Amruthadhaare ; ಜಾಂಡೀಸ್‌ಗೆ ಬಲಿಯಾಗುತ್ತಾ ಭೂಮಿಕಾ ಹೊಟ್ಟೆಯಲ್ಲಿರುವ ಮಗು? ಶಕುಂತಲಾ ಶಪಥ ಫಲಿಸುತ್ತಾ?

ತನ್ನ ತಂದೆ ರಾಜೇಂದ್ರ ಭೂಪತಿಯನ್ನು ಕಳೆದುಕೊಂಡ ಮಲ್ಲಿ ಕಣ್ಣೀರು ಹಾಕುತ್ತಿದ್ದಾಳೆ. ಕೊನೆಯವರೆಗೂ ನನಗೆ ಅಪ್ಪ ಅಮ್ಮನ ಪ್ರೀತಿಯೇ ಸಿಗಲಿಲ್ಲ ಅಂತಹ ನತದೃಷ್ಟೆ ನಾನು ಎಂದು ಭೂಮಿಕಾ ಎದುರು ತನ್ನ ನೋವು ಹೊರ ಹಾಕುತ್ತಾಳೆ. ಕೊನೆಗೂ ತಬ್ಬಲಿಯಾದೆ ಎಂದು ಬಿಕ್ಕಿ ಬಿಕ್ಕಿ ಅಳುತ್ತಾಳೆ. ಆಗ ಮಲ್ಲಿಯನ್ನು ಸಮಾಧಾನ ಮಾಡುವ ಭೂಮಿಕಾ ಸಮಯ-ಸಂದರ್ಭ ಹಾಗಿರುತ್ತೆ. ಅದರ ಮುಂದೆ..

ನಾವು ತುಂಬಾನೇ ಚಿಕ್ಕವರು ಎನ್ನುತ್ತಾಳೆ. ನಾವು ನೆಪ ಅಷ್ಟೇ ಅದೇನಾಗಬೇಕೋ ಅದಾಗಿಯೇ ಆಗುತ್ತೆ ಎಂದು ಹೇಳುತ್ತಾಳೆ. ನಿನ್ನ ತಪ್ಪು ಎಂದು ನೀನು ಅಂದುಕೊಳ್ಳಬೇಡ, ನಿನ್ನ ನೋವೇನು.. ನಿನ್ನ ಮನಸಿನಲ್ಲೇನಿದೆ ಎನ್ನುವುದು ನನಗೆ ಗೊತ್ತು.. ಆದರೆ ಇದರಲ್ಲಿ ನಿನ್ನ ತಪ್ಪು ಯಾವುದು ಇಲ್ಲ, ನತದೃಷ್ಟೆ.. ತಬ್ಬಲಿ ಎಂದು ಇನ್ಮುಂದೆ ಹೇಳಬೇಡ ನಿನಗೆ ನಾವು ಇದ್ದೀವಿ ಎಂದು ಭೂಮಿಕಾ ಭಾವುಕಳಾಗುತ್ತಾಳೆ. ನಿನ್ನ ಅಪ್ಪ ಅಮ್ಮ ಎಲ್ಲ ನಾವೇ ನೀನು ನಮ್ಮ ಹಿರಿಯ ಮಗಳು ಎಂದು ಕಣ್ಣೀರು ಹಾಕುತ್ತಾಳೆ.

