Amruthadhaare : ಕಾಡಲ್ಲಿ ಗೌತಮ್-ಭೂಮಿಕಾ ವಿಲವಿಲ, ಇಬ್ಬರ ಕಥೆ ಮುಗಿಸಿದ ಭ್ರಮೆಯಲ್ಲಿ ಶಕುಂತಲಾ !
ಅಮೃತಧಾರೆ ಧಾರಾವಾಹಿಯಲ್ಲಿ ರೌಡಿಗಳ ಕಪಿಮುಷ್ಠಿಯಿಂದ ಭೂಮಿಕಾ ಮತ್ತು ಗೌತಮ್‌ನ ಪಾರು ಮಾಡಲು ಸದ್ಯ ಅಣ್ಣಯ್ಯ ಬಂದಿದ್ದಾನೆ. ಮತ್ತೊಂದು ಕಡೆ.. ಆತಂಕಕ್ಕೊಳಗಾಗಿರುವ ಭಾಗ್ಯಮ್ಮ ಮನೆಯಲ್ಲಿ ದೇವರ ನಾಮಸ್ಮರಣೆ ಮಾಡುತ್ತಿದ್ದಾಳೆ. ಈ ಸಮಯದಲ್ಲಿ ದೇವರ ಮುಂದಿನ ದೀಪ ಆರಿ ಹೋಗಿದ್ದು, ಅಜ್ಜಿ ಸೇರಿ ಮನೆಯ ಎಲ್ಲ ಸದಸ್ಯರು ಗಾಬರಿಯಾಗಿದ್ಧಾರೆ. ಇದು ಅಪಶಕುನ ಯಾರಾದರೂ ಗೌತಮ್ ಮತ್ತು ಭೂಮಿಕಾಗೆ ಫೋನ್ ಮಾಡಿ ಆರೋಗ್ಯ ವಿಚಾರಿಸಿ ಎಂದು ಅಜ್ಜಿ ಹೇಳುತ್ತಾಳೆ.
ಗಾಬರಿಯಲ್ಲಿಯೇ ಅಪೇಕ್ಷಾ ಫೋನ್ ಮಾಡಿದ್ದು ಸಂಪರ್ಕ ಸಾಧ್ಯವಾಗುವುದಿಲ್ಲ. ಆನಂದ್‌ಗೆ ಮಲ್ಲಿ ಫೋನ್ ಮಾಡಿದ್ದು ಆನಂದ್ ಇನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿಯೇ ಇದ್ದಾನೆ. ಆನಂದ್ ಫೋನ್ ಕೂಡ ರಿಂಗಾಗುತ್ತಿಲ್ಲ. ಇದರಿಂದ ಇನ್ನೂ ಗಾಬರಿಯಾಗುವ ಅಜ್ಜಿ ಅಯ್ಯೋ ದೇವರೆ ಅಲ್ಲೇನಾಗಿದೆ ಗೊತ್ತಾಗ್ತಿಲ್ಲವಲ್ಲಾ ಎಂದು ಕಣ್ಣೀರು ಹಾಕುತ್ತಾಳೆ.

ಆ ದೇವರೇ ಬರಬೇಕೆಂದ ರೌಡಿ ಪಡೆ
ಕಾಡಲ್ಲಿ ನಡೆದು ಸುಸ್ತಾಗಿರುವ ಗೌತಮ್ ಮತ್ತು ಭೂಮಿಕಾ ಕುಳಿತುಕೊಂಡು ಸುಧಾರಿಸಿಕೊಳ್ಳುತ್ತಿರುತ್ತಾರೆ. ಇದೇ ಸಮಯದಲ್ಲಿ ಅಲ್ಲಿ ಬರುವ ರೌಡಿಗಳು ಲೀಡರ್ ತಪ್ಪಿಸಿಕೊಂಡು ಬಿಡ್ತೀರಾ, ಅದ್ಹೇಗೆ ತಪ್ಪಿಸಿಕೊಂಡು ಬಿಡ್ತೀರಾ ಸರ್ ಎಂದು ಕೇಳುತ್ತಾನೆ. ಆಗ ಕಣ್ಣೆತ್ತಿ ನೋಡುವ ಗೌತಮ್ ಮತ್ತು ಭೂಮಿಕಾ ತಮ್ಮ ಸುತ್ತ ಮುತ್ತ ರೌಡಿಗಳಿರುವುದನ್ನು ಕಂಡು ಗಾಬರಿಯಾಗುತ್ತಾರೆ.
