Amruthadhaare : ರೌಡಿಗಳಿಂದ ಭೂಮಿಕಾ ಮತ್ತು ಗೌತಮ್‌ನ ಕಾಪಾಡಲು ಬಂದ ಅಣ್ಣಯ್ಯ..!
ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಮತ್ತು ಭೂಮಿಕಾ ಕಾಡಿನ ಮಧ್ಯೆ ಸಿಕ್ಕಿಕೊಂಡಿದ್ದಾರೆ. ಕಾರಿಗೆ ಪರ್ಯಾಯ ವ್ಯವಸ್ಥೆ ಮಾಡಲು ಆನಂದ್ ಕಾರಿಂದ ಕೆಳಗಿಳಿದು ಸಹಾಯಕ್ಕೆ ಯಾರಾದರೂ ಸಿಗುತ್ತಾರಾ ಎಂದು ಹುಡುಕಾಡಲು ಮುಂದಾಗಿದ್ದಾನೆ. ಇದೇ ಸಮಯದಲ್ಲಿ ಶಕುಂತಲಾ ಕಳಿಸಿರುವ ರೌಡಿಗಳು ಆನಂದ್‌ನ ಪ್ರಜ್ಞೆ ತಪ್ಪಿಸಿದ್ದಾರೆ. ಗೌತಮ್ ಮತ್ತು ಭೂಮಿಕಾ ಕಾರಲ್ಲಿಯೇ ಇದ್ದು ಶಕುಂತಲಾ ಆದೇಶದ ಮೇರೆಗೆ ಇಬ್ಬರನ್ನು ಕೊಲ್ಲಲು ಕಾರಿನತ್ತ ರೌಡಿಗಳು ಹೋಗ್ತಾರೆ.
ಮತ್ತೊಂದು ಕಡೆ ಮನೆಯಲ್ಲಿರುವ ವಿಶ್ರಾಂತಿ ಪಡೆಯುತ್ತಿದ್ದ ಭಾಗ್ಯಮ್ಮ ಮನಸ್ಸು ವಿಚಲಿತವಾಗುತ್ತೆ. ಹೀಗಾಗಿ ದೇವರ ನಾಮಸ್ಮರಣೆ ಮಾಡಲು ಮುಂದಾಗುತ್ತಾಳೆ. ಕಾರಿನತ್ತ ಬಂದ ರೌಡಿಗಳು ಶಾಕ್ ಆಗುತ್ತಾರೆ. ಯಾಕೆಂದರೆ.. ಗೌತಮ್ ಮತ್ತು ಭೂಮಿಕಾ ಆ ಕಾರಿನಲ್ಲಿ ಇರುವುದಿಲ್ಲ.

ಭೂಮಿಕಾಗೆ ಆನಂದ್ ಚಿಂತೆ
ಆನಂದ್ ದಾರಿಯನ್ನು ಕಾದು ನಡೆದುಕೊಂಡೆ ದೇವಸ್ಥಾನಕ್ಕೆ ತಲುಪಲು ಇಬ್ಬರು ಮುಂದಾಗಿದ್ದು, ನಡೆದುಕೊಂಡು ಹೋಗುತ್ತಿರುತ್ತಾರೆ. ರೌಡಿಗಳು ಗೌತಮ್ ಮತ್ತು ಭೂಮಿಕಾ ಅವರನ್ನು ಹುಡುಕುತ್ತಾ ಹೊರಟಿದ್ದು ಆನಂದ್ ಕುರಿತು ಭೂಮಿಕಾ ಚಿಂತೆ ಮಾಡುತ್ತಾಳೆ. ನಾವು ತುಂಬಾ ಬಂದ್ವಿ, ಆನಂದ್ ನಮ್ಮನ್ನು ಹುಡುಕುತ್ತಿರುತ್ತಾರೆ ಎನ್ನುತ್ತಾಳೆ.
ಆಗ ಗೌತಮ್ ನಮ್ಮ ಪರಿಸ್ಥಿತಿಯನ್ನು ಅವನು ಅರ್ಥ ಮಾಡಿಕೊಳ್ತಾನೆ, ನಿಮಗೆ ಮೊದಲು ಚಿಕಿತ್ಸೆ ಕೊಡಿಸುವುದು ಮುಖ್ಯ, ಹೇಗೋ ಬಂದು ಅವನು ನಮ್ಮನ್ನು ಸೇರಿಕೊಳ್ತಾನೆ ಎಂದು ಹೇಳುತ್ತಾನೆ.
ರೌಡಿಗಳಿಗೆ ಗದರಿದ ಶಕುಂತಲಾ
ಗೌತಮ್ ಮತ್ತು ಭೂಮಿಕಾ ಇಬ್ಬರನ್ನು ಎಷ್ಟೇ ಹುಡುಕಿದರು ಸಿಗದಿದ್ದಾಗ ರೌಡಿಗಳ ಲೀಡರ್ ಶಕುಂತಲಾಗೆ ಫೋನ್ ಮಾಡುತ್ತಾನೆ. ಅವನನ್ನು ಗತಿ ಕಾಣಿಸಿ ಬರುವಷ್ಟರಲ್ಲಿ ಇವರು ತಪ್ಪಿಸಿಕೊಂಡಿದ್ದಾರೆ ಎಂದು ಹೇಳುತ್ತಾನೆ. ಅವರು ಅಲ್ಲೇ ಇಲ್ಲೋ ಇರ್ತಾರೆ. ಮೊದಲು ಅವರು ಇಬ್ಬರನ್ನು ಹುಡುಕಿ ಕಥೆ ಮುಗಿಸಿ ಎಂದು ಶಕುಂತಲಾ ಹೇಳುತ್ತಾಳೆ. ಅವರು ಎಲ್ಲೇ ಹೋದರು ಬಿಡುವುದು ಬೇಡ ಹುಡುಕಿ ಎಂದು ಲೀಡರ್ ತನ್ನ ಸಹಚರರಿಗೆ ಹೇಳುತ್ತಾನೆ.
ಗೌತಮ್ ಮತ್ತು ಭೂಮಿಕಾಳನ್ನು ರೌಡಿಗಳು ಹುಡುಕುತ್ತಿದ್ದು, ಇದೇ ಸಮಯದಲ್ಲಿ ಮಳೆ ಕೂಡ ಶುರುವಾಗುತ್ತೆ. ಇನ್ನು ನಡೆದುಕೊಂಡು ಹೋಗುತ್ತಿದ್ದ ಭೂಮಿಕಾಗೆ ಸುಸ್ತಾದ ಹಿನ್ನೆಲೆ ಭೂಮಿಕಾಳನ್ನು ಕೂರಿಸಿ ಗೌತಮ್ ನೀರು ಕೊಟ್ಟಿದ್ದಾನೆ.

