Amruthadhaare ;ಒಂದ್ಕಡೆ ಹೆಣ್ಣು ಮಗು ಕಿಡ್ನಾಪ್, ಮತ್ತೊಂದ್ಕಡೆ ಗಂಡು ಮಗು ; ಜೈದೇವ್-ಶಕುಂತಲಾ ಮುಖವಾಡ ಕಳಚುತ್ತಾ?

ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ.. ಶಕುಂತಲಾ ಇಲ್ಲಿಯೂ ಕೂಡ ಷಡ್ಯಂತ್ರ ಮಾಡಿದ್ದಾಳೆ. ಜೈದೇವ್‌ನ ಕರೆಸಿಕೊಂಡು ಆಗಷ್ಟೇ ಹುಟ್ಟಿದ ಮಗುವನ್ನು ಕಿಡ್ನಾಪ್ ಮಾಡಿಸಿದ್ದಾಳೆ. ಮಗು ಕಾಣೆಯಾದ ವಿಚಾರ ತಿಳಿದು ಬೆಚ್ಚಿ ಬೀಳುವ ಗೌತಮ್ ತನ್ನ ಸ್ನೇಹಿತ ಆನಂದ್ ಜೊತೆ ಮಳೆಯಲ್ಲಿಯೇ ಆ ಕಾಡಲ್ಲಿ ಮಗು ಹುಡುಕಲು ಶುರು ಮಾಡುತ್ತಾನೆ.

ಇದೇ ವೇಳೆ ಭೂಮಿಕಾ ಹೊಟ್ಟೆಯಲ್ಲಿ ಇನ್ನೊಂದು ಮಗು ಇರುವ ವಿಚಾರ ಗೊತ್ತಾಗುತ್ತೆ. ಆ ಕಡೆ ಕರ್ಣ ಮತ್ತೆ ಆಪರೇಷನ್ ಥಿಯೇಟರ್‌ ಒಳಗೆ ಹೋದರೆ ಈ ಕಡೆ ಗೌತಮ್ ವಿಷಯ ತಿಳಿದು ಆಸ್ಪತ್ರೆಗೆ ಓಡೋಡಿ ಬರುತ್ತಾನೆ.

amruthadhaare-serial-july-11-episode-written-update

ಶಕುಂತಲಾಗೆ ಐಡಿಯಾ ಕೊಡುವ ಜೈದೇವ್

ಈ ಕಡೆ ಮಗು ಕಿಡ್ನಾಪ್ ಮಾಡಿರುವ ಜೈದೇವ್‌ಗೆ ಶಕುಂತಲಾ ಫೋನ್ ಮಾಡಿದ್ದು, ಭೂಮಿಕಾ ಗರ್ಭದಲ್ಲಿ ಮತ್ತೊಂದು ಮಗು ಇರುವ ವಿಚಾರ ಹೇಳುತ್ತಾಳೆ. ಎರಡನೇ ಮಗು ಡಿಲಿವರಿಯಲ್ಲಿ ಸಮಸ್ಯೆಗಳಿವೆ ತಾಯಿ ಅಥವಾ ಮಗು ಇಬ್ಬರಲ್ಲಿ ಒಬ್ಬರು ಉಳಿಯುವ ಸಾಧ್ಯತೆ ಇದೆ ಎಂದು ಹೇಳುತ್ತಾಳೆ.

ಇದಕ್ಕೆ ಜೈದೇವ್ ಕರೆಂಟ್ ತೆಗೆಯುವ ಉಪಾಯವನ್ನು ಶಕುಂತಲಾಗೆ ನೀಡಿದ್ದು ಡಾಕ್ಟರ್ ಕೈಗುಣ ಹೇಗೆ ಇರಲಿ ಹಣೆ ಬರಹ ಸರಿ ಇರಬೇಕಲ್ವಾ ಎಂದು ಹೇಳುತ್ತಾನೆ. ಎಷ್ಟೇ ದೊಡ್ಡ ಡಾಕ್ಟರ್ ಆದರು ಕೂಡ ಕರೆಂಟ್ ಇಲ್ಲದೇ ಆಪರೇಷನ್ ಮಾಡಲು ಸಾಧ್ಯ ಇಲ್ಲ ಎಂದು ಹೇಳುತ್ತಾನೆ.

ಆಸ್ಪತ್ರೆಯ ಹೊರಗಡೆಯಿಂದ ಜೈದೇವ್ ಪವರ್ ಕಟ್ ಮಾಡಿದ್ದು ಒಳಗಡೆ ಶಕುಂತಲಾ ಜನರೇಟರ್‌ನ ಹಾಳು ಮಾಡಿದ್ದಾಳೆ. ಕರೆಂಟ್‌ ಇಲ್ಲದೇ ಅದ್ಹೇಗೆ ಆಪರೇಷನ್ ಮಾಡ್ತಾರೆ ನಾನು ನೋಡ್ತೀನಿ ಎಂದು ಶಕುಂತಲಾ ಖುಷಿ ಪಡುತ್ತಾಳೆ. ತಾಯಿ ಮತ್ತು ಮಗು ಕಥೆ ಮುಗೀತು ಎಂದು ಅಂದುಕೊಳ್ಳುತ್ತಾಳೆ.