ಆದರೂ ಧೈರ್ಯ ಮಾಡುವ ಗೌತಮ್ ಯಾರೋ ನೀವೆಲ್ಲ ಎಂದು ಪ್ರಶ್ನೆ ಮಾಡುತ್ತಾನೆ. ಇದಕ್ಕೆ ನಾವು ಕಟ್ಟಿಗೆ ಕಡೆಯುವರು ಕೂಲಿ ತಗೊಂಡಿದೀವಿ ಕೆಲಸ ಮಾಡ್ತಿದ್ದೀವಿ ಎಂದು ರೌಡಿಗಳ ಲೀಡರ್ ಹೇಳುತ್ತಾನೆ. ಸುತ್ತ 30 ಕೀಲೋಮೀಟರ್ ಒಂದು ನರಪಿಳ್ಳೆ ಕೂಡ ಓಡಾಡುವುದಿಲ್ಲ, ನಿಮ್ಮನ್ನು ಕಾಪಾಡೋಕೆ ಆ ದೇವರೇ ಬರಬೇಕು ಎಂದು ರೌಡಿ ಹೇಳುತ್ತಾನೆ. ಭೂಮಿಕಾಗೆ ವಿಪರೀತ ಸಂಕಟವಾಗುತ್ತಿದ್ದು ಗೌತಮ್‌ಗೆ ಮುಂದೇನು ಮಾಡಬೇಕೆಂದು ದಿಕ್ಕು ತೋಚದಂತಾಗುತ್ತೆ.
ಕಾಡಿನತ್ತ ತೆರಳುವ ಸೃಜನ್ ಮತ್ತು ಪಾರ್ಥ
ಇತ್ತ ಭಾಗ್ಯಮ್ಮ ದೇವರ ಆರಾಧನೆಯನ್ನು ಮುಂದುವರೆಸಿದ್ದು ಮನೆಗೆ ಸೃಜನ್ ಬರುತ್ತಾನೆ. ಎಲ್ಲರು ಗಾಬರಿಯಲ್ಲಿರುವುದನ್ನು ಕಂಡು ಯಾಕೆ ಏನಾಯ್ತ ಎಂದು ಕೇಳುತ್ತಾನೆ. ಆಗ ಸುಧಾ ಗೌತಮ್ ಮತ್ತು ಭೂಮಿಕಾ ಕಾಡಿಗೆ ಹೋಗಿರುವ ವಿಚಾರ ಹೇಳುತ್ತಾಳೆ. ದೀಪಾ ಆರಿ ಹೋಯ್ತು ಅವರ ಫೋನ್ ಬೇರೆ ಸಂಪರ್ಕಕ್ಕೆ ಸಿಕ್ತಿಲ್ಲ ಎಂದು ಹೇಳುತ್ತಾಳೆ.
ಆಗ ಸೃಜನ್ ನೋಡಿಕೊಂಡು ಬರುವುದಾಗಿ ಹೇಳುತ್ತಾನೆ. ಪಾರ್ಥ ಕೂಡ ಸೃಜನ್ ಜೊತೆಯಲ್ಲಿ ತೆರಳುತ್ತಾನೆ. ಮಲ್ಲಿಗೆ ಅಜ್ಜಿ ದೇವರ ದೀಪ ಹಚ್ಚುವಂತೆ ಹೇಳುತ್ತಾಳೆ. ಯಾರಿಗೂ ಏನೂ ಆಗದಂತೆ ನೋಡಿಕೊಳ್ಳುವ ಜವಾಬ್ಧಾರಿ ನಿನ್ನದು ದೇವರೆ ಎಂದು ಪ್ರಾರ್ಥನೆ ಮಾಡುತ್ತಾಳೆ.

