Amrutadhare :ಭೂಮಿಕಾ ಹೊಟ್ಟೆಯಲ್ಲಿ ಅವಳಿ ಮಕ್ಕಳಿದ್ದರೂ ಡಾಕ್ಟರ್ ಕರ್ಣನಿಗೆ ಗೊತ್ತೇ ಆಗ್ಲಿಲ್ಲ, ಮುಂದೇನು ?

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಮತ್ತು ಭೂಮಿಕಾ ಬೆನ್ನ ಹಿಂದೆ ಬೇತಾಳದಂತೆ ಬಿದ್ದಿರುವ ಶಕುಂತಲಾ ಈಗ ಗೌತಮ್ ಮತ್ತು ಭೂಮಿಕಾ ಇರುವ ಜಾಗಕ್ಕೂ ಬಂದಿದ್ದಾಳೆ. ಹೊರಗಡೆ ಪೊಲೀಸರೆಲ್ಲ ಇದ್ದಾರೆ ಏನಾಯ್ತು ಎಂದು ಏನು ಅರಿವು ಇರದಂತೆ ಕೇಳಿದ್ದಾಳೆ. ಇದಕ್ಕೆ ಗೌತಮ್ ಬೆಳಗ್ಗೆಯಿಂದ ನಮ್ಮನ್ನು ಯಾರೋ ಹಿಂಬಾಲಿಸುತ್ತಿದ್ದಾರೆ, ಹಲ್ಲೆ ಕೂಡ ಮಾಡಿದ್ದಾರೆ ಎಂದು ಹೇಳುತ್ತಾನೆ. ಸರಿಯಾದ ಸಮಯಕ್ಕೆ..

ಆನಂದ್ ಪೊಲೀಸರ ಜೊತೆ ಬಂದ ಈಗ ಅವರು ನಮಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ಹೇಳುತ್ತಾನೆ. ಆಗ ಆತಂಕಕ್ಕೆ ಒಳಗಾಗುವಂತೆ ನಾಟಕವಾಡುವ ಶಕುಂತಲಾ ನನ್ನ ನೆಮ್ಮದಿಗೆಲ್ಲ ಬೆಂಕಿ ಇತ್ತು ಪ್ಲಾನ್ ಎಲ್ಲ ಹಾಳಾಗಿ ಹೋಯ್ತು ಎಂದು ಮನದಲ್ಲಿಯೇ ನೊಂದುಕೊಳ್ಳುತ್ತಾಳೆ.

amruthadhaare-serial-july-10-episode-written-update

ಆಪರೇಷನ್ ಥಿಯೇಟರ್‌ನಲ್ಲಿ ಭೂಮಿಕಾ ಕೈ ಹಿಡಿದ ಗೌತಮ್

ಗೌತಮ್‌ನನ್ನು ಒಳಗೆ ಕರೆದಿರುವ ಕರ್ಣ, ಭೂಮಿಕಾಗೆ ನಾರ್ಮಲ್ ಡೆಲಿವರಿ ಆಗುವ ಸಾಧ್ಯತೆ ಇದೆ. ಆದರೆ.. ಅವರು ನಿಶಕ್ತರಾಗಿದ್ದಾರೆ. ಪ್ರಜ್ಞೆ ತಪ್ತಿದ್ದಾರೆ. ಈ ಹಿನ್ನೆಲೆ ಇಂತಹ ಟೈಮ್‌ನಲ್ಲಿ ದೇವರು ಕೈ ಹಿಡತಾನಾ ಇಲ್ವಾ ಗೊತ್ತಿಲ್ಲ. ಆದರೆ ಗಂಡ ಪಕ್ಕದಲ್ಲಿ ಕೈ ಹಿಡಿದಿರಬೇಕೆನ್ನುವ ಆಸೆ ಅವರಿಗಿರುತ್ತೆ. ಅದು ಔಷಧಿಯಂತೆ ವರ್ಕ್ ಕೂಡ ಆಗುತ್ತೆ ಎಂದು ಹೇಳುತ್ತಾನೆ. ಭೂಮಿಕಾ ಕೈ ಹಿಡಿದು ಗೌತಮ್ ಧೈರ್ಯ ತುಂಬುವ ಪ್ರಯತ್ನ ಮಾಡ್ತಾನೆ. ನಿಮ್ಮನ್ನು ಬಿಟ್ಟು ಬದುಕಲು ಆಗಲ್ಲ ಎಂದು ಹೇಳುತ್ತಾನೆ.

