Amruthadhaare:ಮಲ್ಲಿಯನ್ನು ನೋಡಿ ಕೋಪಗೊಂಡ ಜೈ ದೇವ್; ಗಾಯದ ಮೇಲೆ ಬರೆ ಎಳೆದ ಪಾರ್ಥ

By ಪೂರ್ವ

ಭೂಮಿಕಾ ಮಾತ್ರ ನ್ಯಾಯದ ಪರ ನಿಂತು ಮಲ್ಲಿಯನ್ನು ದೇಸಾಯಿ ಕುಟುಂಬದ ಸೊಸೆ ಆಗಿ ಮಾಡುತ್ತಾಳೆ. ಗೌತಮ್ ಈ ಬಗ್ಗೆ ಬಹಳ ಬೇಸರ ಪಟ್ಟುಕೊಂಡು ಇರುತ್ತಾನೆ . "ನನ್ನ ತಮ್ಮನಿಗೆ ನಾನು ಏನು ಕಡಿಮೆ ಮಾಡಿ ಇರಲಿಲ್ಲ. ಆದರೂ, ಕೂಡ ಇಂತಹ ಕೆಲಸ ಮಾಡಿ ಬಿಟ್ಟನಲ್ಲ... ನೀವೇನಾದರೂ ಇರುತ್ತಿರಲಿಲ್ಲ ಎಂದಾದರೆ ಖಂಡಿತವಾಗಿಯೂ ಅಪ್ಪಿ ಜೀವನ ಹಾಳಾಗಿ ಹೋಗುತ್ತಿತ್ತು" ಎಂದು ಬಹಳ ಬೇಸರ ಮಾಡಿಕೊಳ್ಳುತ್ತಾನೆ. ಇದೀಗ ಭೂಮಿಕಾಗೆ ಗೌತಮ್ ಒಳ್ಳೆತನವನ್ನು ಎಲ್ಲರೂ ದುರುಪಯೋಗ ಮಾಡಿಕೊಳ್ಳುತ್ತಾ ಬರುತ್ತಿದ್ದಾರೆಂದು ತಿಳಿದಿದೆ.

ಆದರೆ, ಇದನ್ನು ಯಾರ ಬಳಿಯೂ ಹೇಳಿಕೊಂಡಿಲ್ಲ. ಇನ್ನೂ ಮಲ್ಲಿಗೆ ಜೈ ದೇವ್ ಅಂದರೆ ಬಹಳ ಭಯ. ಆತ ಮಲ್ಲಿಗೆ ಆಗಾಗ ಹಿಂಸೆ ಕೊಡಲು ಮುಂದಾಗಬಹುದು ಎನ್ನುವುದು ಭೂಮಿಕಾಗೆ ಚೆನ್ನಾಗಿ ತಿಳಿದಿತ್ತು. ಆದ ಕಾರಣ ಜೈ ದೇವ್‌ಗೆ ಮೊದಲೇ ವಾರ್ನಿಂಗ್ ಕೂಡ ಮಾಡಿ ಇರುತ್ತಾಳೆ. ಇದರಿಂದ ಜೈ ದೇವ್‌ಗೆ ಏನು ಮಾಡಲು ಸಾಧ್ಯ ಆಗುವುದಿಲ್ಲ. ಇನ್ನೂ ಮಲ್ಲಿಗೆ ಭೂಮಿಕಾ ಸಮಾಧಾನದ ಮಾತುಗಳನ್ನು ಹೇಳಿದ್ದಾಳೆ.

Amruthadhaare serial february 29th episode

"ಮಲ್ಲಿ ನೀನು ಈ ಮನೆಯ ಸೊಸೆ. ನೀನು ಜೈ ದೇವ್ ಹೆಂಡತಿ ಆದ ಕಾರಣ ನೀನು ಯಾವುದೇ ರೀತಿಯ ಅಂಜಿಕೆ ಮಾಡಿಕೊಳ್ಳುವ ಅಗತ್ಯ ಇಲ್ಲ" ಎಂದು ಹೇಳುತ್ತಾಳೆ. ಇನ್ನೂ ಜೊತೆಗೆ ಊಟ ಮಾಡುವ ಎಂದು ಡೈನಿಂಗ್ ರೂಮ್‌ಗೆ ಕರೆದುಕೊಂಡು ಬರುತ್ತಾಳೆ. ಆಕೆಯನ್ನು ನೋಡಿ ಜೈ ದೇವ್ ಮಾತ್ರ ಬಹಳ ಕೋಪಗೊಂಡರೆ, ಶಕುಂತಲಾ ದೇವಿ ಮಾತ್ರ ಮನೆಯ ಕೆಲಸದವಳು ಇದೀಗ ನನ್ನ ಸೊಸೆಯಾದಳು ಎನ್ನುವ ಲುಕ್ ಇತ್ತು.

