Amruthadhaare ; ಭೂಮಿಕಾಳನ್ನು ಕರೆದುಕೊಂಡು ಕಾಡಿನತ್ತ ಹೊರಟ ಗೌತಮ್, ಹೊಸ ಸ್ಕೆಚ್ ಹಾಕಿದ ಶಕುಂತಲಾ !

ಭೂಮಿಕಾ ಮತ್ತು ಮಗು ಪ್ರಾಣಕ್ಕೆ ಶಕುಂತಲಾ ಸಂಚಕಾರ ತಂದಿದ್ದಾಳೆ. ಕೆಲಸದಾಕೆ ಕಮಲಾ ಕಡೆಯಿಂದ ಶಕುಂತಲಾ ಹಾಲು ಕೊಟ್ಟು ಕಳುಹಿಸಿದ್ದು .. ಮಲ್ಲಿ ಆ ಹಾಲನ್ನು ತಂದು ಭೂಮಿಕಾಗೆ ನೀಡಿದ್ದಾಳೆ. ಭೂಮಿಕಾ ಕೂಡ ಹಾಲು ಕುಡಿದಿದ್ದು, ಸದ್ಯ.. ಭೂಮಿಕಾಗೆ ಆಯಾಸವಾದಂತಾಗಿದೆ. ತನಗಾಗುತ್ತಿರುವ ಸಂಕಟವನ್ನು ಗೌತಮ್‌ ಎದುರು ಭೂಮಿಕಾ ಹೇಳಿಕೊಂಡಿದ್ದಾಳೆ. ಹೀಗಾಗಿ ಅಜ್ಜಿಯನ್ನು ಕರೆದಿರುವ ಗೌತಮ್ ಅದೇನೋ ಸಂಕಟ ಆಗ್ತಿದೆ ಎಂದು ಭೂಮಿಕಾ ಹೇಳುತ್ತಿದ್ದಾರೆ ಎಂದು ಹೇಳುತ್ತಾನೆ.

ಆಗ ಭೂಮಿಕಾಳನ್ನು ಪರೀಕ್ಷೆ ಮಾಡುವ ಅಜ್ಜಿ ಕಾಮಾಲೆ ಬಂದಂತೆ ಇದೆ ಎಂದು ಹೇಳುತ್ತಾಳೆ. ಇದರಿಂದ ಗೌತಮ್ ಆತಂಕಕ್ಕೀಡಾಗಿದ್ದು ಅದೇ ಸಮಯಕ್ಕೆ ಏನೂ ಅರಿವು ಇಲ್ಲದಂತೆ ಭೂಮಿಕಾ ಮತ್ತು ಗೌತಮ್ ಕೋಣೆಗೆ ಶಕುಂತಲಾ ಬರುತ್ತಾಳೆ.

amruthadhaare-serial-july-04-episode-written-update

ಗೌತಮ್ ಮತ್ತು ಭೂಮಿಕಾ ಕೋಣೆಗೆ ಬರುವ ಶಕುಂತಲಾ ಅತ್ತೆ ಅದೇನೋ ಹಳದಿ ಬಣ್ಣ ಅಂತ ಹೇಳ್ತಿದ್ದರಲ್ಲ ಏನಾಯ್ತು ಎಂದು ಕೇಳುತ್ತಾಳೆ. ಆಗ ಅಜ್ಜಿ ಶಕುಂತಲಾ ಕಾಮಾಲೆ ಬಂದಂತೆ ಇದೆ ಎಂದು ಹೇಳುತ್ತಾಳೆ. ಈ ಮಾತು ಕೇಳಿ ಒಳಗೊಳಗೆ ಖುಷಿಯಾಗುವ ಶಕುಂತಲಾ ಅಯ್ಯೋ, ಕಾಮಾಲೆನಾ..? ಅದು ತುಂಬಾ ಅಪಾಯಕಾರಿ ಅಲ್ವಾ ? ಇಂತಹ ಸಮಯದಲ್ಲಿ ಬರಬಾರದಲ್ವಾ ಎಂದು ನಾಟಕ ಮಾಡುತ್ತಾಳೆ. ಶಕುಂತಲಾ ಆಡಿದ ಈ ಮಾತು ಗೌತಮ್ ಮತ್ತು ಭೂಮಿಕಾ ಆತಂಕವನ್ನು ಇನ್ನು ಹೆಚ್ಚಿಸುತ್ತೆ.

