Amruthadhaare Serial:ಭೂಮಿಕಾಗೆ ಮಾತಿನಲ್ಲಿ ತಿವಿದ ಗೌತಮ್? ತಂದೆಯ ಮನೆಗೆ ಹೊರಟ ಮಡಿದಿ ಕರೀತಾನಾ?

By ಪೂರ್ವ

ಮಹಿಮಾ ಜೀವ ಮಾತಿಗೆ ನೊಂದು ಗಂಡನ ಮನೆಬಿಟ್ಟು ತವರು ಮನೆ ಸೇರಿಕೊಂಡಿದ್ದಾಳೆ. ಮಹಿಮಾಗೆ ಜೀವ ಎಂದರೆ ಬಹಳಷ್ಟು ಪ್ರೀತಿ. ಪ್ರೀತಿಸಿ ಮದುವೆಯಾದ ಜೋಡಿ ಇದೀಗ ಬೇರೆ ಬೇರೆ ಆಗುವ ಸಂದರ್ಭ ಬಂದಿದೆ. ಆದರೆ, ಗೌತಮ್ ಹಾಗೆಯೇ ಭೂಮಿಕಾ ಇವರಿಬ್ಬರನ್ನು ಒಂದು ಮಾಡುವತ್ತ ಹೆಚ್ಚು ಗಮನ ಕೊಡಬೇಕಾಗಿದೆ. ಗೌತಮ್‌ಗೆ ಬಹಳ ಆತಂಕ ಆಗುತ್ತದೆ. ಮಹಿಮಾ ಯಾವತ್ತೂ ಜೀವ ಬಿಟ್ಟು ಕೊಟ್ಟು ಮಾತನಾಡುತ್ತಿರಲಿಲ್ಲ. ಆದರೆ, ಇದೀಗ ಮಹಿಮಾ ನೇರವಾಗಿ ನನ್ನ ಮನೆಗೆ ಬಂದಿದ್ದಾಳೆ ಎಂದಾದರೆ ಏನೋ ನಡೆಯಬಾರದ್ದು ಅಲ್ಲಿ ನಡೆದು ಹೋಗಿದೆ ಎನ್ನುವಂತಹ ಆಲೋಚನೆ ಗೌತಮ್‌ಗೆ ಮೂಡುತ್ತದೆ.

ಗೌತಮ್ ನೇರವಾಗಿ ಮಹಿಮಾ ಜೊತೆ ಚರ್ಚೆ ಮಾಡುತ್ತಾನೆ. ಮನೆ ಬಿಟ್ಟು ಬರುವಂತಹ ಪ್ರಮೇಯ ಯಾಕೆ ಬಂತು? ಅನ್ನೋ ಪ್ರಶ್ನೆಯನ್ನು ಗೌತಮ್ ಕೇಳುತ್ತಾನೆ. ಆಗ ಮಹಿಮಾ ನಡೆದ ಘಟನೆಗಳನ್ನು ವಿವರಿಸುತ್ತಾಳೆ. ಹಾಗೆಯೇ ಜೀವ ಮಾತುಗಳು ಬಹಳಷ್ಟು ಬದಲಾವಣೆಯಾಗಿದೆ ಎನ್ನುವುದನ್ನು ತನ್ನ ಅಣ್ಣನ ಬಳಿ ಹೇಳಿ ಕೊಳ್ಳುತ್ತಾಳೆ. "ನನ್ನ ಜೊತೆ ಇನ್ಮೇಲೆ ನೀನು ನನ್ನ ಹಂಗಲ್ಲಿ ಇರುತ್ತೀಯ ಎಂದು ಜೀವ ಹೇಳಿದ. ಅದಕ್ಕಾಗಿ ನಾನು ಮನೆ ಬಿಟ್ಟು ಬಂದೆ" ಎಂದು ಮಹಿಮಾ ಬಹಳ ಬೇಸರದಿಂದ ಅಣ್ಣನ ಬಳಿ ಹೇಳಿಕೊಳ್ಳುತ್ತಾಳೆ.

