Amruthadhaare Serial; ಶಕುಂತಲಾದೇವಿ ತಲೆಗೆ ರಾಡ್ ಎಸೆದ ಭೂಮಿಕಾ; ಮುಂದೇನಾಯ್ತು?
ಶಕುಂತಲಾಗೆ ಭಾಗ್ಯಾನ ಕಂಡರೆ ಸಿಕ್ಕಾಪಟ್ಟೆ ದ್ವೇಷ. ಭಾಗ್ಯಾ ನಮ್ಮ ಮನೆಯಲ್ಲಿ ಹೆಚ್ಚು ಸಮಯ ಇದ್ದರೆ ನಮಗೆ ಬಹಳ ದೊಡ್ಡ ಸಮಸ್ಯೆ. ಭಾಗ್ಯಾ ಯಾವತ್ತೂ ಕೂಡ ಅಪಾಯಕಾರಿ ಎನ್ನುವುದು ಶಕುಂತಲಾಗೆ ತಿಳಿದಿದೆ. ಗೌತಮ್ ತಂದೆಯ ಎರಡನೇ ಹೆಂಡತಿಯಾಗಿ ಶಕುಂತಲಾ ಈ ಮನೆಗೆ ಎಂಟ್ರಿ ಕೊಟ್ಟಿದ್ದಳು. ಆ ವೇಳೆ ಮೊದಲನೇ ಹೆಂಡತಿ ಭಾಗ್ಯಾಗೆ ಶಕುಂತಲಾ ದೇವಿ ಸಾಕಷ್ಟು ಹಿಂಸೆಯನ್ನು ನೀಡಿದ್ದಳು. ಅದನ್ನೆಲ್ಲ ಸಹಿಸಿಕೊಂಡು ಭಾಗ್ಯಾ ಅದ್ಹೇಗೋ ಬಾಳ್ವೆ ನಡೆಸುತ್ತಿರುತ್ತಾಳೆ. ಆದರೆ ಶಕುಂತಲಾ ದೇವಿ ಮಾತ್ರ ಆಸ್ತಿಯ ವಿಚಾರಕ್ಕಾಗಿ ಭಾಗ್ಯಾಳನ್ನು ಮನೆಯಿಂದ ಹೊರ ಹಾಕಿದ್ದಳು.
ಶಾಕುಂತಲಾದೇವಿಗೆ ಗೌತಮ್ ಆಸ್ತಿಯ ಮೇಲೆ ಕಣ್ಣು. ಆಕೆಗೆ ಭಾಗ್ಯಾಳನ್ನು ಹೇಗಾದರೂ ಮಾಡಿ ಸಾಯಿಸಬೇಕು. ಆಸ್ತಿಯನ್ನು ತನ್ನೆಡೆಗೆ ತೆಗೆದುಕೊಳ್ಳಬೇಕು. ಈ ಕಾರಣಕ್ಕೆ ಭಾಗ್ಯಾಳನ್ನು ಸಾಯಿಸುವ ಪ್ರಯತ್ನ ಮಾಡುತ್ತಾಳೆ. ಭಾಗ್ಯಾ ಹಾಗೂ ಶಕುಂತಲಾ ದೇವಿ ಹಿಂಸೆಯಿಂದಾಗಿ ತನ್ನ ಮಗಳ ಜೊತೆಗೆ ನಾಪತ್ತೆಯಾಗಿ ಬಿಡುತ್ತಾರೆ. ಆ ದಿನಗಳಿಂದ ಶಕುಂತಲಾ ದೇವಿ ಬಹಳ ಖುಷಿಯಿಂದ ಜೀವನ ಸಾಗಿಸಿದರೆ ಭಾಗ್ಯಾ ಮಾತ್ರ ನರಕದಲ್ಲಿ ಬೇಯುತ್ತಿರುತ್ತಾಳೆ. ಭಾಗ್ಯಾ ಮಗಳು ಬಹಳ ಕಷ್ಟ ಪಟ್ಟು ಅಮ್ಮ ಮಗಳ ಜೊತೆಗೆ ಜೀವನ ಸಾಗಿಸಿದ್ದಳು. ಇತ್ತ ಶಕುಂತಲಾ ದೇವಿ ಮತ್ತೆ ಭಾಗ್ಯಾಳನ್ನು ಕೊಲೆ ಮಾಡುವ ಹುನ್ನಾರ ನಡೆಸುತ್ತಾಳೆ. ಭಾಗ್ಯಾ ಯಾವಾಗ ಶಕುಂತಲಾ ಮುಖಕ್ಕೆ ಊಟವನ್ನು ಉಗುಳುತ್ತಾಳೋ ಆಗ ಮತ್ತೆ ಆಕೆಯ ಮೇಲೆ ದ್ವೇಷ ಹುಟ್ಟುತ್ತದೆ. ಹೇಗಾದರೂ ಮಾಡಿ ಭಾಗ್ಯಾಳನ್ನು ಕೊಂದು ಬಿಡಬೇಕು ಅಂದುಕೊಳ್ಳುತ್ತಾಳೆ.