amruthadhaare-serial-july-03-episode-written-update

ಭೂಮಿಕಾ-ಗೌತಮ್ ಮಗು ಕೊಲ್ಲಲು ಶಕುಂತಲಾ ಸ್ಕೆಚ್

ಜೈಲಿನಲ್ಲಿರುವ ತನ್ನ ಅಣ್ಣನನ್ನು ಶಕುಂತಲಾ ಭೇಟಿ ಮಾಡಿದ್ದು, ಮುಂದಿನ ಹೆಜ್ಜೆಯ ಕುರಿತು ಪ್ರಶ್ನೆಯನ್ನು ಮಾಡಿದ್ದಾಳೆ. ಇದಕ್ಕೆ ಮನೆಯಲ್ಲಿ ಕಮಲಾ ಎಂಬ ಮನೆ ಕೆಲಸದವಳಿದ್ದಾಳಲ್ಲ ಅವಳ ಹತ್ರ ಹೋಗಿ ಕೇಳು ಎಂದು ಶಕುಂತಲಾಗೆ ಅಣ್ಣ ಹೇಳಿದ್ದಾನೆ. ಅದರಂತೆ ಕಮಲಾ ಬಳಿ ಬಂದ ಶಕುಂತಲಾ ನನ್ನ ಅಣ್ಣ ಏನಾದರೂ ಹೇಳಿದಾನಾ ಎಂದು ಕೇಳುತ್ತಾಳೆ.

ಆಗ ಕಮಲಾ ವಿಷದ ಬಾಟಲಿ ತೆಗೆಯುವ ಕಮಲಾ ಇದು ಹಾಲಲ್ಲಿ ಹಾಕಿ ಕುಡಿಸಿದರೆ ಅವರ ದೇಹದಲ್ಲಿ ಬದಲಾವಣೆಯಾಗುತ್ತೆ, ಅವರಿಗೇನಾಗುತ್ತೆ ಎನ್ನುವುದು ಅವರಿಗೆ ಗೊತ್ತಾಗುವುದಿಲ್ಲ ಕೊನೆಗೆ ಅದು ಕಾಮಾಲೆಯಾಗಿ ತಿರುಗುತ್ತೆ ಎಂದು ಹೇಳುತ್ತಾಳೆ. ಬಸರಿ ಹೆಂಗಸಿಗೆ ಜಾಂಡೀಸ್ ಬಂದರೆ ತುಂಬಾನೇ ಡೇಂಜರ್, ತಾಯಿಗೆ ಮತ್ತು ಹೊಟ್ಟೆಯಲ್ಲಿರುವ ಮಗುಗೆ ಇಬ್ಬರಿಗೆ ಕೂಡ ಕಂಟಕ ಎಂದು ಹೇಳುತ್ತಾಳೆ. ಯಾವ ಔಷಧಿ ಕೂಡ ಕೆಲಸ ಮಾಡುವುದಿಲ್ಲ ಎನ್ನುತ್ತಾಳೆ.

ಮಗು ಹುಟ್ಟೋ ಮುಂಚೆ ಆಟಿಕೆ ಸಾಮಾನು ತಂದ ಗೌತಮ್

ಮತ್ತೊಂದು ಕಡೆ ಶಕುಂತಲಾ ಮಾಡಿರುವ ಪ್ಲಾನ್‌ ಅರಿಯದ ಗೌತಮ್ ಮತ್ತು ಭೂಮಿಕಾ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕನಸು ಕಾಣುತ್ತಿದ್ದಾರೆ. ಹುಟ್ಟುವ ಮಗುವಿಗೆ ಗೌತಮ್ ಬಗೆ ಬಗೆಯ ಆಟಿಕೆ ಸಾಮಾನು ಕೂಡ ತಂದಿದ್ದು ಕೂಸು ಹುಟ್ಟುವ ಮುಂಚೆ ಸ್ಕೂಲ್‌ನಲ್ಲಿ ಅಡ್ಮಿಷನ್ ಮಾಡಿಸಿದಂತೆ ಆಯ್ತು ಎಂದು ಭೂಮಿಕಾ ತಮಾಷೆ ಮಾಡುತ್ತಾಳೆ. ಅದಕ್ಕೆ ಗೌತಮ್ ಪೂರ್ವ ತಯಾರಿ ಮಾಡಿಕೊಳ್ಳಬೇಕಲ್ಲ ಎಂದು ಹೇಳುತ್ತಾನೆ.