ಶಿವು ಮಾಸ್ಟರ್ ಪ್ಲ್ಯಾನ್

ಶಖುಂತಲಾ ಮತ್ತು ಜೈದೇವ್ ಅವರ ಈ ಕುತಂತ್ರದಿಂದ ಕೆಂಗೆಟ್ಟು ಕರ್ಣ ಆಪರೇಷನ್ ಥಿಯೇಟರ್‌ದಿಂದ ಹೊರ ಬಂದಿದ್ದಾನೆ. ಯಾರೋ ಬೇಕು ಬೇಕಂತಲೇ ಈ ರೀತಿ ಮಾಡುತ್ತಿದ್ದಾರೆ ಎಂದು ನನಗೆ ಅನ್ಸುತ್ತೆ ಎಂದು ಹೇಳುತ್ತಾನೆ. ವಿದ್ಯುತ್ ಇಲ್ಲದೇ ಹೋದರೆ ಆಪರೇಷನ್ ಮಾಡುವುದು ಅಸಾಧ್ಯ, ಆದಷ್ಟು ಬೇಗ ಆಪರೇಷನ್ ಮಾಡಿಸಬೇಕು ಇಲ್ಲದಿದ್ದರೆ ತಾಯಿ ಮತ್ತು ಮಗು ಇಬ್ಬರ ಪ್ರಾಣಕ್ಕೆ ಅಪಾಯ ಇದೆ ಎಂದು ಕರ್ಣ ಹೇಳುತ್ತಾನೆ.

amruthadhaare-serial-july-11-episode-written-update

ಕರ್ಣ ಹೇಳಿದ ಈ ಮಾತುಗಳಿಂದ ಗೌತಮ್‌ಗೆ ದಿಕ್ಕು ತೋಚದಂತಾಗುತ್ತೆ. ಆಗ ಶಿವು ಕಾರಿನ ಬ್ಯಾಟರಿಯನ್ನು ಬಳಸಿಕೊಂಡು ಆಸ್ಪತ್ರೆಗೆ ಕರೆಂಟ್ ಬರುವಂತೆ ಮಡುತ್ತಾನೆ. ಕರೆಂಟ್ ಬಂದ ನಂತರ ಕರ್ಣ, ಭೂಮಿಕಾ ಆಪರೇಷನ್ ಮಾಡಿದ್ದು ಭೂಮಿಕಾ ಈಗ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.

ಒಂದು ಕಡೆ ಹೆಣ್ಣು ಮಗು ಕಿಡ್ನಾಪ್ ಆಗಿದೆ, ಮತ್ತೊಂದು ಕಡೆ ಗಂಡು ಮಗು ಹುಟ್ಟಿದೆ ಹೀಗಾಗಿ ಗೌತಮ್ ಸದ್ಯ ದಿಕ್ಕೆಟ್ಟಿದ್ದು ಭೂಮಿಕಾ ಯಾವ ಮಗು ಆಯ್ತು ಅಂತ ಕೇಳುತ್ತಾಳೆ. ಆಗ ಗೌತಮ್ ಹೆಣ್ಣು ಮಗು ಎಂದು ಹೇಳುತ್ತಾನೆ. ಗಂಡು ಮಗುನಾ ಗೌತಮ್ ಹೆಣ್ಣು ಮಗು ಎಂದು ಹೇಳಿದ್ದು ಕೇಳಿ ಆನಂದ್ ಮತ್ತು ಶಿವು ಸದ್ಯ ಶಾಕ್ ಆಗುತ್ತಾರೆ.

ಮುಂದೇನು ?

ಸದ್ಯ ಭೂಮಿಕಾಳನ್ನು ಕರೆದುಕೊಂಡು ಗೌತಮ್ ತನ್ನ ಮನೆಗೆ ಮರಳಿದ್ದಾನೆ. ಮನೆಯವರೆಲ್ಲರು ತುಂಬಾ ಖುಷಿಯಿಂದ ಭೂಮಿಕಾ ಮತ್ತು ಮಗುವನ್ನು ಮನೆಗೆ ಬರಮಾಡಿಕೊಂಡಿದ್ದಾರೆ. ಮತ್ತೊಂದು ಕಡೆ ಮಗುನ ಕಾಡಿನಲ್ಲಿಯೇ ಜೈದೇವ್ ಬಿಸಾಕಿ ಬಂದಿದ್ದು ಶಕುಂತಲಾ ಆದೇಶದ ಮೇರೆಗೆ ಮತ್ತೆ ಮಗು ಹುಡುಕಲು ಕಾಡಿಗೆ ಹೋಗಿದ್ದಾನೆ. ಇದೇ ಸಮಯದಲ್ಲಿ ಗೌತಮ್ ಕೂಡ ಮಗು ಹುಡುಕಲು ಪೊಲೀಸರ ಜೊತೆ ಬಂದಿದ್ದಾನೆ. ಗೌತಮ್ ಮತ್ತು ಜೈದೇವ್ ಮುಖಾಮುಖಿಯಾಗುತ್ತಾರಾ ? ಮಗು ಕಿಡ್ನಾಪ್ ಮಾಡಿದ್ದು ಜೈದೇವ್ ಎನ್ನುವ ವಿಚಾರ ಗೌತಮ್‌ಗೆ ಗೊತ್ತಾಗುತ್ತಾ ? ಶಕುಂತಲಾ ಮುಖವಾಡ ಗೌತಮ್ ಎದುರು ಕಳಚಿ ಬೀಳುತ್ತಾ ? ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X