ಭಾಗ್ಯಾಳನ್ನು ಸಾಯಿಸುವುದು ಸುಲಭದ ಕೆಲಸ ಏನು ಇಲ್ಲ. ಸುಧಾ ಎಷ್ಟೊತ್ತಿಗೂ ಭಾಗ್ಯಾ ಜೊತೆಗೆ ಇರುತ್ತಾಳೆ. ಆಕೆ ಇಲ್ಲದ ಸಮಯದಲ್ಲಿ ಭಾಗ್ಯಾಳನ್ನು ಮುಗಿಸಬೇಕು ಎಂದು ಆಲೋಚನೆ ಮಾಡುತ್ತಾಳೆ. ಇತ್ತ ಮಹಿಮಾ ಹಾಗೆಯೇ ಜೀವ ಒಂದಾದರಲ್ಲ ಎನ್ನುವ ಖುಷಿಯಲ್ಲಿ ಭೂಮಿಕಾ ಆಕೆಯ ಗಂಡನ ಮನೆಗೆ ಬರುತ್ತಾಳೆ. ಗೌತಮ್‌ಗೆ ಭೂಮಿಕಾಳನ್ನು ನೋಡಿ ಖುಷಿ ಪಡುತ್ತಾಳೆ. ಯಾಕೆಂದರೆ ಗೌತಮ್ ಹಾಗೂ ಭೂಮಿಕಾ ಬಹಳ ಪ್ರೀತಿ ಮಾಡುತ್ತಿರುತ್ತಾರೆ. ಗೌತಮ್‌ನನ್ನು ಒಂದು ನಿಮಿಷವೂ ಬಿಟ್ಟಿರದ ಭೂಮಿ ಇದೀಗ ತಮ್ಮ ಹಾಗೂ ತಮ್ಮನ ಹೆಂಡತಿಯನ್ನು ಒಂದು ಮಾಡುವ ಕೆಲಸ ಮಾಡುತ್ತಿದ್ದಾರೆ.
ಗಂಡನ ಮನೆಗೆ ಬಂದ ಭೂಮಿಕಾ
ಭೂಮಿಕಾ ಜೊತೆ ಗೌತಮ್ ಮಾತಿಗೆ ತಿರುಗುತ್ತಾನೆ. ಭೂಮಿಕಾ ನೀವು ಇಲ್ಲದೆ ಮನೆ ಬಹಳ ಬಿಕೋ ಎಂದು ಹೇಳುತ್ತಿತ್ತು. ನೀವೆಂದರೆ ನಮಗೆ ಬಹಳಷ್ಟು ಪ್ರೀತಿ. ಯಾವತ್ತೂ ನನ್ನ ಬಿಟ್ಟು ಹೋಗಬೇಡಿ ಎಂದು ಹೇಳಿದಾಗ ಭೂಮಿಕಾ ಕೂಡ ಮತ್ತೆ ಗಂಡನ ಜೊತೆ ಬಹಳ ಪ್ರೀತಿಯಿಂದ ಇರುತ್ತಾಳೆ. ಇತ್ತ ಸುಧಾ ಮಗಳನ್ನು ನೋಡಿದ ಭೂಮಿಕಾ ಬಹಳ ಪ್ರೀತಿಯಿಂದ ಅಪ್ಪಿಕೊಳ್ಳುತ್ತಾಳೆ. ಭೂಮಿಕಾ ಮನೆಗೆ ಬಂದಿರುವುದು ಎಲ್ಲರಿಗೂ ಖುಷಿ. ಆದರೆ ಶಕುಂತಲಾ ದೇವಿಗೆ ಮಾತ್ರ ಭೂಮಿಕಾ ಮನೆಗೆ ಬಂದಿರುವುದು ಸ್ವಲ್ಪವೂ ಇಷ್ಟ ಇರುವುದಿಲ್ಲ.