Amruthadhaare serial January 28th episode Bhoomika and Gautham Fight

ಜೀವ ಬದಲಾಗುವುದಕ್ಕೆ ಕಾರಣ ಏನು ಎನ್ನುವುದು ಗೌತಮ್‌ಗೆ ಈಗಾಗಲೇ ತಿಳಿದು ಹೋಗಿದೆ. ಗೌತಮ್ ಅದೆಷ್ಟೋ ಬಾರಿ ರಾಜೇಂದ್ರನನ್ನು ಬೆದರಿಸಿದರು ಹೆದರಿಸಿದರು ಅವನು ಮಾತ್ರ ಯಾವುದಕ್ಕೂ ಕ್ಯಾರೆ ಎನ್ನುತ್ತಿಲ್ಲ. ಇದೀಗ ಭೂಮಿಕಾ ತಮ್ಮನನ್ನು ಗೌತಮ್ ವಿರುದ್ಧ ಎತ್ತಿ ಕಟ್ಟುವ ಎಲ್ಲಾ ಲಕ್ಷಣ ಕಾಣಿಸುತ್ತಿದೆ. ಇದರ ಹಿಂದಿನ ಸೂತ್ರಧಾರಿ ರಾಜೇಂದ್ರ. ಈ ವಿಚಾರ ಈಗಾಗಲೇ ಗೌತಮ್‌ಗೆ ತಿಳಿದು ಹೋಗಿದೆ. ಇನ್ನು ಭೂಮಿಕಾ ತನ್ನ ಗಂಡನ ಬಳಿ ಹೋಗಿ ಗಂಡ ಹೆಂಡತಿ ಇಬ್ಬರೂ ಮಾತನಾಡಿಕೊಂಡು ಜಗಳವನ್ನು ಮುಂದುವರಿಸದ ಹಾಗೆ ನಾವು ನೋಡಿಕೊಳ್ಳಬೇಕು. ಅದು ಬಿಟ್ಟು ಇಬ್ಬರ ನಡುವೆ ತಂದಿಡುವ ಕೆಲಸ ಮಾಡಬಾರದು ಎನ್ನುವ ಉದ್ದೇಶದಲ್ಲಿ ಗೌತಮ್ ಬಳಿ ಭೂಮಿಕಾ ಮಾತನಾಡಿದಾಗ, ಗೌತಮ್ ಕೊಂಚ ಕಟುವಾಗಿಯೇ ಭೂಮಿಕಾಗೆ ಹೇಳುತ್ತಾನೆ.

ಗೌತಮ್ ಮಾತನ್ನೂ ಕೇಳಿಸಿಕೊಂಡ ಮಹಿಮಾ

"ನೋಡಿ ಭೂಮಿಕಾ ಅವರೇ ನನ್ನ ಕುಟುಂಬದವರ ಸುದ್ದಿಗೆ ಯಾರೆ ಬಂದರು ಕೂಡ ನಾನು ಯಾರನ್ನೂ ಸುಮ್ಮನೆ ಬಿಡುವ ಮಾತೆ ಇಲ್ಲ. ಅದು ಯಾರೆ ಆಗಿರಲಿ. ನೀವು ನಿಮ್ಮ ಕೆಲಸಗಳನ್ನು ನೋಡುತ್ತಾ ಸುಮ್ಮನಿರಿ" ಎಂದು ಕಟುವಾಗಿ ಹೇಳುತ್ತಾಳೆ. ಈ ಮಾತುಗಳನ್ನು ಭೂಮಿಕಾ ಕೇಳಿಸಿಕೊಳ್ಳುತ್ತಿರುತ್ತಾಳೆ. ಇನ್ನು ಭೂಮಿಕಾ ಲಗೇಜ್ ಎಲ್ಲಾ ಪ್ಯಾಕ್ ಮಾಡಿಕೊಂಡು ತನ್ನ ತವರು ಮನೆಗೆ ಬೇಸರ ಪಟ್ಟುಕೊಂಡು ಹೋಗುತ್ತಾಳೆ. ಇತ್ತ ಭೂಮಿಕಾ ಹಾಗೆಯೇ ಗೌತಮ್ ಇಬ್ಬರು ಡ್ರಾಮಾ ಮಾಡುತ್ತಿದ್ದಾರೆ. ಜೀವ ಹಾಗೂ ಮಹಿಮಾಳನ್ನು ಒಂದು ಮಾಡುವ ಕೆಲಸವನ್ನು ಬಹಳ ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ.

ಅಕ್ಕನನ್ನು ನೋಡಿ ಶಾಕ್ ಆದ ಜೀವ

ತವರು ಮನೆಗೆ ಬಂದ ಅಕ್ಕನನ್ನು ನೋಡಿ ಜೀವಗೆ ಖುಷಿ ಆಗುತ್ತದೆ. ಹಾಗೆಯೇ ಶಾಕ್ ಆಗುತ್ತದೆ. "ಮಹಿಮಾ ಮನೆಗೆ ಬಂದ ಬಳಿಕ ನನಗೂ ನಿನ್ನ ಭಾವನಿಗೆ ಕೊಂಚ ವಾಗ್ವಾದ ಆಯಿತು. ಆದ ಕಾರಣ ನಾನು ಮನೆ ಬಿಟ್ಟು ಬಂದೆ" ಎಂದು ಹೇಳಿದಾಗ ಜೀವಗೆ ಆಘಾತ ಆಗುತ್ತದೆ. ಹಾಗೆಯೇ ಸದಾಶಿವ ಮೇಷ್ಟ್ರು ಮಂದಾಕಿನಿಗೆ ಇಲ್ಲೇನು ನಡೆಯುತ್ತಿದೆ ಎನ್ನುವ ರೀತಿ ಇಬ್ಬರು ಮುಖ ಮುಖ ನೋಡಿಕೊಳ್ಳುತ್ತಾರೆ. ಇತ್ತ ಭೂಮಿಕಾ ಹಾಗೂ ಗೌತಮ್ ಡ್ರಾಮಾ ಏನೋ ಮಾಡುತ್ತಿದ್ದಾರೆ. ಆದರೆ ಅವರಿಬ್ಬರಿಗೂ ಒಬ್ಬರನ್ನೊಬ್ಬರು ಬಿಟ್ಟಿರಲು ಸಾಧ್ಯ ಆಗುತ್ತಿಲ್ಲ.

More from Filmibeat

English summary
Amruthadhaare serial January 28th episode Bhoomika and Gautham Fight:
Read more about: tv serial filmibeat original
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X