ಅಪಾಯ ಇಲ್ಲ ಎಂದ ಡಾಕ್ಟರ್

ಡಾಕ್ಟರ್ ಬಂದು ಭೂಮಿಕಾ ಆರೋಗ್ಯ ಪರೀಕ್ಷೆಯನ್ನು ಮಾಡಿದ್ದಾರೆ. ಇಂಜೆಕ್ಷನ್ ನೀಡಿ ಹೊರ ಬಂದ ವೈದ್ಯರ ಬಳಿ ಗೌತಮ್ ಆತಂಕದಿಂದ ಏನಾಯ್ತು ಎಂದು ಪ್ರಶ್ನೆ ಮಾಡುತ್ತಾನೆ. ಆಗ ಅವರಿಗೆ ಜಾಂಡೀಸ್ ಬಂದಿದೆ ಎಂದು ಡಾಕ್ಟರ್ ಹೇಳಿದ್ದು ಅಪಾಯ ಇಲ್ವಲ್ಲಾ ಎಂದು ಗೌತಮ್ ಕೇಳುತ್ತಾನೆ. ಇದಕ್ಕೆ ವೈದ್ಯರು ಇಲ್ಲ ಸದ್ಯಕ್ಕೆ ಒಂದಿಷ್ಟು ಮಾತ್ರೆಗಳನ್ನು ಅಲ್ಲಿ ಬರೆದು ಇಟ್ಟಿದ್ದೀನಿ ಆ ಮಾತ್ರೆಗಳನ್ನು ಕೊಡಿ ಎಂದು ಡಾಕ್ಟರ್ ಹೇಳುತ್ತಾರೆ. ಜೊತೆಗೆ ಪಥ್ಯ ಕೂಡ ಫಾಲೋ ಮಾಡಬೇಕು ನಿರ್ಲಕ್ಷ್ಯ ಮಾಡಬೇಡಿ ಎಂದು ಹೇಳಿದ್ಧಾರೆ.

ಮುಂದುವರೆದು ಇಂತಹ ಪ್ರಕರಣ ತುಂಬಾನೇ ಅಪರೂಪ, ಅವರಿಗೆ ಜಾಂಡೀಸ್ ಹೇಗೆ ಬಂತು ಎನ್ನುವುದು ಗೊತ್ತಾಗುತ್ತಿಲ್ಲ ಎಂದು ಡಾಕ್ಟರ್ ಹೇಳಿದ್ದು ಮೂರು ನಾಲ್ಕು ದಿನದಲ್ಲಿ ಮಾತ್ರೆಗಳನ್ನು ತೆಗೆದುಕೊಂಡರೆ ಕಡಿಮೆಯಾಗುತ್ತೆ, ಕಡಿಮೆಯಾಗದಿದ್ದರೆ ಆಸ್ಪತ್ರೆಗೆ ದಾಖಲಿಸೋಣ ಎಂದು ಹೇಳುತ್ತಾರೆ. ಡಾಕ್ಟರ್ ಆಡಿದ ಈ ಮಾತುಗಳನ್ನು ಕೇಳಿ ನಾನು ಕೊಟ್ಟಿರುವ ಮೆಡಿಸಿನ್ ವರ್ಕ್ ಆಯ್ತು ಅವಳ ಕಥೆ ಮುಗೀತು ಎಂದು ಶಕುಂತಲಾ ಮನದಲ್ಲಿಯೇ ಖುಷಿ ಪಡ್ತಾಳೆ.

