Amruthadhaare ; ಮಲ್ಲಿಯ ಪಾಲಾಯ್ತು ನೂರಾರು ಕೋಟಿ ಆಸ್ತಿ, ಹಣದಾಸೆಗೆ ದಿಯಾಗೆ ಕೈ ಕೊಡ್ತಾನಾ ಜೈದೇವ್ ?
ಮಗಳು ಮಲ್ಲಿಯಿಂದ ತಿರಸ್ಕಾರಕ್ಕೊಳಗಾದ ರಾಜೇಂದ್ರ ಭೂಪತಿ, ತನ್ನ ಮಗಳು ಮಲ್ಲಿಯ ಕುರಿತು ಆಕೆಯ ಭವಿಷ್ಯದ ಕುರಿತು ಆಲೋಚನೆ ಮಾಡಿದ್ದಾನೆ. ಮಗಳು ಮಲ್ಲಿಯ ಕಣ್ಣಲ್ಲಿದ್ದ ದ್ವೇಷದ ರೋಷಾಗ್ನಿ ಕಿಚ್ಚು ರಾಜೇಂದ್ರ ಭೂಪತಿಯನ್ನು ಕಾಡಿದ್ದು, ಅವಳ ಬದುಕನ್ನು ಕಟ್ಟಿಕೊಡಬೇಕಾದ ನಾನೇ ಆಕೆಯ ಬದುಕಿಗೆ ಮುಳ್ಳಾದೆ, ನಾನು ಮಾಡಿದ ತಪ್ಪಿಗೆ ಕ್ಷಮೆ ಇದೆ ಎಂದು ನನಗೆ ಅನ್ಸುತ್ತಿಲ್ಲ, ಪಶ್ಚಾತಾಪ ಒಂದೇ ನನಗೆ ಇರುವ ದಾರಿ ಎಂದು ಮೊಬೈಲ್ ಕ್ಯಾಮರಾ ಎದುರು ಹೇಳುತ್ತಾನೆ.
ಸಾಧ್ಯವಾದರೆ ನನ್ನನ್ನೂ ಕ್ಷಮಿಸಿ ಬಿಡು ಮಗಳೇ ಎಂದು ಕಣ್ಣೀರು ಹಾಕುತ್ತಾ ಆತ್ಮಹತ್ಯೆಯನ್ನು ಕೂಡ ಮಾಡಿಕೊಂಡಿದ್ದಾನೆ. ರಾಜೇಂದ್ರ ಭೂಪತಿ ಆತ್ಮಹತ್ಯೆ ಮಾಡಿಕೊಂಡ ವಿಚಾರವನ್ನು ಪೊಲೀಸರು ಗೌತಮ್ ದಿವಾನ್‌ಗೆ ತಿಳಿಸಿದ್ದು, ಸುದ್ದಿಯನ್ನು ಕೇಳಿ ಗೌತಮ್.. ಭೂಮಿಕಾ ಮತ್ತು ಮಲ್ಲಿ ಆಘಾತಕ್ಕೊಳಗಾಗಿದ್ದಾರೆ.

ಮಲ್ಲಿ ಮನವೊಲಿಸಲು ಮುಂದಾದ ಭೂಮಿಕಾ
ತಂದೆಯ ಅಗಲಿಕೆಯ ಸುದ್ದಿಯನ್ನು ಕೇಳಿಯೂ ಕೂಡ ಮಲ್ಲಿಯ ಹೃದಯ ಕರಗಿಲ್ಲ. ಹೀಗಾಗಿ ಮಲ್ಲಿಯ ಬಳಿ ಗೌತಮ್ ಜೊತೆ ಬಂದಿರುವ ಭೂಮಿಕಾ ತೀರಿಕೊಂಡಿರುವುದು ನಿನ್ನ ತಂದೆ, ಈಗ ಅವರೇ ಇಲ್ಲ ಅಂದ ಮೇಲೆ ಯಾಕೆ ಈ ಹಠ.. ದ್ವೇಷ.. ಎನ್ನುತ್ತಾಳೆ. ಈಗಲಾದರೂ ಕ್ಷಮಿಸಬಹುದಲ್ವಾ ಎನ್ನುತ್ತಾಳೆ. ಅಪ್ಪ-ಮಗಳ ಸಂಬಂಧ ಮಾತ್ರ ಉಳಿದುಕೊಂಡಿದೆ ಅದಕ್ಕಾದರೂ ಅಂತ್ಯಕ್ರಿಯೆಗೆ ಬರುವಂತೆ ಮಲ್ಲಿಯನ್ನು ಭೂಮಿಕಾ ಕೇಳುತ್ತಾಳೆ.