ಚಿಗುರೊಡೆಯಿತು ಒಲವಿನ ಕುಡಿ

ಭೂಮಿಕಾ ಹೆಣ್ಣು ಮಗುಗೆ ಜನ್ಮ ನೀಡಿದ್ದಾಳೆ. ಗೌತಮ್ ಮುಖದಲ್ಲಿ ಮಂದಹಾಸ ಮೂಡಿದೆ. ಆನಂದ್ ಮತ್ತು ಶಿವು ಕೂಡ ಖುಷಿ ಪಡುತ್ತಾರೆ. ಆದರೆ ಶಕುಂತಲಾ ಒಳಗೊಳಗೆ ಕುದಿಯುತ್ತಿದ್ದಾಳೆ.

ಶಕುಂತಲಾ ಬಳಿ ಬರುವ ಗೌತಮ್ ಮನೆಗೆ ಮಹಾಲಕ್ಷ್ಮಿ ಬಂದಳು ಎಂದು ಹೇಳುತ್ತಾನೆ. ತುಂಬಾ ಖುಷಿಯಾಯ್ತು ಎಂದು ಹೇಳುವ ಶಕುಂತಲಾ ಅವಳಿಗೇನೂ ಆಗಬಾರದು ಎಂದು ದೇವರ ಬಳಿ ನಾನು ಬೇಡಿಕೊಂಡಿದ್ದೇ ಎಂದು ಹೇಳುತ್ತಾಳೆ. ಛೇ ಕೊನೆಗೂ ನಾನು ಏನಾಗಬಾರದು ಅಂದುಕೊಂಡಿದ್ದೇ ಆದೇ ಆಗೋಯ್ತಲ್ಲ ಎಂದು ಮನದಲ್ಲಿಯೇ ಚಡಪಡಿಸುತ್ತಾಳೆ. ಜೈದೇವ್‌ಗೆ ಫೋನ್ ಮಾಡಿ ವಿಷಯ ತಿಳಿಸುತ್ತಾಳೆ.

amruthadhaare-serial-july-10-episode-written-update

ನೀನು ಮೂಲೆಗುಂಪು ಎಂದ ಜೈದೇವ್

ಮನೆಗೆ ಮಹಾಲಕ್ಷ್ಮಿ ಬಂದಿದ್ದಾಳೆ ಅಂತ ಗೌತಮ್ ಖುಷಿ ಪಡ್ತಿದ್ದಾನೆ. ನನಗೆ ಉರಿತಿದೆ ಎಂದು ಜೈದೇವ್‌ಗೆ ಶಕುಂತಲಾ ಹೇಳುತ್ತಾಳೆ. ಶಕುಂತಲಾ ಮಾತು ಕೇಳಿ ಜೈದೇವ್ ಕೂಡ ಬೇಸರ ಮಾಡಿಕೊಂಡಿದ್ದು, ಎಷ್ಟೇ ಪ್ರಯತ್ನ ಮಾಡಿದರೂ ಕೂಡ ಅವಳಿಗೆ ಮಗು ಆಗೇ ಹೋಯ್ತಲ್ಲ ಎನ್ನುತ್ತಾನೆ. ಇನ್ನು ನಮ್ಮ ಕಥೆ ಮುಗೀತು, ನೀನಂತೂ ಮೂಲೆಗುಂಪು ಆಗೋದೇ ಎಂದು ಹೇಳುತ್ತಾನೆ. ಹೆಂಡತಿ ಮಗಳು ಅಂತಾ ಅವನು ಅವರ ಮೇಲೆ ಗಮನ ಕೊಡ್ತಾನೆ, ಇಷ್ಟು ದಿನ ನಮ್ಮ ಯಾರ ಬಗ್ಗೆ ಕೂಡ ಅವನು ತಲೆ ಕೆಡಿಸಿಕೊಳ್ಳಲಿಲ್ಲ ಮುಂದೆ ನಿನ್ನ ಬಗ್ಗೆ ಕೂಡ ತಲೆ ಕೆಡಿಸಿಕೊಳ್ಳಲ್ಲ. ಮೂಲೆ ಗುಂಪು ಮಾಡ್ತಾನೆ ನಿನ್ನ ಎಂದು ಹೇಳುತ್ತಾನೆ.