ಭಾಗ್ಯಾಳನ್ನು ಕೊಲ್ಲಲು ಬಂದ ಶಕುಂತಲಾ
ಇನ್ನು ರಾತ್ರಿಯ ವೇಳೆ ಶಕುಂತಲಾ ದೇವಿ ಭಾಗ್ಯಾಳನ್ನು ಹೇಗಾದರೂ ಮಾಡಿ ಸಾಯಿಸಲೇಬೇಕು ಎನ್ನುವ ಪ್ರಯತ್ನ ಮಾಡುತ್ತಾಳೆ. ಭಾಗ್ಯಾ ನಿದ್ರಿಸುತ್ತಿರುವಾಗ ಆಕೆಯ ಮುಖದ ಮೇಲೆ ದಿಂಬನ್ನುಯಿಟ್ಟು ಆಕೆಯನ್ನು ಸಾಯಿಸುವ ಪ್ರಯತ್ನ ಮಾಡುತ್ತಾಳೆ. ಭಾಗ್ಯಾಗೆ ಏನೋ ಅಪಾಯ ಆಗಿದೆ ಎಂದು ಮನೆ ಮಂದಿಯೆಲ್ಲ ಓಡೋಡಿ ಬರುತ್ತಾರೆ. ಮನೆಯವರು ಬರುವಾಗ ಶಕುಂತಲಾ ಅಡಗಿ ಕುಳಿತುಕೊಳ್ಳುತ್ತಾಳೆ. ಆ ಕೂಡಲೇ ಭಾಗ್ಯಾ ಬಳಿ ಗೌತಮ್ ಬಂದಾಗ ಏದುಸಿರು ಬಿಡುತ್ತಿರುವುದನ್ನು ನೋಡಿ ಶಾಕ್‌ಗೆ ಒಳಗಾಗುತ್ತಾನೆ. ಬಳಿಕ ಎಲ್ಲರೂ ಅವರವರ ರೂಮಿಗೆ ಹೋಗಿದ್ದನ್ನು ತಿಳಿದು ಶಕುಂತಲಾ ಮೆಲ್ಲಗೆ ರೂಮಿನಿಂದ ಹೊರಗೆ ಹೋಗುತ್ತಾಳೆ.
ಭೂಮಿಕಾ ಧ್ವನಿ ಕಂಡು ಓಡಿದ ಶಕುಂತಲಾ
ಹೊರಗಡೆ ಏನೋ ಸದ್ದಾದ ಹಾಗೆ ಆಗುತ್ತದೆ. ಆ ವೇಳೆ ಭೂಮಿಕಾ ಅಲ್ಲಿಯೇ ಇರುತ್ತಾಳೆ. ಭೂಮಿಕಾ ಯಾರದು ಎಂದು ಜೋರಾಗಿ ಕೇಳಿದಾಗ ಶಕುಂತಲಾ ದೇವಿ ಜೋರಾಗಿ ಒಡಲು ಶುರು ಮಾಡುತ್ತಾಳೆ. ಭೂಮಿಕಾ ಯಾರದು ಓಡುತ್ತಿರುವುದು ಎಂದು ಹೇಳಿ ಜೋರಾಗಿ ಕೈ ಗೆ ಸಿಕ್ಕ ರಾಡ್ ಎಸೆಯುತ್ತಾಳೆ. ಆ ರಾಡ್ ಶಕುಂತಲಾ ದೇವಿ ಹಿಂಭಾಗದ ತಲೆಗೆ ಬಡಿಯುತ್ತದೆ. ಕರೆಂಟ್ ಹೋಗಿದ್ದ ಕಾರಣ ಶಕುಂತಲಾ ದೇವಿ ಎಂದು ಭೂಮಿಕಾಗೆ ತಿಳಿಯದೇ ರಾಡ್ ಎಸೆದಿರುತ್ತಾಳೆ. ಮುಂದೇನು ಆಗುತ್ತೆ ಎಂದು ನೋಡಬೇಕಿದೆ.


Click it and Unblock the Notifications