ರಿಸ್ಕ್ ತೆಗೆದುಕೊಳ್ಳೋದು ಬೇಡ ಎಂದ ಆನಂದ್

ಸುದ್ದಿ ಕೇಳಿ ಓಡೋಡಿಕೊಂಡು ಬರುವ ಆನಂದ್, ರಿಸ್ಕ್ ತೆಗೆದುಕೊಳ್ಳೋದು ಬೇಡ.. ನಾನು ಬರುವ ದಾರಿಯಲ್ಲಿ ನನಗೆ ಗೊತ್ತಿರುವ ಡಾಕ್ಟರ್ ಬಳಿ ಈ ಕುರಿತು ವಿಚಾರಿಸಿದೆ ಅವರು ಕೂಡ ರಿಸ್ಕ್ ಬೇಡ ಮೊದಲು ಆಸ್ಪತ್ರೆಗೆ ದಾಖಲಿಸಿ ಎಂದು ಹೇಳಿದ್ದಾರೆ ಎಂದು ಹೇಳುತ್ತಾನೆ.

amruthadhaare-serial-july-04-episode-written-update

ಆಗ ಅಜ್ಜಿ ನೀನು ಜಾಸ್ತಿ ಯೋಚನೆ ಮಾಡಬೇಡ ನಾನು ಹೇಳಿದಂತೆ ಮಾಡು ಎಂದು ಗೌತಮ್‌ಗೆ ಹೇಳುತ್ತಾಳೆ. ಕನಕಪುರದಿಂದ ಮಂಡ್ಯಗೆ ಹೋಗುವಾಗ ಮಾದಾಪುರ ಎಂದು ಬರುತ್ತೆ ಅಲ್ಲಿ ಎಡಗಡೆ ಹೋಗು ಅಲ್ಲಿ ಹೋದರೆ ಒಂದು ಕಾಡು ಇದೆ, ಆ ಕಾಡಲ್ಲಿ ಒಂದು ದೇವಸ್ಥಾನ ಇದೆ.. ಆ ದೇವಸ್ಥಾನದಲ್ಲಿ ಒಬ್ಬರು ಶಾಸ್ತ್ರಿಗಳಿದ್ದಾರೆ ಅವರು ಇಂತಹ ಕಾಯಿಲೆಗಳಿಗೆ ನಾಟಿ ಔಷಧಿ ಕೊಡ್ತಾರೆ, ನೀನು ಭೂಮಿಕಾನ ಅಲ್ಲಿ ಕರೆದುಕೊಂಡು ಹೋಗಿ ನಾಟಿ ಔಷಧಿ ಕೊಡಿಸು ಖಂಡಿತ ಕಾಮಾಲೆ ವಾಸಿಯಾಗುತ್ತೆ ಎಂದು ಅಜ್ಜಿ ಹೇಳುತ್ತಾಳೆ. ಅಜ್ಜಿಯ ಈ ಮಾತು ಕೇಳಿ ಶಕುಂತಲಾಗೆ ಮತ್ತೆ ಚಿಂತೆ ಕಾಡಲು ಶುರುವಾಗುತ್ತೆ.

ಶಕುಂತಲಾ ಹೊಸ ಸ್ಕೆಚ್

ಸದ್ಯ ಗೌತಮ್ ಮತ್ತು ಭೂಮಿಕಾ ನಾಟಿ ಔಷಧಿ ಪಡೆಯಲು ಕಾಡಿನತ್ತ ಹೊರಟಿದ್ದಾರೆ. ಆದರೆ ಇದೇ ಸಮಯದಲ್ಲಿ ಹೊಸ ಸ್ಕೆಚ್ ಹಾಕಿರುವ ಶಕುಂತಲಾ ರೌಡಿಗಳನ್ನು ಕಳುಹಿಸಿದ್ದಾಳೆ. ಕಾಡಿನಲ್ಲಿ ರೌಡಿಗಳಿಂದ ಗೌತಮ್ ಮತ್ತು ಭೂಮಿಕಾ ಹೇಗೆ ಬಚಾವ್ ಆಗುತ್ತಾರೆ ? ಭೂಮಿಕಾ ನಾಟಿ ಔಷಧಿ ಪಡೆಯುತ್ತಾಳಾ ? ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X