Amruthadhaare ;ಮಗಳ ಕನವರಿಕೆಯಲ್ಲಿಯೇ ಕೊನೆಯುಸಿರೆಳೆದ ರಾಜೇಂದ್ರ ಭೂಪತಿ !

ಮಲ್ಲಿ ತನ್ನ ಮಗಳು ಎಂದು ಗೊತ್ತಾದ ತಕ್ಷಣ ಪ್ರಾಯಶ್ಚಿತದ ಬೇಗೆಯಲ್ಲಿ ಬೇಯ್ತಿರುವ ರಾಜೇಂದ್ರ ಭೂಪತಿ, ಜೈದೇವ್ ಮನವೊಲಿಸುವ ಪ್ರಯತ್ನ ಮಾಡುತ್ತಾನೆ. ಇವಳಿಗಿಂತ ಅವಳೇ ನಿನಗೆ ಸರಿಯಾದ ಜೋಡಿ, ನೀನು ಮೋಸ ಮಾಡ್ತೀಯಾ ಎಂದು ಗೊತ್ತಿದ್ದರೂ ಕೂಡ ಅವಳು ನಿನ್ನ ಜೊತೆ ಬದುಕಿದ್ದಾಳೆ, ನಿನ್ನ ನಂಬ್ಕೊಂಡಿದ್ದಾಳೆ ಎನ್ನುತ್ತಾನೆ. ನಿಮ್ಮ ಇಬ್ಬರನ್ನು ನಾನು ಒಂದು ಮಾಡಿದಾಗಲೇ ಅವಳು ನನ್ನ ತಂದೆ ಅಂತ ಒಪ್ಪಿಕೊಳ್ಳುವುದು ಎಂದು ಹೇಳುತ್ತಾನೆ.

ಆ ಅವಕಾಶ ನನ್ನಿಂದ ಕಿತ್ಕೋಬೇಡ, ನನ್ನ ಮಗಳ ಜೊತೆ ಅವಕಾಶ ನನಗೆ ಮಾಡಿಕೊಡು ಎಂದು ಬೇಡಿಕೊಳ್ಳುತ್ತಾನೆ. ಆದರೆ ರಾಜೇಂದ್ರ ಭೂಪತಿಯ ಮಾತುಗಳಿಗೆ ಜೈದೇವ್ ಮನ್ನಣೆ ನೀಡಲ್ಲ. ಬದಲಿಗೆ ದಿಯಾ ಜೊತೆ ಸೇರಿ ಕಿಡಿ ಕಾರುತ್ತಾನೆ. ಮನೆಯಿಂದ ಹೊರ ಹೋಗುವಂತೆ ಗದರುತ್ತಾನೆ.

amruthadhaare-serial-july-01-episode-written-update

ಜೈದೇವ್ ಮಾತುಗಳಿಂದ ಕೋಪಗೊಳ್ಳುವ ರಾಜೇಂದ್ರ ಭೂಪತಿ ನನಗೆ ಅವಮಾನ ಮಾಡ್ತಿದ್ದೀಯಾ ? ನಾನು ಯಾರು ಅಂತ ಗೊತ್ತು ತಾನೇ ? ನನ್ನ ಇನ್ನೊಂದು ಮುಖ ನೋಡಿದೀಯಾ ತಾನೇ ? ನನ್ನ ಮಗಳ ಜೀವನ ಹಾಳು ಮಾಡಿ ನೀವು ಇಬ್ಬರು ಅದ್ಹೇಗೆ ನೆಮ್ಮದಿಯಿಂದ ಇರ್ತೀರಾ ಎಂದು ನಾನು ನೋಡ್ತೀನಿ ಎಂದು ಹೇಳುತ್ತಾನೆ. ನನ್ನ ಮಗಳ ಜೊತೆಯಲ್ಲಿಯೇ ನೀನು ಬದುಕಬೇಕು ನಿನಗೆ ಬೇರೆ ಆಯ್ಕೆ ಇಲ್ಲ ಯಾಕೆಂದರೆ ಇವಳೇ ಇರಲ್ಲ ಎಂದು ಹೇಳಿ ಗನ್ ತೆಗೆಯುತ್ತಾನೆ.