ಹಾಗೇನಾದರೂ ಆದರೆ ನನಗೆ ಡಬಲ್ ಖುಷಿ- ಶಕುಂತಲಾ

ಒಳ್ಳೆಯ ಕೆಲಸಕ್ಕೆ ತಡ ಮಾಡಬಾರದು, ಆದಷ್ಟು ಬೇಗ ಮಾಡಿ ಮುಗಿಸಬೇಕು ಎನ್ನುವ ಶಕುಂತಲಾ ಹಾಲನ್ನು ಮಲ್ಲಿಗೆ ಕೊಟ್ಟು ಬರುವಂತೆ ಕೆಲಸದಾಕೆ ಕಮಲಾಗೆ ಹೇಳುತ್ತಾಳೆ. ಆಗ ಮಲ್ಲಿ ಮೇಡಂ ಎಲ್ಲವನ್ನು ಪರೀಕ್ಷೆ ಮಾಡಿ ಕೊಡುವುದಲ್ವಾ ಎಂದು ಕಮಲಾ ಕೇಳಿದಾಗ ಚೂರೇ ಚೂರು ಕುಡಿಯುತ್ತಾಳೆ, ಪೂರ್ತಿ ಹಾಲು ಏನು ಕುಡಿಯಲ್ಲವಲ್ಲಾ ಎಂದು ಶಕುಂತಲಾ ಹೇಳುತ್ತಾಳೆ. ಹಾಗೇನಾದರೂ ಕುಡಿದು ಅವಳಿಗೂ ಏನಾದರೂ ಆದರೆ ನನಗೆ ಡಬಲ್ ಖುಷಿ ಬೈ 1ಗೆಟ್ 1 ಫ್ರೀ ಎನ್ನುವಂತೆ ಅಕ್ಕನ ಜೊತೆ ತಂಗಿ ಕೂಡ ಹೋಗ್ತಾಳೆ ಬಿಡು ಎನ್ನುತ್ತಾಳೆ.

amruthadhaare-serial-july-03-episode-written-update

ಭೂಮಿಕಾಗೆ ಹಾಲು ಕೊಡುವ ಮಲ್ಲಿ

ಕಮಲಾ ಕಡೆಯಿಂದ ಹಾಲು ತೆಗೆದುಕೊಳ್ಳುವ ಮಲ್ಲಿ, ಹಾಲನ್ನು ಪರೀಕ್ಷೆ ಮಾಡಿ.. ಭೂಮಿಕಾಗೆ ಕೊಡಲು ಹೋಗುತ್ತಾಳೆ. ಆಗ ಗೌತಮ್ ಮತ್ತು ಭೂಮಿಕಾ ಮಾತನಾಡುತ್ತಾ ಕುಳಿತಿದ್ದು, ಮಲ್ಲಿ ಏನು ರಾಜಾ ರಾಣಿ ತುಂಬಾ ಆಳವಾಗಿ ಚರ್ಚೆ ಮಾಡುತ್ತಿರುವಂತೆ ಇತ್ತು ಎಂದು ಕೇಳುತ್ತಾಳೆ. ಆಗ ಭೂಮಿಕಾ ನಾವು ಸುಮ್ಮನೆ ಏನೋ ಮಾತನಾಡಿಕೊಳ್ತಿದ್ವಿ ಎಂದು ಹೇಳುತ್ತಾಳೆ. ಆ ನಂತರ ಮಲ್ಲಿ ಅಲ್ಲಿಂದ ತೆರಳಿದ್ದು ಭೂಮಿಕಾ ಹಾಲನ್ನು ಕುಡಿದಿದ್ದಾಳೆ. ಸದ್ಯ ಭೂಮಿಕಾ ಹಾಲು ಕುಡಿದಿದ್ದು, ಹೊಟ್ಟೆಯಲ್ಲಿರುವ ಮಗುಗೆ ಕಾಮಾಲೆ ತಗಲುತ್ತಾ ? ಶಕುಂತಲಾ ಪ್ಲಾನ್ ಸಕ್ಸಸ್ ಆಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X