Amruthadhaare : ದೇವರಂತೆ ಬಂದು ಗೌತಮ್‌-ಭೂಮಿಕಾಳನ್ನು ಕಾಪಾಡಿದ ಶಿವು, ಆದರೂ ಕಡಿಮೆಯಾಗದ ಆತಂಕ..!

ಅಮೃತಧಾರೆ ಧಾರಾವಾಹಿಯಲ್ಲಿ ರೌಡಿಗಳ ಕಪಿಮುಷ್ಠಿಯಿಂದ ಭೂಮಿಕಾ ಮತ್ತು ಗೌತಮ್‌ನ ಪಾರು ಮಾಡಲು ಸದ್ಯ ಅಣ್ಣಯ್ಯ ಬಂದಿದ್ದಾನೆ. ಅಣ್ಣಯ್ಯನನ್ನು ಕಂಡು ಆಶ್ಚರ್ಯಗೊಂಡಿರುವ ಗ್ಯಾಂಗ್ ಲೀಡರ್ ಒಂದು ನರಪಿಳ್ಳೆ ಓಡಾಡುವುದಿಲ್ಲ ಎಂದರೆ ಇವರನ್ನು ಕಾಪಾಡೋಕೆ ದೇವರಂತೆ ಬಂದಿದ್ದಾನೆ ಎಂದು ಕೆರಳುತ್ತಾನೆ. ಯಾರೋ ನೀನು ಎಂದು ಕೇಳುತ್ತಾನೆ. ಆಗ ಶಿವು ನಾನು ಒಳ್ಳೆಯವರಿಗೆಲ್ಲ ಮಾರಿಗುಡಿ ಶಿವಾ, ನಿಮ್ಮಂಥ ಕೆಟ್ಟವರಿಗೆ ಮೂರನೇ ಕಣ್ಣು ಬಿಡೋ ಮುಕ್ಕಣ್ಣ ಶಿವಾ ಎಂದೆಲ್ಲ ಡೈಲಾಗ್ ಹೊಡೆಯುತ್ತಾನೆ.

ಆಗ ನಮ್ಮ ಕೆಲಸ ಹಾಳು ಮಾಡಿದ್ದಲ್ಲದೇ ನಮ್ಮ ಮುಂದೆ ಬಿಲ್ಡಪ್ ಡೈಲಾಗ್‌ಗಳನ್ನು ಬೇರೆ ಹೊಡಿತಿದ್ದೀಯಾ ಎಂದು ಗ್ಯಾಂಗ್ ಲೀಡರ್ ಹೇಳುತ್ತಾನೆ.ಮೊದಲು ನಿನ್ನ ಕಥೆ ಮುಗಿಸ್ತೀನಿ ಎಂದು ಶಿವು ಮೇಲೆ ಹಲ್ಲೆ ಮಾಡಲು ಮುಂದಾಗುತ್ತಾನೆ. ಶಿವು ಮತ್ತು ರೌಡಿಗಳ ನಡುವೆ ಆ ನಂತರ ಕಾಳಗ ನಡೆದಿದ್ದು ಶಿವು ರೌಡಿಗಳನ್ನೆಲ್ಲ ಮಣ್ಣು ಮುಕ್ಕಿಸಿದ್ದಾನೆ.

amruthadhaare-serial-july-08-episode-written-update

ದೇವಸ್ಥಾನಕ್ಕೆ ಬರುವ ಗೌತಮ್-ಶಿವು ಮತ್ತು ಭೂಮಿಕಾ

ರೌಡಿಗಳಿಗೆ ಮಣ್ಣು ಮುಕ್ಕಿಸಿದ ಶಿವು ಮತ್ತು ಗೌತಮ್ ಆ ನಂತರ ಭೂಮಿಕಾಳನ್ನು ಕರೆದುಕೊಂಡು ದೇವಸ್ಥಾನಕ್ಕೆ ಬರುತ್ತಾರೆ. ಅಲ್ಲಿ ಇಬ್ಬರು ಶಾಸ್ತ್ರೀಗಳನ್ನು ಭೇಟಿ ಮಾಡಿದ್ದು ಶಾಸ್ತ್ರೀಗಳು ಭೂಮಿಕಾಗೆ ನಾಟಿ ಮದ್ದು ನೀಡುತ್ತಾರೆ. ಆ ನಂತರ ಮೇಕೆ ಹಾಲು ಕುಡಿಯಲು ಹೇಳುವ ಶಾಸ್ತ್ರೀಗಳು ಈ ಹಾಲನ್ನು ಕಡ್ಡಾಯವಾಗಿ ಮದ್ದು ತಗೊಂಡ ಮೇಲೆ ಕುಡಿಯಲೇಬೇಕು ಎಂದು ಹೇಳುತ್ತಾರೆ.