ಮಲ್ಲಿಯನ್ನು ಜೈ ದೇವ್ ಪಕ್ಕ ಕೂರಿಸಿದ ಭೂಮಿಕಾ

ಭೂಮಿಕಾ ಬಾ ಊಟಕ್ಕೆ ಕೂರೋಣ ಎಂದಾಗ ಮಲ್ಲಿ ಮೆತ್ತಗೆ ಹೋಗಿ ಕೆಳಗೆ ಕುಳಿತುಕೊಂಡು ಬಿಡುತ್ತಾಳೆ. ಇದನ್ನು ನೋಡಿದ ಜೈ ದೇವ್‌ಗೆ ಸಿಟ್ಟು ನೆತ್ತಿಗೇರಿತು. ಹಾಗೆಯೇ ಜೈ ದೇವ್ ಮಾವನಿಗೆ ಕೂಡ ಮುಜುಗರ ಅನ್ನಿಸಿ ಬಿಟ್ಟಿತು ಕೊನೆಗೆ ಮಲ್ಲಿಯನ್ನು ಮೆತ್ತಗೆ ಕರೆದು ನೀನು ಕುಳಿತುಕೊಳ್ಳಬೇಕಾದ ಸ್ಥಳ ಇದಲ್ಲ ಎಂದು ಬುದ್ದಿ ಮಾತು ಹೇಳುತ್ತಾಳೆ ಭೂಮಿಕಾ.

Amruthadhaare serial february 29th episode

ಮಲ್ಲಿಗೆ ಧೈರ್ಯ ತುಂಬಿದ ಭೂಮಿಕಾ

ಬಳಿಕ ನೀನು ಕುಳಿತುಕೊಳ್ಳಬೇಕಾದ ಸ್ಥಳ ಇಲ್ಲಿ ಅಲ್ಲ ಮಲ್ಲಿ. ಇಲ್ಲಿ ಎಂದು ಜೈ ದೇವ್ ಪಕ್ಕ ಕುಳ್ಳಿರಿಸುತ್ತಾರೆ. ಇನ್ನೂ ಜೈ ದೇವ್ ಮಾತ್ರ ಕೋಪದಲ್ಲಿ ಇರುವಾಗ ಪಾರ್ಥ ತನಗೆ ಮಾಡಿದ ನೋವನ್ನು ಜೈ ದೇವ್‌ಗೆ ಮಾಡುತ್ತಾನೆ. ಅಂದು ಅಪೇಕ್ಷಾನನ್ನು ಅತ್ತಿಗೆ ಎಂದು ಕರೆಯಿಸಿದನ್ನು ನೆನಪು ಮಾಡಿಕೊಂಡ ಪಾರ್ಥ. "ಅಣ್ಣ ಇಲ್ಲಿ ಎಲ್ಲಾ ಸ್ವೀಟ್‌ಗಳಿದೆ. ನೀನು ಚಿಕ್ಕ ಅತ್ತಿಗೆಗೆ ಒಂದು ಚಂದದ ಸ್ವೀಟ್ ತಿನ್ನಿಸು" ಎಂದು ಹೇಳುತ್ತಾನೆ. ಇದನ್ನು ಕೇಳಿ ಜೈ ದೇವ್ ಮೆತ್ತಗೆ ಒಂದು ಸ್ವೀಟ್ ಅನ್ನು ತೆಗೆದುಕೊಂಡು ತಿನ್ನಿಸುತ್ತಾನೆ.

ಅತ್ತೆಯ ಮನೆಗೆ ಹೋದ ಪಾರ್ಥ

ಇನ್ನೂ ಪಾರ್ಥ, ಅಪೇಕ್ಷಾ ಮನೆಗೆ ಹೋಗುತ್ತಾನೆ. ಇತ್ತ ಪಾರ್ಥನನ್ನು ನೋಡಿ ಅಪೇಕ್ಷಾ ತಾಯಿ ಅಳುತ್ತಾರೆ. ನಮ್ಮ ಅಪ್ಪಿ ಮನಸಿಗೆ ತುಂಬಾ ಹಚ್ಚಿಕೊಂಡಿದ್ದಾರೆ ಎಂದು ಅಳುತ್ತಾ ಹೇಳುತ್ತಾರೆ. ಬಳಿಕ ಪಾರ್ಥ ಬಂದಿದ್ದಾನೆ ಕಾಫಿ ಮಾಡಮ್ಮ ಎಂದು ಹೇಳುತ್ತಾರೆ ಅಪೇಕ್ಷಾ ತಾಯಿ. ಅಪೇಕ್ಷಾಗೆ ಪಾರ್ಥ ಮೇಲೆ ಕೋಪ ಯಾಕೆಂದರೆ, ಇಬ್ಬರು ಒಬ್ಬರಿಗೊಬ್ಬರು ತುಂಬಾನೇ ಪ್ರೀತಿ ಮಾಡುತ್ತಾರೆ. ಆದರೆ ಇವರಿಬ್ಬರ ಪ್ರೀತಿಗೆ ಬಿದ್ದ ಕೆಟ್ಟ ದೃಷ್ಟಿಯಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಆದ ಕಾರಣ ಅಪ್ಪಿ ಮಾತ್ರ ಪಾರ್ಥ ಜೊತೆ ಮಾತೇ ಬಿಟ್ಟಿದ್ದಾಳೆ.

More from Filmibeat

English summary
Amruthadhaare serial february 29th episode update
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X