ಆದರೆ ಭೂಮಿಕಾಳ ಈ ಮಾತುಗಳನ್ನು ಕೇಳಿ ಕೋಪಗೊಳ್ಳುವ ಮಲ್ಲಿ ಅಕ್ಕಾ ನಿಮ್ಮ ಕೈ ಮುಗಿತೀನಿ ಅವರನ್ನ ಮಾತ್ರ ನನ್ನ ತಂದೆ ಎಂದು ಹೇಳಬೇಡಿ, ಹುಟ್ಟಿಸಿದ ಮಾತ್ರಕ್ಕೆ ತಂದೆಯಾಗುವುದಿಲ್ಲ ಎನ್ನುತ್ತಾಳೆ. ತಂದೆಯ ಜವಾಬ್ದಾರಿಯನ್ನು ನಿರ್ವಹಿಸದವನು ಎಂತಾ ಅಪ್ಪ ಎನ್ನುತ್ತಾಳೆ. ನಿಮ್ಮನ್ನು ಸಾಯಿಸುವುದಕ್ಕೆ ಪ್ರಯತ್ನ ಮಾಡಿದ್ದೀರಾ, ಬೇಕಿದ್ದರೆ ನೀವು ಇಬ್ಬರು ಹೋಗಿ ಬನ್ನಿ ನಾನು ಬರುವುದಿಲ್ಲ ಎನ್ನುತ್ತಾಳೆ.
ದೂರ ಆಗಲು ಕಾರಣ ಹೇಳಿದ ಗೌತಮ್
ಮಲ್ಲಿಯ ಮಾತುಗಳನ್ನು ಕೇಳಿಸಿಕೊಂಡ ಗೌತಮ್, ನಿನ್ನ ತಂದೆಯ ಬಗ್ಗೆ ನೀನು ತಪ್ಪು ತಿಳಿದುಕೊಂಡಿದ್ದೀಯಾ, ಸಮಯ-ಸಂದರ್ಭ ಹಾಗಿತ್ತು, ಅದಕ್ಕೆ ಅವರು ನಿನ್ನ ದೂರ ಮಾಡಿದರು, ನಮ್ಮಿಂದ ತಮ್ಮ ಪತ್ನಿ ಮಗಳನ್ನು ಕಳೆದುಕೊಂಡೆ ಎಂದು ತಿಳಿದುಕೊಂಡು ನಮ್ಮ ವಿರುದ್ದ ಅವರು ದ್ವೇಷ ಸಾಧಿಸುತ್ತಿದ್ದರು ಎಂದು ಹೇಳುತ್ತಾನೆ. ನಿನ್ನ ಮೇಲೆ ಅಪಾರವಾದ ಪ್ರೀತಿ ಇತ್ತು, ನಿನ್ನ ಮೇಲೀನ ಪ್ರೀತಿಯಿಂದ ಅವರು ನಮ್ಮನ್ನು ದ್ವೇಷ ಮಾಡುವಂತಾಯ್ತು ಎಂದು ಹೇಳುತ್ತಾನೆ. ನಿನ್ನ ಸಮಾಧಾನಕ್ಕೆ ನಾನು ಹೇಳ್ತಿಲ್ಲ ಎಂದು ರಾಜೇಂದ್ರ ಭೂಪತಿ ಆತ್ಮಹತ್ಯೆಗೆ ಶರಣಾಗುವ ಮುನ್ನ ರೆಕಾರ್ಡ್ ಮಾಡಿದ್ದ ವಿಡಿಯೋವನ್ನು ಮಲ್ಲಿಗೆ ಗೌತಮ್ ತೋರಿಸುತ್ತಾನೆ. ವಿಡಿಯೋ ನೋಡಿ ಮಲ್ಲಿ ಕಣ್ಣೀರಾಗುತ್ತಾಳೆ.