ರಾಜೇಂದ್ರ ಭೂಪತಿಯ ಮಾತುಗಳನ್ನು ಕೇಳಿ ದಿಯಾ ಕೆರಳಿ ಕೆಂಡವಾಗುತ್ತಾಳೆ. ನನಗೆ ಅನ್ಯಾಯವಾಗಲ್ವಾ, ತಲೆ ಕೆಟ್ಟಿದೆಯಾ ನಿಮಗೆ ಎಂದು ಹೇಳುತ್ತಾಳೆ. ನಾವು ಇಬ್ಬರು ಈಗಷ್ಟೇ ಮದುವೆಯಾಗಿ ನೆಮ್ಮದಿಯಾಗಿದ್ದೇವೆ, ನಮ್ಮ ನೆಮ್ಮದಿ ಕಿತ್ಕೋಬೇಡಿ ಎಂದು ಹೇಳುತ್ತಾಳೆ. ಜೈದೇವ್ ಕೂಡ ರಾಜೇಂದ್ರ ಭೂಪತಿ ವಿರುದ್ದ ತಿರುಗಿ ಬೀಳ್ತಾನೆ. ಮನೆಯಿಂದ ಹೊರ ಹೋಗುವಂತೆ ಹೇಳುತ್ತಾನೆ.

amruthadhaare-serial-july-01-episode-written-update

ಕೈಯಲ್ಲಿ ಬೆಣ್ಣೆ ಹಿಡ್ಕೊಂಡು ಮಣ್ಣು ತಿನ್ನುವ ಕೆಲಸ ಮಾಡಿದ-ಭೂಮಿಕಾ

ಮತ್ತೊಂದು ಕಡೆ ಜೈದೇವ್-ದಿಯಾ ಮತ್ತು ಮಲ್ಲಿ ವಿಚಾರದಲ್ಲಿ ಸಾಕಷ್ಟು ನೊಂದುಕೊಂಡಿರುವ ಗೌತಮ್, ಭೂಮಿಕಾ ಬಳಿ ಈ ವಿಚಾರದ ಕುರಿತು ಚರ್ಚೆ ಮಾಡುತ್ತಾನೆ. ಆ ಮಲ್ಲಿಯನ್ನು ನೋಡಿದರೆ ನನಗೆ ನೋವಾಗುತ್ತಿದೆ, ಪಾಪದ ಹುಡುಗಿ ಅವಳು, ಕಷ್ಟದಲ್ಲಿ ಬೆಳೆದವಳು, ಮೋಸ-ವಂಚನೆ-ಸುಳ್ಳು ಯಾವುದು ಗೊತ್ತಿರದ ಅವಳಿಗೆ ಈ ತರ ಮಾಡಿದಾ ಅಲ್ಲ ಎನ್ನುವ ಸಂಕಟ ನನಗಾಗುತ್ತಿದೆ ಎನ್ನುತ್ತಾನೆ. ಅವಳಿಗಾದ ಅನ್ಯಾಯಕ್ಕೆ ನಾವೇ ಹೊಣೆಗಾರರು ಎನ್ನುತ್ತಾನೆ.

ಆಗ ಗೌತಮ್‌ನನ್ನು ಸಮಾಧಾನ ಮಾಡುವ ಭೂಮಿಕಾ ಕೆಲವರು ಹೀಗೆನೇ ಒಳ್ಳೆಯತನ ಬಿಟ್ಟು ಕೆಟ್ಟದತ್ತ ವಾಲುತ್ತಾರೆ. ಕೈಯಲ್ಲಿ ಬೆಣ್ಣೆ ಹಿಡ್ಕೊಂಡು ಮಣ್ಣು ತಿನ್ನುವ ಕೆಲಸ ಮಾಡುತ್ತಾರೆ ಎನ್ನುತ್ತಾಳೆ. ನಿಮ್ಮ ಮನಸನ್ನು ಹಾಳು ಮಾಡಿಕೊಳ್ಳಬೇಡಿ ಎನ್ನುತ್ತಾಳೆ. ಇದಕ್ಕೆ ಗೌತಮ್ ಅವಳ ಹಿಂದೆ ಹೋಗಿ ಅವನೇನು ಸಾಧನೆ ಮಾಡ್ತಾನೆ ನೋಡೋಣ ಎಂದು ಹೇಳುತ್ತಾನೆ.

