಗೆದುಕೊಂಡು ಪಾರ್ಥ ಹಣ ಕೊಡುತ್ತಾನೆ. ನಾಯಿ ಬಾಲ ಡೊಂಕು ಎಂಬಂತೆ ಅಪೇಕ್ಷಾ ಬುದ್ಧಿ ಬದಲಾಗುವ ಲಕ್ಷಣಗಳೇ ಕಾಣುತ್ತಿಲ್ಲ. ಇನ್ನು ಜೀವನ್ ಕುಡಿದು ರಾತ್ರಿ ತಡವಾಗಿ ಮನೆಗೆ ಬಂದಿದ್ದಾನೆ. ಮಹಿಮಾ ಮನೆಯವರಿಗೆ ಗೊತ್ತಾಗದಂತೆ ಮ್ಯಾನೇಜ್ ಮಾಡಿದ್ದಾಳೆ.

Amruthadhaare Serial 28 February episode written update

ಸೊಸೆಗೆ ಮತ್ತೊಂದು ಶಾಕ್ ಕೊಟ್ಟ ಕಿಲಾಡಿ ಅತ್ತೆ

ಶಕುಂತಲಾ ಬೇಕಂತಲೇ ಭೂಮಿಕಾಳನ್ನು ಮನೆಯಿಂದ ಹೊರಗೆ ಕಳಿಸಲು ಪ್ಲಾನ್ ಮಾಡಿಕೊಂಡಿದ್ದಾಳೆ. ಈಗಾಗಲೇ ಭೂಮಿಕಾಳಿಗೆ ನಿನ್ನಲ್ಲೇ ಸಮಸ್ಯೆ ಇದೆ. ನಿನಗೆ ಮಕ್ಕಳಾಗುವುದಿಲ್ಲ ಎಂಬ ಕಹಿ ಸತ್ಯವನ್ನು ಹೇಳಿದ್ದಾಳೆ. ಈ ಶಾಕಿಂಗ್ ನಿಂದ ಇನ್ನೂ ಹೊರಬರಲಾಗದೇ ಭೂಮಿಕಾ ಒದ್ದಾಡುತ್ತಿದ್ದಾಳೆ. ಅದಾಗಲೇ ಶಕುಂತಲಾ ಈಗ ಮತ್ತೆ ಭೂಮಿಕಾಳ ಜೊತೆಗೆ ಮಾತನಾಡಿದ್ದಾಳೆ. ಮಲ್ಲಿ ಮತ್ತು ಮಹಿಮಾ ವಿಚಾರದಲ್ಲೂ ಹೀಗಾದಾಗ ಬೇಸರವಾಗಲಿಲ್ಲ. ಅವರಿಗೆ ಇನ್ನೂ ವಯಸ್ಸಿದೆ. ಆದರೆ, ನಿನಗೆ ಗೌತಮ್ ವಯಸ್ಸು ಮೀರುತ್ತಿದೆ. ಈ ವಿಚಾರವನ್ನು ಹೇಳಲು ಕಷ್ಟವಾಗುತ್ತಿದೆ. ಆದರೂ ಕೂಡ ನಮ್ಮ ವಂಶ ಬೆಳೆಯುವುದೂ ಅಷ್ಟೇ ಮುಖ್ಯ. ಗೌತಮ್ ಗೆ ಮಕ್ಕಳು ಎಂದರೆ ತುಂಬಾ ಇಷ್ಟ. ಹೀಗಾಗಿ ನೀನೇ ಗಟ್ಟಿ ಮನಸ್ಸು ಮಾಡಬೇಕು. ಗೌತಮ್ ಗೆ ಬೇರೆ ಮದುವೆಯನ್ನು ನೀನೇ ಮುಂದೆ ನಿಂತು ಮಾಡಿಸಬೇಕು. ನಿನಗೆ ನೋವಾಗುತ್ತದೆ ಎಂಬುದು ನನಗೆ ಗೊತ್ತು. ಆದರೆ, ನೀನು ಗೌತಮ್ ಬಗ್ಗೆಯೂ ಯೋಚಿಸಬೇಕು.


ವಂಶದ ಹೆಸರಿನಲ್ಲಿ ಕಣ್ಣೀರಿಟ್ಟ ಶಕುಂತಲಾ

ಜಾತಕದ ಪ್ರಕಾರ ಮನೆಯ ಹಿರಿ ಮಗ ಗೌತಮ್ ಗೆ ಮಕ್ಕಳಾಗದೇ ಹೋದರೆ, ಇನ್ಯಾರಿಗೂ ಮಕ್ಕಳಾಗುವುದಿಲ್ಲ. ಈ ವಂಶ ಇಲ್ಲಿಗೆ ನಿಲ್ಲುತ್ತದೆ ಎಂದು ಹೇಳಿದ್ದಾರೆ. ನನಗೆ ಗೊತ್ತು ಇದೆಲ್ಲಾ ವಿಚಾರವನ್ನು ಕೇಳಲು ನಿನಗೆ ಕಷ್ಟವಾಗುತ್ತಿದೆ ಎಂದು. ಆದರೆ ನನಗೂ ಬೇರೆ ದಾರಿ ಇಲ್ಲ. ನೀನೇ ಮುಂದೆ ನಿಂತು ಮದುವೆ ಮಾಡಿದರೆ ಯಾರೂ ಏನೂ ಮಾತನಾಡುವುದಿಲ್ಲ. ಹಾಗಾಗಿ ಗಟ್ಟಿ ಮನಸ್ಸು ಮಾಡಿಕೊಂಡು ಗೌತಮ್ ಗೆ ಮದುವೆ ಮಾಡಿಸು. ನಾನು ನಿನ್ನ ಜಾಗದಲ್ಲಿ ಇದ್ದಿದ್ದರೆ ಹಿಂದೆ ಮುಂದೆ ಯೋಚಿಸುತ್ತಿರಲಿಲ್ಲ. ಬೇಕಿದ್ದರೆ ನಿನ್ನ ಕಾಲು ಹಿಡಿದುಕೊಳ್ಳುತ್ತೇನೆ ಎಂದು ಶಕುಂತಲಾ ಕಣ್ಣೀರು ಹಾಕುತ್ತಾ ನಟಿಸುತ್ತಾಳೆ.


ಅತ್ತೆಯ ಪ್ಲಾನ್ ಗೆ ಬಲಿಯಾಗುತ್ತಾಳಾ ಭೂಮಿಕಾ..?

ಈಗ ಭೂಮಿಕಾ ಶಕುಂತಲಾ ಮಾತನ್ನು ನಂಬಿ ಗೌತಮ್ ಗೆ ಬೇರೆ ಮದುವೆ ಮಾಡಿಸಲು ಮುಂದಾಗುತ್ತಾಳಾ..? ಇಲ್ಲವೇ ಬೇರೆ ಆಸ್ಪತ್ರೆಗೆ ತೆರಳಿ ಮತ್ತೆ ಚೆಕ್ ಮಾಡಿಕೊಂಡು ಶಕುಂತಲಾ ಆಟವನ್ನು ಬಯಲಿಗೆಳೆಯುತ್ತಾಳೋ ಗೊತ್ತಿಲ್ಲ. ಸಂಕಷ್ಟದಲ್ಲಿರುವ ಭೂಮಿಕಾಳಿಗೆ ಭಾಗ್ಯ ಸಹಾಯ ಮಾಡುತ್ತಾಳಾ ಎಂಬ ಕುತೂಹಲವಂತೂ ಮೂಡಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X