ಅಣ್ಣಯ್ಯ ಎಂಟ್ರಿ
ಸದ್ಯ ಇಂದು ಪ್ರಸಾರವಾಗುವ ಧಾರಾವಾಹಿಯ ಪ್ರೋಮೋವನ್ನು ಜೀ ಕನ್ನಡ ವಾಹಿನಿ ಹಂಚಿಕೊಂಡಿದ್ದು ರೌಡಿಗಳ ಕೈಗೆ ಗೌತಮ್ ಮತ್ತು ಭೂಮಿಕಾ ಸಿಕ್ಕಿ ಬಿದ್ದಿದ್ದಾರೆ. ಸುತ್ತ 30 ಕೀಲೋಮೀಟರ್ ಒಂದು ನರಪಿಳ್ಳೆ ಕೂಡ ಓಡಾಡುವುದಿಲ್ಲ, ನಿಮ್ಮನ್ನು ಕಾಪಾಡೋಕೆ ಆ ದೇವರೇ ಬರಬೇಕು ಎಂದು ರೌಡಿ ಹೇಳುತ್ತಾನೆ. ಭೂಮಿಕಾಗೆ ವಿಪರೀತ ಸಂಕಟವಾಗುತ್ತಿದ್ದು ಗೌತಮ್‌ಗೆ ಮುಂದೇನು ಮಾಡಬೇಕೆಂದು ದಿಕ್ಕು ತೋಚದಂತಾಗುತ್ತೆ. ಇದೇ ಸಮಯದಲ್ಲಿ ಅಣ್ಣಯ್ಯ ಅಖಾಡಕ್ಕೆ ಬಂದಿದ್ದು ಇವನ್ಯಾರು ಇವರನ್ನು ಕಾಪಾಡೋಕೆ ದೇವರ ತರ ಬಂದಿದ್ದಾನಲ್ಲ ಎಂದು ರೌಡಿಗಳು ಬೆರಗಾಗುತ್ತಾರೆ.
ಮುಂದೇನಾಗುತ್ತೆ ?
ರೌಡಿಗಳ ಕಪಿಮುಷ್ಠಿಯಿಂದ ಭೂಮಿಕಾ ಮತ್ತು ಗೌತಮ್‌ನ ಪಾರು ಮಾಡಲು ಸದ್ಯ ಅಣ್ಣಯ್ಯ ಬಂದಿದ್ದು, ಭೂಮಿಕಾ ನೋವಲ್ಲಿ ಒದ್ದಾಡುತ್ತಿದ್ದಾಳೆ. ಅಣ್ಣಯ್ಯ ಬೆನ್ನ ಹಿಂದೆಯೇ ಪಾರು ಮತ್ತು ಕರ್ಣ ಕೂಡ ಇಂದೇ ಅಮೃತಧಾರೆಯ ಅಂಗಳಕ್ಕೆ ಬರುವ ಸಾಧ್ಯತೆಗಳಿದ್ದು, ಭೂಮಿಕಾಳನ್ನು ಪಾರು ಆಸ್ಪತ್ರೆಗೆ ಕರೆದೊಯ್ಯುವ ಸಾಧ್ಯತೆ ಇದೆ. ಇನ್ನು ಅಣ್ಣಯ್ಯ, ಕರ್ಣ ಮತ್ತು ಅಮೃತಧಾರೆಯ ಈ ಮಹಾಸಂಗಮದಿಂದ ಟಿಆರ್‌ಪಿಯಲ್ಲಿ ಕೂಡ ಏರಿಕೆಯಾಗುವ ಸಾಧ್ಯತೆ ಇದೆ.


Click it and Unblock the Notifications