ಮಗಳ ಕನವರಿಕೆಯಲ್ಲಿ ರಾಜೇಂದ್ರ ಭೂಪತಿ ಒದ್ದಾಟ

ಮಗಳಿಂದ ತಿರಸ್ಕಾರಕ್ಕೊಳಗಾಗಿರುವ ರಾಜೇಂದ್ರ ಭೂಪತಿ, ಸದ್ಯ ತನ್ನ ಮಗಳು ಮಲ್ಲಿಯ ಕುರಿತು ಆಕೆಯ ಭವಿಷ್ಯದ ಕುರಿತು ಆಲೋಚನೆ ಮಾಡುತ್ತಿದ್ದಾನೆ. ಮಗಳು ಮಲ್ಲಿಯ ಕಣ್ಣಲ್ಲಿದ್ದ ದ್ವೇಷದ ರೋಷಾಗ್ನಿ ಕಿಚ್ಚು ರಾಜೇಂದ್ರ ಭೂಪತಿಯನ್ನು ಕಾಡುತ್ತಿದ್ದು, ರಾಜೇಂದ್ರ ಭೂಪತಿ ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆ ಮಾಡಿದ್ದಾನೆ. ವಿಡಿಯೋ ಮೂಲಕ ತನ್ನ ಮನದ ನೋವನ್ನು ಹಂಚಿಕೊಳ್ಳುತ್ತಾನೆ.

ಅವಳ ಬದುಕನ್ನು ಕಟ್ಟಿಕೊಡಬೇಕಾದ ನಾನೇ ಆಕೆಯ ಬದುಕಿಗೆ ಮುಳ್ಳಾದೆ, ನಾನು ಮಾಡಿದ ತಪ್ಪಿಗೆ ಕ್ಷಮೆ ಇದೆ ಎಂದು ನನಗೆ ಅನ್ಸುತ್ತಿಲ್ಲ, ಪಶ್ಚಾತಾಪ ಒಂದೇ ನನಗೆ ಇರುವ ದಾರಿ ಎಂದು ಮೊಬೈಲ್ ಕ್ಯಾಮರಾ ಎದುರು ಹೇಳುತ್ತಾನೆ. ಸಾಧ್ಯವಾದರೆ ನನ್ನನ್ನೂ ಕ್ಷಮಿಸಿ ಬಿಡು ಮಗಳೇ ಎಂದು ಕಣ್ಣೀರು ಹಾಕುತ್ತಾನೆ.

ಗೌತಮ್ ಮನೆಗೆ ಬಂದ ಪೊಲೀಸರು

ಮರುದಿನ ಗೌತಮ್ ಮನೆಗೆ ಪೊಲೀಸರು ಬಂದಿದ್ದು, ರಾಜೇಂದ್ರ ಭೂಪತಿ ಅವರ ಮಗಳನ್ನು ನಾನು ಭೇಟಿಯಾಗಬಹುದಾ ಎಂದು ಪೊಲೀಸ್ ಅಧಿಕಾರಿ ಕೇಳುತ್ತಾರೆ. ಇದರಿಂದ ತಬ್ಬಿಬ್ಬಾಗುವ ಗೌತಮ್, ಏನು ವಿಷಯ ಎಂದು ಕೇಳುತ್ತಾನೆ. ಆಗ ಮಲ್ಲಿಯನ್ನು ಕರೆಯುವಂತೆ ಹೇಳಿದಾಗ ಗೌತಮ್, ಮಲ್ಲಿಯನ್ನು ಕರೆದಿದ್ದು ರಾಜೇಂದ್ರ ಭೂಪತಿ ಅವರು ತೀರಿಕೊಂಡಿದ್ದಾರೆ ಎಂದು ಪೊಲೀಸ್ ಆಫೀಸರ್ ಹೇಳುತ್ತಾನೆ. ಈ ಮಾತು ಕೇಳಿ ಎಲ್ಲರಿಗೂ ನಿಂತ ನೆಲ ಕುಸಿದಂತೆ ಆಗುತ್ತೆ. ಮುಂದೇನಾಗುತ್ತೆ ಎನ್ನುವುದನ್ನು ಈಗ ಕಾದು ನೋಡಬೇಕಿದೆ.

More from Filmibeat

English summary
Amruthadhaare Kannada Serial: Find Out The Highlights Of July 01 Episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X