Amruthadhaare : ಕಾಡಿನಲ್ಲಿ ಸಿಕ್ಕಿ ಹಾಕಿಕೊಂಡ ಗೌತಮ್-ಭೂಮಿಕಾ, ಅಖಾಡಕ್ಕೆ ಇಂದು ಅಣ್ಣಯ್ಯ ಮತ್ತು ಕರ್ಣ ಎಂಟ್ರಿ !
ಅಜ್ಜಿಯ ಸಲಹೆಯ ಮೇರೆಗೆ ಭೂಮಿಕಾಳನ್ನು ಕರೆದುಕೊಂಡು ಗೌತಮ್, ಮಾದಾಪುರದ ಬಳಿ ಇರುವ ಕಾಡಿಗೆ ಹೋಗಲು ಅಣಿಯಾಗಿದ್ದಾನೆ. ಇದೇ ಸಮಯದಲ್ಲಿ ಬರುವ ಭಾಗ್ಯಮ್ಮ ಗಣೇಶನ ಚಿಕ್ಕ ಮೂರ್ತಿಯನ್ನು ಭೂಮಿಕಾಗೆ ನೀಡಿದ್ದಾಳೆ. ಇದನ್ನು ನೋಡಿದ ಶಕುಂತಲಾ ದೇವರ ವಿಗ್ರಹ ಕೈಯಲ್ಲಿ ಹಿಡ್ಕೊಂಡು ಹೋದರೆ, ಆ ದೇವರು ಬಂದು ನಿಮ್ಮನ್ನು ಕಾಪಾಡ್ತಾನಾ ಎಂದು ಮನದಲ್ಲಿಯೇ ಅಂದುಕೊಳ್ಳುತ್ತಾಳೆ.
ಅಮ್ಮ ನಿಮಗೆ ಇದು ಕೊಟ್ಟಿದ್ದಾರೆ ಅಂದರೆ ಇದು ಒಳ್ಳೆ ಸೂಚನೆನೇ, ಅಮ್ಮ ಹುಷಾರಾಗುತ್ತಿದ್ದಾರೆ ಎನ್ನುವುದಕ್ಕೆ ಇದೇ ಸಾಕ್ಷಿ ಎಂದು ಗೌತಮ್ ಹೇಳುತ್ತಾನೆ. ಆಗ ಇವಳೆಲ್ಲಿ ಸರಿ ಹೋಗ್ತಾಳೆ, ಸರಿ ಹೋಗೋಕೆ ನಾನು ಬಿಡಬೇಕು ತಾನೇ ಎಂದು ಶಕುಂತಲಾ ಮನಸಿನಲ್ಲಿ ಲೆಕ್ಕಾಚಾರ ಹಾಕಿ ನಗುತ್ತಾಳೆ.

ಕಾಡಿನತ್ತ ಹೊರ ಗೌತಮ್-ಭೂಮಿಕಾ
ಗೌತಮ್ ಮತ್ತು ಭೂಮಿಕಾ ಜೊತೆ ಆನಂದ್ ಕೂಡ ಹೋಗಿದ್ದು ಮಾರ್ಗ ಮಧ್ಯದಲ್ಲಿ ಭೂಮಿಕಾಗೆ ಸಂಕಟವಾಗಲು ಶುರುವಾಗುತ್ತೆ. ಹಸಿವಾಗಲು ಶುರುವಾಗುತ್ತೆ. ಹೀಗೆ ಹೋಗುವಾಗ ಕಾರಿನ ಡ್ರೈವರ್ ಮಂಜು ಕಾರನ್ನು ಕಾಡಿನಲ್ಲಿ ಅರ್ಧಕ್ಕೆ ನಿಲ್ಲಿಸಿದ್ದಾನೆ. ಆನಂದ್ ಏನಾಯ್ತು ಮಂಜು ಎಂದು ಕೇಳಿದಾಗ ಕಾರಿಂದ ಕೆಳಗಿಳಿದು ನೋಡಲು ಮುಂದಾಗುತ್ತಾನೆ.
ಮತ್ತೊಂದು ಕಡೆ ಗೌತಮ್ ಮತ್ತು ಭೂಮಿಕಾ ಅತ್ತ ಕಾಡಿನತ್ತ ಹೋಗುತ್ತಿದ್ದಂತೆಯೇ ಜೈದೇವ್ ಮನೆಗೆ ಶಕುಂತಲಾ ಬಂದಿದ್ದಾಳೆ. ಶಕುಂತಲಾ ಬಂದಿರುವುದನ್ನು ನೋಡಿ ಖುಷಿಯಾಗುವ ಜೈದೇವ್ ಸಂದರ್ಭ ಹಾಗಿತ್ತು ನಿನ್ನಿಂದ ಆಶೀರ್ವಾದ ಕೂಡ ಪಡೆಯಲಿಲ್ಲ ಈಗಲಾದರೂ ಆಶೀರ್ವಾದ ಮಾಡು ಎಂದು ದಿಯಾ ಜೊತೆ ಶಕುಂತಲಾಗೆ ನಮಸ್ಕರಿಸುತ್ತಾನೆ.
ನನ್ನಿಂದ ಎಲ್ಲರನ್ನು ದೂರ ಮಾಡಿದ್ಳು- ಶಕುಂತಲಾ
ನಿನ್ನನ್ನು ನೋಡಿದಂತೆ ಆಗುತ್ತೆ, ನನ್ನ ದುಖ ಹೇಳಿಕೊಂಡಂತೆ ಆಗುತ್ತೆ.. ಹೀಗಾಗಿ ಇಲ್ಲಿ ಬಂದೆ ಎನ್ನುವ ಶಕುಂತಲಾ ಅವಳು ನಿನ್ನನ್ನ.. ಅಣ್ಣನನ್ನ ನನ್ನಿಂದ ದೂರ ಮಾಡಿದ್ಳು, ಯಾರು ಇಲ್ಲದೇ ನಾನು ಏಕಾಂಗಿಯಾಗಿದ್ದೇನೆ ಎಂದು ಹೇಳುತ್ತಾಳೆ. ನನ್ನ ಈ ತಂದ್ರಲ್ಲ ಅವರನ್ನು ಮಾತ್ರ ನಾನು ಸುಮ್ಮನೆ ಬಿಡಲ್ಲ ಎನ್ನುತ್ತಾಳೆ. ಈಗಾಗಲೇ ಅಣ್ಣ ಮತ್ತು ನಾನು ಒಂದು ಪ್ಲಾನ್ ಮಾಡಿದೀವಿ ಎಂದು ಹೇಳುತ್ತಾಳೆ. ತಾನು ಮಾಡಿದ ಪ್ಲಾನ್‌ನ ಜೈದೇವ್‌ಗೆ ವಿವರಿಸುತ್ತಾಳೆ.