ಕಿಡ್ನಾಪ್ ಸ್ಕೆಚ್

ಜೈದೇವ್ ಮಾತುಗಳಿಂದ ಕೆರಳುವ ಶಕುಂತಲಾ, ನನ್ನ ಆಟ ಇನ್ನು ಮುಗಿದಿಲ್ಲ. ಮುಗಿಯೋದು ಇಲ್ಲ ಎಂದು ಹೇಳುತ್ತಾಳೆ. ಮಗುನಾ ಕ್ಲೀನ್ ಮಾಡೋಕೆ ತಗೊಂಡು ಹೋಗಿದ್ದಾರೆ, ನೀನು ಹೇಗಾದರೂ ಮಾಡಿ ಇಲ್ಲಿಂದ ಆ ಮಗುನ ಕಿಡ್ನಾಪ್ ಮಾಡು ಎಂದು ಹೇಳುತ್ತಾಳೆ. ಅದೇನು ಮಾಡ್ತೀಯಾ ನನಗೆ ಗೊತ್ತಿಲ್ಲ ಮಗುನ ಕಿಡ್ನಾಪ್ ಮಾಡು ಎನ್ನುತ್ತಾಳೆ.

ಡಾಕ್ಟರ್‌ಗೆ ಗೊತ್ತಾಗಲಿಲ್ವಾ ?

ಸದ್ಯ ಇಂದು ಬಿಡುಗಡೆಯಾದ ಪ್ರೋಮೋದಲ್ಲಿ ಭೂಮಿಕಾ ಗರ್ಭದಲ್ಲಿ ಅವಳಿ ಮಕ್ಕಳಿರುವ ವಿಚಾರ ಗೊತ್ತಾಗಿದೆ. ಭೂಮಿಕಾ ಆಪರೇಷನ್ ಮಾಡಲು ಕರ್ಣ ಮುಂದಾಗಿದ್ದು, ಶಕುಂತಲಾ ಕರೆಂಟ್ ತೆಗೆಸಿದ್ದಾಳೆ. ಈ ಪ್ರೋಮೋಗೆ ನಾನಾ ರೀತಿಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಇದಕ್ಕೂ ಮುನ್ನ ಭೂಮಿಕಾಳನ್ನು ಗೌತಮ್​ ದಿವಾನ್​ ಪರೀಕ್ಷೆ ಮಾಡಿಸಲು ದೊಡ್ಡ ವೈದ್ಯರ ಬಳಿಗೇ ಹೋಗುತ್ತಿರುತ್ತಾನೆ. ಆದರೂ ಖೂಡ ಭೂಮಿಕಾಳಿಗೆ ಅವಳಿ ಮಕ್ಕಳು ಹುಟ್ಟುತ್ತಾರೆ ಎಂದು ಮೊದಲೇ ಗೊತ್ತಾಗಲಿಲ್ಲವೆ? ಎಂದು ಪ್ರಶ್ನೆ ಮಾಡುತ್ತಿದ್ಧಾರೆ. ಹೆರಿಗೆ ಮಾಡಿಸಿದ ಡಾಕ್ಟರ್ ಕರ್ಣಗೆ ಕೂಡ ಈ ವಿಚಾರ ಗೊತ್ತಾಗಲಿಲ್ಲವಾ ಎಂದು ಸೋಶಿಯಲ್ ಮೀಡಿಯಾದಲ್ಲಿ ನಿರ್ದೇಶಕರ ಕಾಲೆಳೆಯುತ್ತಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X