ಆಗ ಶಿವು ಕೂಡ ಮೇಡಂ ಅವರೇ ಕುಡಿಯಿರಿ ಮೇಕೆ ಹಾಲು ತುಂಬಾನೇ ಒಳ್ಳೆಯದು, ನಾವೆಲ್ಲ ಅದನ್ನೇ ಕುಡಿಯುವುದು ಆನೆ ಬಲ ಬರುತ್ತೆ ಕುಡಿರಿ ಕುಡಿರಿ ಎಂದು ಹೇಳುತ್ತಾನೆ. ಭೂಮಿಕಾ ಹಾಲನ್ನು ಕುಡಿಯುತ್ತಾಳೆ. ಆಗ ಗೌತಮ್ ಗುರುಗಳೇ ವಾಸಿಯಾಗುತ್ತಲ್ವಾ ಎಂದು ಕೇಳುತ್ತಾನೆ. ಅದಕ್ಕೆ ಶಾಸ್ತ್ರೀಗಳು ಏನು ಸಮಸ್ಯೆ ಇಲ್ಲ ನೂರಕ್ಕೆ ನೂರು ವಾಸಿಯಾಗುತ್ತೆ ಎಂದು ಹೇಳುತ್ತಾರೆ. ಆದರೆ ಇವತ್ತು.. ನಾಳೆ ಕಟ್ಟು ನಿಟ್ಟಾಗಿ ಪಥ್ಯ ಮಾಡಬೇಕೆಂದು ಹೇಳುತ್ತಾರೆ. ಪಥ್ಯ ಮಾಡಿದರೆ ಎಲ್ಲ ಸರಿ ಹೋಗುತ್ತೆ ಎಂದು ಹೇಳುತ್ತಾರೆ.

amruthadhaare-serial-july-08-episode-written-update

ಭೂಮಿಕಾಗೆ ಕಾಣಿಸಿಕೊಂಡ ಹೆರಿಗೆ ನೋವು

ಶಾಸ್ತ್ರೀಗಳು ನೀಡಿದ ಮದ್ದು ಪಡೆದು ಇನ್ನೇನು ಭೂಮಿಕಾ ಮತ್ತು ಗೌತಮ್ ಅಲ್ಲಿಂದ ಹೊರಡಬೇಕು ಅಷ್ಟರಲ್ಲಿ ಭೂಮಿಕಾಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಇದರಿಂದ ಗೌತಮ್ ಆತಂಕಕ್ಕೀಡಾಗಿದ್ದು ಇಲ್ಲಿ ಎಲ್ಲಿಯೂ ಆಸ್ಪತ್ರೆ ಇಲ್ವಲ್ಲಾ ಎಂದು ಶಿವುಗೆ ಕೇಳುತ್ತಾನೆ.

ಆಗ ಶಿವು ಇಲ್ಲಿಯೇ ಪಕ್ಕದಲ್ಲಿ ಮೆಡಿಕಲ್ ಕ್ಯಾಂಪ್ ನಡೆಯುತ್ತಿದೆ. ಅಲ್ಲಿ ಡಾಕ್ಟರ್, ನರ್ಸ್ ಎಲ್ಲಾ
ಇದ್ದಾರೆ ಅಲ್ಲಿಯೇ ಕರ್ಕೊಂಡು ಹೋಗೋಣ ಎನ್ನುತ್ತಾನೆ. ಭೂಮಿಕಾಗೆ ವಿಪರೀತ ಸಂಕಟವಾಗುತ್ತಿದ್ದು ಶಿವು ಟ್ರ್ಯಾಕ್ಟರ್ ಕೂಡ ಇದೇ ಸಮಯದಲ್ಲಿ ಕೆಟ್ಟು ನಿಂತಿದೆ.

ಮರವೇರಿ ಪಾರುಗೆ ವಿಷಯ ತಿಳಿಸುವ ಶಿವು

ಟ್ರ್ಯಾಕ್ಟರ್‌ ಕೆಟ್ಟು ನಿಂತಿದ್ದರಿಂದ ಗೌತಮ್ ಆತಂಕ ಇನ್ನು ಹೆಚ್ಚಾಗಿದ್ದು, ನೋವಲ್ಲಿ ಭೂಮಿಕಾ ನರಳುತ್ತಾಳೆ. ಮುಂದೇನು ಮಾಡುವುದು ಎಂದು ಶಿವುಗೆ ಗೌತಮ್‌ ಕೇಳಿದಾಗ ಒಂದು ನಿಮಿಷ ಇಲಲ್ಇಯೇ ಇರಿ ಎಂದು ಶಿವು ಮರವೇರಿ ಪಾರುಗೆ ಫೋನ್ ಮಾಡುತ್ತಾನೆ. ಪಾರುಗೆ ನಡೆದ ವಿಚಾರವನ್ನೆಲ್ಲ ಹೇಳುತ್ತಾನೆ. ಶಿವು ಮಾತು ಕೇಳಿದ ಪಾರು ಅಲ್ಲಿಯೇ ಇರುವ ಕರ್ಣನಿಗೆ ವಿಚಾರ ತಿಳಿಸಲು ಮುಂದಾಗುತ್ತಾಳೆ. ಆದರೆ.. ಕರ್ಣ ಬೈಕೇರಿ ಮುಂದೆ ಸಾಗಿದ್ದಾನೆ.

ಸದ್ಯ ಹಾಗೂ ಹೀಗೂ ಭೂಮಿಕಾಳನ್ನು ಶಿವು, ಗೌತಮ್ ಮತ್ತು ಪಾರು ಆಸ್ಪತ್ರೆಗೆ ದಾಖಲಿಸಿದ್ದು, ಆಸ್ಪತ್ರೆಯ ಬಳಿ ಮತ್ತೆ ರೌಡಿಗಳು ಪ್ರತ್ಯಕ್ಷರಾಗಿದ್ದಾರೆ. ಕರ್ಣ ಕೂಡ ಅಖಾಡಕ್ಕೆ ಎಂಟ್ರಿ ಇಂದು ಕೊಟ್ಟಿದ್ದಾನೆ. ಇಂದು ಏನೇನಾಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X