ತನ್ನೆಲ್ಲ ಆಸ್ತಿಯನ್ನು ಮಗಳ ಹೆಸರಿಗೆ ಬರೆದಿರುವ ರಾಜೇಂದ್ರ ಭೂಪತಿ
ರಾಜೇಂದ್ರ ಭೂಪತಿ ಸಾಯುವ ಮುನ್ನ ತನ್ನೆಲ್ಲ ಆಸ್ತಿಯನ್ನು ತನ್ನ ಮಗಳು ಮಲ್ಲಿ ಹೆಸರಿಗೆ ಬರೆದಿದ್ದಾನೆ. ನ್ಯಾಯಯುತವಾಗಿ ನಾನು ಸಂಪಾದನೆ ಮಾಡಿದ ಎಲ್ಲ ಆಸ್ತಿ ನನ್ನ ಮಗಳು ಮಲ್ಲಿಗೆ ಸೇರಬೇಕು ಎಂದು ಬರೆದಿರುವ ರಾಜೇಂದ್ರ ಭೂಪತಿ ಅನ್ಯಾಯದಿಂದ ಗಳಿಸಿದ ಹಣವನ್ನೆಲ್ಲ ವೃದ್ಧಾಶ್ರಮ , ಅನಾಥಾಶ್ರಮಕ್ಕೆ ದಾನ ಮಾಡುತ್ತಿದ್ದೇನೆ, ಈ ಮೂಲಕ ನನ್ನ ಪಾಪದ ಹೊರೆ ಕಡಿಮೆ ಮಾಡಿಕೊಳ್ಳುತ್ತಿದ್ದೇನೆ ಎಂದು ವಿಲ್‌ನಲ್ಲಿ ಬರೆದ ವಿಚಾರವನ್ನು ವಕೀಲರು ಗೌತಮ್ ದಿವಾನ್.. ಭೂಮಿಕಾ ಮತ್ತು ಮಲ್ಲಿಗೆ ಹೇಳುತ್ತಾರೆ. ಮತ್ತೊಂದು ಕಡೆ ರಾಜೇಂದ್ರ ಭೂಪತಿಯ ಪಿಎ ಜೈದೇವ ಬಳಿ ವಿಲ್ ತಲುಪಿಸಿದ್ದು ವಿಲ್ ಓದಿ ಜೈದೇವ್ ಶಾಕ್ ಆಗಿದ್ದಾನೆ.
ದಿಯಾಗೆ ಕೈ ಕೊಟ್ಟು ಮಲ್ಲಿ ಬಳಿ ಹೋಗ್ತಾನಾ ಜೈದೇವ್
ಆಸ್ತಿ ವಿಚಾರ ತಿಳಿದು ಜೈದೇವ್ ಹಾವ ಭಾವದಲ್ಲಿ ಬದಲಾವಣೆಗಳನ್ನು ಕಂಡು ದಿಯಾ ಗಾಬರಿಯಾಗಿದ್ದಾಳೆ. ನನಗೆ ಕೈ ಕೊಟ್ಟು ಮತ್ತೆ ಮಲ್ಲಿ ಬಳಿ ಹೋಗುವ ಇರಾದೆ ಏನಾದರೂ ಇದೆಯಾ ನನಗೆ ಭಯ ಆಗ್ತಿದೆ ಎಂದು ಹೇಳುತ್ತಾಳೆ. ಇದಕ್ಕೆ ಜೈದೇವ್ ಬರೀ ದುಡ್ಡು ಇದ್ದರೆ ಮಾತ್ರ ಸಾಲದು, ಟೇಸ್ಟ್ ಬೇಕು, ಸ್ಲೈಲ್ ಬೇಕು, ಗ್ಲ್ಯಾಮರ್ ಬೇಕು, ಅದೆಲ್ಲ ಎಲ್ಲಿದೆ ಅವಳ ಹತ್ರ ಅವಳೊಂದು ವೇಸ್ಟ್ ಬಾಡಿ ಎನ್ನುತ್ತಾನೆ. ನಾನ್ಯಾಕೇ ಅವಳ ಬಳಿ ಹೋಗಲಿ ಎಂದು ಹೇಳುತ್ತಾನೆ. ಜೈದೇವ್ ಆಡಿದ ಈ ಮಾತು ಕೇಳಿ ದಿಯಾ ಖುಷಿಯಾಗಿದ್ದು ನಿನ್ನ ಜಾಗ ತಾವತ್ತಿದ್ದರೂ ಸೇಫ್ ನೀನೆ ನನ್ನ ಹೆಂಡತಿ ಎಂದು ದಿಯಾಗೆ ಜೈದೇವ್ ಹೇಳುತ್ತಾನೆ.


Click it and Unblock the Notifications