ಜೈದೇವ್‌ಗೆ ಕಾಡ್ತಿದೆ ಅನುಮಾನ
ಎಲ್ಲಾ ಓಕೆ ಆದರೂ ನನಗೆ ಒಂದು ಅನುಮಾನ ಎಂದು ಶಕುಂತಲಾ ಬಳಿ ಜೈದೇವ್ ಇವರು ಇರುವ ಜಾಗದಲ್ಲಿ ಸಹಾಯಕ್ಕೆ ಯಾರು ಬರುವುದಿಲ್ಲ ಎನ್ನುವುದಕ್ಕೆ ಏನೂ ಗ್ಯಾರಂಟಿ ಎನ್ನುತ್ತಾನೆ. ಕಾಡು ಜನರು.. ದನ ಮೇಯಿಸುವರು.. ಟ್ರೆಕ್ಕಿಂಗ್‌ಗೆ ಎಂದು ಬಂದವರು ಅವರು ಸಹಾಯ ಮಾಡಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ ಎಂದು ಕೇಳುತ್ತಾನೆ. ಆಗ ಶಕುಂತಲಾ ಚಾನ್ಸೇ ಇಲ್ಲ ಹಾಗೇನಾದರೂ ಆದರೆ ನಮ್ಮ ಹುಡುಗರು ನೋಡ್ಕೋತಾರೆ, ಅವರನ್ನು ಕಾಪಾಡಲು ಯಾರು ಬರುವುದಿಲ್ಲ ಎಂದು ಆತ್ಮ ವಿಶ್ವಾಸದಿಂದ ಹೇಳುತ್ತಾಳೆ.
ಹೊರ ಬಿತ್ತು ಡಾಕ್ಟರ್ ರಹಸ್ಯ
ಇನ್ನು ಇದೇ ಸಮಯದಲ್ಲಿ ಡಾಕ್ಟರ್ ರಹಸ್ಯವನ್ನು ಕೂಡ ಜೈದೇವ್‌ಗೆ ಶಕುಂತಲಾ ಹೇಳಿದ್ದು, ಮನೆಗೆ ಭೂಮಿಕಾಳನ್ನು ನೋಡಲು ಬಂದಿದ್ದ ಡಾಕ್ಟರ್‌ನೇ ನಾನು ಕೊಂಡುಕೊಂಡೇ ಎಂದು ಹೇಳುತ್ತಾಳೆ. ಭೂಮಿಕಾಗೆ ನೋವು ಹೆಚ್ಚಾಗುವ ತರ ಇಂಜೆಕ್ಷನ್ ಹಾಕಿಸಿದೆ, ಅವಳು ತುಂಬಾ ಹೊತ್ತು ನಾರ್ಮಲ್ ಆಗಿರಲು ಸಾಧ್ಯ ಇಲ್ಲ ಎನ್ನುವ ಶಕುಂತಲಾ ಇನ್ನು ಸ್ವಲ್ಪ ಹೊತ್ತಿಗೆ ಅವಳಿಗೆ ಹೆರಿಗೆ ನೋವು ಶುರುವಾಗುತ್ತೆ, ಆ ನೋವಲ್ಲಿ ಒದ್ದಾಡುವಾಗ ನಮ್ಮ ಹುಡುಗರ ಕೈಗೆ ಅವಳು ಸಿಕ್ಕಿಯೇ ಸಿಕ್ಕಿ ಹಾಕಿಕೊಳ್ಳುತ್ತಾಳೆ, ಅಲ್ಲಿಗೆ ಇಬ್ಬರ ಕಥೆ ಮುಕ್ತಾಯವಾದಂತೆಯೇ ಎಂದು ಖುಷಿ ಪಡುತ್ತಾಳೆ.


Click it and Unblock the Notifications