ಬಾಯಿ ಬಾಯಿ ಬಡ್ಕೋಬೇಕಷ್ಟೇ
ಅವಳಿಗೆ ಕಾಮಾಲೆ ಬಂದಿದೆ, ಅದ್ಯಾವುದೋ ನಾಟಿ ಔಷಧಿ ಪಡೆಯಲು ಕಾಡಿನಲ್ಲಿರುವ ದೇವಸ್ಥಾನಕ್ಕೆ ಹೋಗಿದ್ದಾಳೆ ಎಂದು ಹೇಳುವ ಶಕುಂತಲಾ, ಅಣ್ಣ ಹೇಳಿದಂತೆಯೇ ಅವರ ಜೊತೆ ನಮ್ಮ ಡ್ರೈವರ್ ಮಂಜುನ ಕಳಿಸಿದೀನಿ ಈಗ ಆ ಡ್ರೈವರ್ ಕಾರನ್ನು ಕಾಡಿನ ಮಧ್ಯೆ ನಿಲ್ಲಿಸಿ ಕೀ ತಗೊಂಡು ಓಡಿ ಹೋಗುತ್ತಾನೆ ಎಂದು ಹೇಳುತ್ತಾಳೆ. ಆ ದಾರಿಯಲ್ಲಿ ಯಾವ ಗಾಡಿ ಕೂಡ ಓಡಾಡುವುದಿಲ್ಲ. ನೆಟ್‌ವರ್ಕ್ ಕೂಡ ಸಿಗುವುದಿಲ್ಲ. ಬಾಯಿ ಬಾಯಿ ಬಡ್ಕೋಬೇಕಷ್ಟೇ ಎನ್ನುವ ಶಕುಂತಲಾ ಒಂದಲ್ಲ ಎರಡಲ್ಲ ಹತ್ ಹತ್ರ 30 ಕೀಲೋ ಮೀಟರ್ ಬಸರಿ ಹೆಂಗಸನ್ನು ಹೊತ್ತುಕೊಂಡು ಹೇಗೆ ಹೋಗ್ತಾನೆ ಎಂದು ಜೈದೇವ್‌ಗೆ ಕೇಳುತ್ತಾಳೆ.
ಆಗ ಜೈದೇವ್ ಸಾಧ್ಯನೇ ಇಲ್ಲ ಎಂದು ಹೇಳುತ್ತಾನೆ. ಕುತೂಹಲ ತಡೆಯಲಾಗದೇ ಕಾಡಿನಲ್ಲಿ ಕಾಡು ಪ್ರಾಣಿಗಳು ಬಂದು ಅವರನ್ನು ಮುಗಿಸುತ್ತಾವೆ ಇದೆ ಅಲ್ವಾ ಪ್ಲಾನ್ ಎನ್ನುತ್ತಾನೆ. ಆಗ ಶಕುಂತಲಾ ಇಲ್ಲಾ ಜೈ ಕಥೆ ಬೇರೆನೇ ಇದೆ ಎಂದು ಹೇಳುತ್ತಾಳೆ.
ಸದ್ಯ ಗೌತಮ್ ಮತ್ತು ಭೂಮಿಕಾ ಕಾಡಿನ ಮಧ್ಯೆ ಸಿಕ್ಕಿಕೊಂಡಿದ್ದು ರೌಡಿಗಳು ದಾಳಿ ಮಾಡಲು ಬಂದಿದ್ದಾರೆ. ಅಣ್ಣಯ್ಯ ಮತ್ತು ಕರ್ಣ ಕಾಡಿನ ಮಧ್ಯೆ ಸಿಲುಕಿಕೊಂಡ ಗೌತಮ್- ಆನಂದ್ ಮತ್ತು ಭೂಮಿಕಾಳನ್ನ ಹೇಗೆ ರಕ್ಷಿಸುತ್ತಾರೆ ಎನ್ನುವುದನ್ನು ಈಗ ಕಾದು ನೋಡಬೇಕಿದೆ.


Click it and Unblock the Notifications











